ಮಹಾದೇವೀ ವರ್ಮಾ
ರೇಖಾಚಿತ್ರ ಮತ್ತು ಅನುವಾದ – ಸಿ ವಿ ಶೇಷಾದ್ರಿ ಹೊಳವನಹಳ್ಳಿ

ಬೆಳದಿಂಗಳಲ್ಲಿ ಮುಂಗುರುಳ ತೆರೆದು
ಮಧುವೆಂಬ ಮದಿರೆಯ ಬೆಲೆಯೆಷ್ಟು..?
ಎಂದು ಮಧುಮಾಸವು ಮೊಗ್ಗನ್ನು ಕೇಳುವಾಗ
ಕತ್ತಲ ತೊಳೆಯುತ್ತಿದ್ದ ಚಂದ್ರ.
ಧೂಳಲ್ಲಿ ಹಿಮದ ಕಣಗಳ ಹಾರವನು
ಕೊಡವುತ್ತಿತ್ತು ಹುಚ್ಚು ಗಾಳಿ.
ಕಲಿಸಲೆಂದೇಜೀವನ ಸಂಗೀತವನು
ನೀ ಬಂದಿದ್ದೆ ನನ್ನೆಡೆ ಹೊರಳಿ.
ನಿನ್ನಕರುಣೆಯದಡ
ಹರಡುತ್ತಿತ್ತು ಸ್ವಪ್ನಗಳ ಜಾಲ.
ತೆರಳಿತುತುಟಿಯಲಿದ್ದ ನಗು
ಮಧುಮಯದುಃಖದಲಿ ನೂಕಿ.
ಕಲಿತ ರಾಗಗಳನೆಲ್ಲ ಮರೆಯುತಿದ್ದೆ.
ಕೈ ನಡುಗುತಿತ್ತು ಪದೇ ಪದೇ.
ಕರುಣೇಶನೇ..ನಿನಗಾಗ ಬರುತ್ತಿತ್ತೆ
ನನ್ನ ತಪ್ಪುಗಳ ಮೇಲೆ ಮಮತೆ..?
ಆಗಿನಿಂದ ಕಳೆದಿರಬಹುದೆಷ್ಟು ಯುಗಗಳು..?
ನಿವರ್ಾಣಗೊಂಡಿರಬಹುದೆಷ್ಟು ದೀಪಗಳು..?
ನಿನ್ನಂತಹ ಮನಮೋಹನ ರಾಗವನು.
ಕಲಿಯಲೇಇಲ್ಲ ನಾನು
ದೇವನೇ..ಈಗ ಹಾಡಲಾಗುತ್ತಿಲ್ಲ.
ಬೆರಳು ಬಸವಳಿದಿವೆ. ತಂತಿ ಸಡಿಲ.
ನಿನ್ನ ವಿಶ್ವ ವೀಣೆಯಲಿಂದು
ಸೇರಿಸಿಕೋ ..ಈ..ಅಸ್ಫುಟಝೇಂಕಾರ..!
]]>
nice…..very nice….