ವಿ ಆರ್ ಕಾರ್ಪೆಂಟರ್
ಈಗ ಸ್ನೇಹಿತರೊಂದಿಗೆ ರಂಗನ ಬೆಟ್ಟದಲ್ಲಿದ್ದೇನೆ.ಸುಮ್ಮನೇ ಅಲ್ಲಿ ನಡೆವಾಗ ಸೋಲಿಗರ ಹಾಡು ಕೇಳಿಸುತ್ತಿತ್ತು. ಅದೇ ಧ್ವನಿಯನ್ನು ಅರಸಿ ಹೊರಟ ನಮ್ಮನ್ನು ಒಂದು ರೆಸಾರ್ಟ್ ಸೆಳೆದುಕೊಂಡಿತು. ಒಳಹೋಗಿ ನೋಡಿದರೆ, ಯಾರೋ ಒಂದಷ್ಟು ಶ್ರೀಮಂತ ಪ್ರವಾಸಿಗರು. ಸುಖಾಸೀನವಾಗಿ ಕುಳಿತು ಹಾಡಿಗೆ ತಲೆದೂಗುತ್ತಿದ್ದರು. ಆದರೆ ಅವರನ್ನು ರಂಜಿಸುತ್ತಿದ್ದ ಸೋಲಿಗರು ನೆಲದಮೇಲೆ ಕುಳಿತು ಧೈನ್ಯಸ್ತವಾಗಿ ವರದಿ ಒಪ್ಪಿಸುವಂತೆ, ಪ್ರದರ್ಶನದ ಗೊಂಬೆಗಳಂತೆ ಕಂಡುಬಂದರು. ಒಂದು ನಿಮಿಷವೂ ಅಲ್ಲಿ ನಿಲ್ಲಲಾಗಲಿಲ್ಲ. ಹೊರಬಂದೆವು.
ಚಿತ್ರ ಕೃಪೆ: ನಿಮ್ಮೊಳಗೊಬ್ಬ ಬಾಲು
ಅಲ್ಲಿನ ಸೆಕ್ಯೂರಿಟಿ ಗಾರ್ಡ್ ನನ್ನು ವಿಚಾರಿಸಿದೆವು. ಪ್ರತೀ ವೀಕೆಂಡ್ ಗಳಲ್ಲಿ ಅವರು ಪ್ರದರ್ಶನ ನೀಡುತ್ತಾರಂತೆ. ಅವರ ಒಂದು ಪ್ರದರ್ಶನಕ್ಕೆ ಕೇವಲ 700ರೂಗಳನ್ನು ಕೊಡಲಾಗುತ್ತದೆಯಂತೆ. ನಾವು ಅಲ್ಲೇ ನಿಂತಿದ್ದೆವು. ಸೋಲಿಗರು ಪ್ರದರ್ಶನ ಮುಗಿದ ನಂತರ ಸಿನೆಮಾ ಹಾಡನ್ನು ಗುನುಗನಿಸುತ್ತಾ ಹೊರಬಂದರು. ಗೆಳೆಯ ವಿ.ಎಂ.ಮಂಜುನಾಥ್ `ನೋಡು ಅವರನ್ನು ಅರೆಬರೆ ಆಧುನಿಕ ಹುಚ್ಚರನ್ನಾಗಿ ಈ ರೆಸಾರ್ಟ್ ಸಂಸ್ಕೃತಿ ತಯಾರು ಮಾಡುತ್ತಿದೆ’ ಎಂದರು. ಯಾಕೆಂದರೆ ಆಧುನಿಕರು ಬಳಸಿ ಬಿಸಾಡಿದ ಜರ್ಕೀನ್, ಜೀನ್ಸ್, ಶೂಸ್ ಗಳನ್ನು ಧರಿಸಿದ್ದ ಅವರನ್ನು ಕಂಡು ಮೊನ್ನೆ ಹುಚ್ಚು ಹಿಡಿದು ಆಸ್ಪತ್ರೆ ಸೇರಿರುವ ಕಾಡಿನ ಹುಡುಗ ರಾಜೇಶ್ ನೆನಪಾದ… ನಮ್ಮೆಲ್ಲರಲ್ಲೂ ಮೌನ ಮಡುಗಟ್ಟಿತು… ಆ ‘`ಗೋರುಕಾನ’ ರೆಸಾರ್ಟ್ ಗೆ ಬೆನ್ನುಹಾಕಿ ಹಾರ್ಟಿಕಲ್ಚರ್ ರೂಮು ಸೇರಿಕೊಂಡೆವು…]]>
ಇಂದಿನ ಅಬ್ಬರದ ಪ್ರವಾಸೋದ್ಯಮ ಮಾಡುತ್ತಿರುವ ಈ ಅನಾಚಾರವನ್ನು ನಾವೂ ಲಕ್ಷದ್ವೀಪದಲ್ಲಿ ಕಂಡಿದ್ದೇವೆ. ಪ್ಯಾಕೇಜ್ ಪ್ರವಾಸಿಗಳಾದ ನಮ್ಮೆದುರು ಅಲ್ಲಿನ ಮುಗ್ದವಾಸಿಗಳು (ಅವರೆಲ್ಲ ಅಯ್ಕೆಯಿಲ್ಲದೆ ಮುಸ್ಲಿಮರೂ ಆಗಿರುವುದು ಕೆಲವರ ಕಣ್ಣಲ್ಲಿ ಇನ್ನೊಂದು ಮಹಾಪರಾಧ. ಹೆಚ್ಚಿನ ಓದಿಗೆ ಇಲ್ಲಿ ಚಿಟಿಕೆ ಹೋದೆದು ನೋಡಬಹುದು:
http://www.athreebook.com/2010/05/blog-post_09.html#more
ಅಶೋಕವರ್ಧನ