ಅವಧಿಯ ಹೂ ಅಂಗಳದಲ್ಲಿ ಮೆಚ್ಚುಗೆಯ ನುಡಿ ಜೇನ ಝೇಂಕಾರ…

“ಅವಧಿ” ಓದುಗರ ಸಂಖ್ಯೆ ಐವತ್ತು ಸಾವಿರ ದಾಟಿ ಮುಂದುವರಿದಿದೆ. ಈ ಖುಷಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಗ, ನಮ್ಮ ಬೆನ್ನು ತಟ್ಟಿದವರ ಮಾತುಗಳು ನೆನಪಾಗುತ್ತಿವೆ. ಅವರೆಲ್ಲರ ಪ್ರೀತಿ ನಮ್ಮನ್ನು ನಡೆಸುತ್ತಿದೆ ಎಂಬ ಎಚ್ಚರ ನಮ್ಮ ಹೆಜ್ಜೆಗಳನ್ನು ದೃಢಗೊಳಿಸುತ್ತಿದೆ. ಅವರ ವಿಶ್ವಾಸಪೂರ್ವಕ ಮಾತುಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿವೆ. ಈ ಸಂದರ್ಭದಲ್ಲಿ ಅವನ್ನೆಲ್ಲ ಒಮ್ಮೆ ಮೆಲುಕು ಹಾಕುವುದು ತುಂಬಾ ಇಷ್ಟವಾಗುತ್ತಿದೆ. ಆ ಬೆಳಕಿನಲ್ಲಿ ಮುಂದಣ ದಾರಿಯ ನೋಡಬಯಸಿದ್ದೇವೆ.

po.jpg

* 

ಟರಾಜ್ ಹುಳಿಯಾರ್ ಬಗ್ಗೆ ಪ್ರಾಮಾಣಿಕ ಮೆಚ್ಚುಗೆಯ, ಮಾತುಗಳನ್ನು ಓದಿ ಸಂತೋಷವಾಯಿತು. ಒಂದು ಹೊಸ ಕವಿತೆ ಓದಿದರೆ ಒಂದು ಹೊಸ ಕಥೆ ಓದಿದರೆ ಅದರ ಬಗ್ಗೆ ಖುಶಿಯಾಗಿ ನಾವೆಲ್ಲರೂ ಹಿಂದೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತ ಇದ್ದೆವು. ಜಗಳವಾಡುತ್ತ ಇದ್ದೆವು. ಸಾಹಿತ್ಯ ಜೀವಂತವಾಗಿತ್ತು. ಅದರಲ್ಲಿ ಸಣ್ಣ ಪೊಲಿಟಿಕ್ಸ್ ಇರಲಿಲ್ಲ. ನಟರಾಜ್ ಅದನ್ನು ನಮ್ಮ ಈ ಕಾಲದಲ್ಲಿ ಮಾಡಬಲ್ಲವ ಎಂದು ನನ್ನ ಭಾವನೆ. “ಗಾಳಿ ಬೆಳಕು” ಓದುವೆ. ಇಷ್ಟವಾದಾಗ ಯಾರಿಗಾದರೂ ಹೇಳುವೆ. ಬರೆಯುವ ಸೋಮಾರಿತನ ನನ್ನನ್ನು ಇನ್ನೂ ಬಿಟ್ಟಿಲ್ಲ. ಕಿ ರಂನಂತೆ ಮಾತಿನಲ್ಲೇ ಎಲ್ಲ ಸುಖ ಕಾಣುವವನು ನಾನು.

ನಿಮ್ಮ ಬ್ಲಾಗ್ ಚೆನ್ನಾಗಿದೆ.

ಸದ್ಯ ನನ್ನ ಚಿಂತೆಯೆಲ್ಲ ಮೈಸೂರಿನ ಹತ್ತಿರದ ಚಾಮಲಾಪುರ ಎಂಬಲ್ಲಿ ಈ ಸರ್ಕಾರ ಸ್ಥಾಪಿಸಬೇಕೆಂದು ಇರುವ ದರಿದ್ರ ಉಷ್ಣ ಸ್ಥಾವರ ಒಂದರ ಬಗ್ಗೆ. ಸುಮಾರು ಸಣ್ಣ ಪುಟ್ಟ ರೈತರಿಗೆ ದುಡ್ಡಿನ ಆಮಿಷ ಒಡ್ಡಿ ಅವರ ಭೂಮಿ ಕೊಂಡು ಹಾರು ಬೂದಿಯಿಂದ ಇಡೀ ಪರಿಸರವನ್ನು ಮಲಿನ ಮಾಡುವ ಆಸೆ ನಮ್ಮ ಸರ್ಕಾರಕ್ಕೆ ಬಂದಿದೆ.
ಏನೇನೋ ಬರೆದೆ. ಥ್ಯಾಂಕ್ಸ್.

-ಡಾ. ಯು ಆರ್ ಅನಂತಮೂರ್ತಿ

* * *

ಪ್ರಾಮಿಸಿಂಗ್ ಜರ್ನಲ್.

-ಕೆ ವಿ ತಿರುಮಲೇಶ್

* * *

ಬ್ಲಾಗ್ ಮಂಡಲದ ಬೆರಗು.

-ನಾಗೇಶ್ ಹೆಗಡೆ

* * *

ವಧಿ ನೋಡಿದೆ. ಇದೊಂದು ಅದ್ಭುತ ಪ್ರಯತ್ನ. ಸಾಧ್ಯವಾದಾಗೆಲ್ಲ ಇದನ್ನು ನೋಡುವೆ.

-ಸುಗತ ಶ್ರೀನಿವಾಸರಾಜು

* * *

ವಧಿ ಚೆನ್ನಾಗು ಕಾಣುತ್ತಿದೆ.

-ಎಂ ಎಸ್ ಮೂರ್ತಿ

* * *

ಹೊಟ್ಟೆಕಿಚ್ಚಾಗುವಷ್ಟು ಚೆನ್ನಾಗಿದೆ.

-ಜೋಗಿ

* * *

ಬ್ಲಾಗ್ ಈಸ್ ಬ್ಯೂಟಿಫುಲ್.

-ಜಿ ಎನ್ ಮೋಹನ್

* * *

ಡೆಗೂ ಕಿ ರಂ ಬರೆಯುತ್ತಿದ್ದಾರೆ. ನನಗೆ ಅವರ ಭಾಷಣಗಳೆಂದರೆ ಬಲು ಇಷ್ಟ. ಅವರ ವಿದ್ಯಾರ್ಥಿಯಾಗದೇ ಇರುವುದಕ್ಕೆ ನನಗೆ ಯಾವಾಗಲೂ ಸಂಕಟ. ಕಡೆಗೂ ಅವರ ಬರಹಗಳು ಸಿಗುವಂತೆ ಮಾಡಿದ ಅವಧಿ ಮತ್ತು ಕನ್ನಡ ಟೈಮ್ಸಿಗೆ ಕೃತಜ್ಞತೆಗಳು.

-ಡಾ. ಕೆ ಪುಟ್ಟಸ್ವಾಮಿ

* * *

ನೀವ್ಯಾರೋ ನನಗೆ ಗೊತ್ತಿಲ್ಲ.  ಆದರೂ ಪ್ರೀತಿಯಿಂದ ನನ್ನ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಬರೆದಿರುವುದು ನನ್ನನ್ನು ಆರ್ದ್ರಗೊಳಿಸಿದೆ.  ನಿಮಗೆ ಧನ್ಯವಾದಗಳು.

ಅವಧಿ ಪ್ರಯತ್ನ ಚೆನ್ನಾಗಿದೆ. ಒಳ್ಳೆಯದಾಗಲಿ.

-ವಸುಧೇಂದ್ರ

* * *

ನ್ನಡದಲ್ಲಿ ಇಂಥದೊಂದು ಬ್ಲಾಗ್! ನಂಬುವುದಕ್ಕೇ ಸಾಧ್ಯವಾಗುತ್ತಿಲ್ಲ. ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಜೀವಂತವಾಗಿಡುವುದಕ್ಕೆ ಇಂಥ ಪ್ರಯತ್ನ ಖಂಡಿತ ಅಗತ್ಯವಿದೆ. ತುಂಬಾ ಸೃಜನಶೀಲ ಆಲೋಚನೆ. ಒಳ್ಳೆಯದಾಗಲಿ.

ಕೃಷ್ಣಪ್ರಸಾದ್

‍ಲೇಖಕರು avadhi

March 17, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. chetana chaitanya

  ನಿನ್ನೆ ಮೊನ್ನೆ ಅವಧಿ ಎದುರು ನಿಂತಿದ್ದು ಅನ್ನುವ ಹಾಗಿದೆ. ನಿಜಕ್ಕೂ ’ಅವಧಿ’ಗೆ ಬರೀತೀನಿ ಅಂತ ಹೇಳ್ಕೊಳೋದೇ ಒಂದು ಖುಶಿ ನಂಗೆ! ಈ ಖುಶಿಯನ್ನ ಕೊಟ್ಟ ಅವಧಿ ಬಳಗಕ್ಕೆ ಥ್ಯಾಂಕ್ಸ್.
  ಅಂದಹಾಗೆ, ತೀರ ಇತ್ತೀಚೆಗಲ್ವಾ, ಮೂವತ್ತು ದಾಟಿತು ಅಂತ ಅವಧಿ ಬಣ್ಣ ಬದಲಿಸಿದ್ದು (ಲೇ ಔಟ್!)? ಆಗಲೇ ಐವತ್ತಾಗಿಹೋಯ್ತಾ!?
  ಅಭಿನಂದನೆಗಳು.

  – ಚೇತನಾ ತೀರ್ಥಹಳ್ಳಿ

  ಪ್ರತಿಕ್ರಿಯೆ
 2. ಜೋಗಿ

  ನಿಮ್ಮ ಬ್ಲಾಗ್ ನೋಡುತ್ತಿದ್ದರೆ, ನನ್ನದನ್ನು ಮುಚ್ಚಿ ನಿಮ್ಮಲ್ಲೇ ಬರೆಯೋಣ ಅನ್ನಿಸುತ್ತದೆ. ಅಷ್ಟೊಂದು ಓದುಗರು, ಅಷ್ಟೊಂದು ಲವಲವಿಕೆ. ಮಿತ್ರಮಂಡಳಿ ಚಿರಾಯುವಾಗಲಿ.

  ಪ್ರತಿಕ್ರಿಯೆ
 3. Shaani

  ಅಬ್ಬಾ! ಇನ್ನಷ್ಚು, ಮತ್ತಷ್ಚು ಉದ್ಗಾರಗಳನ್ನು ಮತ್ತೆಮತ್ತೆ ಮೂಡಿಸಲಿ ಅವಧಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: