ಅವ್ವನ ಅಂಗನವಾಡಿ

-1- ಬಡ ಮಕ್ಕಳ ತೊಟ್ಟಿಲು ಅಂಗನವಾಡಿಯಲ್ಲಿ ನನ್ನವ್ವ ಏಸೊಂದು ಮಕ್ಕಳ ತಾಯಿ ! ಅಷ್ಟೂ ಮಕ್ಕಳ ಅವ್ವ ನನ್ನ ಸ್ವಂತ ಎನ್ನುವ ಹಿಗ್ಗಿಗೆ ಮಕ್ಕಳಲೋಕದಿ ನಾ ರಾಜನೆ ಆಗಿದ್ದೆ! ಟೀಚರಮ್ಮನ ಮಗನೆನ್ನುವ ಊರವರ ಅಕ್ಕರೆಯ ಹಾರೈಕೆಯಲ್ಲಿ ನಾ ಊರ ತಾಯಂದಿರ ಮಗನಾದದ್ದು ಈಗಲೂ ಸೋಜಿಗ ! -2- ಆಗ ಅಂಗನವಾಡಿಗಳಿಗೆ ಬರುತ್ತಿದ್ದ ಅಮೇರಿಕಾದ ಸೋಯಾಬೀನ್ ಹಿಟ್ಟು ಎಣ್ಣೆಯ ಭಾರತಾಂಬೆಯ ಬಡ ಮಕ್ಕಳೆಲ್ಲಾ ತಿಂದು ಬೆಳೆಯುತ್ತಿದ್ದರು! ಅವ್ವ ಕರುಣಾಳು ದೇಶವೆಂದು ಮನದಲ್ಲಿ ವಂದಿಸುತ್ತಿದ್ದಳು ! ಅಲ್ಲಿ ನಾಯಿಗೆ ಹಾಕುವ ಫುಡ್ಡನ್ನು ಅಂಗನವಾಡಿಗಳಿಗೆ ಕೊಡುತ್ತಾರೆಂಬ ಎಲ್ಲೋ ಕೇಳಿದ ಸುದ್ದಿ ನಿಜವೇ ಎಂದು ಅವ್ವನನ್ನು ಮುಗ್ದವಾಗಿ ಕೇಳಿದ್ದೆ. ಯಾರೋ ಹೇಳಿದ್ದು ? ಎಂದು ಸಿಡಿಮಿಡಿಗೊಂಡಿದ್ದಳು ! ನನಗಾಗ ಅಂಗನವಾಡಿ ಮಕ್ಕಳು ನಾಯಿಮರಿಗಳಂತೆ ಕಂಡದ್ದು ಈಗಲೂ ನೆನಪಿದೆ ! -3- ಕೂಲಿಗೆ ಹೋದ ಮಾದಿಗರ ದುರುಗಿ ಗೌಡರ ಮಗನ ಬಲತ್ಕಾರಕ್ಕೆ ಬಲಿಯಾಗಿ ಅಸುನೀಗಿದ್ದಳು ! ದೈವದವರು ಕೊಲೆಯ ಮುಚ್ಚಿಟ್ಟು ಊರ ಮಾನ ಉಳಿಸಿದರು ! ಜನನ ಮರಣದ ರಿಜಿಸ್ಟರನಲ್ಲಿ ಕಾಡುಹಂದಿಯ  ಇರಿತದಿಂದ ಸತ್ತಳೆಂದು ಬರೆದ ಅವ್ವ ನಿಜವ ಮುಚ್ಚಿಟ್ಟಿದ್ದಕ್ಕೆ ರಾತ್ರಿಪೂರ ಬಿಕ್ಕಳಿಸಿ ಅತ್ತಿದ್ದಳು ! -4- ಪ್ರತಿ ಬಾರಿ ಮಕ್ಕಳ ತೂಕ ಮಾಡುವಾಗ ಬಡಕಲು ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆ ಇರುವ ಲೆಕ್ಕ ಬರೆದು ತಳಮಳಿಸುತ್ತಿದ್ದಳು ! ಆ ಮಕ್ಕಳಿಗೆ ಉಪ್ಪಿಟ್ಟನ್ನು ಸ್ವತಃ ತಾನೇ ತಿನ್ನಿಸಿ ಮುಂದಿನ ತಿಂಗಳು ಆ ಮಕ್ಕಳ ತೂಕ ತುಸು ಹೆಚ್ಚಿದಾಗ ಕಣ್ಣಲ್ಲಿ ನೀರ ತಂದು ಒಳಗೊಳಗೆ ಖುಷಿಗೊಳ್ಳುತ್ತಿದ್ದಳು ! -5- ಮಕ್ಕಳನ್ನು ಆಡಲು ಬಿಟ್ಟು ಕಣ್ಮರೆಸಿ ಕೂಲಿಗೆ ಹೋಗುವ ತಾಯಂದಿರು ತಮ್ಮ ಮನಸ್ಸನ್ನೆಲ್ಲಾ ಅವ್ವನ ಕೈಯಲ್ಲಿಡುತ್ತಿದ್ದರು! ಅವ್ವ ಅಳುವ ಕಂದಮ್ಮಗಳ ತನ್ನ ಹಾಲಿಲ್ಲದ ಮೊಲೆಗೆ ಹಾಕಿಕೊಂಡು ತೇಟ್ ಅವರ ಅವ್ವನಂತೆ ತಲೆ ನೇವರಿಸುವಾಗ ಮಕ್ಕಳು ನಿದ್ದೆಗೆ ಜಾರುತ್ತಿದ್ದವು ! -6- ಪ್ರಥಮ ಚಿಕೆತ್ಸೆಗೆಂದು ಗೌರ್ನಮೆಂಟ್ ಆಸ್ಪತ್ರೆ ಕೊಟ್ಟ ಔಷಧಿ, ಗುಳಿಗಿ, ಮುಲಾಮು ಟಿಂಚರುಗಳ ಕೊಡುವಾಗಲೆಲ್ಲಾ ಅವ್ವ ಊರವರಿಗೆ ಡಾಕ್ಟರಮ್ಮನೇ ಆಗುತ್ತಿದ್ದಳು ! ಎಸ್ಸೆಲ್ಸಿ ಪೇಲಾದ ತನ್ನನ್ನು ಡಾಕ್ಟರಮ್ಮ ಎನ್ನುವುದ ಕೇಳಿಯೇ ಹಿರಿ ಹಿರಿ ಹಿಗ್ಗಿ ಡಾಕ್ಟರರ ಸೋಗು ಹಾಕಿ ಆರೋಗ್ಯದ ಭಾಷಣ ಬಿಗಿಯುತ್ತಿದ್ದಳು ! -7- ಫಸ್ಟ ಏಡ್ ಬಾಕ್ಸಲ್ಲಿ ಅವ್ವ ಬಚ್ಚಿಟ್ಟ ನೀರೋಧಗಳ ಕದ್ದು ಗೆಳೆಯರಿಗೆ ಹತ್ತು ಪೈಸೆಗೊಂದರಂತೆ ಮಾರಿ ನಾ ಮಿಠಾಯಿ ತಿನ್ನುತ್ತಿದ್ದೆ ! ಗೆಳತಿಯರಿಗೆ ಪುಕ್ಕಟೆ ಕೊಟ್ಟು ಪ್ರೀತಿ ಗಳಿಸುತ್ತಿದ್ದೆ ! ಹುಡುಗ ಹುಡುಗಿಯರೆಲ್ಲಾ ನಿರೋದಗಳ ಊದಿ ಬಲೂನು ಮಾಡಿ ಆಕಾಶಕ್ಕೆ ಹಾರಿಸುತ್ತಿದ್ದರು ! ಅವ್ವ ಇದ ನೋಡಿ ತಲೆ ಚಚ್ಚಿಕೊಳ್ಳುತ್ತ ಲೆಕ್ಕಿ ಜುಳ್ಕಿ ಹಿಡಿದು ನನ್ನ ಬಾರಿಸಲು ಬೆನ್ನು ಹತ್ತುತ್ತಿದ್ದಳು ! -8- ಕುಷ್ಠರೋಗದ ಹರಿಜನ ತಿಂದಪ್ಪನಿಗೆ ಔಷಧಿ ಕೊಡಲು ಕೇರಿಗೆ ಹೋದಾಗ ಸೋಯಾಬೀನ್ ಹಿಟ್ಟು, ಎಣ್ಣೆ ಇಷ್ಟಿಷ್ಟೇ ಕೊಟ್ಟು ಬದುಕುವ ಭರವಸೆ ತುಂಬುತ್ತಿದ್ದಳು! ಆತನ ರೋಗ ಗುಣವಾದಂತೆ ಅವ್ವ ಒಳಗೊಳಗೇ ತಾನು ತಿಂದಪ್ಪನ ಪಾಲಿನ ದೇವರಾದುದ ನೆನೆದು ದೇವರ ಪಕ್ಕವೇ ಕೂತಂತಾಗಿ ಬೆವರುತ್ತಿದ್ದಳು ! -9- ಮಕ್ಕಳಿಗೆ ಅಮೃತವೆಂಬಂತೆ ಹನಿ ಹನಿ ಪೋಲಿಯೋ  ಹಾಕಿ ರೋಗ ಮುಕ್ತ ಮಕ್ಕಳ ಭವಿಷ್ಯ ನೆನೆದು ಸುಖದ ನಗೆ ನಕ್ಕು ಗರ್ಭಿಣಿ ಬಾಣಂತಿಯರಿಗೆ ಆರೋಗ್ಯದ ಸಲಹೆ ನೀಡಿ ಸೂಲಗಿತ್ತಿಯೂ ಆಗುತ್ತಿದ್ದಳು ! -10- ಬಿಡಿಗಾಸಿನ ಸಂಬಳ ಮುಗಿದಾಗ ಅಂಗನವಾಡಿಯಲಿ ತಿಂಗಳು ಮಿಕ್ಕಿದ ರೇಷನ್ನನ್ನ ಸಹಾಯಕಿಗೂ ಹಂಚಿ ಉಳಿದ ಎಣ್ಣೆಯ ಅಂಗಡಿ ಶಾರದಮ್ಮನಿಗೆ ಕೊಟ್ಟು ಕಾರ ಮಂಡಕ್ಕಿ ಮಿರ್ಚಿಯ ತಂದು ನಮಗೆಲ್ಲಾ ತಿನ್ನಿಸಿ ಖುಷಿಗೊಳ್ಳುತ್ತಿದ್ದಳು ! ಅಪ್ಪ ಸೋಯಾಬೀನ್ ಹಿಟ್ಟನ್ನು ಆಕಳು ಸಾಕಿದರಿಗೆ ಕೊಟ್ಟು ಮನೆಗೆ ತರಕಾರಿ ತರುತ್ತಿದ್ದ ! ಮನೆಯ ತೂಗಿಸಲು ಅವ್ವ ಏದುಸಿರು ಬಿಟ್ಟು ರೇಗಿದಾಗಲೆಲ್ಲಾ ನಾನು ಮತ್ತು ತಂಗಿಯರು ಹುಸಿರು ದಿಮ್ಮಗಿಡಿದು ಕೂತಿರುತ್ತಿದ್ದೆವು ! -11- ಹೆಂಗಳೆಯರ ಸಂಘ ಮಾಡಿ ಅವರಲ್ಲಿ ಕನಸುಗಳ ಮಾಲೆ ಕಟ್ಟುತ್ತಿದ್ದಳು ! ಗಂಡಸರಿಗೆ ಹೆದರಬೇಕಿಲ್ಲ ಎಂಬ ಭಾಷಣ ಬಿಗಿದು ಅವರಲ್ಲಿ ಹೊಸ ಹುರುಪು ತುಂಬುತ್ತಿದ್ದಳು ! ಇದ ನೋಡಿ ಊರ ಗಂಡಸರು ನಮ್ಮ ಹೆಣ್ಮಕ್ಕಳ ಟೀಚರಮ್ಮ ಹಾಳು ಮಾಡುತ್ತಾಳೆಂದೂ ಮನೆಯ ಮುರಿ0ುುತ್ತಾಳೆಂದೂ ಅವ್ವನ ಮೇಲೆ ಕೋಪಗೊಳ್ಳುತ್ತಿದ್ದರು! -13- ಕೆಲವರು ಮೇಲಾಧಿಕಾರಿಗೆ ದೂರು ಸಲ್ಲಿಸಿ ಮಕ್ಕಳ ಸಾಮಾನು ಮಾರುತ್ತಾಳೆಂದು ಬೀದಿಯಲ್ಲಿ ರಂಪ ಮಾಡುತ್ತಿದ್ದರು ! ಅವ್ವ ಚಂಡಿಯ ಅವತಾರ ತಾಳಿ ಜಗಳ ಕಾಯುತ್ತಿದ್ದಳು ! ಆಯಮ್ಮ ಒಳ್ಳೆ ಮೇಡಂ ಎಂದು ಕೆಲವರು ಅವಳ ಕೋಪವ ತಣ್ಣಗಾಗಿಸುತ್ತಿದ್ದರು ! ನಾವೋ ಆಗ ಗುಬ್ಬಚ್ಚಿಗಳಂತೆ ಗೂಡಿನಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದೆವು ! -14- ಅವ್ವನಂತೆಯೇ  ದುಡಿವ ಹೆಲ್ಪರ್ ಯಲ್ಲಕ್ಕ ಊರ ಓಣಿ ಓಣಿ ಸುತ್ತಿ ಮಕ್ಕಳ ಹಿಂಡೊಡನೆ ಅಂಗನವಾಡಿಗೆ ತೆರಳುತ್ತಲೂ ಕಿಂದರ ಜೋಗಿಯಂತೆಯೂ ಕೊಳಲನೂದಿದ ಗೊಲ್ಲತಿಯಂತೆಯೂ ನನಗಾಗ ಕಂಡದ್ದಿದೆ ! ದಿನ ದಿನದ ಚರಿತೆ ಯಲ್ಲಕ್ಕನ ಮಾತಲ್ಲಿ ಬಿಚ್ಚಿಕೊಂಡಂತೆ ಅವ್ವನ ರಿಜಿಸ್ಟರ್ಗಳಲ್ಲಿ ಊರ ಇತಿಹಾಸ ಚಿಗುರೊಡೆಯುತ್ತಿತ್ತು! -15- ಈಗಲೂ ಅವ್ವ ಅಂಗನವಾಡಿ ತೊಟ್ಟಿಲ ತೂಗುತ್ತ ಏಸೊಂದು ಮಕ್ಕಳ ತಾಯಿ ದಣಿವರಿ0ುದೆ ಊರ ಮಕ್ಕಳ ಪೊರೆಯುತ್ತಲೆ ಇದ್ದಾಳೆ ! ಬಿಡಿಗಾಸಿನ ಸಂಬಳಕ್ಕೆ ದುಡಿಯುತ್ತಲೇ ಇರುವ ಅವ್ವನಂಥ ಎಷ್ಟೋ ಅವ್ವಂದಿರು ಏದುಸಿರ ಬಿಡುತ್ತಲೇ ಇದ್ದಾರೆ !]]>

‍ಲೇಖಕರು avadhi

July 8, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಗಳು ಪೃಥೆ

ಮಗಳು ಪೃಥೆ

ಸುನೀತಾ ಬೆಟ್ಕೇರೂರ್ ಇವಳು ನಮ್ಮ ಮಗಳು,ಪೃಥೆ.ಕಂಕುಳಲ್ಲಿದ್ದಳು,ನೆಲಕಿಳಿದಳುಬೆರಳನ್ಹಿಡಿದು ಹೆಜ್ಜೆಯಿಟ್ಟಳುಈಗೋ------ ಈಗೋಅನ್ನುವಲ್ಲಿ...

ಕುರ್ಚಿ

ಕುರ್ಚಿ

ಮುರುಳಿ ಹತ್ವಾರ ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.  ಒಂದಿಷ್ಟೂ ಬಿಸಿಯಾಗಲಿಲ್ಲ...

ಮಾತು ಮುಗಿದೇ ಇಲ್ಲ ಇನ್ನು

ಮಾತು ಮುಗಿದೇ ಇಲ್ಲ ಇನ್ನು

ಡೋ‌ರ ಮಾತು ಮುಗಿದೇ ಇಲ್ಲ ಇನ್ನುಮರೆತು ಎದ್ದು ಹೋದೆಯಾ...?ಹರಸಿ ನಡೆದೆ ಬಿಟ್ಟೆಯಾಕಾಣದೂರಿನ ದಾರಿ ಹಿಡಿದುನನ್ನ ಹೀಗೆ ಯಾಕೊ ತೊರೆದುಹುಡಕಲೇಗೆ...

8 ಪ್ರತಿಕ್ರಿಯೆಗಳು

 1. ವಸುಧೇಂದ್ರ

  ಅರುಣ್,
  ಎಷ್ಟು ಒಳ್ಳೆಯ ಕವಿತೆ ಬರೆದಿದ್ದೀಯ! ಓದಿ ಕಣ್ಣು ತುಂಬಿ ಬಂತು. ನಿನ್ನ ಈ ಹೊಸ ಕವನ ಸಂಕಲನವನ್ನು ಕನ್ನಡದ ಓದುಗರು ಪ್ರೀತಿಯಿಂದ ಮನ ತುಂಬಿಕೊಳ್ಳಲಿ ಎಂದು ಹಾರೈಸುತ್ತೇನೆ.
  ವಸುಧೇಂದ್ರ

  ಪ್ರತಿಕ್ರಿಯೆ
 2. anand rugvedi

  arun, ninna padya odide. bharatambeya bada makkala taayi ninage swanta ammanagiddu punya. avala soyabeen hittina mudde jote priti sikkiddu E kaviteya laabha. . . adu namma laabha kuda!

  ಪ್ರತಿಕ್ರಿಯೆ
 3. vikas negiloni

  ammma…. preethi, mamathe, javabdaari idda yava jeevavooo ammma agabahudu antha heluvudannu estu sundaravaagi kattikotte arun. superb. intha kavithegala akkareya padya sankalana hora baruttiruvudu nijakkooo sambramada vishaya. innastu bare.
  tnx.
  vikas negiloni

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: