ಅವರಿಬ್ಬರಿಗೊಂದು ಶಾಪ!

-ರಾಘವೇಂದ್ರ ಜೋಶಿ ನಮಸ್ಕಾರ. ಹೇಗಿದ್ದೀ ಮಾರಾಯ ಎಲ್ಲೆಲ್ಲೂ ನಿನ್ನದೇ ಮಾತು. ತಿರುಪತಿ ಹುಂಡಿಯಲ್ಲಿ ಕ್ರಿಸ್ತನ ಶಿಲುಬೆಯಲ್ಲಿ ಸಂಕಟದಲ್ಲಿ ಸಂಕಷ್ಠಿಯಲ್ಲಿ ಪ್ರತಿ ವಿಮಾನದ ಪತನದಲ್ಲೂ.. ಇನ್ನೆಷ್ಟು ಉಬ್ಬುವೆ ಇನ್ನೆಷ್ಟು ಕೊಬ್ಬುವೆ – ಅಣುರೇಣು ತೃಣಕಾಷ್ಠ ಎಲ್ಲ ಮಣ್ಣಾಂಗಟ್ಟಿ. ಗುಡಿಸಲಿನ ಸೋಲು ಕೆದರಿದ ಕೂದಲು ಹಸಿದ ಹೈವೇಗಳು ಮತ್ತು ನಿಶೀಥ ರಾತ್ರಿಗಳ ನಿಷಿದ್ಧ ಮನಸುಗಳು.. ಅಲ್ಲೇಕಿಲ್ಲ ನಿನ್ನ ಹಾಜರಾತಿ? – ನೀನು ಕೂಡ ಅಷ್ಟೇ ಮಾರಾಯ್ತಿ. ಕಾಫೀ ಡೇ ಬ್ಲ್ಯಾಕ್ ಫಾರೆಸ್ಟು ಜೊತೆಗೇ ಎಂಥದೋ ಕರೆಂಟಿನ ಐಸ್ ಕ್ರೀಮು. ಮಾಲ್ ಗಳ ಸ್ಕೇರಿ ಹೌಸ್ ಗಳಲ್ಲಿ ಭಯಕ್ಕೆ ಬರವಿದೆ ಮತ್ತು ನಿರ್ಭೀತ ಅನುಭೂತಿ! ಕುಂಟು ಕಾಲಿಗೆ ಎಂಟಾಣೆ ಲೆಕ್ಕ ಅಲ್ಲಿಗೆ ಬಾಕಿ ಎಲ್ಲ ಮುಕ್ತಾಯ.. – ನೀವಿಬ್ಬರೂ ಅಷ್ಟೇ ನೀವಿಬ್ಬರೂ ಒಂದೇ. ಥೇಟ್ ಸಕ್ಕರೆ ಪಾಕದ ಪಡಿಯಚ್ಚು. ದುರಂತದ ಶಿಖರ ಇಲ್ಲಿದೆ ನೋಡಿ. ನಿಮಗೆ ಕನಸು ನೋಡುವ ಕಣ್ಣುಗಳಿಲ್ಲ; ನಮಗೆ ಕನಸು ಕಾಣುವ ಮನಸೇ ಇಲ್ಲ. ಅಂಗೈಯಲ್ಲಿ ಅಂಗಾರವಿಲ್ಲ ಡಮರುಗವಿಲ್ಲ ಕಮಂಡಲವಿಲ್ಲ. ಆದರೂ ಶಪಿಸಬಲ್ಲೆವು: ಕಣ್ಣಿಲ್ಲದ ನೀವುಗಳು ಈಗಿಂದೀಗಲೇ ಸಾವಿರ ಕಣ್ಣುಗಳ ನವಿಲಾಗಿ ಹುಟ್ಟಿರಿ. ಸದ್ಯಕ್ಕೆ ಹಾಳಾಗಿ ಹೋಗಿ ಸುಖವಾಗಿರಿ!]]>

‍ಲೇಖಕರು avadhi

June 5, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

ನಂಬಿಕೆ

ನಂಬಿಕೆ

ಗೀತಾ ಜಿ ಹೆಗಡೆ ಕಲ್ಮನೆ ಹಿಂದಿಂದೇ ಬರುವ ಒಂಟಿ ನೆರಳೊಂದುಕೇಳುತ್ತಿದೆ ಅವನೆಲ್ಲಿ ಬೇಗ ಹೇಳುಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆನನಗೂ ಈಗ...

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: