ಅಯ್ಯೋ ದೇವ್ರೇ..

‘ಅವಧಿ’ಯಲ್ಲಿ ಪ್ರಕಟವಾದ ಟಿ ಕೆ ದಯಾನಂದ ಅವರ ‘ಇದ್ಯಾವ ಸೀಮೆ ದೇವರು’ಗೆ ಬಂದ ಪ್ರತೊಕ್ರಿಯೆಯಲ್ಲಿ ಆಯ್ದ ಎರಡು ಇಲ್ಲಿದೆ- ಬಹಳಷ್ಟು ಜನರಿಗೆ ವಿಭಿನ್ನವಾಗಿ ಬದುಕೋದು ಅಂದ್ರೆ ಇಷ್ಟ. ನಾಸ್ತಿಕರ ಮೊದಲನೇ ಸಮಸ್ಯೆ ಅಂದ್ರೆ ದೇವರನ್ನು ನಂಬದೇ ಇರೋದಕ್ಕಿಂತ ‘ನಾನು ನಿನ್ನನ್ನು ನಂಬಲ್ಲ ಕಣಯ್ಯ ಏನ್ ಕಿತ್ಕೋತೀಯಾ ಕಿತ್ಕೋ’ ಅಂತ ದೇವರಿಗೇ ಚ್ಯಾಲೆಂಜ್ ಹಾಕೋದು! ಹೀಗೆ ಚ್ಯಾಲೆಂಜ್ ಹಾಕೋ ಮೂಲಕ ದೇವರನ್ನು ನಂಬಿ ಹೆದರುತ್ತಾ ಬದುಕಿರೊ ಜನರ ಮುಂದೆ ಸಾಹಸಿ ಅನ್ನಿಸಿಕೊಳ್ಳೋದು. ದೇವರೇನಾದ್ರೂ ನಿಮ್ಮಂಥವರ ಮಾತು ಕೇಳಿ ಬೆಕ್ಕನ್ನು ಬದುಕಿಸಿದ್ರೆ ಈ ಪ್ರಪಂಚ ಬರೀ ಬೆಕ್ಕಿನಿಂದಲೇ ತುಂಬಿರ್ತಾ ಇತ್ತು! ಬಹಳಷ್ಟು ಜನರು ಬಹಳಷ್ಟು ವಿಷಯಗಳನ್ನು ನಂಬಲ್ಲ. ಕೆಲವರು ಹೆಂಡತಿಯನ್ನು ನಂಬಲ್ಲ, ಕೆಲವರು ಮಕ್ಕಳನ್ನು ನಂಬಲ್ಲ, ಕೆಲವರು ತಮ್ಮ ಬಾಸ್ ಅನ್ನು ನಂಬಲ್ಲ, ಕೆಲವು ಬಾಸ್ ಗಳು ತಮ್ಮ ನೌಕರರನ್ನು ನಂಬಲ್ಲ! ಆದರೆ ಯಾರೂ ಈ ಬಗ್ಗೆ ಮಾತಾಡಿಕೊಳ್ಳಲ್ಲ. ಆದರೆ ದೇವರನ್ನು ನಂಬದವರು ಮಾತ್ರ ಪದೇ ಪದೇ ಅದನ್ನು ಹೇಳ್ತಾ ಇರ್ತಾರೆ. ಬೆರಳೆಣಿಕೆಯ ಜನರು ತಪ್ಪು ಮಾಡಲು ದೇವರು/ಧರ್ಮ ಹೇಗೆ ಕಾರಣವೋ ಹಾಗೇ ಕೋಟ್ಯಾಂತರ ಜನರು ತಪ್ಪು ಮಾಡದೇ ಇರಲೂ ದೇವರ ಭಯವೇ ಕಾರಣ! ಈ ಒಂದು ಕಾರಣಕ್ಕಾದ್ರೂ ದೇವರು ಇರ್ಲಿ ಬಿಡ್ರಿ… -ಸಂದೀಪ್ ಕಾಮತ್

ಕಲೆ: ಅನು ಪಾವಂಜೆ

ದೇವರು ಧರ್ಮವನ್ನು ಸಾಧನವನ್ನಾಗಿ ಬಳಸಿಕೊಂಡು ತಪ್ಪು ಮಾಡುವವರು, ಮೋಸ ಮಾಡುವವರು ಬೆರಳೆಣಿಕೆಯಷ್ಟೆ ಜನರಿರಬಹುದು. ಆದರೆ, ಅವರಿಂದ ಮೋಸಕ್ಕೆ ಒಳಗಾಗುವವರು ಕೋಟ್ಯಂತರ ಜನ ಅಮಾಯಕರು. ಮಾಟ, ಮಂತ್ರ, ಜೋತಿಷ್ಯ, ಪೂಜಾರಿ, ಕವಡೆ ಹಾಕೂರು, ಕಣಿ ಹೇಳೋರು, ಮೈಮೇಲೆ ದೇವರು ಭರಿಸಿಕೊಳ್ಳೋರಿಂದ ಹಿಡಿದು ಇಂದಿನ ಆಧುನಿಕ ಧರ್ಮೋಧ್ಯಮಿಗಳಾದ ನಿತ್ಯಾನಂದ, ರವಿಶಂಕರ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಇಂಥವರನ್ನು ನಂಬಿ ಎಷ್ಟು ಜನ ಮುಗ್ದರು ಬದುಕು ಕಳಕೊಂಡರಿದ್ದಾರೆ. ವಿಧವೆಯರ ತಲೆ ಬೋಳಿಸುವಿಕೆ, ಮಡೆಸ್ನಾನ,ದೇವದಾಸಿ, ಸಿಡಿ ಹಾಯೋದು, ಬೆತ್ತಲೆ ಪೂಜೆ, ನರಬಲಿ, ಸತಿಸಹಗಮನ ತಥ್ಥರಿಕೆ ದೇವರ ಹೆಸರಲ್ಲಿ ಎಷ್ಟೊಂದು ಅನಾಚಾರಗಳು. ದೇವರ ಹೆಸರಲ್ಲಿ ಮನುಷ್ಯ- ಮನುಷ್ಯರ ನಡುವೆ ಬೆಂಕಿ ಹಚ್ಚುತ್ತಿರುವ ಕೋಮುವಾದ, ಜಾತಿವಾದ, ಮೂಲಭೂತವಾದಗಳೆಲ್ಲವೂ ದೇವರು-ಧರ್ಮಗಳ ಉಪ ಉತ್ಪನ್ನಗಳು. ದೇವರ ಬಗ್ಗೆ ಅನಾದಿ ಕಾಲದಿಂದಲೂ ಚರ್ಚೆ ನಡೆಯುತ್ತಲೆ ಎಂಥೆಂಥ ಮಹಾಮಹಿಮರು ದೇವರ ಸಂಶೋಧನೆಯಲ್ಲಿ ಸೊತು ನನ್ನೊಳಗಿನ ಜೀವವೇ ದೇವರು ಎಂಬ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ. ಇಲ್ಲದ ದೇವರ ಬಗ್ಗೆ ಏಕೆ ಸಣ್ಣತನದ ಜಗಳ. ಗೊತ್ತಿದ್ದು ಗೊತ್ತಿದ್ದು ಮೂರ್ಖ ಸಮರ್ಥನೆ ಏಕೆ. ದೇವರ ನಂಬುವಿಕೆಗೆ ಹಾಳುಮಾಡಿಕೊಳ್ಳುವ ಶಕ್ತಿಯನ್ನು ಬೇರೆ ಎನನ್ನಾದರೂ ಕಲಿಯುವಿಕೆಗೆ ಕಳೆಯುವುದು ಒಳಿತಲ್ಲವೇ. ನಮ್ಮ ಮುಂದಿನ ಸಂತತಿಯಾದರೂ ದೇವರ ಬಗೇಗಿನ ಮೌಡ್ಯವನ್ನು ತೊರೆದು, ಧರ್ಮದ ಸೋಂಕಿಲ್ಲದ ಶುದ್ಧ ಮಾನವರಾಗಿ, ಮಾನವರಂತೆ ಬದುಕುವಂತಾಗಲಿ. -ಹನುಮಂತ ಹಾಲಿಗೇರಿ      ]]>

‍ಲೇಖಕರು G

May 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

ನನ್ನ ’ಎದೆಗೆ ಬಿದ್ದ ಅಕ್ಷರ’

ನನ್ನ ’ಎದೆಗೆ ಬಿದ್ದ ಅಕ್ಷರ’

ಡಾ.ಬಿ.ಆರ್.ಸತ್ಯನಾರಾಯಣ ಮೊನ್ನೆ ರಾತ್ರಿ ನನ್ನ ತೋಟದ ಮನೆಯಲ್ಲಿದ್ದೆ. ತುಂತುರು ಮಳೆ ಬೀಳುತ್ತಿತ್ತು. ಕರೆಂಟು ಮಾಯವಾಗಿತ್ತು. ಮರು ಓದಿಗೆಂದು...

೧ ಪ್ರತಿಕ್ರಿಯೆ

  1. ಸಂದೀಪ್ ಕಾಮತ್

    ಪರಮ ನಾಸ್ತಿಕನಾದ ಉಪೇಂದ್ರ ಉಡುಪಿಗೆ ಹೋಗಿ ಶ್ರೀಕೃಷ್ಣನಿಗೆ ತಪ್ಪು ಕಾಣಿಕೆ ಸಲ್ಲಿಸಿದನಂತೆ. ಇಲ್ಲಿಗೆ ನಾಸ್ತಿಕರ ಟೀಮ್ ನಲ್ಲಿ ಒಬ್ಬ ಸದಸ್ಯ ಕಮ್ಮಿ ಆದ ಹಾಗಾಯ್ತು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: