ಸಿರಾ ಮಂಜುನಾಥ್
ಆತ ತೀರ ದಿಗಿಲುಗೊಂಡಂತೆ ಕಂಡಿದ್ದ..
ಇದು 96 ರಲ್ಲಿ ನಡೆದಿದ್ದು ,
ನಾನಾಗ ಮಾರ್ಕೆಂಟಿಗ್ ಕೆಲಸದಲ್ಲಿದ್ದೆ,
ಹಾಸನ ಬಸ್ ನಿಲ್ದಾಣದಿಂದ ಹೊರಟ ಬಸ್ಸಿನಲ್ಲಿ ನಾನು ಅವನ ಪಕ್ಕ ಕುಳಿತೆ. ಅವನ ಜೊತೆ ಇನ್ನೊಬ್ಬಾಕೆ ರಗ್ಗು ಹೊದ್ದು ಕುಳಿತುಕೊಂಡಿದ್ದಳು.
ನಾನು ಅವನ ದಿಗಿಲನ್ನ ಗಮನಿಸಿಯೂ ಗಮನಿಸಿದಂತೆ ಪಕ್ಕ ಕುಳಿತೆ. ಸ್ವಲ್ಪ ಹೊತ್ತಿನಲ್ಲಿ ಕಂಡಕ್ಟರ್ 2 ಟಿಕೆಟ್ ಕೊಟ್ಟ. ಸ್ವಲ್ಪ ನಿರಾಳನಾದ. ಅವನ ಪಕ್ಕ ಕುಳಿತದ್ದು ವ್ಯಕ್ತಿಯಲ್ಲ ಶವ!!.
ಆತ ನನಗೆ ಸನ್ನೆ ಮಾಡಿದ. ನನಗೆ ನಿಜಕ್ಕೂ ಹೃದಯ ಕಲಕಿ ಹೋಯ್ತು.. ಏನಾಯ್ತು ಎಂದು ಮಾತಾಡಿಸಿದೆ.
ಹೃದಯಸಂಬಂದಿ ಕಾಯಿಲೆಯಿಂದ ಮೃತಪಟ್ಟಿದ್ದ ಪತ್ನಿಯನ್ನು ಅರಕಲಗೂಡಿನ ಹತ್ತಿರ ಹಳ್ಳಿಗೆ ತೆಗೆದುಕೊಂಡುಹೋಗುತ್ತಿದ್ದ. ಹೆಣವೆಂದರೆ ಹತ್ತಿಸುವುದಿಲ್ಲ, ಕಾರ್ ಮಾಡಲು ಹಣವಿಲ್ಲದ್ದಕ್ಕೆ ಈ ಕೆಲಸವೆಂದು ನೊಂದ.
ನಿಜಕ್ಕೂ ಮನಸ್ಸು ಆರ್ದವಾಯ್ತು.
ನೆನ್ನೆಯ ಘಟನೆ ಓದಿ ನೆನಪಾಯ್ತು..
ನಾವಿನ್ನು ಎಲ್ಲಿದ್ದೇವೆ ಅರ್ಥವಾಗದಾಯ್ತು
ಎಂಥಾ ದುಸ್ಥಿತಿ!!