ಅವಿವೇಕಿ ಸಮಾಜದ ದನಿ ವಿವೇಕಯುತವಾಗಲಾರದು

ನಾ ದಿವಾಕರ

ಯಾವುದೇ ಒಂದು ಮಾನವೀಯ ಸಮಾಜದಲ್ಲಿ ಶಿಕ್ಷಣ ಎನ್ನುವುದು ಅಲ್ಲಿನ ಪ್ರಜೆಗಳ ಸ್ವಾಭಾವಿಕ ಮತ್ತು ಸಹಜ ಹಕ್ಕು ಎಂದೇ ಪರಿಗಣಿಸಲ್ಪಡಬೇಕು. ಶಿಕ್ಷಣ ಎಂದರೆ ಶಾಲಾ ಪಠ್ಯ ಶಿಕ್ಷಣವೆಂದೇ ಭಾವಿಸಬೇಕಿಲ್ಲವಾದರೂ, ಒಂದು ಶಿಸ್ತಿಗೆ ಒಳಪಟ್ಟ ಮಾನವ ಸಮಾಜದಲ್ಲಿ, ಜನತೆ ಸಮಾಜದ ಆಗು ಹೋಗುಗಳನ್ನು, ತಮ್ಮ ಸಾಂಸ್ಕೃತಿಕ, ಧಾಮರ್ಿಕ ಮತ್ತು ಪ್ರಾದೇಶಿಕ ಹಿನ್ನೆಲೆಗಳನ್ನು ಅರಿಯಲು ಶಿಕ್ಷಣ ಒಂದು ಮೂಲಭೂತ ಪರಿಕರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಾನವ ಸಮಾಜ ತನ್ನ ಅಭ್ಯುದಯದ ಮಾರ್ಗದಲ್ಲಿ ಕಂಡುಕೊಂಡ ಒಂದು ಸಾಮಾಜಿಕ ಪರಿಹಾರ. ಹಾಗಾಗಿ ಯಾವುದೇ ಆಧುನಿಕ ಸಮಾಜದಲ್ಲಿ ಪ್ರಜೆಗಳಿಗೆ ಶಿಕ್ಷಣ ಒದಗಿಸುವ ಕರ್ತವ್ಯ ಆಯಾ ಸಮಾಜದ್ದಾಗಿರುತ್ತದೆ, ಅಥರ್ಾತ್ ಆಳುವ ವರ್ಗಗಳದ್ದಾಗಿರುತ್ತದೆ. ಭಾರತದ ಆಳುವ ವರ್ಗಗಳು ಎಷ್ಟೇ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ಪ್ರಭಾವಿತವಾಗಿದ್ದರೂ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಒತ್ತಡಗಳಿಗೆ ಮಣಿದು ಒಂದು ಶಿಕ್ಷಣ ನೀತಿಯನ್ನು ರೂಪಿಸಿದೆ. ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾದ ಜನಸಮುದಾಯಗಳಿಗೆ ಸಮಾಜದಲ್ಲಿ ಘನತೆವೆತ್ತ ಸ್ಥಾನ ರೂಪಿಸಲು ಆಳುವ ವರ್ಗಗಳು ಶ್ರಮಿಸಿವೆ. ಇದು ಅನಿವಾರ್ಯವೂ ಹೌದು ಆದ್ಯತೆಯೂ ಹೌದು. ಈ ಹಿನ್ನೆಲೆಯಲ್ಲೇ ಭಾರತದ ಸಂವಿಧಾನದ ನಿದರ್ೇಶಕ ತತ್ವಗಳಲ್ಲಿ 1 ರಿಂದ 14 ವರ್ಷದವರೆಗಿನ ಎಲ್ಲ ಮಕ್ಕಳಿಗೂ ಉಚಿತ ಕಡ್ಡಾಯ ಶಿಕ್ಷಣ ನೀಡುವ ಘನ ಉದ್ದೇಶವನ್ನು ವ್ಯಕ್ತಪಡಿಸಲಾಗಿದೆ. ಒಂದು ಸ್ವತಂತ್ರ ಗಣತಂತ್ರ ರಾಷ್ಟ್ರವಾಗಿ ರೂಪುಗೊಂಡ ಆರು ದಶಕಗಳ ನಂತರ ಈ ನಿದರ್ೇಶಕ ತತ್ವವನ್ನು ಶಾಸನಬದ್ಧವಾಗಿಸುವ ಒಂದು ಪ್ರಯತ್ನವನ್ನು ಕೇಂದ್ರ ಸಕರ್ಾರ ಶಿಕ್ಷಣ ಹಕ್ಕು ಕಾಯ್ದೆ 2009ರ ಮೂಲಕ ಮಾಡಿದೆ. ಈ ಕಾಯ್ದೆಯನ್ನೂ ಸಕರ್ಾರ ವಸ್ತುನಿಷ್ಠವಾಗಿ ಜಾರಿಗೊಳಿಸುವ ಪ್ರಯತ್ನವನ್ನೇನೂ ಮಾಡಲಿಲ್ಲ. ಆದರೆ ದೇಶದ ವಂಚಿತ ಜನಸಮುದಾಯಗಳು ಶಿಕ್ಷಣದಿಂದಲೂ ವಂಚಿತರಾಗುತ್ತಿರುವುದನ್ನು ಗಮನಿಸಿರುವ ಸುಪ್ರೀಂಕೋಟರ್್ ತನ್ನ ಆದೇಶ ಮೂಲಕ ಶಿಕ್ಷಣ ಹಕ್ಕು ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೊಳಿಸಿ, ಎಲ್ಲಾ ಖಾಸಗಿ, ಅನುದಾನಿತ ಮತ್ತು ಅಲ್ಪಸಂಖ್ಯಾತ ಶಾಲೆಗಳಲ್ಲಿ ( ಅಲ್ಪಸಂಖ್ಯಾತ ಅನುದಾನರಹಿತ ಶಾಲೆಗಳನ್ನು ಹೊರತುಪಡಿಸಿ) ಶೇ. 25ರಷ್ಟು ಸ್ಥಾನಗಳನ್ನು ಶಾಲೆಯ ಸುತ್ತಲಿನ ಪರಿಸರದಲ್ಲಿರುವ ಬಡ ವಿದ್ಯಾಥರ್ಿಗಳಿಗ ಮೀಸಲಾಗಿಟ್ಟು, ಉಚಿತ ಶಿಕ್ಷಣ ಒದಗಿಸುವಂತೆ ಆದೇಶಿಸಿದೆ. ಇದು ಒಂದು ಐತಿಹಾಸಿಕ ತೀಪರ್ು ಎನ್ನುವುದರಲ್ಲಿ ಎರಡು ಮಾತಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ಲೋಪಗಳು ಏನೇ ಇರಲಿ ಭಾರತೀಯ ಸಮಾಜದಲ್ಲಿ ಇದು ಒಂದು ಐತಿಹಾಸಿಕ ದಿಟ್ಟ ಹೆಜ್ಜೆ ಎನ್ನುವುದಂತು ದಿಟ. ಆದರೆ ನವ ಉದಾರವಾದ ಮತ್ತು ಜಾಗತೀಕರಣದ ಪ್ರಭಾವದಿಂದ ಭಾರತದಲ್ಲಿ ಶಿಕ್ಷಣ ಒಂದು ಮಾರುಕಟ್ಟೆಯ ಸರಕಿನಂತಾಗಿದ್ದು, ಶಾಲೆಯಲ್ಲಿ ನೀಡುವ ಶಿಕ್ಷಣಕ್ಕೂ ಮಾಲ್ಗಳಲ್ಲಿ ಮಾರಾಟ ಮಾಡುವ ಪದಾರ್ಥಗಳಿಗೂ ವ್ಯತ್ಯಾಸವೇ ಇಲ್ಲವಾಗಿದೆ. ಇಂತಹ ತರಗತಿಗೆ ಇಂತಿಷ್ಟು ಶುಲ್ಕ ವಿಧಿಸುವ ಖಾಸಗಿ ಶಾಲೆಗಳ ದಂಧೆ ಶೈಕ್ಷಣಿಕ ಕ್ಷೇತ್ರವನ್ನು ವಾಣಿಜ್ಯೀಕರಣಗೊಳಿಸಿದೆ. ಹಾಗಾಗಿಯೇ ಶೇ. 25ರಷ್ಟು ಸ್ಥಾನವನ್ನು ಆಥರ್ಿಕವಾಗಿ ಹಿಂದುಳಿದ ಮಕ್ಕಳಿಗೆ ನೀಡುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕೆಂಬ ಸುಪ್ರೀಂಕೋಟರ್್ ನಿರ್ಣಯವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ತೀವ್ರವಾಗಿ ವಿರೋಧಿಸುತ್ತಿದ್ದು , ಸಕರ್ಾರ ಬಂಡವಾಳ ಹೂಡದಿರುವ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿರುವುದಿಲ್ಲ ಎಂದು ಪ್ರತಿಪಾದಿಸುತ್ತಿವೆ. ಮತ್ತೊಂದೆಡೆ ಅಲಕ್ಷಿತ ಸಮುದಾಯದ ಮಕ್ಕಳಿಗೆ ಪ್ರವೇಶ ನೀಡುವುದರಿಂದ ಶಾಲೆಗಳಲ್ಲಿನ ಪ್ರತಿಭೆಗೂ ಧಕ್ಕೆ ಉಂಟಾಗುತ್ತದೆ ಎಂದೂ ವಾದಿಸುತ್ತಿವೆ. ಇದು ಅಪ್ರಬುದ್ಧತೆಯ ಪರಾಕಾಷ್ಠೆ ಎಂದಷ್ಟೇ ಹೇಳಬಹುದು. ಬಡ ವಿದ್ಯಾಥರ್ಿಗಳಿಗೆ ಕಡ್ಡಾಯವಾಗಿ ಪ್ರವೇಶ ನೀಡುವ ನೀತಿಯಿಂದ ತಮ್ಮ ಶಾಲೆಯ ಪ್ರತಿಷ್ಠೆಗೆ ಭಂಗ ಉಂಟಾಗುತ್ತದೆ ಎಂಬ ವಿತಂಡವಾದ ಮಂಡಿಸುತ್ತಿರುವ ಶೈಕ್ಷಣಿಕ ಸಂಸ್ಥೆಗಳು ತಮ್ಮ ಸಾಂವಿಧಾನಿಕ ಮತ್ತು ಸಾಮಾಜಿಕ ನೈತಿಕ ಹೊಣೆಗಾರಿಕೆಯನ್ನೇ ಮರೆತಂತಿವೆ. ಅವಿವೇಕತನದ ಪರಮಾವಧಿ ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಮೈಸೂರಿನ ಜ್ಞಾನಗಂಗಾ (?) ವಿದ್ಯಾಪೀಠ (?)ದಲ್ಲಿ ನಡೆದ ವಿಚಾರ ಸಂಕಿರಣವನ್ನು ವಿಶ್ಲೇಷಿಸಬೇಕಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯನ್ನು ಕುರಿತು ಚಚರ್ೆ ಮತ್ತು ಪ್ರಶ್ನೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕನರ್ಾಟಕ ಅನುದಾನರಹಿತ ಶಾಲೆಗಳ ನಿವರ್ಾಹಕರ ಸಂಘ (ಕುಸುಮಾ), ಈ ಚಚರ್ೆಯಲ್ಲಿ ಅನ್ಯ ಅಭಿಪ್ರಾಯಕ್ಕೆ ಮನ್ನಣೆಯೇ ನೀಡದೆ, ಆಸ್ಥಾನ ಕವಿಗಳ ಸಮ್ಮೇಳನದ ರೀತಿಯಲ್ಲಿ ಏಕಾಭಿಪ್ರಾಯ ವಿಚಾರ ಸಂಕಿರಣವನ್ನು ಸಂಘಟಿಸಿದೆ. ಇಲ್ಲಿ ನೆರೆದಿದ್ದವರೆಲ್ಲರೂ ಶಿಕ್ಷಣ ಹಕ್ಕು ಕಾಯ್ದೆಯ ವಿರೋಧಿಗಳೇ, ಕಾರಣ ಎಲ್ಲರೂ ಖಾಸಗಿ ಶಿಕ್ಷಣದ ಪರಿಚಾರಕರು. ಆಧುನಿಕ ನವ ಉದಾರವಾದಿ ಜಗತ್ತಿನ ಶೈಕ್ಷಣಿಕ ವಾಣಿಜ್ಯೋದ್ಯಮಿಗಳು. ಇವರ ಧ್ಯೇಯೋದ್ದೇಶಗಳು ಒಂದೇ, ಲಾಭ ಗಳಿಸುವುದು, ಸಮಾಜದ ಉನ್ನತ ವರ್ಗಗಳಿಗೆ ಉತ್ತಮ (?) ಗುಣಮಟ್ಟದ ಶಿಕ್ಷಣ ಒದಗಿಸುವುದು. ಇಂತಹ ಒಂದು ಚಚರ್ಾ ವೇದಿಕೆಯಲ್ಲಿ ಕುಸುಮಾದ ಸಂಸ್ಥಾಪಕ ಮಾನ್ಯ ಶಮರ್ಾ ಅವರು ಉಚಿತ ಕಡ್ಡಾಯ ಶಿಕ್ಷಣ ಅವಿವೇಕಿಗಳು ರೂಪಿಸಿದ ಕಾಯ್ದೆ ಎಂದು ಹೇಳಿದ್ದಾರೆ. (ನನ್ನ ಮಾತುಗಳನ್ನು ಮಾಧ್ಯಮಗಳಲ್ಲಿ ತಿರುಚಿ ಹೇಳಲಾಗಿದೆ ಎಂಬ ಸಬೂಬನ್ನು ನಿರೀಕ್ಷಿಸುತ್ತಲೇ ಈ ವಿಶ್ಲೇಷಣೆ ) ಇಲ್ಲಿ ಸನ್ಮಾನ್ಯ ಶರ್ಮ ಅಥವಾ ಕುಸುಮ ಸಂಘಟನೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮನ್ನಿಸುತ್ತಲೇ ಹೇಳಬೇಕಾದ ಅಂಶವೆಂದರೆ, ಅವರು ಉಲ್ಲೇಖಿಸಿರುವ ಅವಿವೇಕಿಗಳೇ ಭಾರತದ ಸಂವಿಧಾನವನ್ನೂ ರಚಿಸಿದ್ದಾರೆ. ಅದೇ ಅವಿವೇಕಿಗಳು ರೂಪಿಸಿದ ಸಂವಿಧಾನಕ್ಕೆ ಬದ್ಧವಾಗಿಯೇ ದೇಶದ ಅತ್ಯುನ್ನತ ನ್ಯಾಯಪೀಠವೂ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆದೇಶಿಸಿದೆ. ಸದ್ಯ ಮಾನ್ಯ ಶರ್ಮ ಅವರಿಗೆ ಇನ್ನೂ ಶಿಕ್ಷಣ ಎಂಬ ಸಾಮಾಜಿಕ ಪರಿಕಲ್ಪನೆಯ ಬಗ್ಗೆ ಕೊಂಚ ಕಳಕಳಿ ಉಳಿದುಕೊಂಡಿದೆ. ಇಲ್ಲವಾದಲ್ಲಿ ಶಿಕ್ಷಣ ನೀಡುವುದೇ ಅವಿವೇಕತನ ಎಂದು ಹೇಳುತ್ತಿದ್ದರೇನೋ ? ವಾಸ್ತವಾಂಶವೆಂದರೆ ಭಾರತೀಯ ಇತಿಹಾಸದ ಶ್ರೇಣೀಕೃತ ಭಾರತೀಯ ಸಮಾಜ ನಿಮರ್ಿಸಿರುವ ಜಾತಿಯ ಗೋಡೆಗಳು ಮತ್ತು ಸಾಮಾಜಿಕ-ಆಥರ್ಿಕ ತಡೆಗೋಡೆಗಳು ಅವಿವೇಕತನದ ಒಂದು ಇತಿಹಾಸವನ್ನೇ ನಿಮರ್ಿಸಿವೆ. ಭಾರತೀಯ ಸಮಾಜದ ಅಲಕ್ಷಿತ ಸಮುದಾಯಗಳಿಗೆ ಶಿಕ್ಷಣ ಎಂದರೆ ಮರೀಚಿಕೆಯಂತೆ ಮಾಡಿರುವ ಈ ಸಾಮಾಜಿಕ ಚೌಕಟ್ಟು ಸೃಷ್ಟಿಸಿರುವ ಅವಿವೇಕತನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮ ಸಂವಿಧಾನ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ಆದರೆ ನಮ್ಮ ರಾಜ್ಯದ ಕುಸುಮಾಕರರಿಗೆ ಇದು ಅವಿವೇಕ ಎಂದು ತೋರುತ್ತದೆ. ಇದು ಮಾನ್ಯ ಶರ್ಮ ಅವರಾಡಿದ ಮಾತುಗಳಲ್ಲ. ನವ ಉದಾರವಾದ ಮತ್ತು ಜಾಗತೀಕರಣ ಸೃಷ್ಟಿಸಿರುವ ಔದ್ಯಮಿಕ ಮನಸ್ಥಿತಿಯ ಸಂಕೇತವಾಗಿ ಕುಸುಮ ಕಂಡುಬರುತ್ತದೆ. ಇಂದಿನ ತುತರ್ು ಅಗತ್ಯತೆ ಇರುವುದು ಮಕ್ಕಳನ್ನು ಶಾಲೆಗಳಿಂದ ಹೊರಬೀಳದಂತೆ ಹಿಡಿದಿಟ್ಟುಕೊಳ್ಳುವುದು. ಶಿಕ್ಷಣ ಹಕ್ಕು ಕಾಯ್ದೆ ಈ ಹಿನ್ನೆಲೆಯಲ್ಲಿ ಒಂದು ಐತಿಹಾಸಿಕ ಹೆಜ್ಜೆ. ಆದರೆ ಈ ಕಾಯ್ದೆಯ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ತಾಂಡವಾಡುತ್ತಿರುವ ತಾರತಮ್ಯ, ಲಿಂಗಬೇಧ ಮತ್ತು ಬಡವ-ಶ್ರೀಮಂತರ ನಡುವಿನ ಕಂದರವನ್ನು ಹೋಗಲಾಡಿಸುವುದು ಆದ್ಯತೆಯಾಗಬೇಕಿದೆ. ಶೇ. 25ರಷ್ಟು ಮೀಸಲಾತಿ ನೀಡುವುದು ಪ್ರಥಮ ಸೋಪಾನವಾಗಬೇಕೇ ಹೊರತು, ಅಂತಿಮ ಗುರಿಯಾಗಬಾರದು. ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಯಾವುದೇ ಒಂದು ಪ್ರಬುದ್ಧ ಸಮಾಜದ ಸ್ವಾಭಾವಿಕ ಆದ್ಯತೆಯಾಗಿರಬೇಕು. ಆದರೆ ಭಾರತೀಯ ಸಮಾಜ ಇನ್ನೂ ಆ ಪ್ರಬುದ್ಧತೆಯನ್ನು ಪಡೆದುಕೊಂಡಿಲ್ಲ. ಹಾಗಾಗಿ ಕಾನೂನಾತ್ಮಕ ಕ್ರಮಗಳ ಮೂಲಕ ನ್ಯಾಯಾಂಗದ ಆದೇಶದ ಮೂಲಕ ಶಿಕ್ಷಣ ಲಭ್ಯವಾಗಬೇಕಿದೆ. ಇದು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಅಪಭ್ರಂಶವೆಂದೇ ಹೇಳಬಹುದು. ದೇಶದ ಸಂವಿಧಾನ ತತ್ವಗಳು ಮತ್ತು ಸವರ್ೋಚ್ಚ ನ್ಯಾಯಾಲಯದ ಸಾಮಾಜಿಕ ಕಳಕಳಿಗಳು ಔದ್ಯಮಿಕ ಶಕ್ತಿಗಳಿಗೆ ಅವಿವೇಕತನವಾಗಿ ಕಂಡುಬಂದರೆ, ಅದು 21ನೆಯ ಶತಮಾನದ ಆಧುನಿಕ ಭಾರತದ ದುರಂತ ಎಂದಷ್ಟೇ ಹೇಳಬಹುದು.]]>

‍ಲೇಖಕರು G

May 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

3 ಪ್ರತಿಕ್ರಿಯೆಗಳು

 1. ಆದಿ ಜೀವರತ್ನ

  What a sorry state of affairs we are in now, rich and middle class India still looks down upon the poor and deprived India, treats them like slaves. But the same elite India cries foul when a british takes up this issue in his movie slumdog millionaire or when a NRI writes white tiger.

  ಪ್ರತಿಕ್ರಿಯೆ
 2. D.RAVI VARMA

  ಸರ್,ಲೇಖನ ತುಂಬಾ ತುಂಬಾ ಅರ್ಥಪುರ್ನವಾಗಿದೆ, ಅಸ್ತೆ ಅಲ್ಲ ,ಓದುಗರನ್ನು ಒಂದಿಸ್ತು ವಿಭಿನ್ನ ಯೋಚನೆಯತ್ತ ಕೊಂದ್ಯ್ಯುತ್ತದೆ, ಬಹಳ ಕಾಲದ ನಂತರ ನಿಮ್ಮ ಲೇಖನ ಬಂತು , ನಿಮ್ಮ ಪ್ರಭುದ್ದ ಚಿಂತನೆ ನನಗೆ ನಿಜಕ್ಕೂ ತುಂಬಾ ಇಷ್ಟ . ನನಗೆ ಗೊತ್ತಿರದ ಅದೆಸ್ತೋ ಸರಳ ಸತ್ಯಗಳನ್ನು ತಿಳಿಸಿಕೊಡುತ್ತಿದೆ
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: