ಅಯ್ಯೋ… ನಿಮ್ಮ ಬ್ಲಾಗೇ ಸರಿ ಇಲ್ಲ?

ರವಿ ಹೆಗಡೆ ಕಿವಿಮಾತು 
kannada Bloggers ನಿಂದ  
 
ನಾನು ಎಷ್ಟೊ ಕನ್ನಡ ಬ್ಲಾಗುಗಳನ್ನು, ವೆಬ್ ಸೈಟುಗಳನ್ನು ನೋಡಿದ್ದೇನೆ. ಶೇ.50ಕ್ಕಿಂತ ಹೆಚ್ಚು ಕನ್ನಡದ ಬ್ಲಾಗು ಹಾಗೂ ವೈಬ್ ಸೈಟಿನಲ್ಲಿ ಫಾಂಟುಗಳ ಸಮಸ್ಯೆ ಇದೆ. ಅದಕ್ಕಾಗಿ ಬ್ಲಾಗಿನಲ್ಲೇನಿದೆ ಎಂದು ಓದಲು ಕಷ್ಟ ಪಟ್ಟಿದ್ದೇನೆ. ಒಬ್ಬೊಬ್ಬರ ಬ್ಲಾಗ್ ಓದಲು ಒಂದೊಂದು ಥರ ಬ್ರೌಸರ್ ಬೇಕು!
ಕೆಲವು ಬ್ಲಾಗುಗಳನ್ನು Internet Explorerನಲ್ಲಿ ಓದಲು ಸಾಧ್ಯವಾಗುತ್ತದೆ. ಆದರೆ, Firefoxನಲ್ಲಿ ಗಿಜಿಬಿಜಿ ಅಕ್ಷಗಳು ಕಾಣಿಸುತ್ತವೆ. ಇನ್ನು ಕೆಲವು ಬ್ಲಾಗುಗಳನ್ನು Internet Explorerನಲ್ಲಿ ಓದಲಾಗದು ಆದರೆ, firefoxನಲ್ಲಿ ಅಚ್ಚುಕಟ್ಟಾಗಿ ಓದಬಹುದು. ಇನ್ನೂ ಕೆಲವು ಬ್ಲಾಗುಗಳಲ್ಲಿ ಹೆಡ್ಡಿಂಗ್ ಓದಬಹುದು, ಬರಹ ಓದಲಾಗದು. ಇನ್ನಷ್ಟರಲ್ಲಿ ಹೆಡ್ಡಿಂಗ್ ಕಾಣಿಸದು, ಬರಹ ಓದಬಹುದು.
browser1ನನ್ನಂತೆ ಅನೇಕರು ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ನಿಮ್ಮಲ್ಲೂ ಅನೇಕರಿಗೆ ಈ ಅನುಭವ ಆಗಿರಬಹುದು. ಆದರೆ, ಇದು ನಮ್ಮ ಬಹುತೇಕ ಬ್ಲಾಗರುಗಳಿಗೆ ಗೊತ್ತಿಲ್ಲ ಎನಿಸುತ್ತದೆ.
ಇದೆಲ್ಲಾ ಸಮಸ್ಯೆಗೆ ಎರಡು ಮುಖ್ಯ ಕಾರಣ
1 – ಬ್ರೌಸರುಗಳ ಸಾಮರ್ಥ್ಯ
2 – ಬ್ಲಾಗ್ ಟೆಂಪ್ಲೇಟುಗಳ ಮಿತಿ
ಜಗತ್ತಿನಲ್ಲಿ ಅನೇಕ ಥರದ ಬ್ರೌಸರುಗಳು, ಅವುಗಳ ವಿವಿಧ ವರ್ಷನ್ನುಗಳು ಇವೆ. ಅವು ಬೇರೆ ಬೇರೆ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತವೆ. ಆಗ ಹಲವಾರು ಸೈಟುಗಳು ಡಿಸೈನು ಹಾಗೂ ಫಾಂಟುಗಳ ಸಮಸ್ಯೆ ಅನುಭವಿಸುತ್ತವೆ. ಈ ಸಮಸ್ಯೆ ಕನ್ನಡದಂಥ ಭಾಷೆಗೆ ಹೆಚ್ಚು. ಆದ್ದರಿಂದ, ಎಲ್ಲ ಥರದ ಬ್ರೌಸರುಗಳಲ್ಲೂ, ಎಲ್ಲ ವರ್ಷನ್ನುಗಳಲ್ಲೂ, ಎಲ್ಲಾ ಆಪರೇಟಿಂಗ್ ಸಿಸ್ಟಂಗಳಲ್ಲೂ ಸಮಾನ ರೀತಿಯಲ್ಲಿ ಓದುವಂತೆ ಮಾಡುವುದು ನನ್ನ ನಿಮ್ಮಂಥ ಕನ್ನಡದ ಸಾಮಾನ್ಯ ಬ್ಲಾಗರುಗಳಿಗೆ ಕಷ್ಟ.
ಅದಕ್ಕಾಗಿ ಅತಿ ಹೆಚ್ಚು ಜನರು ಬಳಸುವ ಬ್ರೌಸರುಗಳಲ್ಲಿ ನಿಮ್ಮ ಬ್ಲಾಗ್ ಕಾಣಿಸುತ್ತಿದೆಯೋ ಎಂದು ಖಾತರಿಪಡಿಸಿಕೊಳ್ಳಿ ಸಾಕು.
ನನ್ನ ಅನುಭವದ ಪ್ರಕಾರ ಅತಿ ಹೆಚ್ಚು ಬಳಕೆಯಾಗುವ ಬ್ರೌಸರು Internet Explorer. ಈ ಕೆಳಗಿನ ಅಂಕಿ ಅಂಶಗಳನ್ನು ನೋಡಿ.
1. Internet Explorer…………… 70.%
2. Firefox…………………………20.%

3. Chrome…………………………..4%
4. Opera…………………………….3%
5. Safari………………………….0.67%
6. Mozilla………………………..0.18%
7. Netscape……………………..0.04%
8. Mozilla Compatible Agent…0.04%
9. SeaMonkey…………………..0.03%
10. NetFront……………………..0.02%
ಆದ್ದರಿಂದ ನೀವು Internet Explorer ಹಾಗೂ Firefox ಎರಡರಲ್ಲೂ ಕಾಣಿಸುವ ಬ್ಲಾಗ್ ಟೆಂಪ್ಲೇಟುಗಳನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯ.
ಅಲ್ಲಿಗೂ ಮುಗಿಯದು ತರಲೆ.
Internet Explorerನ ಎಲ್ಲಾ ವರ್ಷನ್ನಿನಲ್ಲೂ ನಿಮ್ಮ ಬ್ಲಾಗ್ ಕಾಣಿಸುತ್ತಿದೆ ಎಂದು ಹೇಳಲಾಗದು. ಆದರೆ, ಅತಿ ಹೆಚ್ಚು ಬಳಕೆಯಾಗುವ ಬ್ರೌಸರ್ Internet Explorer version 6. ಎರಡನೇ ಸ್ಥಾನದಲ್ಲಿ Internet Explorer version 7 ಇದೆ. Internet Explorer version 8 ಇದೀಗ ತಾನೇ ಬಳಕೆಗೆ ಬರುತ್ತಿದೆ. ಆದ್ದರಿಂದ ಆ ಬಗ್ಗೆ ತಕ್ಷಣಕ್ಕೆ ತಲೆ ಬಿಸಿ ಬೇಕಾಗಿಲ್ಲ.
1. Internet Explorer version 6…………….64%
2. Internet Explorer version 7……………..34%
3. Internet Explorer version 8………………1%
4. Internet Explorer other version………….1%
ಈ ಕಾರಣದಿಂದ ನೀವು ಬ್ಲಾಗಿಂಗಿಗೆ ಆಯ್ಕೆ ಮಾಡಿಕೊಳ್ಳುವ ಟೆಂಪ್ಲೇಟ್ Internet Explorerನ 6 ಹಾಗೂ 7ನೇ ವರ್ಷನ್ನಿನಲ್ಲಿ ಹಾಗೂ Firefoxನ 3.0.6 ಹಾಗೂ 3.0.5 ವರ್ಷನ್ನಿನಲ್ಲಿ ಸರಿಯಾಗಿ ಕಾಣಿಸುವುದು ತೀರಾ ಅಗತ್ಯ. ಕ್ರೋಮ್ ಹಾಗೂ Firefox 2.0.0.20 ವರ್ಷನ್ನಿನಲ್ಲಿ ನಿಮ್ಮ ಬ್ಲಾಗ್ ಸರಿಯಾಗಿ ಕಂಡರೆ ನಿಮಗೆ ಬೋನಸ್.
ಆದ್ದರಿಂದ ನಿಮ್ಮ ಬ್ಲಾಗ್ ಸರಿ ಇದೆಯೇ ಎಂದು ಪರೀಕ್ಷಿಸಲು ನೀವು ಮಾಡಬೇಕಾದುದು ಇಷ್ಟೇ:
1 – ನಿಮ್ಮ ಬ್ಲಾಗ್ Internet Explorer ಹಾಗೂ Firefox ಎರಡೂ ಬ್ರೌಸರಿನಲ್ಲಿ ಸರಿಯಾಗಿ ಕಾಣಿಸುತ್ತಿದೆಯೇ ನೋಡಿ
2 – ನಿಮ್ಮ ಬ್ಲಾಗ್ Internet Explorer 6 ಹಾಗೂ 7 ವರ್ಷನ್ ಬ್ರೌಸರಿನಲ್ಲಿ ಸರಿಯಾಗಿ ಕಾಣಿಸುತ್ತಿದೆಯೇ ನೋಡಿ
3 – ನಿಮ್ಮ ಬ್ಲಾಗ್ Firefox 3.0.6 ಹಾಗೂ 3.0.5 ವರ್ಷನ್ ಬ್ರೌಸರಿನಲ್ಲಿ ಸರಿಯಾಗಿ ಕಾಣಿಸುತ್ತಿದೆಯೇ ನೋಡಿ
ನಿಮಗೆ ಫಾಂಟುಗಳ ಸಮಸ್ಯೆ ಕಂಡರೆ ಬೇರೆ ಇನ್ನೊಂದು ಬ್ಲಾಗಿಂಗ್ ಟೆಂಪ್ಲೇಟ್ ಆಯ್ದುಕೊಳ್ಳಿ ಸಾಕು.
ಇದು ಕನ್ನಡದ ಬ್ಲಾಗರುಗಳಿಗೆ ನನ್ನ ಕಿವಿ ಮಾತು.

‍ಲೇಖಕರು avadhi

March 12, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This