ಅರೆಹೊಟ್ಟೆ ಪಲಾರ – ಮೈಮಂಡೆ ಮನಾರ..!

-ಒಪ್ಪಣ್ಣನ ಒಪ್ಪಂಗೊ ಬೈಲಮೂಲೆ ಕುಂಞಿಬಾವ ಮದಲು ಬೆಂಗುಳೂರಿಲಿ ಇದ್ದರೂ ಈಗ ಅಲ್ಲಿಲ್ಲೆ! ಈಗ ಅವನ ಕೆಲಸಲ್ಲಿ ಪ್ರೊಮೋಷನು ಸಿಕ್ಕಿದ ಲೆಕ್ಕಲ್ಲಿ ಆ ಕಂಪೆನಿಯ ತರವಾಡಿಂಗೆ (ಹೆಡ್ಡಾಪೀಸೀಂಗೆ) ಕಳುಸಿದ್ದವಡ – ಅದಿಪ್ಪದು ಇಂಗ್ಳೇಂಡಿಲಿ. ದೊಡ್ಡ ಸಂಬಳ, ದೊಡ್ಡ ಕೆಲಸ, ದೊಡ್ಡ ಆಪೀಸು – ಹೋಗದ್ದೆ ನಿವುರ್ತಿ ಇದ್ದೋ – ಹೊಟ್ಟೆ ಹಶುವಿಂಗೆ ಹೋಪದಿದಾ! ಅವಂಗೆ ಪ್ರೊಮೋಷನು ಸಿಕ್ಕಿಯೇ ಸಿಕ್ಕುಗು, ಬಯಂಕರ ಚುರುಕ್ಕಿನ ತಲೆ. ಅವನ ಅಪ್ಪ ಬೇಂಕಿಲಿಪ್ಪದಿದಾ – ಕುಂಞಿಮಾವ. ಅಜ್ಜನಮನೆಯವುದೇ ಹಾಂಗೇ ಬಯಂಕರ ಉಶಾರಿ.. ಅದಿರಳಿ. ಅವಂಗೆ ಮದುವೆ ಆದ್ದದು ಬೆಂಗುಳೂರಿಂದಲೇ- ಅವನದ್ದೇ ಆಪೀಸಿನ ಕೂಸಡ, ಒಳ್ಳೆ ಉಶಾರಿ ಅಡ..! ಕನ್ನಡ ಮಾತಾಡ್ತದು ಮನೆಲಿ. ಹೆಂಡತ್ತಿಗೆ ನಮ್ಮಬಾಶೆ ಕಲಿಶಿದ್ದನಿಲ್ಲೆ, ಮಕ್ಕೊಗಾರೂ ಕಲಿಶುಗೋ ಏನೋ! ಅದಿರಳಿ – ಬೇರೆವರ ಶುದ್ದಿ ನವಗೆಂತಕೆ, ಅಲ್ಲದೋ!? ~ ಅವನ ಅಣ್ಣ, ಪುಟ್ಟಬಾವ ಊರಿಲೇ ಇಪ್ಪದು. ಅವಕ್ಕೆ ರಜ್ಜ ತೋಟ ಇದ್ದು, ಅದರ ನೋಡಿಗೊಂಡು – ಹಾಂಗೇ ವೈಯಗ್ತಿಕ ಸಂಪಾದನೆ ಹೇಳ್ತ ಲೆಕ್ಕಲ್ಲಿ ಮಾಷ್ಟ್ರತ್ತಿಗೆ ಇದ್ದು. ಪುಟ್ಟಬಾವಂಗೆ ಮದುವೆ ಆಗಿ ಆರೊರಿಶ ಅಪ್ಪಲಾತು. ಇಬ್ರು ಮಕ್ಕೊ – ಒಂದಕ್ಕೆ ನಾಲ್ಕು, ಇನ್ನೊಬ್ಬ ಬರೇಸಣ್ಣ – ಕೈಹಿಳ್ಳೆ! ಕುಂಞಿಬಾವ ಕಲಿವಲೆ ಸುರು ಮಾಡುವಗಳೇ ಪುಟ್ಟಬಾವಂಗೆ ಮಾಷ್ಟ್ರತ್ತಿಗೆ ಸುರು ಮಾಡಿ ಆಯಿದು – ಅಷ್ಟು ವಿತ್ಯಾಸ ಇತ್ತು ಅವರ ಪ್ರಾಯಲ್ಲಿ. ಈ ಒರಿಶಾಂತರಂದಾಗಿ ಅವಕ್ಕೆ ಸುಮಾರು ಕ್ರಮ ವಿತ್ಯಾಸಂಗೊ ಬಂದು ಬಿಟ್ಟಿದು.. ~ ಪುಟ್ಟಬಾವ ಒಳ್ಳೆ ಗಟ್ಟಿಮುಟ್ಟು ದೇಹ, ತುಂಡು ಜವ್ವನಿಗನ ಹಾಂಗೆ! ಅಪ್ಪಲೆ ಮಾಷ್ಟ್ರಣ್ಣ ಆದರೂ, ಮನೆಲಿ ಮನೆಮಟ್ಟಿಂಗೇ ಇರ್ತವು. ಕೃಷಿಯೂ ಇದ್ದ ಕಾರಣ ತೋಟಕ್ಕೆ ಹೋಗಿ, ಬಂಙದ ಕೆಲಸಂಗಳ ಮಾಡಿ ಅಭ್ಯಾಸ ಇದ್ದಿದಾ.. ಅಗತ್ಯ ಬಂದರೆ ಮಡುಮಸದು ಸೌದಿ ಒಡವಲೆ ಹಿಡುದು, ಅಡಕ್ಕೆಮರಕ್ಕೆ ಹತ್ತಿ ಸಿಂಗಾರ ತೆಗವಲ್ಲಿ ಒರೆಂಗೆ – ಸಾಮಾನ್ಯ ಬಚ್ಚಲಿನ ಎಲ್ಲ ಕೆಲಸವೂ ಅರಡಿಗು! ಧಾರಾಳ ಕೆಲಸಮಾಡ್ತವು. ಹಾಂಗಾಗಿ ಒಳ್ಳೆತ ಹಶುದೇ ಆವುತ್ತು, ಊರ ಕುಚ್ಚಿಲುಅಕ್ಕಿಯ ಹೆಜ್ಜೆಗೆ ತುಪ್ಪ ಆತುಗೊಂಡು ಸಮಕ್ಕೆ ಉಣ್ತವು, ಉಪ್ಪಿನಕಾಯಿಯೂ, ಊರದನದ ಮೊಸರುದೇ ಕೂಡಿಯೊಂಡು ಧಾರಾಳ ಉಣ್ತವು. ಶಾಲೆ ಇಪ್ಪ ದಿನ ಕಮ್ಮಿ ಆದರೂ, ರಜೆ ದಿನಂಗಳಲ್ಲಿ ಮನೆಲಿ ಕೆಲಸ ಇದ್ದಿದಾ – ಎಲ್ಲಿ ಕರಗುತ್ತು ಗೊಂತಾವುತ್ತಿಲ್ಲೆ! ಆದರೆ ಕುಂಞಿಬಾವ ಹಾಂಗಲ್ಲ, ಸಪುರಸಪುರ ಆಗಿ ರಜ ಕೋಲುಕೋಲಾಗಿ ಇಕ್ಕು. ಸಣ್ಣದಿಪ್ಪಗಳೇ ಹಾಂಗೆ, ಓದುದೊಂದೇ ಇದ್ದದು ಆ ಮಾಣಿಗೆ. ಓದುತ್ತಮಾಣಿ ಆದ ಕಾರಣ, ಮನೆಲಿ ಪುಟ್ಟಬಾವನೇ ಎಲ್ಲ ಕೆಲಸಂಗಳ ಮಾಡಿಗೊಂಡವು. ಹಾಂಗಾಗಿ ಕಷ್ಟದ ಕೆಲಸಂಗ ಅಷ್ಟಕ್ಕಷ್ಟೇ! – ಅರಡಿತ್ತೂ ಇಲ್ಲೆ, ಅಷ್ಟು ಶೆಗ್ತಿಯೂ ಇಲ್ಲೆ! ಓದಿ ಓದಿ ಅಪ್ಪಗಳೇ ಒಳ್ಳೆ ಕೆಲಸ ಸಿಕ್ಕಿತ್ತು, ಕೆಲಸ ಲೆಕ್ಕಲ್ಲಿ ಬರೇ ಆಪೀಸಿಂಗೆ ಹೋಪದು ಮಾಂತ್ರ ಇದಾ – ಬೇರೆಂತ ಕೆಲಸ ಇಲ್ಲೆನ್ನೆ! ಉಂಡದು ಸರಿ ಕರಗುಲೂ ಪುರುಸೊತ್ತಿಲ್ಲೆ, ಮತ್ತಾಣ ಊಟ ತೆಯಾರಾಗಿರ್ತು! ಬಚ್ಚದ್ದ ಕಾರಣ ಜಾಸ್ತಿ ಉಂಬಲೂ ಇಲ್ಲೆ ಇದಾ! ಹಾಂಗಾಗಿ ಆಹಾರದ ಬಗೆಗೆ ವಿಶೇಷ ಗಮನ ವಹಿಸಿತ್ತಿದ್ದವಿಲ್ಲೆ. ~ ಪುಟ್ಟಬಾವ ಅವರ ಚರ್ಯೆಯ ಬಗ್ಗೆ ದೊಡ್ಡ ಗುಮನ ಮಾಡಿದ್ದವಿಲ್ಲೆ. ಶಾಲಗೆ ಹೋಪಗ ಒಂದು ಪೇಂಟು, ಒಂದು ಬನಿಯನಿನ ಮೇಲೆ ಅಂಗಿ! ಪೇಂಟನ್ನುದೇ ಹಾಂಗೆ, ಹೊಕ್ಕುಳಿಂಗೇ ಸಿಕ್ಕುಸಿಗೊಂಗು, ವೇಷ್ಟಿ ಸುತ್ತುವಲ್ಲಿಗೆ. ಪೇಂಟಿಂಗೆ ಇಸ್ತ್ರಿ ಇರ, ಆದರೆ ತೊಳದು ಶುಭ್ರವಾಗಿ ಇಕ್ಕು – ಮಣ್ಣೇ ಇಲ್ಲದ್ದೆ! ಅಂಗಿಯುದೇ ಹಾಂಗೆ, ಒಂದು ಅಂಗಿಯ ಒಂದೇ ದಿನ ಹಾಕುದಿದಾ – ಅಷ್ಟಪ್ಪಗ ಬೆಗರಿನ ಪ್ರಶ್ನೆಯೇ ಇಲ್ಲೆ – ಸೆಂಟು ಬೇಕಾವುತ್ತೇ ಇಲ್ಲೆ! ಜೆಂಬ್ರಕ್ಕೆ, ನಿತ್ಯಕ್ಕೆ ಎಲ್ಲ ವಸ್ತ್ರವೇ ಸುತ್ತುದು ಇದಾ – ಅದುದೇ ಹಾಂಗೇ; ಶುಭ್ರವಾಗಿ ಇಪ್ಪಂತಾದ್ದು! ಕುಂಞಿಬಾವಂದು ಈ ವಿಶಯಲ್ಲಿ ರಜಾ ವಿತ್ಯಾಸ ಇದ್ದು! ಪೇಟೆಮಾಣಿ ಕುಂಞಿಬಾವಂಗೆ ಬೇಕಪ್ಪ ಪೇಂಟಂಗಿ – ಒಂದೇ ಸರ್ತಿ ಒಗದರೆ ಇಪ್ಪತ್ತು ದಿನ ಹಾಕಲೆಡಿತ್ತು!! ಪೇಂಟಂಗಿ ಇಂದ್ರಾಣದ್ದೇ ಆಯೆಕ್ಕು ಹೇಳಿ ಏನಿಲ್ಲೆ – ಆದರೆ ಇಸ್ತ್ರಿ ಬೇಕು. ಒಳ್ಳೆ – ಕತ್ತಿ ಅಲಗಿನ ಹಾಂಗೆ ನಿಲ್ಲೆಕ್ಕು, ಅಂಗಿ ಕರೆ! ಅಷ್ಟುದೂರಂದ ನಾತ ಬಪ್ಪ ಹಾಂಗಿಪ್ಪ ಬೆಗರಟೆ ಅಂಗಿ ಆದರೆ – ಗುಣಾಜೆಮಾಣಿಯ ಹಾಂಗೆ ಪುಸೂಲನೆ ಸೆಂಟು ಬಿಟ್ಟುಗೊಂಗು – ವಾಸನೆಯ ಪರಿಮ್ಮಳ ಮಾಡ್ಳೆ! ಒಳ್ಳೆ ಇಸ್ತ್ರಿ ಅಂಗಿಗೆ ಇಸ್ತ್ರಿಇಪ್ಪ ಪೇಂಟಿನ ಸಿಕ್ಕುಸಿ, ಅದರ ಮೇಗಂದ ಅರೆ ಹೊಳೆತ್ತ ಒಂದು ಬೆಳ್ಟಿನ ಸಿಕ್ಕುಸಿ, ಕಾಲಿಂಗೆ ಒಂದು ಡಾಮರು ಬೂಟಿಸು ಹಾಕಿಯೊಂಡು ಹೋಕು – ಇದ್ದಲ್ಲಿಗೆಲ್ಲ! ಮದಲು ಬೆಂಗುಳೂರು ಮಾಂತ್ರ, ಈಗ ಇಂಗ್ಳೇಂಡಿಂಗೂ ಸಾಕದು. ~ ಊರ ಜೆಂಬ್ರಂಗಳಲ್ಲಿ ಹೊಟ್ಟೆತುಂಬ ಬಳುಸುಗು. ಬೇಕಾದವ ಬೇಕಾದಷ್ಟು ಹಾಕಿಯೊಂಗೊ – ಮನಸೋ ಇಚ್ಛೆ ಉಂಗು. ನಮ್ಮ ಊರಿನ ವಿಶೇಷಂಗೊ – ನಮ್ಮದೇ ಆಹಾರಂಗಳ ಮಾಡುಗು! ಹಂತಿಮರಿಯಾದಿ ಹೇಳಿಗೊಂಡು ಕೂದೋರ ಒಳ್ಳೆತ ಚೆಂದಲ್ಲಿ ನೋಡಿಗೊಂಗು! ಆರೋ ನಮ್ಮ ಭಾವಯ್ಯಂದ್ರು ಬಳುಸಿಗೊಂಡು ಬಕ್ಕು, ಒತ್ತಾಯ ಮಾಡಿ ಬಳುಸುಗು, ಕೂದವ° ಹಟಕಟ್ಟಿ ಉಂಗು! ಹಶುವಿಲಿ ಕೂರುಗು, ಸಂತೋಷಲ್ಲಿ ಏಳುಗು! ಇದೆಲ್ಲ ಎಂತಕೆ ನೆಂಪಾದ್ದು ಹೇಳಿರೆ, ಪೇಟೆಗಳಲ್ಲಿ ’ಪಾರ್ಟಿ’ಗೊ ಹೇಳಿ ಮಾಡ್ತವಡ, ಜೆಂಬ್ರ ಕಳುದ ಲೆಕ್ಕಲ್ಲಿ. ಉತ್ತರಭಾರತ ಹಸಿಗೋಧಿ ರೊಟ್ಟಿಯೂ, ಚೀನಾದವರ ಹಸಿಕರಂಚಿದ ತುಂಡುಗಳೂ ಇರ್ತ ನಮುನೆದು! ಕುಂಞಿಬಾವನ ಪೈಕಿ ಸುಮಾರು ಆವುತ್ತಾ ಇರ್ತಡ! ಪುರುಸೊತ್ತಾದರೆ ಹೋಪದಿದ್ದಡ, ಅಪುರೂಪಲ್ಲಿ. ಹಂತಿಲಿ ಕೇಳಿಗೊಂಡು ಬಪ್ಪ ಹಾಂಗೆ ಕೇಳುದಲ್ಲ, ನಾವೇ ಹೋಗಿ ಬೇಕಾದ್ದರ ಬೇಕಾದಷ್ಟು ಹಾಕುಸಿಗೊಂಬದು, ಬಳುಸುತ್ತದು ಯೇವ ಮಾರಾಯ° ಹೇಳಿ ನವಗರಡಿಯ. ತಕ್ಕಮಟ್ಟಿಂಗೆ ಮನಾರ ಇಪ್ಪದಾದರೂ, ಪುಷ್ಟಿಯಾಗಿದ್ದವು ನಮ್ಮ ಬಟ್ಟಮಾವ° ನಮುನೆ ನಮುನೆ ಬಗೆಗೊ ಇಕ್ಕು – ಜಾಸ್ತಿ ಬಳುಸವು – ಸಣ್ಣ ಸೌಟಿಲಿ ರಜಾ ಬಳುಸುತ್ತದು. ಹಶುಆವುತ್ತು ಹೇಳಿ ಒಂದೇ ಬಗೆಯ ಹೊಟ್ಟೆತುಂಬ ತಿಂಬಲಿಲ್ಲೆಡ – ಅಲ್ಲಿ ಎದುರಾಣವ ಎಷ್ಟು ತಿಂತನೋ – ಅದೇ ಪ್ರಮಾಣಲ್ಲಿ ತಿನ್ನೇಕು. ಎದುರಾಣವ ರುಚಿ ಇಲ್ಲೆ ಹೇದರೆ ಅಪ್ಪಪ್ಪು ಹೇಳಿ ಅದರ ಬಿಡೆಕ್ಕು, ಎದುರಾಣವ ಹೆಚ್ಚು ಹಾಕಿಯೊಂಡ್ರೆ ಮೆಚ್ಚದ್ರೂ ಹಾಕಿಯೊಂಡು ತಿನ್ನೇಕು, ಇವನ ಹಶು ಕರಿವ ಮದಲೇ ಎದುರಾಣವ ನಿಲ್ಲುಸಿರೆ ಇವನೂ ನಿಲ್ಲುಸುದು – ಪಾಪ! ಅದು ಅಲ್ಯಾಣ ಹಂತಿಮರಿಯಾದ ಅಡ! (Table Manners ಹೇಳುಗು ಕುಂಞಿಬಾವ!) ~ ಬೇಕೋ! ಅರ್ದಂಬರ್ದ ತಿಂದುಗೊಂಡು, ಬಿಕ್ಕಿಂಡು, ಬಣ್ಣಬಣ್ಣದ ಪೆಕೆಟುಗಳ ನಕ್ಕಿಂಡು ಪಾರ್ಟಿ ಗೀರ್ಟಿ ಹೇಳಿ ಮಾಡಿಗೊಂಡು.. ಹಶುಆಗದ್ರೂ ತಿಂದುಗೊಂಡು, ಹಶು ಆಗಿದ್ದರೂ ಅರೆಹೊಟ್ಟೆ ತಿಂದುಗೊಂಡು, ಆರಾರ ಅನುಕರಣೆ ಮಾಡಿಗೊಂಡು ಇಪ್ಪದು!! ಊರಿನ ಕ್ರಮಲ್ಲಿ ಹೊಟ್ಟೆತುಂಬ ತಿಂದುಗೊಂಡು, ಬಚ್ಚುವನ್ನಾರ ಕೆಲಸಮಾಡಿ, ಗಟ್ಟಿಮುಟ್ಟಾಗಿ ಇಪ್ಪಲಾಗದೋ? ಹೇಳಿ ಶರ್ಮಪ್ಪಚ್ಚಿ ಜೋರು ಪರಂಚುಗು, ಬೆಂಗುಳೂರಿಂದ ಬಂದ ದಿನ!! ಪೇಟೆಂದಲೂ, ಅವಕ್ಕೆ ಮನೆಲಿ ಮಾಡಿದ ಕುಂಬ್ಳಕಾಯಿ ಕೊದಿಲೇ ಕೊಶಿ ಅಪ್ಪದಿದಾ! ದೊಡ್ಡ ಪೇಟೆಲಿ ಕೆಲಾವು ಜೆನ ಇದ್ದವು. ಅರ್ದಂಬರ್ದ ತಿಂದರೂ, ಅರೆಹೊಟ್ಟೆಲೇ ದಿನಕಳದರೂ ಸಾರ ಇಲ್ಲೆ, ಮೈ, ಮಂಡೆ ಮಾಂತ್ರ ಮನಾರ* ಮಡಿಕ್ಕೊಂಗು! – ಹೇಳುಗು ಮಾಷ್ಟ್ರಮನೆ ಅತ್ತೆ! ವಾರಕ್ಕೊಂದರಿ ಹೇರು ಡೈ ಮಾಡಿಗೊಂಡು, ಮೋರೆಗೆ ಎಂತೆಲ್ಲ ಮೆತ್ತಿಗೊಂಡು, ಏನೇನೋ ಸುರ್ಪ ಕೆಡುಸಿಗೊಂಡು ಇದ್ದರೂ ಆತು! ವಾರಕ್ಕೆರಡೇ ಮೀಯಾಣ ಆದರೂ ಆತು, ಕಾಂಬಗ ಮಾಂತ್ರ ಇನ್ನೊಬ್ಬಂಗೆ – ಈಗ ಮಿಂದಿಕ್ಕಿ ಬಂದದೋ – ಹೇಳಿ ಕಾಂಬಷ್ಟು ಚೆಂದ! ಆರ ಕೊಶಿಗೆ ಈ ನಮುನೆ ಬದುಕ್ಕುದಪ್ಪಾ, ಈಗಾಣ ಮಕ್ಕೊ – ಹೇಳಿ ಬಂಡಾಡಿಅಜ್ಜಿ ಕಾಲುನೀಡಿ ಬೇಜಾರುಮಾಡ್ತು! ಊರೋರು ಅಂತೂ – ಉದಿಯಪ್ಪಗ ಮಿಂದಿಕ್ಕಿ ತಲೆಬಾಚುಗು, ಮತ್ತೆ ಕೆಲಸಂಗಳೆಡಕ್ಕಿಲಿ ಅದು ಎಲ್ಲಿ ಹೋವುತ್ತೋ ಏನೋ – ಹಶುಆದರೆ ಉಂಗು, ಹಶುಆಗದ್ರೆ ಉಣ್ಣವು! ದಿನಕ್ಕೆರಡು ಮೂರು ಮೀಯಾಣ ಇದ್ದೇ ಇಕ್ಕು! ಕಾಂಬಲೆ ಅಷ್ಟು ಮನಾರ ಇರವು, ಆದರೆ ನಿತ್ಯಶುಚಿಯಾಗಿಕ್ಕು, ಆರೋಗ್ಯವಂತರಾಗಿಕ್ಕು! ಅಲ್ಲದೋ? ಊರಿಲಿಪ್ಪ ಪುಟ್ಟಬಾವ ಅವನ ತಮ್ಮ ಕುಂಞಿಬಾವ ನೋಡಿ ಬೇಜಾರು ಮಾಡಿಗೊಳ್ತ, ಉಣ್ತಯಿಲ್ಲೆ ಸರಿಗಟ್ಟು ಹೇಳಿ. ಕುಂಞಿಬಾವಂಗೆ ಪುಟ್ಟಬಾವನ ಕಂಡು ಬೇಜಾರಾವುತ್ತು – ಅಯ್ಯೋ, ಮನಾರ ಇಲ್ಲೆನ್ನೆ! ಹೇಳಿಗೊಂಡು. ಆಗಲಿ, ದೂರದ ಇಂಗ್ಳೇಂಡಿಲಿದ್ದರೂ – ಊರಿಂಗೆ ಬಂದಿಪ್ಪಗಾದರೂ ಹೊಟ್ಟೆತುಂಬ ಉಂಡು ಮನಾರ ಇರಳಿ ಕುಂಞತ್ತೆಗೆ ಕಾಣ್ತು! ಚೆ ಚೆ! ಎಂತಾ ಅವಸ್ಥೆ ಅವ್ವೆವಸ್ತೆ! ಹೇಳಿ ಬೇಜಾರಪ್ಪದು ಒಪ್ಪಣ್ಣನ ಬೈಲಿಂಗೆ!!! ಅಲ್ಲದೋ? ಏ°? ಒಂದೊಪ್ಪ:ಮನಾರ ಇರೆಕ್ಕಾದ್ದು ಮನಸ್ಸಿಲಿ; ಮೈ -ಮಂಡೆಲಿ ಅಲ್ಲ! *ಸೂ: ಮನಾರ = Neat / Clean ಮದಲಿಂಗೆ ಈ ಶೆಬ್ದ ಒಳ್ಳೆತ ಉಪಯೋಗಲ್ಲಿದ್ದರೂ, ಈಗ ಎಲ್ಲೊರುದೇ ಅದರ ಇಂಗ್ಳೀಶು ಶೆಬ್ದವನ್ನೇ ಉಪಯೋಗುಸುತ್ತದು. ನಿಜವಾಗಿ ಹೇಳ್ತರೆ ಇಂಗ್ಳೀಶಿನ ನೀಟು – ಹೇಳ್ತದರಿಂದ ಹೆಚ್ಚಿನ ವೈಶಾಲ್ಯ ಮನಾರ ಹೇಳ್ತ ಶೆಬ್ದಕ್ಕೆ ಇದ್ದು. ಹೋಳಿಗೆ ಕೆರುಶಿ ಮನಾರ ಆತದಾ – ಮೊನ್ನೆ ಜೆಂಬ್ರಕಳುದಮತ್ತೆ ಮಾಷ್ಟ್ರುಮಾವನಲ್ಲಿ ಅಜ್ಜಕಾನಬಾವ ಹೇಳಿಗೊಂಡಿತ್ತಿದ್ದ! ಅವ ನೋಡಿದ ಕೆರುಶಿಲಿ ಹೋಳಿಗೆ ಮುಗುದಿತ್ತಿದ್ದು!]]>

‍ಲೇಖಕರು avadhi

June 12, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. Laxminarayana Bhat P

  ಬರವಣಿಗೆ ಭಾರೀ ಲಾಯಕ್ಕಿದ್ದು. ಹಳೆ ಶಬ್ದನ್ಗೋ ಈಗೀಗ ಆರಿನ್ಗೆ ನೆಮ್ಪಿದ್ದೂ ಹೇಳಿ ಬೇಕನ್ನೇ?!

  ಪ್ರತಿಕ್ರಿಯೆ
 2. savitri

  I am happy to read about Ts.Su. Shamaraya. But which style of Kannada that. I feel happy to read it as well as tough to understand it.
  Thank U Avadhi.
  Regards
  savi

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: