ಅವಳು ಅಹಲ್ಯ 'ನಾ' ಅವಳಲ್ಲ..

‘ಅಹಲ್ಯೆ’ ಅಲ್ಲ…!

bhuvaneshwari_h_cಭುವನೇಶ್ವರಿ ಹೆಚ್ ಸಿ

 

ಇಲ್ಲೊಂದು ಸೋಜಿಗ (?)

ಇದ್ದದ್ದು ಬಿದ್ದದ್ದು ಕದ್ದು ಮೆದ್ದದ್ದು

ಎಲ್ಲವೂ ಸಾಕು ಬೇಕಷ್ಟು.

 

ಮನೆ ವೈದ್ಯರ ಸಲಹೆ-

‘ಒತ್ತಡದ ಕೆಲಸ, ಮುಂಜಾನೆ ನಡಿಗೆ ಅತ್ಯಗತ್ಯ’

ಹುಸಿನಕ್ಕು ತೊಡಗಿಸಿಕೊಂಡೆ

she2

ನಿತ್ಯಕಾಯಕದಬ್ಬರದಲಿ

ಮಲಗಿದ್ದರೂ ಮಗಳ ಅರಚಾಟ, ಗಂಡನ ಕಿರುಚಾಟ

…ಗೊಣಗಾಟವನ್ನೂ ಮೀರಿ

ಮನೋಶರಧಿಯ ಅಟ್ಟಹಾಸ!

ಕಿವುಡು ಹೊರಜಗತ್ತಿಗೆ;

ಮಂದಹಾಸ, ಆಧುನಿಕ ಗರತಿ ಪಟ್ಟ!

ಕೊಟ್ಟವರ ಇಣುಕಿ ನೋಡುವ ಸಾಹಸ

ಸಫಲವಾಯ್ತು; ಮನಃಪೂರ್ತಿ ಈಜಾಟ

ಮೈದಣಿಯೆ ಮುದದಾಟ-

 

ಛೇ… ಅಲ್ಲೂ ಪುರುಷನ್ಹೆಗ್ಗಳಿಕೆ ‘ಕಾಮನಾಟ?’

ರತಿ ‘ಮಂದ್ರ’ದಲಿ ಮುಲುಗುತ್ತಿದ್ದಳು

ಸೋತಿದ್ದಳು ಹೊರಜಗಕೆ; ಗೆದ್ದಿದ್ದಳು ತನ್ನಲ್ಲಿ ‘ತಾ’

‘ಅದುಮಿದಷ್ಟೂ ಜಿಗಿವ ಬೆಂಡು ಪ್ರಶ್ನೆ’

 

ಮತ್ತೆ ಎದುರಾದದ್ದು-

ಫೇಸ್ಬುಕ್ಕಿನ ಮೊಗವಾಡದ ರಹದಾರಿಯಲಿ ಅದೂ ನಿನ್ನೆ

‘ತುಂಬಾ ಚೆಂದ, ವಯಸು ಕಾಣುವುದಿಲ್ಲ,

ಮಕ್ಕಳೆಷ್ಟು, ಹೆಚ್ಚೆಂದರೂ ನೀ ಹತ್ತು-ಹನ್ನೆರಡು ವರುಷ ಹಿರಿಯಳಷ್ಟೆ?’

ಹೆಸರು ಗಳಿಸಿಕೊಂಡವರ ‘ಕುದಿ ಬಸಿರಿನ’ ತವಕ…

ನಕ್ಕು ನಿವಾಳಿಸಿದೆ… ದೂರ ತಳ್ಳಲಿಲ್ಲ!

 

ಗೊತ್ತಿದ್ದೂ ಹೊತ್ತಿದ್ದೂ ಹುತ್ತದಲಿ ಇದ್ದದ್ದೆಲ್ಲ

ಎಳೆದೆಳೆದು ಬಿಸುಟೆ…

‘ಗರತಿಯ ನಿಜಬಣ್ಣ’ ಅವನಂಥವರ ಎಲೆಅಡಿಕೆ

ಸಮಾಧಾನದ ನಿಟ್ಟುಸಿರಿಟ್ಟೆ; ಮತ್ತಷ್ಟು ಪುಟಿದೆ-

ಹಿಂಸರಿದ… ಓಡಲಿಲ್ಲ!

ಬಾಯ್ಬಿಟ್ಟವನ ಕಣ್ಣರಳಿ ನಭದತ್ತ ದಿಟ್ಟಿshe3

ಪ್ರಖರತೆಗೆ ಕಣ್ಣು ನೆಲದತ್ತ ಬಾಗಿತ್ತು…

 

ಗರ್ವವಡಗಿದರೂ ಗಂಡುತನ ಆಸ್ಪದವೀಯದೆ

ಬುಸುಗುಡುತ್ತಿತ್ತು, ಸಮಯಸಿಕ್ಕಾಗ ಹೊರಳುತ್ತಿತ್ತು; ಚಪಲತೆಯ ಜಿಹ್ವೆ!

ಸೆಟೆದೆ; ನನ್ನೊಳಗೆ

ಅಕ್ಕ, ಲಲ್ಲೇಶ್ವರಿ….ದ್ರೌಪದಿಯ ಸಂಚಾರ

ಸ್ವಾಭಿಮಾನಿ ಸೀತೆ ಸದಾ ಜಾಗೃತೆ!

ಮಮತೆ ಮಂಡೋದರಿಯಂತೆ.

 

ಇವಳ್ಯಾರು…? ನಾ ಅವಳಂತಲ್ಲ-

ಬೇಕಾದ್ದು ಬೇಕೆಂದೇ ಪಡೆದರೂ

ತಲ್ಲಣಕೆ ತಂಪು ಸಿಂಪರಿಸಲು ಕಲಿತಿಲ್ಲ

ಅವಳು ‘ಅಹಲ್ಯೆ’-

‘ನಾ’ ಅವಳಲ್ಲ…

‍ಲೇಖಕರು Admin

October 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತುಂಬು ತಿಂಗಳಿನ ಹಾಲು ಬೆಳದಿಂಗಳು ನೀ

ತುಂಬು ತಿಂಗಳಿನ ಹಾಲು ಬೆಳದಿಂಗಳು ನೀ

ಪ್ರಕಾಶ.ಬಿ ಉಪ್ಪನಹಳ್ಳಿ ಕನಸುಗಳ ಕಟ್ಟಿದ ಹಟ್ಟಿಕೊರಳು ಹೊಟ್ಟೆ ಬಟ್ಟೆ ಕಟ್ಟಿನಿಂತ ಹೆಜ್ಜೆಗಳು ಗುರುತಾಗುವಂತೆಲೋಕದೆದುರು ತಲೆ ಎತ್ತಿ...

ನಿಜವಾದ ಸುಳ್ಳು!

ನಿಜವಾದ ಸುಳ್ಳು!

ಲಕ್ಷ್ಮೀದೇವಿ ಪತ್ತಾರ ಇಷ್ಟು ದಿನ ಹೌದಾಗಿದ್ದು ಇಂದು ಅಲ್ಲವಾಗಿದೆಇಲ್ಲವೆನ್ನುವುದು ಎದ್ದು ಕಾಣುತ್ತಿತ್ತು ಯಾವುದೊ ಭಯ, ಚಿಂತೆಗಳ...

ಈ ಆಸೆಯ ಬಸುರು ಬಲು ಭಾರ…

ಈ ಆಸೆಯ ಬಸುರು ಬಲು ಭಾರ…

ಹೇಮಂತ್ ಎಲ್ ಚಿಕ್ಕಬೆಳವಂಗಲ ಇದು ಇಂದು ನಿನ್ನೆಯದಲ್ಲ! ಸಾಗರದಂತಹ ನಿನ್ನೂರಿಗೆನಾನು ಬರುವಾಗಲೆಲ್ಲಾನಿನಗೆಹೇಳಿಯೇ ಇರುತ್ತೇನೆ.. ಎಲ್ಲ ಕೆಲಸಗಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This