ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ

ನನ್ನವಳು
‘ಊಟದಲ್ಲಿದ್ದಂತೆ ಹೋಳಿಗೆ
ನೀನು ನನ್ನ ಬಾಳಿಗೆ’
ಎನ್ನದಿದ್ದರೆ ಮಾಡಿಟ್ಟ ಹೋಳಿಗೆ
ಹಾಕುವುದೇಇಲ್ಲ ನನ್ನ ಬಾಳೆಗೆ

ಸೆಳೆತ
ಮದುವೆಗೆ ಮೊದಲು
ಸೆಳೆದಳು ನನ್ನ ಕಣ್ಗಳ
ಮದುವೆ ಆದ ಮೇಲೆ
ಸೆಳೆಯುತ್ತಿದ್ದಾಳೆ ನನ್ನ ಸಂಬಳ

ವ್ಯತ್ಯಾಸ
ಪ್ರೇಯಸಿ ಹನಿಗವನದಂತೆ
ಮತ್ತೆ ಮತ್ತೆ ಓದುವ ಹಂಬಲ
ಹೆಂಡತಿ ಬೃಹತ್ ‌ಕಾದಂಬರಿಯಂತೆ
ಎಷ್ಟು ಓದಿದರೂ ಮುಗಿಯುವುದೇ ಇಲ್ಲ

ಆಶೀರ್ವಾದ
ದಿನಾ ನನ್ನ ಹೆಂಡತಿ
ಬೇಡುತ್ತಾಳೆ ನನ್ನ ಆಶೀರ್ವಾದ
ಮುಂದಿನ ಜನ್ಮದಲ್ಲಾದರೂ ಒಳ್ಳೆಯ ಗಂಡ
ಸಿಗಲಿ ಎನ್ನುವುದೇ ಅವಳ ಪರಮಪದ

ಕಣ್ಣೀರು
ನನ್ನವಳ ಕಣ್ಣಲ್ಲಿ ನೀರು
ನಾನಂದುಕೊಂಡೆ ನಾನು ಬೈದದ್ದಕ್ಕೆ
ಅಲ್ಲ, ನೀರುಳ್ಳಿ ಕೊಯ್ದದ್ದಕ್ಕೆ

ಭಾರತಿ
ನನ್ನವಳು ಭಾರತಿ
ನಾನವಳನ್ನು ಕರೆಯುತ್ತಿದ್ದೆ ‘ಬಾ ರತಿ’
ಈಗ ಆಗಿದ್ದಾಳೆ ‘ಭಾರ ಅತಿ’

ಬಯಕೆ- ಭಯಕ್ಕೆ
ಮನೆಗೆಲಸವೆಲ್ಲಾ ನಾನೇ ಮಾಡಬೇಕೆಂದು
ನನ್ನವಳ ಬಯಕೆ
ನಾನೂ ಮಾಡುತ್ತೇನೆ ಮನೆಗೆಲಸ
ನನ್ನವಳ ಭಯಕ್ಕೆ
ಮದುವೆ ಆದವನ ಪ್ರಶ್ನೆ
ಪ್ರಳಯ ಆಗುತ್ತದೆ ಎಂಬ ಸುದ್ದಿ ಕೇಳಿ
ಆತುರಾತುರವಾಗಿ ಮದುವೆ ಆದ ನನ್ನ ಗೆಳೆಯ
ಈಗ ಕೇಳುತ್ತಿದ್ದಾನೆ- ‘ಪ್ರಳಯ
ಇನ್ನೂ ಯಾಕೆ ಆಗಿಲ್ಲ ಮಾರಾಯ?’

ಷಹಜಹಾನ್‌ನಂತೆ
ತಾಜ್‌ಮಹಲನ್ನುಕಂಡ ನನ್ನವಳು
ನುಡಿದಳು ನನ್ನಲ್ಲಿ-
‘ಷಹಜಹಾನ್‌ನಂತೆ ನೀವಿಲ್ಲವಲ್ಲ’
ನಾನು ಉಸುರಿದೆ- ‘ನೀನಿನ್ನೂ ಇದ್ದೀಯಲ್ಲ’

‍ಲೇಖಕರು Avadhi

November 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮನ ಹರಿವ ನೀರು

ಮನ ಹರಿವ ನೀರು

ಅರುಣ ರಾವ್ ಮನವು ಹರಿವ ಸಲಿಲಓಡುವುದು ಸತತ ತಿನ್ನುವಾಗಲೂಕುಡಿಯುವಾಗಲೂಸ್ನಾನ ಜಪತಪಮಾಡುವಾಗಲೂ ಪೂಜೆ ಪುನಸ್ಕಾರಅಥಿತಿ ಸತ್ಕಾರಪಾಠ...

ರೆಕ್ಕೆ ಕಳಚಿದ ಸಂಕ್ರಮಣದ ಹಕ್ಕಿ

ರೆಕ್ಕೆ ಕಳಚಿದ ಸಂಕ್ರಮಣದ ಹಕ್ಕಿ

ಬಿದಲೋಟಿ ರಂಗನಾಥ್ ಬದಲಾಗದ ಬದುಕಿನೆದುರುಮಂಡಿಯೂರಿ ಕೂತುಬೆವೆತ ಕರುಳು ಕೂಗುವ ಸದ್ದಿಗೆಸುರಿವ ಕೆಂಡದ ಮಳೆಯಲಿ ತೊಯ್ದವನಿಗೆಯಾವ ಸಂಕ್ರಮಣ?...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This