ಅವಧಿಯಲ್ಲಿ ನಾಳೆಯಿಂದ 'ಮೂರ್ತಿ ಪೂಜೆ'

ಪೂಜಾರಿಗಳು ಎಂಬ ಹೆಸರು ಹೊತ್ತ ಮೇಲ್ ಒಂದು ‘ಅವಧಿ’ ಇನ್ ಬಾಕ್ಸ್ ಗೆ ಬಂದು ಬಿದ್ದಾಗ ಆಶ್ಚರ್ಯವಾಯಿತು. ನಾವು ಮೂರ್ತಿ ಪೂಜೆ ಮಾಡಲು ಸಜ್ಜಾಗಿರುವ ಪೂಜಾರಿಗಳು ಎಂದು ಅದರಲ್ಲಿ ಘೋಷಿಸಲಾಗಿತ್ತು. ಮತ್ತೆ ತಡಕಾಡಿ ನೋಡಿದರೆ ಅರೆ..! ಇವರು ನಮ್ಮ ಗುರು ಮತ್ತು ದತ್ತು.
ಈ ಇಬ್ಬರೂ ತಾವು ಯಾಕೆ ಮೂರ್ತಿ ಪೂಜೆಗೆ ಮುಂದಾಗಿದ್ದೇವೆ ಎಂದು ಬರೆದಿರುವ ಟಿಪ್ಪಣಿ ಇಲ್ಲಿದೆ. ಚೆನ್ನಾಗಿದ್ದರೆ ಅವರ ಬೆನ್ನು ತಟ್ಟಿ. ಇನ್ನು ಮುಂದೆ ಪ್ರತೀ ಸೋಮವಾರ ಪೂಜೆ ಆರಂಭ.

ದಿನಪತ್ರಿಕೆಗಳಲ್ಲಿ ಮೂರ್ತಿಗಳ ಸುದ್ದಿ ಓದಿ-ಓದಿ ಬೇಜಾರಾಗಿ ಹೋಗಿದೆ.ಸಾಫ್ಟ್‌ವೇರು ಲೋಕದ ಮೂರ್ತಿಯೋ, ಸಾಹಿತ್ಯಲೋಕದ ಮೂರ್ತಿಯೋ ಏನಾದರೊಂದು ವಿಪರೀತ ಹೇಳಿಕೆ ಕೊಡುವುದು, ಅವರ ವಿರೋಧಿ ಗುಂಪಿನ ಜನ ಅವರನ್ನು ಹಿಗ್ಗಾಮುಗ್ಗಿಯಾಗಿ ಟೀಕಿಸುವುದು. ಅದರಿಂದ ಕೆರಳಿದ ವಿರೋಧಿಗಳ ವಿರೋಧಿಗಳು ಟೀಕಿಸುವುದು, ಇದನ್ನೆಲ್ಲ ನೋಡಿ ನಿಜಕ್ಕೂ ಮನಸಿಗೆ ಕಿರಿಕಿರಿಯಾಗಿತ್ತು.
ಇನ್ನೇನು ಇಬ್ಬರು ಮೂರ್ತಿಗಳು ಆಲ್ ಮೋಸ್ಟ್ ನಿವೃತ್ತರಾಗಿ, ನಾವು ಸಮಾಧಾನದಿಂದಿರಬೇಕು ಎನ್ನುವಷ್ಟರಲ್ಲಿ, ಸರ್ವಜ್ಞ-ತಿರುಕ್ಕೊಳೋರ್ ( ಐ ಮೀನ್ ತಿರುವಳ್ಳರ್) ಮೂರ್ತಿ ವಿವಾದ ದಿನಪತ್ರಿಕೆಗಳಲ್ಲಿ ಮಸಿಯಾಗತೊಡಗಿತು. ಆ ವಿವಾದ ತಣ್ಣಗಾದ ಬಳಿಕ ಸರ್ವಜ್ಞ ’ಬಡವ ನೀ ಮಡಗಿದಂಗಿರು’ ಎಂಬಂತೆ ಚೆನ್ನೈಯಲ್ಲಿ ಸುಮ್ಮನಿದ್ದರೂ, ತಿರುವಳ್ಳರದು ಮೈಸೂರಿನಲ್ಲೂ ನನ್ನ ಮೂರ್ತಿ ಇರಲಿ ಎಂಬ ತಕರಾರಿದೆ ಎಂಬ ಸುದ್ದಿ ಬಂತು.
ದಕ್ಷಿಣ ಭಾರತದಲ್ಲಿ ಇದು ನಡೆದಿದ್ದಾಗ ಉತ್ತರ ಭಾರತದಲ್ಲಿ ’ಮಾಯೆ’ ಮೂರ್ತಿ ರೂಪದಲ್ಲಿ ಬಂದು ಎಲ್ಲ ಪಾರ್ಕುಗಳಲ್ಲಿ ಒಕ್ಕರಿಸುವ ಸುದ್ದಿಗಳು ಬರುತ್ತಿವೆ.ಇಷ್ಟೆಲ್ಲಾ ಕಿರಿಕಿರಿ ಉಂಟುಮಾಡುವ ಮೂರ್ತಿಗಳಿದ್ದರೂ, ಅದೃಷ್ಟವಶಾತ್ ಕೆಲ ಸ್ಪೂರ್ತಿದಾಯಕ ಮೂರ್ತಿಗಳೂ ಇವೆ.
ಸಾಧನೆಯ ಹಾದಿಯಲ್ಲಿ ಮೇಲೇರಿ ಮುಂದಿನ ಜನಾಂಗಕ್ಕೆ ದಾರಿ ದೀಪವಾಗಬಲ್ಲ ಅನೇಕ ಹಿರಿಯ ಚೇತನಗಳ ಮೂರ್ತಿಗಳು ಅಲ್ಲಲ್ಲಿ ಇವೆ. ಅಂತಹ ಮೂರ್ತಿಗಳನ್ನು ನೋಡಿ, ಅವರ ಸಾಧನೆಯನ್ನು ನೆನೆಪಿಸಿಕೊಂಡು, ಅದರಿಂದ ಸ್ಪೂರ್ತಿ ಪಡೆಯುವುದು, ಆ ಚೇತನಗಳಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವ. ಈ ದಿಶೆಯಲ್ಲಿ ಸರಾಸರಿ ವಾರಕ್ಕೊಂದರಂತೆ ನಾಡಿನ ಮೂಲೆ ಮೂಲೆಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಮೂರ್ತಿಗಳಲ್ಲಿ ಒಂದು ಹಿರಿಯ ಚೇತನದ ಮೂರ್ತಿಯ ಫೋಟೊದೊಂದಿಗೆ ಅವರ ಕಿರು ಪರಿಚಯವನ್ನು ಪ್ರಕಟಿಸುತ್ತಿದ್ದೇವೆ.
ನಮ್ಮ ಈ ಪ್ರಯತ್ನ ತಮಗೆ ಇಷ್ಟವಾಗುತ್ತದೆ ಎನ್ನುವ ಅನಿಸಿಕೆ ನಮ್ಮದು.ಇಲ್ಲಿ ನಡೆಯುತ್ತಿರುವ ಈ ’ಮೂರ್ತಿ’ಪೂಜೆಯ ಬಗ್ಗೆ ಕೆಲ ಮಾತುಗಳು:
* ನಾವು ವೃತ್ತಿಪರ ಛಾಯಾಗ್ರಾಹಕರಲ್ಲ. ಆದ್ದರಿಂದ ಫೋಟೋಗಳ ಗುಣಮಟ್ಟದ ಬಗ್ಗೆ ಕ್ಷಮೆಯಿರಲಿ..
* ನಾವು ಪ್ರಕಟಿಸುವ ಮಾಹಿತಿಯ ಬಗ್ಗೆ ನಾವು ಸಾಕಷ್ಟು ಎಚ್ಚರವಹಿಸುತ್ತೇವೆ. ಆದರೂ ತಪ್ಪುಗಳು ನುಸುಳಿರುವುದು ಅಸಾಧ್ಯವಲ್ಲ. ಅಂತಹ ತಪ್ಪುಗಳ ಬಗ್ಗೆ ನಮಗೆ      ತಿಳಿಸಿದರೆ, ತಿದ್ದಿಕೊಳ್ಳುತ್ತೇವೆ.
* ಇಲ್ಲಿ ಪೂಜೆಗೊಳ್ಳುವ ವ್ಯಕ್ತಿಗಳ ಬಗ್ಗೆ ಬೇರೆ-ಬೇರೆ ಜನ ಬೇರೆ ಬೇರೆ ಅಭಿಪ್ರಾಯ ಹೊಂದಿರಬಹುದು. ನಾವಿಲ್ಲಿ ಸಿನಿಕರಾಗದೇ ’ಹಂಸ ಕ್ಷೀರ ನ್ಯಾಯ’ ಉಪಯೋಗಿಸಿ, ಆ ವ್ಯಕ್ತಿಗಳ ಒಳ್ಳೆಯ ಗುಣಗಳ ಬಗ್ಗೆ ಮಾತ್ರ ಗಮನ ಹರಿಸೋಣ.
* ನಮ್ಮ ಜನ್ಮಭೂಮಿ ಧಾರವಾಡ ಜಿಲ್ಲೆ, ಕರ್ಮಭೂಮಿ ಬೆಂಗಳೂರಾಗಿರುವುದರಿಂದ ಈ ಎರಡು ಜಾಗಗಳ ಮೂರ್ತಿಗಳು ಸ್ವಾಭಾವಿಕವಾಗಿ ಇಲ್ಲಿ ಹೆಚ್ಚು ಕಾಣಿಸಿಕೊಳ್ಳಬಹುದು. ಆದರೆ ಅವಕಾಶ ಸಿಕ್ಕಾಗಲೆಲ್ಲ ಉಳಿದ ಜಾಗೆಗಳಲ್ಲಿರುವ ಮೂರ್ತಿಗಳಿಗೂ ಪೂಜೆ ಸಲ್ಲಿಸುವ ಪ್ರಯತ್ನ ಮಾಡುತ್ತೇವೆ.
-ಪೂಜಾರಿಗಳು

‍ಲೇಖಕರು avadhi

January 31, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

5 ಪ್ರತಿಕ್ರಿಯೆಗಳು

  1. Manjunatha

    ಇಂಥ ಮೂರ್ತಿ ಪೂಜೆ ಇಂದಿನ ದಿನಗಳಲ್ಲಿ ಜರೂರಾಗಿ ಬೇಕಾಗಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.

    ಪ್ರತಿಕ್ರಿಯೆ
  2. ಶಿವ

    ಏಸು ಮೂರ್ತಿ, ಮೇರಿ ಮೂರ್ತಿಯನ್ನೂ ಸೇರಿಸಿಕೊಳ್ಳಲು ಹೋದರೆ ಇಲ್ಲೂ ಕಲ್ಲೆಸೆತವಾದೀತು ಎಚ್ಚರ 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: