ಅ೦ದ ಹಾಗೆ ಮೈಸೂರಿನಲ್ಲಿ

ಆ ಅದೇ ಜಾಗ;

ಸ್ಮೃತಿ ಸೇರಿದೆ ಈಗ…

ನಾಲ್ಕು ಜನ ಒಂದು ಕಡೆ ಕುಳಿತು ಪರಸ್ಪರ ಮಾತನಾಡಿಕೊಳ್ಳುವಂತಿರಬೇಕು. ಓದಿದ ಪುಸ್ತಕವೊಂದನ್ನು ಕುರಿತು ಇತರರೊಂದಿಗೆ ಹಂಚಿಕೊಳ್ಳುವಂತಾಗಬೇಕು. ಹೀಗೆ ನಮ್ಮ ಬೇಕುಗಳ ಬೆನ್ನತ್ತಿ ನಾವು ಕಟ್ಟಿಕೊಂಡ ಪುಟ್ಟ ವೇದಿಕೆಯೇ ‘ಚಿಂತನ ಚಿತ್ತಾರ’ ಆಯಿತು. ಈ ನಮ್ಮ ವೇದಿಕೆಯು ಮೈಸೂರಿನ ಕುವೆಂಪುನಗರದ ಹೃದಯಭಾಗದಲ್ಲಿ ನೆಲೆಸಿರುವ ಕನ್ನಡ ಪುಸ್ತಕ ಪ್ರಾಧಿಕಾರ ಮಳಿಗೆಯಲ್ಲಿ ಕ್ರಿಯಾಶೀಲವಾಯಿತು. ಪ್ರತೀ ತಿಂಗಳು ಪುಸ್ತಕವೊಂದನ್ನು ಆಯ್ದುಕೊಂಡು ಚಚರ್ೆ-ಸಂವಾದ ನಡೆಸುತ್ತಾ ಬಂದಿತು. ಈ ಮಧ್ಯೆ ಸಂತೋಷದ ವಿಷಯವೆಂದರೆ, ಈ ನಮ್ಮ ವೇದಿಕೆಗೆ ಈ ತಿಂಗಳು ನಾಲ್ಕು ವರ್ಷ ತುಂಬುತ್ತಿದೆ. ಹಾಗೆ ನೋಡಿದರೆ, ‘ಚಿಂತನ ಚಿತ್ತಾರ’ ವೇದಿಕೆಯು 23.07.2008ರಂದು ಆರಂಭವಾಯಿತು. ಆವತ್ತು ಆರಂಭ ಮಾಡಿದಾಗ ನಮ್ಮ ಜೊತೆಗೆ ಬಂದು ನಿಂತವರು: ಪ್ರೊ. ಕೆ.ವಿ. ನಾರಾಯಣ, ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ ಹಾಗೂ ಹನೂರು ಕೃಷ್ಣಮೂತರ್ಿ. ಆವಾಗ ಅಲ್ಲಿ ಕವಿ ಸು.ರಂ. ಎಕ್ಕುಂಡಿ ಅವರ ‘ಮಿಥಿಲೆ’ ಕವಿತೆಯನ್ನು ಓದುವುದರ ಮೂಲಕ ಕೆ.ವಿ. ನಾರಾಯಣ ಅವರು ವೇದಿಕೆಗೆ ಚಾಲನೆ ನೀಡಿದ್ದು; ಓ.ಎಲ್. ನಾಗಭೂಷಣ ಸ್ವಾಮಿ ಅವರು ಕೌಂಟ್ ಲಿಯೋ ಟಾಲ್ಸ್ಟಾಯ್ ಬರೆದ ‘ವಾರ್ ಅಂಡ್ ಪೀಸ್’ ಕಾದಂಬರಿಯ ಮೇಲೆ ಮಾತನಾಡಿದ್ದು; ಅದೇ ವೇದಿಕೆಯಲ್ಲಿ ಹನೂರು ಕೃಷ್ಣಮೂತರ್ಿ ಸಾಕ್ಷಿಯಾಗಿ ಕುಂತಿದ್ದು ಈಗ ನೆನಪಾಗುತ್ತಿದೆ. ಹೀಗೆ ನೆನೆಪಾದವರನ್ನು ಮನಸ್ಸಿಗೆ ತಂದುಕೊಳ್ಳುವ ಹೊತ್ತಿನಲ್ಲಿ, ನಮ್ಮ ವೇದಿಕೆಗೆ ಹಲವು ವಿಧದಲ್ಲಿ ನೆರವಾದವರನ್ನು ನೆನೆಯಬೇಕಿದೆ. ಈ ನಮ್ಮ ವೇದಿಕೆ ಆರಂಭವಾದಾಗಿನಿಂದ ಹಿಡಿದು ಇವತ್ತಿನವರೆಗೂ ನಮಗೆ ಆಸರೆಯಾಗಿ ನಿಂತಿರುವ ಕವಿ ಪ್ರೊ. ಹೆಚ್. ಗೋವಿಂದಯ್ಯ ಅವರಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. ಈ ವೇದಿಕೆಗೊಂದು ಹೆಸರು ಕಟ್ಟಿದ ಮೈಸೂರಿನ ಚರಿತಾ ಅವರಿಗೆ; ಕೆಲಕಾಲ ವೇದಿಕೆಯಲ್ಲಿದ್ದು ನಿರ್ಗಮಿಸಿದ ಪತ್ರಕರ್ತ ಕೆ. ನರಸಿಂಹಮೂತರ್ಿ ಅವರಿಗೆ; ನಮ್ಮ ಕಾರ್ಯಕ್ರಮದ ಪಟ್ಟಿಯನ್ನು ‘ಅವಧಿ’ ಬ್ಲಾಗ್ನಲ್ಲಿ ಪ್ರಕಟಿಸಿ, ಪ್ರೋತ್ಸಾಹಿಸಿದ ಕವಿ ಜಿ.ಎನ್. ಮೋಹನ್ ಅವರಿಗೆ; ಆಹ್ವಾನ ಪತ್ರಿಕೆಯನ್ನು ಪ್ರಿಂಟ್ ಮಾಡಿ, ನಿಮ್ಮ ಈ ಮೇಲ್ ವಿಳಾಸಕ್ಕೆ ತಲುಪಿಸಿದ ‘ಶಿಲೋತ್ತಮ್’ನ ಮಹೇಶ್ ಅವರಿಗೆ; ವೇದಿಕೆಯು ಬೆಚ್ಚಗಿರಲೆಂದು ಆಶಿಸುವ ‘ರಂಗವಲ್ಲಿ’ಯ ಬಿ.ರಾಜೇಶ್ ಅವರಿಗೆ; ‘ಆಂದೋಲನ’ ದಿನ ಪತ್ರಿಕೆಯ ಎನ್.ಕೆ. ಕೋದಂಡರಾಮು ಅವರಿಗೆ; ಮೈಸೂರು ಪುಸ್ತಕ ಪ್ರಾಧಿಕಾರ ಮಳಿಗೆಯ ಮೇಲ್ವಿಚಾರಕರು ಹಾಗೂ ವೇದಿಕೆಯ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರುವ ತ್ರಿವೇಣಿ ಮೇಡಂ ಅವರಿಗೆ; ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿಮ್ಮ ಸಹನೆ ಮತ್ತು ಪ್ರೀತಿಗೆ ನಮ್ಮ ಅನಂತಾನಂತ ಕೃತಜ್ಞತೆಗಳು ಸಲ್ಲುತ್ತವೆ. ಈ ತಿಂಗಳು ಅಂದರೆ, 28.07.2012ರ ಶನಿವಾರದಂದು ನಮ್ಮ ಇಬ್ಬರು ಹೊಸ ಹುಡುಗರು ಬರೆದಿರುವ ಮೊದಲ ಕಥಾ ಸಂಕಲನ ಕುರಿತು ಚಚರ್ೆ-ಸಂವಾದ ಇದೆ. ನೀವು ಬಿಡುವಾಗಿ ಬನ್ನಿ. ಅರ್ಪಣೆ ವೇದಿಕೆಗೆ ನಾಲ್ಕು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ‘ಪುಸ್ತಕ-ಓದು-ವಿಮಶರ್ೆ’ ಸಂಕೀರ್ಣವನ್ನು ಈ ಸಲ

ಕುವೆಂಪು ಅವರ

ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ

ಅಂತಃಪಠ್ಯದ

ನಾಲ್ಕು ವಿಚಾರೋಪನ್ಯಾಸಕ್ಕೆ

ಅರ್ಪಿಸುತ್ತಿದ್ದೇವೆ

]]>

‍ಲೇಖಕರು G

July 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This