‘ಅಭಿನವ’ ಒಂದು ಅತ್ಯುತ್ತಮ ಕೆಲಸ ಮಾಡಿ ಮುಗಿಸಿದೆ. ಕನ್ನಡದ ಪರಿಚಾರಿಕೆ ಮಾಡುತ್ತಲೇ ಕವಿತೆ, ಮೂಕ ನಾಟಕ, ಪ್ರಬಂಧ, ಭಾಷಣ ಬರೆದಿದ್ದರು. ಆ ಎಲ್ಲವನ್ನೂ ಒಟ್ಟು ಮಾಡಿ ಅಭಿನವದ ರವಿಕುಮಾರ್ ಹೊರತಂದಿದ್ದಾರೆ. ‘ನಮಗೊಂದು ಕೈದೀವಿಗೆ ಬೇಕು ಎಂದ ಸಮಾಜಕ್ಕೆ ಸಿಕ್ಕಿದ್ದು ಶ್ರೀನಿವಾಸರಾಜು ಎಂಬ ಹೊತ್ತಿಗೆ’ ಎಂದಿದ್ದಾರೆ ಕ ವೆಂ ರಾಜಗೋಪಾಲ್.
ಕೆಲ ತಿಂಗಳುಗಳ ಹಿಂದೆ ‘ಸಂಚಯ’ದ ಡಿ ವಿ ಪ್ರಹ್ಲಾದ್ ಅವರು ‘ನಮ್ಮ ಪ್ರೀತಿಯ ಮೇಷ್ಟ್ರು’ ಹೆಸರಲ್ಲಿ ಶ್ರೀನಿವಾಸರಾಜು ಅವರನ್ನು ಕುರಿತು ಬರೆದ ಕವಿತೆಗಳ ಗುಚ್ಚವನ್ನು ಹೊರತಂದಿದ್ದರು. ಈಗ ರವಿಕುಮಾರ್ ಮಹಾಸಾಹಸಕ್ಕೆ ಕೈ ಹಾಕಿದ್ದಾರೆ. ಸುಮಾರು ೬೦೦ ಪುಟಗಳ ಹೊತ್ತಿಗೆಯ ಹೆಸರು ‘ಆಗಾಗ’.
ಹೌದಲ್ಲಾ! ಪರಿಚಾರಿಕೆ ಮಾಡುತ್ತಲೇ ಅಗಾಗ ಇಷ್ಟೆಲ್ಲಾ ಬರೆದರೆ ಎನಿಸುತ್ತದೆ. ಅಭಿನವ ಕೇವಲ ಪುಸ್ತಕದ ಬಿಡುಗಡೆ ಮಾತ್ರ ‘ಆಗಾಗ’ವನ್ನು ಸೀಮಿತಗೊಳಿಸಿಲ್ಲ. ಶ್ರೀನಿವಾಸರಾಜು ಅವರಿಗೆ ಸದಾ ಪ್ರಿಯವಾಗಿದ್ದ ಎಲ್ಲರನ್ನೂ ಒಟ್ಟು ಮಾಡುವ ಪ್ರತಿಯೊಬ್ಬರ ಕ್ರಿಯಾಶೀಲತೆಯನ್ನು ನೋಡಿ ಖುಷಿಪಡುವ ರೀತಿಯಲ್ಲಿಯೇ ಕಾರ್ಯಕ್ರಮ ಯೋಜಿಸಿದೆ. ಬಹು ಭಾಷಾ ಕವಿಗೋಷ್ಠಿ, ಕನ್ನಡ ಕವಿತೆಗಳ ಕವಿಗೋಷ್ಠಿಯನ್ನೂ ಹಮ್ಮಿಕೊಳ್ಳಲಾಗಿದೆ.
ಶ್ರೀನಿವಾಸರಾಜು ಅವರನ್ನು ನೆನಪಿಸಿಕೊಳ್ಳಲು ಎಷ್ಟೊಂದು ದಾರಿ.
ಪುಸ್ತಕದ ಈ ಸಾಲು ಬಹಳ ಕಾಡಿತು: ಕೆ ನಲ್ಲತಂಬಿ
ಕೆ ನಲ್ಲತಂಬಿ ನಿನ್ನೆ ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಮೇಲಿನ ಪುಸ್ತಕ ಕೊರಿಯರ್ ಮೂಲಕ ಬಂದು ಸೇರಿತು. ಊಟ ಮುಗಿಸಿ ಸುಮಾರು 2 ಗಂಟೆಗೆ ಓದಲು...
aadre yaavattu antha hElalilla…