ಇದೀಗ ಹೊಸ ಪುಸ್ತಕ ಮಳಿಗೆಯೊಂದು ಆರಂಭವಾಗಿದೆ. ಎಲ್ಲಿ ಅಡ್ರೆಸ್ ಕೊಡಿ ಎನ್ನಬೇಡಿ ನೀವು ಅಲ್ಲಿಗೆ ಹೋಗಬೇಕಾಗಿಲ್ಲ. ಮಳಿಗೆಯೇ ನಿಮ್ಮ ಮನೆಗೆ ಬರುತ್ತದೆ. ಇದು ಆನ್ಲೈನ್ ಮಳಿಗೆ. ಅಥವಾ ಮಂಗಳೂರಿನ ಸತ್ಯನಾರಾಯಣ ಮಲ್ಲಿಪಟ್ಟಣ ಅವರ ಭಾಷೆಯಲ್ಲಿ ಹೇಳಬೇಕೆಂದರೆ ಜಂಗಮ ಮಳಿಗೆ.
ಕನ್ನಡ ಪುಸ್ತಕ ಪ್ರಕಾಶನ ಹಾಗೂ ಮಾರಾಟ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಉತ್ತಮ ಪುಸ್ತಕ ಮಳಿಗೆ ಎಂಬ ಶಹಭಾಷಗಿರಿ ಪಡೆದಿರುವ ನವಕರ್ನಾಟಕ ಈ ಆನ್ಲೈನ್ ಸಾಹಸಕ್ಕೆ ಕೈ ಹಾಕಿದೆ.
ನವಕರ್ನಾಟಕ ಎಂದರೆ ಸಾಕು ಕಣ್ಣ ಮುಂದೆ ನಿಲ್ಲುವವರು ಅರ್. ಎಸ್. ರಾಜಾರಾಮ್ ಅವರೇ. ನವಕರ್ನಾಟಕ ಅನೇಕ ಭಿಕ್ಕಟ್ಟುಗಳನ್ನು ಎದುರಿಸಿದಾಗಲೂ ಅದಕ್ಕೆ ಚಾಲನಾ ಶಕ್ತಿಯಾಗಿ ನಿಂತು ಅದನ್ನು ಗೆಲ್ಲಿಸಿದವರು ರಾಜಾರಾಮ್. ರಾಜಾರಾಂ ಅದಮ್ಯ ಉತ್ಸಾಹಿ, ಅಷ್ಟೇ ಚುರುಕಿನ ಗುಣಗ್ರಾಹಿ. ನವಕರ್ನಾಟಕ ಆರಂಭಿಸಿರುವ ಆನ್ಲೈನ್ ಮಳಿಗೆಯ ಹೆಸರು ಅರಿವು. ಹೊಸತು ಪತ್ರಿಕೆಯೂ ಗೆಲ್ಲಬಹುದು ಎಂದು ನವಕರ್ನಾಟಕ ಹೇಗೆ ತೋರಿಸಿದೆಯೋ ಹಾಗೆಯೇ ಅರಿವೂ ಸಹಾ ಗೆಲ್ಲುವಂತೆ ನವಕರ್ನಾಟಕ ಮಾಡುತ್ತದೆ
ಅರಿವು ನವಕರ್ನಾಟಕ ಪುಸ್ತಕಗಳನ್ನೂ ಅದಲ್ಲದೆ ಇತರ ಮುಖ್ಯವಾದ ಹತ್ತು ಪ್ರಕಾಶಕರ ಪುಸ್ತಕಗಳನ್ನೂ ಒದಗಿಸುತ್ತದೆ. ಅರಿವು ಬರುವ ಮೊದಲೂ ಆನ್ಲೈನ್ ಸಾಹಸ ನಡೆದಿದೆ. ಇತ್ತೀಚೆಗೆ ಕನ್ನಡ ಯೂಲುಪ್ ಸಹಾ ಆನ್ಲೈನ್ ಮಳಿಗೆ ಆರಂಭಿಸಿದೆ. ಆದರೆ ಪೇಡದದಲ್ಲೆಲ್ಲಾ ಧಾರವಾಡ ಪೇಡವೇ ಹೇಗೆ ಚೆನ್ನಾಗಿರುತ್ತದೋ ಪುಸ್ತಕ ಸಾಹಸದಲ್ಲಿ ನವಕರ್ನಾಟಕದ ಸಾಹಸವೂ ಹಾಗಿರುತ್ತದೆ.
0 ಪ್ರತಿಕ್ರಿಯೆಗಳು