ಅ. ಭಾ. ಪು. ಶೋ. ವಿ. ಸಂ.

– ಜಯದೇವ ಪ್ರಸಾದ ಮೊಳೆಯಾರ


525px-X_mark.svg
ಈ ಬಾರಿ ಶಂಭು ಸುಮ್ನೆ ಕೂರಲಿಲ್ಲ. ಅದೇ ಶನಿವಾರದ ಸಂಜೆ ವಠಾರದಲ್ಲಿರುವ ಎಲ್ಲಾ ಗಂಡಂದಿರನ್ನು ಒಟ್ಟು ಹಾಕಿ ಸೀರಿಯಸ್ಸಾಗಿ ವಿಚಾರ ಮಂಡಿಸಿಯೇ ಬಿಟ್ಟ.
ವಿಷಯ ಏನೆಂದರೆ ‘ಸ್ತ್ರೀ ವಿಮೋಚನೆ’ ಅತಿರೇಕಕ್ಕೆ ಹೋಗಿದ್ದು. ಪತ್ನಿಯರು ತಮ್ಮ ಸ್ವಾತಂತ್ರ್ಯವನ್ನು ತುಸು ಜಾಸ್ತಿಯೇ ಚಲಾಯಿಸಲು ಹೊರಟು ಪತಿಪೀಡಕರಾಗತೊಡಗಿದ್ದು. ಅಫéೀಸಿನಲ್ಲಿ ಕತ್ತೆ ಹಾಗೆ ದುಡಿದು ಮನೆಗೂ ಬಂದು ಕೆಲ್ಸ ಶೇರ್ ಮಾಡಬೇಕು ಅಂದ್ರೆ ಶಂಭುಗೆ ಪುರುಷ ಶೋಷಣೆಯೆಂದು ಕಾಣುತ್ತಿತ್ತು. ತಂಪಾಗಿ ಟಿವಿ ರಿಮೋಟ್ ಅದುಮುತ್ತಾ ಸೋಫéಾದಲ್ಲಿ ಹೆಬ್ಬಾವಿನಂತೆ ಬಿದ್ದಿರಬಹುದಾಗಿದ್ದ ವೇಳೆಯಲ್ಲಿ ಅಂಗ್ಡಿಗೆ ಹೋಗಿ ತರಕಾರಿ, ಅಕ್ಕಿ, ಬೇಳೆ ವಗೈರೆಗಳನ್ನು ತರಬೇಕೆಂದಾದರೆ, ಕಿಚನ್ ಒಳಗಿನ ಕೆಲಸ ಕಾರ್ಯಗಳಲ್ಲಿ ಕೈ ಸೇರಿಸಬೇಕೆಂದಾದರೆ ಅದು ಪತಿ ಪೀಡನೆಯೇ ಸರಿ ಎಂದು ಅವನ ಧೋರಣೆಯಾಗಿತ್ತು. ಹಾಗೆ ತುತರ್ಾಗಿ ಒಂದು ದಿನ ವಠಾರದ ಪತಿಗಳನ್ನೆಲ್ಲ ಒಟ್ಟು ಹಾಕಿ ಮನೆ ಮನೆಗಳಲ್ಲಿ ನಡೆಯುವ ಪುರುಷಶೋಷಣೆಯ ವಿರುದ್ಧ ದನಿ ಎತ್ತಬೇಕೆಂದು ತೀವ್ರವಾಗಿ ವಿಚಾರ ಮಂಡಿಸಿದ. ವಿಷಯ ಹೌದು ಎಂದು ಎಲ್ಲ ಗಂಡಂದಿರೂ ಒಪ್ಪಿಗೆ ಸೂಚಿಸಿದರು. ಎಲ್ಲರನ್ನೂ ಸೇರಿಸಿ ಪುರುಷ ಶೋಷಣೆಯ ವಿರುದ್ಧ ರಣ ಕಹಳೆ ಊದಿಯೇ ಬಿಟ್ಟ ಶಂಭು.
ವಠಾರದ ಎದುರುಗಡೆಯೇ ಇರುವ ಖಾಲಿ ಮೈದಾನದಲ್ಲಿ ವಠಾರದ ಸಕಲ ಸ್ತ್ರೀ ಸಂಕುಲಕ್ಕೆ ಕಾಣಿಸುವಂತೆ ಒಂದು ಟೆಂಟ್ ಹೂಡಿ ಮುಷ್ಕರ ಆರಂಭಿಸಿಯೇ ಬಿಟ್ಟರು. ‘ನಮ್ಮ ಬೇಡಿಕೆಗಳು ಈಡೇರುವ ವರೆಗೂ ನಾವುಗಳು ಮನೆಯ ಹೊಸ್ತಿಲು ತುಳಿಯುವುದಿಲ್ಲ’ ಎಂಬುದಾಗಿ ಜೋರಾಗಿ ಮೈಕಿನಲ್ಲಿ ಕೂಗಾಡಿದ್ದಾಯಿತು. ಅಲ್ಲೇ ರಾತ್ರಿಗಳನ್ನು ಕಳೆಯುವುದೆಂದೂ ತೀಮರ್ಾನವಾಯಿತು.
ವಠಾರದ ಕೆಲ ಹೆಂಗಸರು ‘ಇನ್ನು ಏನೇನು ನಡೆಯುತ್ತೋ’ ಎಂದು ಆತಂಕಗೊಂಡರೆ ಇನ್ನು ಕೆಲ ಹೆಂಗಸರು ಕಿಟಕಿ ಕರ್ಟನ್ ಸರಿಸಿ ನಡೆಯುವ ವಿದ್ಯಮಾನಗಳನ್ನು ನೋಡುತ್ತಾ ಮುಸಿ ಮುಸಿ ನಗುತ್ತಿದ್ದರು. ಶಂಭುವಿನ ಹೆಂಡತಿ ಎದುರಿನ ಖಾಲಿ ಮೈದಾನಿನಲ್ಲಿ ನಡೆಯುತ್ತಿರುವ ನಾಟಕವನ್ನು ತುಸು ಅನಾದರದಿಂದಲೇ ಸ್ವಲ್ಪ ಹೊತ್ತು ವೀಕ್ಷಿಸಿ ಕೊನೆಗೆ ಅಲ್ಲೇ ಕಾಟರ್ೂನ್ ನೋಡಿಕೊಂಡು ಮೈಮರೆಯುತ್ತಿದ್ದ ಮಗನ ಕೈಯಲ್ಲಿ ಅಪ್ಪನಿಗೆ ಮೆಸೇಜ್ ಹೇಳಿ ಹೇಳಿಕಳುಹಿಸಿದಳು. ಮಗ ಬಂದು ಅಪ್ಪನಿಗೆ ಅದನ್ನು ಎಲ್ಲರ ಎದುರೇ ಗಟ್ಟಿಯಾಗಿ ಹೇಳಿಬಿಟ್ಟ, ಅಪ್ಪ, ಅಪ್ಪ,.., ಅಮ್ಮ ಹೇಳಿದ್ಳು ಹೇಳ್ಲಿಕ್ಕೆ. . . . ,  ಮೊದ್ಲು ಡಿಮಾಮ್ಡ್ಸ್ ಏನು ಅಂತ ಒಂದು ಪಟ್ಟಿ ಮಾಡ್ಬೇಕಂತೆ. ಶಂಭುವಿಗೆ ಮುಜುಗರವಾದರೂ ತೋರ್ಪಡಿಸದೆ ಮಗನ ಹತ್ತಿರ   ಈಗ ಅದೇ ಮಾಡುವವನಿದ್ದೆ, ಅವ್ಳ ಸಲಹೆ ಬೇಕಾಗಿಲ್ಲ ಅಂತ ಹೇಳು ಹೋಗು ಅಂತ ಜೋರು ಮಾಡಿ ಅಲ್ಲಿಂದ ಓಡಿಸಿ ಇತರ ಪೀಡಿತ ಮಿತ್ರರೊಡಗೂಡಿ ಬೇಡಿಕೆಗಳ ಒಂದು ಯಾದಿ ತಯಾರಿಸಲು ಆರಂಭಿಸಿದ.
ಮೊತ್ತ ಮೊದಲನೆಯದಾಗಿ ಬಕರ್ೊಂಡ, ಅ. ಭಾ. ಪು. ಶೋ. ವಿ. ಸಂ ಅಂತ. ಕೆಳಗೆರಡು ಗೀಟು ಎಳೆದ. ಸಹಟೆಂಟಿಗರು ಅರ್ಥವಾಗದೆ ಕಣ್ಣು ಬಾಯಿ ಬಿಟ್ಟರು. ಅಂದ್ರೆ, ‘ಅಖಿಲ ಭಾರತ ಪುರುಷ ಶೋಷಣೆ ವಿರೋಧಿ ಸಂಘಟನೆ.’ ಅಂತ. ಸಮಜಾಯಿಸಿ ನೀಡಿ ಎಲ್ಲರ ಮುಖಾವಲೋಕನ ಮಾಡಿದ ಶಂಭು. ಎಲ್ಲರೂ ಅವನ ಔಚಿತ್ಯಪೂರ್ಣ ಹೆಸರಿಗೆ ‘ಭಳಿರೇ’ ಎಂದು ತಲೆದೂಗಿದರು. ಇದಕ್ಕೊಂದು ಧ್ಯೇಯ ವಾಕ್ಯವೂ ಬೇಕು ಎಂದು ಪಕ್ಕದ ಮನೆಯ ಮೇಷ್ಟ್ರು ಶ್ರೀಪತಿರಾಯರು ಸಜೆಸ್ಟಿಸಿದರು. ‘ಅಹುದಹುದು’ ಎಂದು ಉಳಿದವರೂ ದನಿಗೂಡಿಸಿದರು.  ಶಂಭು ತುಸುಹೊತ್ತು ತಲೆಕೆರೆದು ‘ಲಿಬಟರ್ಿ, ಇಕ್ವಾಲಿಟಿ, ಫé್ರಾಟನರ್ಿಟಿ’ ಎಂದು ಇಂಗ್ಲಿಷಿನಲ್ಲಿಯೇ ಬರೆದ. ಯೆಂಕ್ಟು, ಪಂಕ್ಟುಗಳೆಲ್ಲಾ ಇಂಗ್ಲಿಷ್ ಬರಹದಲ್ಲಿ ಏನೋ ಕಂಡಾಕ್ಷಣವೇ ಗುಡ್ ಗುಡ್ ಎಂಬುದಾಗಿ ತಮ್ಮ ಅನುಮೋದನೆ ಸೂಚಿಸಿದರು. ಶ್ರೀಪತಿ ರಾಯರು ಎನೋ ಹೇಳಲು ಬಾಯಿ ತೆರೆದರೂ ಮಂಜು ಪಂಜುಗಳಾದಿ ಎಲ್ಲರೂ ಒಪ್ಪಿಗೆಯ ನಗೆ ಸೂಸಿದ್ದನ್ನು ನೋಡಿ ಸುಮ್ಮನಾದರು.
ಕಾಫéಿ-ಟಿ, ಸಿಗರೇಟುಗಳ ನಡುವೆ ನಡೆದ ಮುಂದಿನ ಮೂರು ಘಂಟೆಗಳ ಸುದೀರ್ಘ ಚಚರ್ೆಯ ಬಳಿಕ ಒಂದು ಲಿಸ್ಟ್ ತಯಾರಾಯಿತು. ಅದು ಹೀಗಿತ್ತು:
1.    ಪತ್ನಿಯರು ಯಾವುದೇ ರೀತಿಯಲ್ಲಿ ಪತಿಯರ ಮೇಲೆ ದೌರ್ಜನ್ಯ ಮಾಡಕೂಡದು.
2.    ಪತಿಗಳು ಆಫéೀಸಿನಿಂದ ಬಂದ ಕೂಡಲೇ ಕಾಫéಿ/ಚಾದೊಂದಿಗೆ ಪತ್ನಿಯರು ಪತಿಯರನ್ನು ಸ್ವಾಗತಿಸಬೇಕು.
3.    ಟಿವಿಯ ಮೇಲಿನ ಪ್ರೈಮರಿ ಹಕ್ಕು ಗಂಡಂದಿರದ್ದಾಗಿರುತ್ತದೆ. ಮತ್ತು, ಗಂಡಂದಿರದ್ದು ಮಾತ್ರವೇ ಆಗಿರುತ್ತದೆ.
4.    ಪತಿಗಳು ಇಷ್ಟವಿಲ್ಲದ ಕೆಲಸವನ್ನು ಅವರು ಮಾಡುವಂತೆ ಪತ್ನಿಯರು ಯಾವುದೇ ರೀತಿಯ ಒತ್ತಡ ಹೇರುವಂತಿಲ್ಲ.
5.    ಪತಿಗಳಿಗೆ ಹಸಿವಾದಾಗ ಉಣಬಡಿಸುವುದು ಪತ್ನಿಯರ ಕರ್ತವ್ಯವಾಗಿರುತ್ತದೆ. (ಹಾಗೂ ಇದು ಸನಾತನ ಧರ್ಮ)
6.    ಮೇಲಿನ ಹೇಳಿಕೆ ಎಲ್ಲಾ ರೀತಿಯ ಹಸಿವಿಗೂ ಅನ್ವಯಿಸುತ್ತದೆ.
ಸಹಿ-
ಶೋ.ಪುಗಳು (ಶೋಷಿತ ಪುರುಷರು)
ಫéಾರ್, ಅ. ಭಾ. ಪು. ಶೋ. ವಿ. ಸಂ
ಇವತ್ತಿಗೆ ಮೀಟಿಂಗ್ ಇಲ್ಲಿಗೆ ಸಾಕು. ನಾಳೆ ಹೇಗೂ ಭಾನುವಾರ. ಮುಂದಿನ ಕಾರ್ಯಸೂಚಿ ನಾಳೆ ಚಚರ್ಿಸುವುದು ಎಂದು ನಿರ್ಧರಿಸಲಾಯಿತು. ಎಲ್ಲರೂ ಪಕ್ಕದ ಹೋಟೆಲಿನಿಂದ ಪಾಸರ್ೆಲ್ ತರಿಸಿದ ಊಟಮಾಡಿ ಟೆಂಟ್ ಒಳಗಡೆ ಅಲ್ಲಲ್ಲೇ ಅಡ್ಡಾಗಿ ನಿದ್ದೆ ಹೋದರು.
ಹೊಸಜಾಗ. ನುಸಿಕಾಟ ಬೇರೆ. ಮೈದಾನಿನ ತಣ್ಣನೆ ಗಾಳಿಗೆ ಚಳಿಯೂ ಶುರುವಾಯಿತು. ನಡುರಾತ್ರಿ ಶ್ರೀಪತಿ ರಾಯರಿಗೆ ಎಚ್ಚರವಾಯಿತು. ಅಭ್ಯಾಸ ಬಲದಿಂದ ಬಲಗೈ ಚಾಚಿ ಮಗ್ಗುಲು ಬದಲಿಸಿದರೆ ಪಕ್ಕದಲ್ಲಿ ಮಲಗಿದ್ದ ಸೋಮಣ್ಣನ ಗಡ್ಡಕ್ಕೆ ಕೈ ತಗಲಿ ಮುಳ್ಳು ಹಂದಿಯ ಸ್ಪರ್ಶದ ಅನುಭವವಾಯಿತು. ಕೂಡಲೇ ಹೇಸಿಗೆಪಟ್ಟುಕೊಂಡು ಕೈ ಹಿಂದಕ್ಕೆಳೆದರು ರಾಯರು.
ಸೋಮಣ್ಣನೂ ಕೂಡಾ ನಿದ್ದೆ ಬಾರದೆ ಹೊರಳಾಡುತ್ತಿದ್ದ. ಮನದಲ್ಲಿ ಏನೇನೋ ತೊಳಲಾಟ. ಮನದ ಪಟಲದಲ್ಲಿ ಮನೆಯ ಬೆಚ್ಚಗಿನ ರಾತ್ರಿಗಳ ಸೀನ್ ನುಸುಳಿ ಹಿಂಸೆ ಕೊಡುತ್ತಿತ್ತು.
ಏನು ಶ್ರೀಪತಿಯವರೇ, ನಿದ್ದೆ ಬಲರ್ಿಲ್ವಾ? ಅಂತ ಮೆಲ್ಲಗೆ ಶ್ರಿಪತಿರಾಯರನ್ನು ಮಾತಿಗೆಳೆದ.
ಹಾಗೇನಿಲ್ಲ. ಹೀಗೆ ಸ್ವಲ್ಪ, ನುಸಿ ಕಾಟ ಅಲ್ವ?
ಹ್ಹೂಂ. ಮನೇನಲ್ಲಿ ಆದ್ರೆ ಆರಾಮ ಇತರ್ಿತ್ತು ಅಲ್ವ? ಒಳ್ಳೆ ಮೆತ್ತಗಿನ ಬೆಡ್, ದಪ್ಪ ಹೊದೆಕೆ, ಎಲ್ಲಾ ಇತರ್ಾ ಇತ್ತು. ಸೋಮಣ್ಣ ಮನೆಯ ಸುಪ್ಪತ್ತಿಗೆಯನ್ನು ನೆನಪಿಸಿಕೊಂಡ.
ಹೌದು. ಏನು ಮಾಡೋದು. ಸಂಘಟನೆ ಅಂದ್ರೆ ಕಷ್ಟ ಬಲರ್ೆ ಬೇಕಲ್ವ? ರಾಯರು ತತ್ವಶಾಸ್ತ್ರ ನುಡಿದರು.
ಹ್ಹೂ. . . . ನೀರಸವಾಗಿ ಸೋಮಣ್ಣ ಉಸುರಿದ. ದನಿಯಲ್ಲಿ ಉತ್ಸಾಹ ಧ್ವನಿಸಲಿಲ್ಲ.
ಸ್ವಲ್ಪ ಹೊತ್ತು ಹಾಗೇ ಕಳೆಯಿತು. ಅಚಾನಕ್ಕಾಗಿ ಸೋಮಣ್ಣ ‘ಧಿಗ್ಗನೆ’ ಎದ್ದು ಕುಳಿತ. ರಾಯರು ‘ಏನು’ ಎಂಬಂತೆ ತಲೆಯೆತ್ತಿದರು.
ಹಸಿವೆ, ಜೋರು ಹಸಿವೆ! ಸೋಮಣ್ಣ ಬಡಬಡಿಸಿದ. ಮನೆಗೆ ಹೋಗಿ ಸ್ವಲ್ಪ ಏನಾದ್ರು ತಿಂದು ಬತರ್ೆನೆ. ಇಲ್ಲಿ ಹೇಗೂ ಈ ಹೊತ್ತಿನಲ್ಲಿ ಏನೂ ಸಿಗೋದಿಲ್ಲ. ಅಂತ ಹೇಳ್ಕೊಂಡು ಮಲಗಿದಲ್ಲಿಂದ ಎದ್ದು ಹೊರಟೇ ಬಿಟ್ಟ. ಈಗ ಬತರ್ೆನೆ, ರಾಯರೆ. ಅಂತ ಕೊನೇ ಡೈಲಾಗ್ ಹೊಡೆದು ಟೆಂಟ್ ಹೊರಗಿನ ಕತ್ತಲಲ್ಲಿ ಕರಗಿಹೋದ.
ಶ್ರೀಪತಿ ರಾಯರು ಮಗ್ಗಲು ಬದಲಿಸಿ ನಿದ್ರಿಸಲು ಪ್ರಯತ್ನಿಸಿದರು. ಎಷ್ಟು ಹೊತ್ತಾದರೂ ನಿದ್ದೆ ಬರಲಿಲ್ಲ. ಅವರಿಗೂ ಮನಸ್ಸಿನಲ್ಲಿ ಏನೆನೋ ಆಲೋಚನೆಗಳು ಹುಟ್ಟತೊಡಗಿದವು. ಏನೋ ಒಂಥರಾ ಮಧುರ ಯಾತನೆಯ ಅನುಭವ ಅವರಿಗೂ ಆಗತೊಡಗಿತು. ಯೋಚನೆಗಳನ್ನು ಹತ್ತಿಕ್ಕಿ, ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ ಸೋಮಣ್ಣನ ಆಗಮನಕ್ಕಾಗಿ ಕಾಯುತ್ತಾ ನಿದ್ರಿಸಲು ಪ್ರಯತ್ನಿಸಿದರು.
ರಾತ್ರಿ ಇನ್ನೂ ಗಾಢವಾಗತೊಡಗಿತು. ಸೋಮಣ್ಣನ ಸುಳಿವೇ ಇಲ್ಲ. ರಾಯರು ಯೋಚನೆಗೆ ಬಿದ್ದರು. ‘ಸೋಮಣ್ಣ ಎಲ್ಲಿ ಹೋದ? ಈಗ ಏನು ಮಾಡುತ್ತಿರಬಹುದು’ ಎಂದು ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ಊಹನೆ ಹರಿಸಿದರು.
ಇನ್ನೂ ಒಂದು ಕಾಲು-ಅರ್ಧ ಘಂಟೆ ಕಳೆದಿರಬಹುದು. ಮಧುರ ಯಾತನೆ ಜೋರಾಯಿತು. ಈಗ ಸೋಮಣ್ಣನ ಹಸಿವೆ ಅವರನ್ನೂ ಜೋರಾಗಿ ಕಾಡತೊಡಗಿತು. ತಡೆಯಲಾರದೆ ಒಮ್ಮೆಗೇ ಎದ್ದು ಕುಳಿತರು. ಮತ್ತು, ಕುಳಿತಲ್ಲಿಂದ ಎದ್ದು ಹೊರಟೇ ಬಿಟ್ಟರು, ಸೋಮಣ್ಣನಂತೆ. ಹೋಗುವಾಗ ಯಾಯರ್ಾರನ್ನೋ ತುಳಿದುಕೊಂಡು ಹೋಗಿ ಟೆಂಟಿನಿಂದ ಹೊರಬಿದ್ದರು.
ಅವರ ತುಳಿತಕ್ಕೆ ಎಚ್ಚೆತ್ತ ಒಂದಿಬ್ಬರಿಗೆ ಮತ್ತೆ ನಿದ್ದೆ ಹತ್ತಲಿಲ್ಲ. ‘ನಮಗೆ ಮನೆಯಲ್ಲಿ ಪತ್ನಿ ಜೊತೆ ಅಂತಹ ಹೇಳಿಕೊಳ್ಳುವಂತಹ ಸಮಸ್ಯೆ ಏನೂ ಇಲ್ಲ. ನಾವು ಈ ಸಂಘಟನೆಗೆ ಸೇಲರ್ೆ ಬೇಕು ಅಂತ ಏನೂ ಇಲರ್ಿಲ್ಲ. ಸುಮ್ನೆ ಶಂಭುವಿನ ಒತ್ತಾಯಕ್ಕೆ ಯಾಕಾದ್ರೂ ಸೆಕರ್ೊಂಡ್ವೋ, ಇಲ್ಲಿ ನಿದ್ದೆ ಬೇರೆ ಬರುವುದಿಲ್ಲ. ಅಂತೆಲ್ಲ ಶಂಭುವಿಗೆ ಮನದಲ್ಲೇ ಶಾಪ ಹಾಕುತ್ತಾ ನಿದ್ದೆ ಮಾಡಲು ಪ್ರಯತ್ನಿಸುತ್ತಾ ಇದ್ದರು.
ಶಂಭುವಿಗೆ ಗಾಢ ನಿದ್ದೆ. ಆತನಿಗೆ ಇದಾವುದರ ಅರಿವೂ ಇಲ್ಲ. ಶೋಷಣೆಯ ವಿರುದ್ಧ ಕಹಳೆ ಊದಿದ ತೃಪ್ತ ಮನೋಭಾವದಲ್ಲಿ ಚೆನ್ನಾಗಿ ನಿದ್ದೆ ಬಂದಿತ್ತು. ರಾತ್ರಿ ಟೆಂಟ್ ಒಳಗೆ ಆಗಾಗ್ಗೆ ಕೇಳುತ್ತಿದ್ದ ನಿದ್ದೆ ಬಾರದ ಗಂಡಂದಿರ ಹೊರಳಾಟ, ನರಳಾಟ, ಸರ ಸರ ಸದ್ದುಗಳೊಂದೂ ಆತನ ಗಮನಕ್ಕೆ ಬಂದಿರಲಿಲ್ಲ.
ಅಂತೂ ಇಂತೂ ರಾತ್ರಿ ಕಳೆಯಿತು. ಒಂದು ದಿನದ ಯಶಸ್ವಿ ಹೋರಾಟ ನಡೆಸಿದ ನಾಯಕ ಶಂಭು ವಿಜಯೀ ಭಾವದೊಂದಿಗೆ ಕಣ್ಣು ತೆರೆದು ನೋಡುತ್ತಾನೆ. . . .  ಹೊರಾಟಗಾರರಲ್ಲಿ ಯಾರೊಬ್ಬನೂ ಅಲ್ಲಿ ಇರಲಿಲ್ಲ !! ಟೆಂಟ್ ಖಾಲಿ ಹೊಡೀತಾ ಇತ್ತು !!

‍ಲೇಖಕರು avadhi

October 15, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಸುಶ್ರುತ

    ಹೆಹೆ.. ಟೈಟಲ್ ನೋಡಿ ಫುಲ್ ಕ್ಯೂರಿಯಸ್ ಆಗಿ ಬಂದೆ. 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: