ಆಚಾರವಿಲ್ಲದ ಆಳ್ವಿಕರು ನೀತಿಯಿಲ್ಲದ ಆಳ್ವಿಕೆ – ನಾ ದಿವಾಕರ

ಸ್ವಾತಂತ್ರೋತ್ತರ ಭಾರತದಲ್ಲಿ ರಾಜಕಾರಣ ಎಂದಿಗೂ ಪರಿಶುದ್ಧತೆ ಪಡೆದಿರಲಿಲ್ಲ. ಈಗಲೂ ಪಡೆದಿಲ್ಲ. ವ್ಯತ್ಯಾಸವಾಗಿರುವುದು ಪಾತಕಿ ಕೃತ್ಯಗಳ ಪ್ರಮಾಣದಲ್ಲಿ, ಅನೈತಿಕತೆ ಮತ್ತು ಅಪಮೌಲ್ಯೀಕರಣದ ಪ್ರಮಾಣದಲ್ಲಿ ಮಾತ್ರ. ಆದರೂ 1960-70ರ ದಶಕದಲ್ಲಿ ದೇಶ ಅದ್ಭುತ ಎನ್ನಬಹುದಾದ ರಾಜಕಾರಣಿಗಳನ್ನು ಕಂಡಿದೆ. ಇದೇ ಅವಧಿಯಲ್ಲಿ ತನ್ನ ಶಿಸ್ತು, ಸಂಯಮ, ಬದ್ಧತೆ ಮತ್ತು ದೇಶಭಕ್ತಿಗಳಿಗೆ ಹೆಸರಾದ ಆರೆಸ್ಸೆಸ್ ತನ್ನದೇ ಆದ ರಾಜಕೀಯ ವೇದಿಕೆಯನ್ನು ನಿಮರ್ಿಸಿಕೊಳ್ಳತೊಡಗಿತ್ತು. ಇತರ ರಾಜಕೀಯ ಪಕ್ಷಗಳಿಗಿಂತ ಲೂ ಭಿನ್ನವಾದ ಒಂದು ರಾಜಕೀಯ ಪಕ್ಷವನ್ನು ಕಟ್ಟಿಬೆಳೆಸುವ ತನ್ನ ಧ್ಯೇಯದ ಅನುಸಾರ ಜನಸಂಘವನ್ನು ಬಿಜೆಪಿಯನ್ನಾಗಿ ಪರಿವತರ್ಿಸಿದ ಆರೆಸ್ಸೆಸ್ಗೆ ತನ್ನ ವರ್ಚಸ್ಸನ್ನು ಉಳಿಸಿಕೊಳ್ಳಲು ದೊರೆತ ಸುಲಭದ ಮುಖವಾಡ ಅಟಲ್ ಬಿಹಾರಿ ವಾಜಪೇಯಿ. 1982ರಲ್ಲಿ ಉದಯಿಸಿದ ಬಿಜೆಪಿ ಭಾರತದ ರಾಜಕಾರಣದ ಕೆಸರಿನಲ್ಲಿ ಅರಳಿದ ಕಮಲ ಎಂಬ ಹೆಗ್ಗಳಿಕೆಯಿಂದ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿತ್ತು. ಅಂದಿನಿಂದ ಇಂದಿನವರೆಗೆ ಈ ಕಮಲದ ದಳಗಳು ತನ್ನ ರಾಜಕಾರಣದ ವಿರಾಟ್ ಸ್ವರೂಪವನ್ನು ಭಾರತೀಯ ಜನತೆಗೆ ಪರಿಚಯಿಸುತ್ತಲೇ ಇವೆ. ಇದೀಗ ಕನರ್ಾಟಕದ ಬಿಜೆಪಿ ತನ್ನ ಮೂರು ವರ್ಷಗಳ ಆಳ್ವಿಕೆಯಲ್ಲಿ ಕೆಸರಿನಲ್ಲಿ ಅರಳಿದ ಕಮಲದ ನೈಜ ಲಕ್ಷಣಗಳನ್ನು ಸ್ಪಷ್ಟವಾಗಿ ತೆರೆದಿಟ್ಟಿದೆ. ಕಾಂಗ್ರೆಸ್ ನಾಯಕರಿಂದ ತಾವು ನೈತಿಕತೆಯ ಪಾಠ ಕಲಿಯಬೇಕಿಲ್ಲ ಎಂದು ಮುಖ್ಯಮಂತ್ರಿ ಸದಾನಂದಗೌಡರು ಮತ್ತು ಇತರ ಬಿಜೆಪಿ ನಾಯಕರು ಹೇಳುವುದರಲ್ಲಿ ಅರ್ಥವಿದೆ. ಇದು ಅಗತ್ಯವೂ ಅಲ್ಲ. ಕನರ್ಾಟಕದ ಜನತೆಗೆ ನ್ಶೆತಿಕತೆಯ ಪಾಠವಾಗಲಿ, ಮೌಲ್ಯಗಳ ಪ್ರದರ್ಶನವಾಗಲೀ ಬೇಕಿಲ್ಲ. ತಮ್ಮನ್ನು ಆಳುತ್ತಿರುವ ಚುನಾಯಿತ ಪ್ರತಿನಿಧಿಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ, ಈ ರಾಜಕೀಯ ನಾಯಕರುಗಳ ವರ್ತನೆಗಳು ಸಮಾಜದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಿವೆ ಎಂಬುದಷ್ಟೇ ಇಲ್ಲಿ ಮಹತ್ವ ಪಡೆಯುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ರಾಜ್ಯ ಬಿಜೆಪಿ ಸಕರ್ಾರಕ್ಕೆ ರಾಜ್ಯದ ಜನತೆಯನ್ನು ಪ್ರತಿನಿಧಿಸುವುದಿರಲಿ, ಜನತೆಯ ಬಳಿ ಹೋಗುವುದಕ್ಕೂ ನೈತಿಕ ಹಕ್ಕು ಉಳಿದಿಲ್ಲ. ಏನೆಲ್ಲಾ ನಡೆದಿದೆ ಈ ಮೂರೂವರೆ ವರ್ಷಗಳಲ್ಲಿ. ಆಪರೇಷನ್ ಕಮಲ ಎಂಬ ಭ್ರಷ್ಟ ರಾಜಕೀಯ ಸೂತ್ರದಿಂದ ಆರಂಭವಾದ ಈ ಸಕರ್ಾರದ 23 ಸಚಿವರು ವಿವಿಧ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರ, ವಾಮಾಚಾರ, ಅತ್ಯಾಚಾರ, ಕಾಮಾಚಾರ ಎಲ್ಲವೂ ಸೇರಿದೆ. ಅಧಿಕಾರಾವಧಿಯಲ್ಲಿ ಜೈಲು ಸೇರಿದ ಪ್ರಪ್ರಥಮ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಈಗಾಗಲೇ ಪ್ರಸಿದ್ಧಿ ಪಡೆದಿದ್ದಾರೆ. ಮೂವರು ಸಚಿವರು ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಿಲುಕಿಇ ಜೈಲಿನಲ್ಲಿದ್ದಾರೆ. ಮೂವರು ಸಚಿವರು ಭೂ ಹಗರಣದಲ್ಲಿ ಭಾಗಿಯಾಗಿ ನ್ಯಾಯಾಲಯದ ಕಟಕಟೆಯಲ್ಲಿದ್ದಾರೆ. ಇನ್ನು ಮೂವರು ಲೈಂಗಿಕ ಹಗರಣದಲ್ಲಿ ಸಿಲುಕಿ ಕಳಂಕಿತರಾಗಿದ್ದಾರೆ. ಸಂವಿಧಾನವನ್ನು ಪವಿತ್ರ ಗ್ರಂಥ ಎಂದು ಪರಿಗಣಿಸುವ ಒಂದು ಕಾಲವಿತ್ತು, ತಮ್ಮ ಪೀಠದಲ್ಲಿ ಆಸೀನರಾಗುವ ಮುನ್ನ ನಮಸ್ಕರಿಸಿ ಕುಳಿತುಕೊಳ್ಳುತ್ತಿದ್ದ ನೇತಾರರೂ ನಮ್ಮೊಳಗಿದ್ದರು. ಸಂಸತ್ ಅಥವಾ ವಿಧಾನಸಭೆ ಅಧಿವೇಶನ ಎಂದರೆ ಶಾಲಾ ಮಕ್ಕಳ ಹಾಗೆ ಶಿಸ್ತಿನ ಸಿಪಾಯಿಗಳ ಹಾಗೆ ಹಾಜರಿದ್ದು ಚಚರ್ೆ ನಡೆಸುತ್ತಿದ್ದ ಕಾಲವೂ ಇತ್ತು. ಇವೆಲ್ಲವೂ ಈಗ ಗತಕಾಲದ ಕಥೆಗಳೇನೋ ಎಂದು ಭಾಸವಾಗುತ್ತಿದೆ. ಸದನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಗಂಭೀರ ಚಚರ್ೆ ನಡೆಯುತ್ತಿದ್ದಾಗ, ತಮ್ಮ ಮೊಬೈಲ್ಗಳಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ ಸಚಿವ ತ್ರಯರು ಕೇವಲ ವ್ಯಕ್ತಿಗತವಾಗಿ ಅಪರಾಧವೆಸಗಿಲ್ಲ. ಜನ ಪ್ರತಿನಿಧಿಗಳಾಗಿ, ಸಂವಿಧಾನ ರಕ್ಷಕರಾಗಿ, ರಾಜ್ಯದ ಆಳ್ವಿಕರಾಗಿ, ಹಿರಿಯ ನಾಗರಿಕರಾಗಿ, ಜನತೆಯ ಮಾರ್ಗದರ್ಶಕರಾಗಿ ಅಪರಾಧವೆಸಗಿದ್ದಾರೆ. ಇಲ್ಲಿ ರಾಜಕೀಯ ಪಕ್ಷಗಳ ನಿಲುವು, ಪ್ರತಿರೋಧ, ರಾಜೀನಾಮೆಗಾಗಿ ಆಗ್ರಹ, ಪಕ್ಷದಿಂದ ಕೈಗೊಳ್ಳುವ ಶಿಸ್ತುಕ್ರಮ ಇವೆಲ್ಲವೂ ಕೇವಲ ಔಪಚಾರಿಕ ಕ್ರಿಯೆಗಳು. ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಮತ್ತು ಕೃಷ್ಣ ಪಾಲೇಮಾರ್ ತಮ್ಮ ಈ ಕೃತ್ಯದ ಮೂಲಕ ರಾಜಕಾರಣದ ಅಪಮೌಲ್ಯೀಕರಣದ ಒಂದು ಆಯಾಮವನ್ನು ಜನತೆಗೆ ಪರಿಚಯಿಸಿದ್ದಾರೆ. ಇಲ್ಲಿ ಪಾಠ ಕಲಿಯುವ ಅಥವಾ ಕಲಿಸುವ ಕ್ರಿಯೆಗಿಂತಲೂ ಕಲಿಯಬೇಕಾದ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡುವುದೂ ಅಗತ್ಯ ಎನಿಸುತ್ತದೆ. ಕಲಿಯಬೇಕಾದವರು ಪ್ರಜೆಗಳೇ ಹೊರತು, ರಾಜಕಾರಣಿಗಳಲ್ಲ. ಕಾರಣ ಪ್ರಜ್ಞೆ ಇರುವವರು ಮಾತ್ರ ಏನನ್ನಾದರೂ ಕಲಿಯಲು ಸಾಧ್ಯ. ಕನರ್ಾಟಕದ ಜನತೆಗೆ ಭಿನ್ನವಾದ ಆಡಳಿತ ನೀಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ರಾಜ್ಯದ ಅಮಾಯಕ ಜನತೆಗೆ ನೀಡಿದ್ದಾದರೂ ಏನು. ಜನಾರ್ಧನರೆಡ್ಡಿ, ಕಟ್ಟಾ ನಾಯ್ಡು, ಯಡಿಯೂರಪ್ಪನವರ ಭ್ರಷ್ಟಾಚಾರ, ರೇಣುಕಾಚಾರ್ಯ, ಹರತಾಳು ಹಾಲಪ್ಪನವರ ಅತ್ಯಾಚಾರ, ಲಕ್ಷ್ಮಣ ಸವದಿ, ಪಾಟೀಲ್ ಮತ್ತು ಪಾಲೇಮಾರ್ ಅವರ ಕಾಮಾಚಾರ ಈ ಎಲ್ಲಾ ಕೃತ್ಯಗಳನ್ನೂ ಸಮಥರ್ಿಸಿಕೊಂಡು, ನಾವು ಯಾರಿಂದಲೂ ಏನೂ ಕಲಿಯಬೇಕಿಲ್ಲ ಎಂದು ತಲೆ ಎತ್ತಿ ತಿರುಗುವ ರಾಜ್ಯ ಬಿಜೆಪಿ ಮುಖ್ಯಮಂತ್ರಿ ಮತ್ತು ಪಕ್ಷದ ನಾಯಕರ ಕಂದಾಚಾರ. ಇದೇ ಬಿಜೆಪಿಯನ್ನು ವಿಭಿನ್ನವಾದ ಪಕ್ಷ ಎಂದು ಗುರುತಿಸಲು ಮಾನದಂಡವೇನೋ ! ಕೂಡಲೇ ಸಚಿವ ತ್ರಯರ ರಾಜೀನಾಮೆ ಪಡೆದಿರುವುದನ್ನೇ ತಮ್ಮ ಘನಕಾರ್ಯ ಎಂದು ಬಿಂಬಿಸುತ್ತಿರುವ ಬಿಜೆಪಿ ನಾಯಕರು ಕೊಂಚ ಮಟ್ಟಿಗಾದರೂ ಆತ್ಮಾವಲೋಕನ ಮಾಡಿಕೊಂಡು ತಮ್ಮ ಎದೆಮುಟ್ಟಿ ನೋಡಿಕೊಳ್ಳುವುದು ಒಳಿತು. ಇಲ್ಲವಾದಲ್ಲಿ ಜನತೆಯ ದೃಷ್ಟಿಯಲ್ಲಿ ಯಃಕಶ್ಚಿತ್ ಆಗಿಬಿಡುತ್ತಾರೆ. ಸರಿ, ಬಿಜೆಪಿ ಸಚಿವರ ಹೊಲಸು ಕೃತ್ಯ ಬಯಲಾಯಿತು. ಇದನ್ನು ಸೆರೆಹಿಡಿದು ಬಹಿರಂಗ ಪಡಿಸಿದ ಪತ್ರಕರ್ತ ಮಿತ್ರರು ಅಭಿನಂದನಾರ್ಹರು. ಆದರೆ ನಮ್ಮ ಟಿವಿ ವಾಹಿನಿಗಳು ಮಾಡಿದ್ದೇನೆ. ಸದನದಲ್ಲಿ ನಡೆದ ಅಸಹ್ಯಕರ ಘಟನೆಯನ್ನು ಒಮ್ಮೆ ಜನತೆಗೆ ತೋರಿಸಿ ನಂತರ ಈ ವಿವಾದದ ಸುತ್ತ ಚಚರ್ೆಗಳಿಗೆ ಅವಕಾಶ ನೀಡುವುದು ಪ್ರಜ್ಞಾವಂತ ಮಾಧ್ಯಮದ ಹೊಣೆಗಾರಿಕೆ. ಆದರೆ ಕೆಲವು ಕನ್ನಡ ವಾಹಿನಿಗಳು ಗಂಟೆಗಟ್ಟಲೆ ತಮ್ಮ ಪರದೆಯ ಮೇಲೆ ಸಚಿವರು ವೀಕ್ಷಿಸಿದ ಅಶ್ಲೀಲ ಚಿತ್ರವನ್ನೇ ಬಿತ್ತರಿಸಿದ ಔಚಿತ್ಯವೇನು ? ಇದು ಮಾಧ್ಯಮಗಳ ಭ್ರಷ್ಟ ಮನೋಭಾವದ ಸಂಕೇತವಲ್ಲವೇ ? ಸುದ್ದಿ ನೀಡುವುದಷ್ಟೇ ಮಾಧ್ಯಮಗಳ ಆದ್ಯತೆಯಾಗಿರಬೇಕೇ ಹೊರತು ಇಂತಹ ಘಟನೆಗಳನ್ನು ತಮ್ಮ ಟಿಆರ್ಪಿ ರೇಟಿಂಗ್ಗೆ ಬಳಸಿಕೊಳ್ಳುವ ದುರಾಸೆ ಇರಕೂಡದು. ಮತ್ತೊಂದೆಡೆ ನಮ್ಮ ಸಂಸ್ಕೃತಿ-ಧರ್ಮ-ಉನ್ನತ ಆದರ್ಶಗಳ ಪೇಟೆಂಟ್ ಪಡೆದಿರುವ ಸಾಂಸ್ಕೃತಿಕ ಆರಕ್ಷಕ ಪಡೆಗಳು ಏಕೋ ಬಾಲ ಮುದುರಿ ಕುಳಿತಿವೆ. ಬಹುಶಃ ಹೃದಯಾಘಾತವಾಗಿರಬೇಕು. ಸಂಸ್ಕೃತಿ, ಸಂವೇದನೆ, ಧರ್ಮದ ಬಗ್ಗೆ ಪುಂಖಾನುಪುಂಖವಾಗಿ ಉಪನ್ಯಾಸ ನೀಡುವ ಶ್ರೀಶ್ರೀಶ್ರೀಗಳು, ಯತಿವರ್ಯರು , ಗುರೂಜಿಗಳು ಮೌನ ವಹಿಸಿರುವುದೂ ಅಚ್ಚರಿ ಮೂಡಿಸುತ್ತದೆ. ಮೂಲ ಸಮಸ್ಯೆ ಇರುವುದು ಇಲ್ಲಿ. ನಮ್ಮ ಇಡೀ ಸಮಾಜವೇ ನೈತಿಕತೆ, ಮೌಲ್ಯಗಳನ್ನು ಕಳೆದುಕೊಂಡು ನಗ್ನವಾದಂತೆ ಕಾಣುತ್ತಿದೆ. ಎಲ್ಲೋ ಒಂದೆಡೆ ಸಾರ್ವಜನಿಕ ಜೀವನದಲ್ಲಿ ಅಗತ್ಯವಾದ ಮೌಲ್ಯಗಳು ತಮ್ಮ ಪ್ರಸ್ತುತತೆಯನ್ನೇ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಮೌಲ್ಯಗಳನ್ನು ರಕ್ಷಿಸಬೇಕಾದ ದೇಶದ ವ್ಯವಸ್ಥೆಯ ನಾಲ್ಕು ಸ್ತಂಭಗಳು ಇಂದು ಶಿಥಿಲವಾಗುತ್ತಿವೆ. ಈ ಶಿಥಿಲ ಸ್ತಂಭಗಳನ್ನು ಆಧರಿಸಿದ ಸಮಾಜ ತತ್ತರಿಸುತ್ತಿದೆ. ಪೋನರ್್ಗೇಟ್ ಪ್ರಕರಣ ಈ ವಿದ್ಯಮಾನವನ್ನು ಸ್ಪಷ್ಟವಾಗಿ ಬಯಲು ಮಾಡಿದೆ. ಸದನದಲ್ಲಿ ಸಂಭವಿಸಿದ ಘಟನೆಗಳನ್ನು ಜನತೆಗೆ ಬಿಂಬಿಸಿದ ವಿದ್ಯುನ್ಮಾನ ಮಾಧ್ಯಮಗಳೂ ಇಂದು ಅಪರಾಧಿ ಸ್ಥಾನದಲ್ಲಿ ನಿಂತಿರುವುದು ವಿಪಯರ್ಾಸ. ರಾಜಕೀಯ ಬೆಳವಣಿಗೆಗಳು, ವಿದ್ಯಮಾನಗಳು ಏನೇ ಇರಲಿ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಪ್ರಜೆಗಳು ಎಚ್ಚೆತ್ತುಕೊಳ್ಳಲು ಇದು ಸಕಾಲ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಕನರ್ಾಟಕದ ಜನತೆಗೆ ಉಳಿಗಾಲವಿಲ್ಲವೆಂದೇ ಹೇಳಬಹುದು.]]>

‍ಲೇಖಕರು G

February 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

2 ಪ್ರತಿಕ್ರಿಯೆಗಳು

  1. c manjunath

    ದಿವಾಕರ ಸಾರ್, ಲೇಖನ ತುಂಬಾ ಇಷ್ಟವಾಯಿತು. ತಮ್ಮ ಚಾಟಿ ಏಟು ದಪ್ಪ ಚರ್ಮದ ದುರಾಡಳಿತಗಾರರಿಗೂ ಚುರುಕು ಮುಟ್ಟಿಸುವಂತಿದೆ. ನಾಡಿನ ಜನತೆ ಜಾಗೃತಿಯಾಗಬೇಕು. ಮುಂಬರುವ ಚುನಾವಣೆಗಳಲ್ಲಿ ಜನದ್ರೋಹಿಗಳಿಗೆ ಪಾಠ ಕಲಿಸಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: