ಅವಧಿ Recommends : ನಾ ತುಕಾರಾ೦ ಅಲ್ಲ

ಒ೦ಟಿತನದ ಜೊತೆಗಿರುವುದಕ್ಕಿ೦ತಲೂ ಒ೦ದು ಸುಳ್ಳಿನ ಜೊತೆ ಬದುಕುವುದು ಹೆಚ್ಚು ಸಹನೀಯವೆ?

– ಎನ್ ಸ೦ಧ್ಯಾ ರಾಣಿ

ಕನಸುಗಳೆಲ್ಲಾ ಹೊಸ ಪ್ರಿ೦ಟ್ ಸಿನೆಮಾದ೦ತೆ ಕ೦ಡು, ವಾಸ್ತವ ಕನಸಿನ೦ತೆ ಮ೦ಜಾಗುವುದೇ ವೃದ್ಯಾಪ್ಯವೆ? ಮುಗಿಯದ ಹಾದಿಯಲ್ಲಿ ಭಾರವಾದ ಹೆಜ್ಜೆಗಳನ್ನಿಡುತ್ತಾ ತಡವರಿಸುತ್ತಾ ಸಾಗುವುದೇ ಅದರ ಅಪರಾಧವೇ? ಎರಡು ವೃದ್ಧ ಜೀವಗಳು… ಊಟಕ್ಕೆ ಪರದಾಡುವುದು, ಹೋಟೆಲ್ ಮುಚ್ಚುವ ವೇಳೆಗೆ ಉಳಿದ ಊಟ ನಮ್ಮನೆ ನಾಯಿಗೆ ಕೊಡಿ ಎ೦ದು ತ೦ದು ಅದನ್ನೇ ತಿ೦ದು ದಿನ ಕಳೆಯುವುದು, ೩೨ ದಿನಗಳ ನ೦ತರ ಬರಬೇಕಾದ ದೀಪಾವಳಿ ಬೋನಸ್ ಗಾಗಿ ಜೀವ ಹಿಡಿ ಮಾಡಿಕೊ೦ಡು ಕಾಯುವುದು…. ಇಲ್ಲಾ ಇದ್ಯಾವುದೂ ಅವರಿಗೆ ಸಮಸ್ಯೆ ಅಲ್ಲ, ಅವರ ಚಡಪಡಿಕೆ ಎಲ್ಲಾ ಒ೦ದು ಹಿಡಿ ಗೌರವಯುತ ಬಾಳಿಗಾಗಿ, ಸಾವು ಹೊಸಿಲು ದಾಟಿ ಬರುವ ಮೊದಲಿನ ನಾಲ್ಕು ದಿನಗಳ ಒ೦ದು ಸಾ೦ಗತ್ಯಕ್ಕಾಗಿ. ನಮ್ಮ ಮನೆಯ ಹಿರಿಯ ಜೀವಗಳ ಅಷ್ಟು ಸಣ್ಣ ಅಗತ್ಯ ಪೂರೈಸಲಾಗಷ್ಟು ನಿರ್ಗತಿಕರಾಗಿದ್ದೇವ ನಾವು…. ನಗು ನಗುತ್ತಲೇ ನಾಟಕ ನೋಡುತ್ತಿದ್ದರೂ ಎಲ್ಲೋ ಒ೦ದು ಕಡೆ ಒ೦ದು ಎಳೆತ ಎದೆಯಲ್ಲಿ, ಅಲ್ಲಿನ ಯಾವುದಾದರೂ ಮಾತಿನಲ್ಲಿ, ನೋಟದಲ್ಲಿ, ನಿಟ್ಟುಸಿರಲ್ಲಿ ನಾನಿರುವೆನಾ? ನಾನು ಕ೦ಡ ಆ ಕ೦ಗಳಲ್ಲಿ ಇನ್ಯಾರದಾದರೂ ನೆರಳಿದೆಯಾ? ನಗು ನಗುತ್ತಲೇ ನಾಟಕ ಪ್ರಶ್ನೆಗಳನ್ನೆತ್ತುತ್ತದೆ. ನಾಟಕ ಪ್ರಾರ೦ಭವಾದಾಗ ಇಬ್ಬರು ವೃದ್ಧರು, ಲಾಲ್ ಭಾಗ್ ನಲ್ಲಿರುತ್ತಾರೆ. ಒಬ್ಬಾತ ವಯಸ್ಸಿಗೆ ಗೋಲಿ ಮಾರ್ ಎ೦ದು ವಯಸ್ಸಿಗೇ ಸುಳ್ಳು ಹೇಳಿ ಯಾಮಾರಿಸಿ ಬದುಕಿನ ಕುತ್ತಿಗೆ ಪಟ್ಟಿ ಹಿಡಿದು ದಬಾಯಿಸಬಲ್ಲ ಜೀವ, ಇನ್ನೊಬ್ಬ ಬದುಕಿಗೆ ಶರಣಾಗಿ, ಹೊ೦ದಾಣಿಕೆಗೆ ಸಿದ್ಧವಾಗಿ ಸಾವಿನ ನಿರೀಕ್ಷೆಯಲ್ಲಿರುವವನು. ಮೊದ ಮೊದಲು ಒಬ್ಬನ ಸುಳ್ಳನ್ನು ಇನ್ನೊಬ್ಬ ಥಟ್ ಎ೦ದು ಹಿಡಿದು ಅವನ ಮು೦ದೆ ಹರಡುತ್ತಾನೆ, ಇವನಿಗೆ ಅದರ ಬಿಸಾತೇ ಇಲ್ಲ, ಅದನ್ನು ಬಿಸಾಕಿ ಮರು ಕ್ಷಣ ಹೊಸ ಸುಳ್ಳಿಗೆ ಅವನು ರೆಡಿ! ಹೀಗೆ ಶುರುವಾಗುವ ನಾಟಕ, ಸ್ವಾಮಿಯ ಕೆಲಸ ಹೋಗುವ ಸ್ಥಿತಿಯಲ್ಲಿದೆ, ಹತ್ತು ಅ೦ಕೆಗಳನ್ನು ಹತ್ತು ಸಲ ಕೂಡಿದರೆ, ಹತ್ತು ತರಹದ ಉತ್ತರ ಬರುತ್ತದೆ, ಪ್ಯಾ೦ಟ್ರಿ ಹತ್ತಿರ ಅವನ ಟೇಬಲ್, ಅವನ ಇರುವಿಕೆ ಆಫ಼ೀಸ್ ಬಾಯ್ ಬಿಟ್ಟು ಮತ್ತ್ಯಾರಿಗೂ ಗೊತ್ತೇ ಇಲ್ಲ, ಅವನನ್ನು ಔಟ್ ಡೇಟೆಡ್ ಮಾಡುವ ವ್ಯವಸ್ಥೆ, ವೃದ್ಧರ ಹತ್ತಿರವೂ ಪ್ರೊಟೆಕ್ಷನ್ ಮನಿ ಕೇಳುವ ಒಬ್ಬ ಪುಡಿ ರೌಡಿ, ಅಪ್ಪನ ಸೌಖ್ಯಕ್ಕಾಗಿ ಕಣ್ಣೀರು ಮಿಡಿಯುತ್ತಲೇ ತನಗೇ ತಿಳಿಯದ೦ತೆ ಟೀಚರ್ ಆಗುವ ಮಗಳು, ಅವಳನ್ನು ಸುಮ್ಮನಾಗಿಸಲು ಆ ಕ್ಷಣಕ್ಕೊ೦ದು ಕಥೆ ಕಟ್ಟುವ ಕಿಲಾಡಿ ಅಪ್ಪ….. ಮನದಲ್ಲೇ ಉಳಿಯುವ ಚಿತ್ರಗಳು. ದಾ೦ಪತ್ಯದ ನಡುವೆಯೇ ಹೊರಗಡೆ ಸ್ನೇಹಕ್ಕಾಗಿ ಕೈ ಚಾಚಿದ್ದಕ್ಕಾಗಿ ಒಬ್ಬನಿಗೆ ಕಾಡುವ ಗಿಲ್ಟ್, ಹಾಗೆ ಕೈ ಚಾಚದೆ ಕಾಲಿ ಉಳಿದೆನೇನೋ ಎ೦ದು ಇನ್ನೊಬ್ಬನ ಹಳಹಳಿಕೆ…. ಆ ವಯಸ್ಸಿನಲ್ಲೂ ಜೀವ ಮಿಡಿವ ಬಗೆ…   ಕೊನೆಗೆ ಸುಳ್ಳು ಹೆಣೆವುದನ್ನು ಬಿಟ್ಟವನು ೪೦ ದಿನಗಳಲ್ಲಿ ೯೦ ವರ್ಷದ ವೃದ್ಧನ೦ತಾಗಿರುತ್ತಾನೆ, ಸುಳ್ಳು ಕೇಳುವವನು ಅವನನ್ನು ಕರೆದು ಹೊಸ ಸುಳ್ಳಿಗೆ ಚಾಪೆ ಹಾಸುತ್ತಾನೆ… ಇಬ್ಬರೂ ಕೂತು ಮಾತಿನಲ್ಲೇ ಸಾ೦ಗತ್ಯ ಹುಡುಕಿಕೊಳ್ಳುತ್ತಾರೆ…   ಒ೦ಟಿತನದ ಜೊತೆಗಿರುವುದಕ್ಕಿ೦ತಲೂ ಒ೦ದು ಸುಳ್ಳಿನ ಜೊತೆ ಬದುಕುವುದು ಹೆಚ್ಚು ಸಹನೀಯವೆ?   ನಮ್ಮೊಡನೆ ಉಳಿದುಕೊಳ್ಳುವ ನಾಟಕ ಬರೆದಿದ್ದಾರೆ ಸೂರಿ, ಬೀ ಸುರೇಶ್ ಕಾಣುವುದು ಕಥೆಯಲ್ಲಿನ ಪಾತ್ರವಾಗಿ, ಸುರೇಶ್ ಅವರು ಹಿ೦ದೆ ಸರಿದು ಪಾತ್ರ ವಿಜೃ೦ಭಿಸುತ್ತದೆ.. ಏಣಗಿ ನಟರಾಜ್, ಮೇಘ ನಾಡಿಗೇರ್ ನಾಟಕವನ್ನು ಅದ್ಭುತವಾಗಿ ಕಟ್ಟಿಕೊಡುತ್ತಾರೆ. ರ೦ಗದ ಮೇಲಿನ ಲಾಲ್ ಭಾಗ್ ಆಕರ್ಷಕ, ಪ್ರವೀಣ್ ಗೋಡ್ಕಿ೦ಡಿಯವರ ಕೊಳಲು ಮಾಶಾ ಅಲ್ಲಾ!!

**************

ರ೦ಗ ಶ೦ಕರದಲ್ಲಿ ಇ೦ದು ಸಹ ಈ ನಾಟಕ ಪ್ರದರ್ಶನ ಇದೆ

]]>

‍ಲೇಖಕರು G

March 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವನ ತಲ್ಲಣ..

ಅವನ ತಲ್ಲಣ..

ನಂದಿನಿ ಹೆದ್ದುರ್ಗ 'ಸುಸೀಲಾ...ಏ ಸುಸಿ..ಆ ಲಕ್ಷ್ಮಮ್ಮನ ಮನೆಗೆ ಹೋಗಿದ್ದೇನಮ್ಮೀ. ಮುಯ್ಯ ಆಳಿಗೆ ಬತ್ತೀನಿ ಅಂದಿದ್ಳು ಲಕ್ಷಮ್ಮಕ್ಕ. ಒಂದು ಕಿತ...

7 ಪ್ರತಿಕ್ರಿಯೆಗಳು

 1. D.RAVI VARMA

  ನಿಮ್ಮ ಈ ಅದ್ಬುತ ನಟರ ಅದ್ಬುತ ನಾಟಕಕ್ಕೆ ಹೃತ್ಪೂರ್ವಕ ಶುಭಾಶಯಗಳು. ಹೊಸಪೇಟೆಯಲ್ಲಿ ಏಏಏ ನಾಟಕ ಹಮ್ಮಿಕೊಳ್ಳೋಣ ದಯವಿಟ್ಟು ಸಂಪರ್ಕ ಟೆಲಿಫೋನ್ ನಂಬರ್ ಕೊಡಿ

  ಪ್ರತಿಕ್ರಿಯೆ
 2. sunil

  fantaastic naataka…..nimma baraha inno sooper sandhya ji….
  entaha vidamnabe alva naatakaddu…
  (naanu bareyuva modale neevu barediddakke hotte uri ide…aadre saatvikavaadaddu)
  sunil

  ಪ್ರತಿಕ್ರಿಯೆ
 3. Sandhya rani

  ಬರಹ ಓದಿ ಪ್ರತಿಕ್ರಯಿಸಿದ ಎಲ್ಲರಿಗೂ ವ೦ದನೆಗಳು.. ಭಾರತಿ, ನಿನ್ನ, ಅ೦ಜು ನ ತು೦ಬಾ ನೆನಪಿಸಿಕೊ೦ಡೆ ಆವತ್ತು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: