ಅವಳ ನಿನ್ನೆಗಳಲ್ಲಿ..

renuka nidagundiರೇಣುಕಾ ನಿಡಗುಂದಿ

ಅವಳ ನಿನ್ನೆಗಳಲ್ಲಿ ಒಬ್ಬನೇ ಪುರುಷನಿರಲಿಲ್ಲ.. ಅನೇಕರಿದ್ದರು.

ಬಂದ ಹಾಗೇ ಎದ್ದೂ ನಡೆದರು. ಮತ್ತೆ ಆಕೆ ಒಬ್ಬಂಟಿ.

ಹಲವಾರು ಪುರುಷರು .. ಹಲವಾರು ಸಂಬಂಧಗಳು ಇದ್ದವೆಂದೇ ಆಕೆಯನ್ನು ಯಾರೂ ಒಪ್ಪಿಕೊಳ್ಳಲಿಲ್ಲ.

rekha-bookಎಲ್ಲ ರೀತಿಯ ಅವಮಾನಗಳನ್ನೂ.. ನಿರಾಕರಣೆಯನ್ನೂ ಸಹಿಸಬೇಕಾಯ್ತು. ಎಲ್ಲ ಹೆಣ್ಣಿನಂತೆ ಆಕೆಗೂ ಪ್ರೀತಿಸುವ ಗಂಡ.. ಮುದ್ದಿಸಲು ಮಕ್ಕಳು ಎಲ್ಲವೂ ಬೇಕಿತ್ತು.. ಆದರೆ ಆಕೆ ಬಯಸಿದ ಯಾವದೂ ಸಿಗಲಿಲ್ಲ ಆಕೆಗೆ.. ಈಗಿನ ಕಾಲದಲ್ಲಿ molestation… Abuse ಏನೆಲ್ಲ ಹೆಸರಿನ ಶೋಷಣೆ, ದೌರ್ಜನ್ಯ.. ಅತ್ಯಾಚಾರಗಳಿವೆಯೋ ಅವೆಲ್ಲವನ್ನೂ ಆಕೆ ಅನುಭವಿಸಿದಳು.

ವಿನೋದ್ ಮೆಹ್ರಾನನ್ನು ಮದುವೆಯಾಗಿ ಅವನ ಬಂಗಲೆಗೆ ಮದುವೆ ಹೆಣ್ಣಾಗಿ ಹೋದರೆ ಅವನ ತಾಯಿ ಅವಳನ್ನು ಸ್ವೀಕರಿಸದೇ ಬಾಗಿಲಲ್ಲೆ ಚಪ್ಪಲಿ ತೆಗೆದು ಹೊಡೆದಳಂತೆ. ಕಣ್ಣೀರು ಹಾಕಿಕೊಂಡು ಹೋದ ರೇಖಾ ಮತ್ತೆ ಅಲ್ಲಿ ಕಾಲಿಡಲಿಲ್ಲ.

ಭಾಷೆಯೇ ಬಾರದ ಆಕೆ ಮುಂಬೈ ಸಿನೇಮ ಜಗತ್ತಿನ ಸುಂದರಿಯಾಗಿ ಮೆರೆದಳು.. ಅಮಿತಾಭ ಜತೆಗಿನ ಪ್ರೇಮ ಸಂಬಂಧವೂ ಅವಮಾನ.. ಅವಹೇಳನದಲ್ಲಿ ಮುಗಿದು ಹೋಯಿತು.

ದಿಲ್ಲಿಯ ಉದ್ಯಮಿ ಮುಖೇಶ ಅಗರ್ ವಾಲ್ ನನ್ನು ಕೆಲ ಹಿತಚಿಂತಕರ ಸಲಹೆ ಮೇರೆಗೆ ಮದುವೆಯಾದಳು. ಅವನೋ ಮೊದಲೆ ಡಿಪ್ರೆಶನ್ ರೋಗಿ. ಅವಳ ದುಪ್ಪಟ್ಟಾದಿಂದಲೇ ಆತ್ಮಹತ್ಯೆ ಮಾಡಿಕೊಂಡ. ಅದನ್ನೂ ಅವಳ ತಲೆಗೆ ಕಟ್ಟಿದರು. ಆಕೆ ನರಭಕ್ಷಕಿ.. ಡಾಯನ್.. ಇನ್ನೂ ಏನೆನೋ..

ಅವಳನ್ನು ಬಲ್ಲ ಅಂದಿನ ಕಾಲದ.. ಇಂದು ಮುದಿಯರಾಗಿ ಹೋದವರು ಈಗಲೂ ಅಶ್ಲೀಲ ಪದಗಳನ್ನು ಬಳಸಿ ಬಾಯ ತೀಟೆಯನ್ನು ತೀರಿಸಿಕೊಳ್ಳುತ್ತಾರಂತೆ.

ಅವಳ ಖಾಸಗಿ ಬದುಕು ಹೇಗೇ ಇದ್ದಿರಲಿ ಅವಳೂ ಒಬ್ಬ ಹೆಣ್ಣುಮಗಳು.. ಅವಳಿಗೂ ಪ್ರೀತಿಸುವ ಸಂಗಾತಿ.. ಅವಳಂತೇ ಮುದ್ದಾಗಿರುವ ಮಕ್ಕಳು ಎಲ್ಲವೂ ಸಿಗಬೇಕಿತ್ತು. ಸುತ್ತಲಿನ ಸಮಾಜ ಜನರು… ಆಕೆ ಸೆಲೆಬ್ರಿಟಿ ಇರಲಿ… ಇಲ್ಲದಿರಲಿ… ಹೆಣ್ಣನ್ನು ತೂಗುವ ಕತ್ತಿಯ ಮೇಲೆ ನಡೆಸಿ ಅವಳ ಪಾವಿತ್ರ್ಯತೆಯ ಆಧಾರದ ಮೇಲೆ ಅವಳ ಮೌಲ್ಯಮಾಪನ ನಡೆಸುತ್ತಾರೆ.

ಪುಸ್ತಕ ಕೈ ಸೇರುವವರೆಗೂ ಇದೇ ಮಂಥನ… ಏನೇನೋ ಆಖ್ಯಾನ ವ್ಯಾಖ್ಯಾನಗಳ ಸುಳಿಯಲ್ಲಿ.

rekha

‍ಲೇಖಕರು Admin

September 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಕ್ಟ್ 1978: ಬೇರೆ ಕಣ್ಣು, ಬೇರೆ ನೋಟ..

ಆಕ್ಟ್ 1978: ಬೇರೆ ಕಣ್ಣು, ಬೇರೆ ನೋಟ..

ಮಂಸೋರೆ ನಿರ್ದೇಶನದ 'ಆಕ್ಟ್ 1978' ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ವೀಕ್ಷಕರು ಮತ್ತೆ ಚಲನಚಿತ್ರ ಮಂದಿರಗಳತ್ತ ಹೆಜ್ಜೆ ಹಾಕುವಂತೆ ಮಾಡಿದೆ....

ನಿನಗೆ ನೀನೇ ಗೆಳೆಯ, ನಿನಗೆ ನೀನೇ

ನಿನಗೆ ನೀನೇ ಗೆಳೆಯ, ನಿನಗೆ ನೀನೇ

ಗೊರೂರು ಶಿವೇಶ್ High noon  ಅಥವಾ ಮಟಮಟ ಮಧ್ಯಾಹ್ನ ಒಂದು ವೆಸ್ಟರ್ನ್ ಕ್ಲಾಸಿಕಲ್ ಚಿತ್ರ . ಪ್ರಸಿದ್ಧ ನಿರ್ದೇಶಕ  ಫ್ರೆಡ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This