ಅಸ್ಟ್ರೋ ಯೋಗಿ ಫಾರ್ ಮಕರ..

ಖಾಸಗಿ ಡೈರಿ

-ಎಂ ಬಿ ಶ್ರೀನಿವಾಸ ಗೌಡ

cartoon-donkey-in-a-barrel-pickled-cucumbers-soda-water-stuck

ನಾವೇ ತೋಡಿಕೊಂಡ ಖೆಡ್ಡಾಕ್ಕೆ ಬೀಳುವುದೆಂದರೆ ಇದೇ ಇರಬಹುದು ನೋಡಿ ಮಾರಾಯರೆ, ಮಾಡಕ್ಕೆ ಏನೂ ಕೆಲಸ ಇಲ್ಲದಾಗ ಇಂಟರ್ ನೆಟ್ ಮುಂದೆ ಕುಳಿತು ಮಾಡವ ಸಾಮಾನ್ಯ ತಪ್ಪನ್ನ ನಾನೂ ಮಾಡಿದ್ದೇನೆ ಸುಮ್ಮ ನೇ ಇರಲಾರದೆ

ಇಂಟರ್ ನೆಟ್ ನಲ್ಲಿ ಮಕರ ರಾಶಿಯವನಾದ ನಾನು ನಿತ್ಯ ಭವಿಷ್ಯ ಏನೆಂದು ತಿಳಿದುಕೊಳ್ಳಲು ಆರಂಭ ಮಾಡಿ ಎರಡು ತಿಂಗಳಾಗುತ್ತಾ ಬರುತ್ತಿದೆ, ಸಾಮಾನ್ಯವಾಗಿ ವಾರ,ದಿನ, ತಿಥಿ, ನಕ್ಷತ್ರ, ಭವಿಷ್ಯ ದಲ್ಲಿ ನಂಬಿಕೆ ಇಡದ ನಾನು ಕಾಲಾತೀತ, ಸಮಯಾತೀತ, ದೇಶಾತೀತ ಆಗಿರಲಿಕ್ಕೆ ಇಷ್ಟಪಡುತ್ತೇನೆ, ಯಾವ ಇಕ್ಕಳಕ್ಕೂ ಸಿಕ್ಕಿಕೊಳ್ಳದೆ ಸ್ವಚ್ಚಂದವಾಗಿ ಇರಲಿಕ್ಕೆ ಪ್ರಯತ್ನ ಮಾಡುತ್ತೇನೆ, ಆಗಿದ್ದೆಲ್ಲಾ ಒಳ್ಳೇದಕ್ಕೆ ಆಗಿದೆ, ಆಗಲಿರುವುದು ಒಳ್ಳೇದೆ ಆಗಲಿದೆ ಎಂಬೊ ಕೃಷ್ಣ ಪರಮಾತ್ಮನ ತತ್ವದಲ್ಲಿ ನಂಬಿಕೆ ಹೆಚ್ಚು….

ಆದರೆ ಈಗ ಆಗಿರುವುದೇ ಬೇರೆ ನೋಡಿ. ದಿನ ಭವಿಷ್ಯ ಅನ್ನೊ ವಿಚಿತ್ರ ಭ್ರಮೆಗೆ ಸಿಕ್ಕಿಕೊಂಡಿದ್ದೇನೆ. ಉಚಿತ ದಿನ ಭವಿಷ್ಯ ಹೆಸರಿನ ಅಸ್ಟ್ರೋ ಯೋಗಿ ಎಂಬ ಸೇವೆ ದಿನಾ ಬೆಳಿಗ್ಗೆ ನನ್ನ ಮೊಬೈಲಿಗೆ ಬರುತ್ತಾ ಇವೆ…. ನಿರೀಕ್ಷೆ ಮಾಡದೆ ಇದ್ದರೂ ಸಂದೇಶ ಮಾತ್ರ ಬಂದೆ ಬರುತ್ತದೆ ಮುಂಜಾನೆ ಎದ್ದರೆ ಮೊದಲು ತೆರೆದುಕೊಳ್ಳುವ ಸಂದೇಶವೇ ಅದು… ಆರಂಭದಲ್ಲಿ ಕುತೂಹಲಕ್ಕೆ ಅಂತ ತಿಳಿದುಕೊಳ್ಳಲು ಸಂದೇಶಗಳನ್ನ ಗಮನಿಸುತ್ತಿದ್ದೆ, ಅಸ್ಟ್ರೋ ಯೋಗಿಯ ಸೈಕಾಲಜಿ ಏನು ಅನ್ನೋದನ್ನು ತಿಳಕೊಳ್ಳೊದು ನನಗಿದ್ದ ಚಟ.

ಈ ದಿನ ನೀವು ನೀಲಿ ಬಣ್ಣದ ಬಟ್ಟೆ ಹಾಕಿಕೊಳ್ಳಿ ಇವತ್ತು ನಿಮ್ಮ ದಿನ ಸಂತೋಷದಿಂದ ಕೂಡಿರುತ್ತೆ, ಇವತ್ತು ಕೆಲಸ ಮಾಡುವ ದಿಕ್ಕು ಉತ್ತರಕ್ಕೆ ಇರಲಿ ಬೇರೆ ದಿಕ್ಕು ಅಶುಭ, ಇವತ್ತು ಕಚೇರಿಯಲ್ಲಿ ನಿಮ್ಮ ಬಾಸಿನ ಮನಸ್ಥಿತಿ ಸರಿಯಿಲ್ಲ ಎಚ್ಚರದಿಂದ ಇರಿ ಟ್ರೈ ಟು ಅವಾಯ್ಡ್ ಹಿಮ್…ನಿಮ್ಮ ಕುಟುಂಬದಿಂದ ಇವತ್ತು ನಿಮಗೆ ಶುಭ ಸಂದೇಶ ಬರಲಿದೆ…ಕೀಪ್ ಎ ಎಲ್ಲೋ ರೋಸ್ ಇನ್ ಯುವರ್ ಪಾಕೆಟ್….

ವ್ಯಾಪಾರದಲ್ಲಿ ಲಾಸ್ ಆಗೋ ಸಂಭವ ಇದೆ….ಈ ಧಾಟಿಯ ಸಂದೇಶಗಳು ವ್ಯಾಪಾರ, ಗೀಪಾರ ಮಾಡದ ನಾನು ಅಂತ ಸಂದೇಶಗಳನ್ನು ತಕ್ಷಣ ಡಿಲಿಟ್ ಮಾಡಿಬಿಡುತ್ತೇನೆ, ಇನ್ನು ಕೆಂಪು ಗುಲಾಬಿ ಇಟ್ಚುಕೊಂಡು ಕೆಲಸಕ್ಕೆ ಹೋಗೋಕೆ ಸಾಧ್ಯವಾಗೋ ವಿಷಯ ಅಲ್ಲ ಬಿಡಿ… ನಾನೇನು ಚಾಚಾ ನೆಹರೂನಾ..! ಆದರೆ ನಿಮ್ಮ ಬಾಸಿನ ತಲೆ ಕೆಟ್ಟಿದೆ ಹುಶಾರ್ ಅಂದರೆ ಸುಮ್ಮನೆ ಇರಕ್ಕಾಗುತ್ತಾ…ನೀವು ಇವತ್ತು ಫೇಮಸ್ ಆಗ್ತೀರಾ ಅನ್ನೋ ಸಂದೇಶಗಳನ್ ನೋಡಿದಾಗ ಒಂಥಾರ ತಲೆ ಬಿಸಿ ಆಗೋದಕ್ಕೆ ಶುರುವಾಯಿತು. ಅದೇ ದಿನ ಸಂಜೆ ನಾನು ಎಷ್ಟು ಫೇಮಸ್ ಆದೆ ಅಂತ ಯೋಚಿಸಿದೆ…ಆ ದಿನದ ಘಟನೆಗಳನ್ನ ,ಸಂದೇಶ ದೊಂದಿಗೆ ರಿಲೇಟ್ ಮಾಡಿಕೊಂಡು ತಾಳೆ ಹಾಕಿದೆ. ದರಿದ್ರದ್ದು ಕೆಲವು ಬಾರಿ ಸರಿಯಾಗೆ ಇದೆಯಲ್ಲ ಅನ್ನಿಸಲಿಕ್ಕೆ ಶುರುವಾಯಿತು…

ತಗಳಪ್ಪ ಎರಡೇ ತಿಂಗಳಲ್ಲಿ ಯಾವ ಸ್ಥಿತಿಗೆ ಬಂತು ಎಂದರೆ, ದಿನ ಭವಿಷ್ಯ ನಾನೆ ಹುಡುಕಿ ನೋಡಲು ಶುರುಮಾಡಿದ್ದೇನೆ.

ಇವತ್ತು ಬಂದ ಸಂದೇಶ ಏನಪ್ಪಾ ಅಂದರೆ ನಿಮಗೆ ಸಂಬಂಧಿಸಿದ ವಸ್ತುವೊಂದು ಕಳುವಾಗುವ ಸಾಧ್ಯತೆ ಇದೆ ನಿಮ್ಮ ವಸ್ತುಗಳ ಬಗ್ಗೆ ಕಾಳಜಿಯಿಂದಿರಿ, ಮನೆ, ಕಾರು,ಬೈಕ್ ಲಾಕ್ ಮಾಡಿದ್ದೀರಾ ಚಕ್ ಮಾಡಿಕೊಳ್ಳಿ ಬಿ ಕೇರ್ ಫುಲ್…. ಅನ್ನೋ ತರದ್ದು

ದಿನ ಏನೋ ಮುಗಿದು ಹೋಗಿದೆ. ಆದರೆ ಇಡೀ ದಿನ ಏನಾದರೂ ಕಳಕೊಳ್ಳೋ ಭಯ ಹಚ್ಚಿಕೊಂಡಿದ್ದೇ ಮಾರಾಯರೆ… ಪದೇ ಪದೆ ಎದ್ದು ಹೋಗಿ ಕಾರ್ ಲಾಕ್ ಮಾಡೋದು… ಮನೆ ಕೀ ಹಾಕಿದ್ದೇನಾ ಇಲ್ಲಾವಾ ಅಂತ ಸುಖಾಸುಮ್ಮನೆ ಕನ್ಫ್ಯೂಸ್ ಆಗ್ತಿದ್ದೆ.

ಸುಮ್ಮನೇ ಇರಕ್ಕೆ ಆಗದೆ ಕೆರಕೊಂಡು ಗಾಯ ಮಾಡಿಕೊಂಡರಂತಲ್ಲಾ ಹಾಗೆ…

ಈ “ದಿನ ಭವಿಷ್ಯ”ದ ಸುಳಿಯಿಂದ ಹೇಗಾದರೂ ತಪ್ಪಿಸಿಕೊಳ್ಳುವ ಯೋಚನೆ ಈಗ ಶುರುವಾಗಿದೆ…

‍ಲೇಖಕರು avadhi

July 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: