ಆಗ ಈಗಿನಂತೆ ಒನ್ ವೇ ಇರಲಿಲ್ಲ..

ಕಾರುಗಳಲ್ಲಿ ಅಂಬಾಸಡರ್ ದೇ ಕಾರುಬಾರು ಆಗ

ಮೂರು ದಶಕಗಳ ಹಿಂದೆ ಹಳೆಯ ಫೋಟೋನಲ್ಲಿ ಇದ್ದಂತೇ ಕಾವೇರಿ ಹ್ಯಾಂಡಿಕ್ರಾಫ್ಟ್ಸ್ ನ ಕಟ್ಟಡ ಈಗಲೂ ಇದೆ.

ಅದರ ಫಲಕ ದೊಡ್ಡದಾಗಿ ಸ್ವಲ್ಪ ಕೆಳಕ್ಕೆ ಇಳಿದಿದೆ.

ಎರಡು ಸಾಲಿದ್ದದ್ದು ಒಂದು ಸಾಲಾಗಿದೆ.

paramesh column cropಹ್ಯಾಂಡಿಕ್ರಾಫ್ಟ್ಸ್ ಬದಲು ಎಂಪೋರಿಯಂ ಅಂತಾಗಿದೆ.

ಇದರ ಬಲಪಕ್ಕದಲ್ಲಿದ್ದ ಗ್ರೀನ್ಸ್ ನ ಪಾರಂಪರಿಕ ಶೈಲಿಯ ಕಟ್ಟಡ ಕೆಡವಲ್ಪಟ್ಟು ಅಲ್ಲಿ  ಹೊಸದೊಂದು ಆಧುನಿಕ ಕಟ್ಟಡ ಎದ್ದು ನಿಂತಿದೆ.

ಹೊಸ ಕಟ್ಟಡದ ನೆಲಮಾಳಿಗೆ (ಸೆಲ್ಲಾರ್) ಹಳೆಯ ಕಟ್ಟಡದ ವಾಸ್ತುವನ್ನು ನೆನಪಿಸುವಂತೆ ಕಟ್ಟಿದ್ದಾರೆ.

ದೂರದಿಂದ (ಅಂದರೆ ಬೆಂಗಳೂರಿನ ಬೇರೆ ಬೇರೆ ಭಾಗಗಳಿಂದ ಅಂತ) ಬಂದ ಗೆಳೆಯರೊಡನೆ ಗ್ಯಾಲಕ್ಸಿಯಲ್ಲಿ ಸಿನೆಮಾ ನೋಡುವ ಮೊದಲು ಕೋಲ್ಡ್ ಬಿಯರನ್ನು ಚಿಪ್ಸ್ ಮತ್ತು ಸಿಗರೇಟಿನೊಂದಿಗೆ ಆಸ್ವಾದಿಸುತ್ತಿದ್ದ ನೆನಪು ಹಳೆಯ ಗ್ರೀನ್ಸ್ ನೊಂದಿಗೆ ತಳುಕು ಹಾಕಿಕೊಂಡಿದೆ.

ಬೆಂಗಳೂರಿಗೆ ಬಂದ ಹೊಸದರಲ್ಲಿ ನಾವು ಕಮ್ಮನಹಳ್ಳಿಯಲ್ಲಿದ್ದೆವಲ್ಲ ಆಗ ನನ್ನ ಆಫೀಸು ಮೈಕೋ ಫ್ಯಾಕ್ಟರಿ ಬಳಿ ಇತ್ತು. ನಂತರ ನನ್ನವಳ ಹೊತ್ತುಗೊತ್ತಿಲ್ಲದ ಕೆಲಸದ ದೆಸೆಯಿಂದಾಗಿ ಅವಳ ಕಛೇರಿಯ ಬಳಿ ಈಗ ಗರುಡ ಮಾಲ್ ಇರುವ ಪ್ರದೇಶದಲ್ಲಿ ಮನೆ ಮಾಡಿದೆವು.

2b8f9770-7261-472e-8ce6-7fa74d36801d

ಅಷ್ಟೊತ್ತಿಗೆ ನನ್ನ ಕಛೇರಿ ಆರ್.ಟಿ.ನಗರಕ್ಕೆ ಶಿಫ್ಟ್ ಆಗಿತ್ತು. ಸೊ, ನಾನು ಬ್ರಿಗೇಡ್ ರೋಡಿನಲ್ಲಿ ನನ್ನ ಯೆಜ್ಡಿಯಲ್ಲಿ 80 ಕಿ,ಮೀ ವೇಗದಲ್ಲಿ ಝೂಮ್ ಅಂತ ಹೋಗಿ ಬರುತ್ತಿದ್ದೆ. ಈಗ ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಆಗ ಈಗಿನಂತೆ ಒನ್ ವೇ ಇರಲಿಲ್ಲ. ಎರಡೂ ಕಡೆಯಿಂದ ಓಡಾಡಬಹುದಿತ್ತು.

ಇನ್ನು ಆಗ ರೊಯ್ ಅಂತ ಸಿಗ್ನಲ್ ಸಿಕ್ಕೊಡನೆ ಪೆಡಲ್ ತುಳಿಯುತ್ತ ತಮ್ಮ ಸೈಕಲ್ ಏರೋಪ್ಲೇನ್ ಏನೋ ಎಂಬಂತೆ ಸಾಗುತ್ತಿದ್ದ ಸೈಕಲ್ ಸವಾರರೂ ಈಗ ಕಂಡು ಬರುವುದಿಲ್ಲ.

ಅಲ್ಲೊಂದು ಇಲ್ಲೊಂದರಂತೆ ಕಾಣಿಸುತ್ತಿದ್ದ ಕಾರುಗಳಲ್ಲಿ ಅಂಬಾಸಡರ್ ದೇ ಕಾರುಬಾರು ಆಗ. ಈಗ ಸೂಕ್ಷ್ಮದರ್ಶಕ ಹಾಕಿ ಹುಡುಕಿದರೆ ಅಪರೂಪಕ್ಕೆ ಒಂದು ಕಂಡುಬರುತ್ತದೆ.

93-94ರ ವೇಳೆಗೆ ಎರಡು ಮೂರು ವರ್ಷದ  ಮಗಳು ಅನಲ ಮತ್ತು ನಾನು ಮನೆಯಲ್ಲಿ ಕಾಯುವ ಬದಲು ಅವರಮ್ಮನ ಕರೆದುಕೊಂಡು ಬರುವುದಕ್ಕೆಂದು ಎಂಜಿ ರಸ್ತೆಗೆ ವಾಕ್ ಹೋಗುತ್ತಿದ್ದೆವು. ಅವರಮ್ಮ ಕೆಲಸ ಮುಗಿಸಿ ಬರುವ ಸಮಯ ಅನಿಶ್ಚಿತವಾಗಿದ್ದರಿಂದ ಸುಮಾರು ಹೊತ್ತು ಎಂಜಿ ರಸ್ತೆಯ ಈ ತುದಿಯಿಂದ ಆ ತುದಿಗೆ, ಆ ತುದಿಯಿಂದ ಈ ತುದಿಗೆ ನಡೆದಾಡಿ ಕೊನೆಗೆ ಪ್ರಜಾವಾಣಿಯ ಜಗಲಿಯಂಥ ಕಿಟಕಿ ಚೌಕಟ್ಟಿನಲ್ಲಿ ಕೂರುತ್ತಿದ್ದೆವು.

ಅಷ್ಟೊತ್ತಿಗೆ ಮಾರುತಿ ಕಾರಿನ ಭರಾಟೆ ಜೋರಾಗಿತ್ತು. ಕಿಟಕಿ ಜಗಲಿಯಲ್ಲಿ ಕುಳಿತು ಕಾರಿನ ವಿವಿಧ ಮಾಡೆಲ್ ಗಳು ಮತ್ತು ಅವುಗಳಲ್ಲಿ ಎಷ್ಟು ಕಾರಿಗೆ ಒಂದು ಮಾರುತಿ ಇದೆ ಎಂಬ ಲೆಕ್ಕ ಹಾಕುವ ಆಟವಾಡುತ್ತಿದ್ದೆವು.

ಅವರಮ್ಮ ಬಂದ ಮೇಲೆ ಒಂದೊಂದು ಸಾರಿ ಲೇಕ್ ವ್ಯೂನಲ್ಲಿ ಐಸ್ ಕ್ರೀಮ್ ಸಮಾರಾಧನೆ ಆಗುತ್ತಿತ್ತು. ನನಗೆ ಸಕ್ಕರೆ ಕಾಯಿಲೆಯಿದ್ದರೂ ಅಲ್ಪಸ್ವಲ್ಪ ಜಮಾಯಿಸುತ್ತಿದ್ದೆ.

‍ಲೇಖಕರು admin

August 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಡೆಲ್ ಆದರು ಅನಂತಮೂರ್ತಿ..

ಆಗ ತಾನೆ slave flash unit ಕೊಂಡುಕೊಂಡಿದ್ದೆ. ನನಗೆ ಮೊದಲಿನಿಂದಲೂ ಫ್ಲಾಷ್ ಬಳಸಿ ಫೋಟೋ ತೆಗೆಯುವುದು ಇಷ್ಟವಿಲ್ಲ. ಈಗ ಡಿಜಿಟಲ್...

ಬ್ಲ್ಯಾಕ್ ಅಂಡ್ ವೈಟ್ ವರ್ಲ್ಡ್

ಪರಮೇಶ್ವರ ಗುರುಸ್ವಾಮಿ ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕುವೆಂಪು ಕುರಿತ ಸಮಾರಂಭವೊಂದರಲ್ಲಿ. ಕುವೆಂಪುರವರು ವೇದಿಕೆಗೆ ಬರುವ ಮೊದಲು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This