‘ಆದಿಮ’ ಕಳೆದ ಆರೇಳು ವರ್ಷಗಳಿಂದ ಈ ನೆಲಕ್ಕೆ ಸಲ್ಲಿಸುತ್ತಿರುವ ಚಾಕರಿಯನ್ನು ನಾವೆಲ್ಲಾ ಕಣ್ಣಾರೆ ನೋಡುತ್ತಾ ಬಂದಿದ್ದೇವೆ. ಇರುವ ಇಂತಹ ಎಷ್ಟೋ ಗುಡಿಗಳಿಗಿಂತ ಇದು ಮೇಲಾದ ಗುಡಿ. ನಮ್ಮಲ್ಲಿ ಕೆಲವರ ಮಕ್ಕಳು ಆ ಕಲೆಯ ಗುಡಿಯಲ್ಲಿ ಇದ್ದು ಬಂದು ಆನಂದಿಸಿದ್ದಾರೆ. ನಾವೂ ಅಷ್ಟೆ. ಆದಿಮ ಒಂದು ಆನಂದದ ಜಾಗ. ಅಲ್ಲಿ ಆನಂದದ ಹೊರತು ಕೊಡುವುದು-ಪಡೆವುದೂ ಬೇರೇನೂ ಇಲ್ಲವೆಂದೂ ನಮಗೆ ಮನವರಿಕೆಯಾಗಿದೆ. ‘ಆದಿಮ’ದ ಚಾಕರಿಯೆಲ್ಲವೂ ಒಂಟಿ ಹೆಗಲಿನ ಮೇಲೆ ಬೀಳದಂತೆ ಹಾಗೂ ನಮ್ಮ ಮುಂದಿನ ಮಕ್ಕಳ ಕಾಲಕ್ಕೂ ಈ ‘ಹುಣ್ಣಿಮೆ ಹಾಡು’ಗಳ ಪರಂಪರೆ ಉಳಿದಿರಬೇಕೆಂಬ ಆಸೆಯಿಂದ ಈ ‘ಹುಣ್ಣಿಮೆ ಹಾಡು-76’ನ್ನು ನಾವು ನಡೆಸಲು ಮುಂದಾಗಿದ್ದೇವೆ. ಅಂದು ಎಂದಿನಂತೆ ನಾಟಕವೇ ನಡೆಯಬೇಕೆಂಬುದು ನಮ್ಮ ಹಂಬಲ. ಅದಕ್ಕೆಂದೇ
ನಾಟಕ…
‘ಕಿನ್ನುಡಿಯ ಬೆಳಕಲ್ಲಿ’
ರಚನೆ ; ಡಾ|| ಎಂ. ಭೈರೇಗೌಡ.
ನಿದರ್ೇಶನ ; ರಾಮಕೃಷ್ಣ ಬೆಳ್ತೂರು
ತಂಡ : ಮುದ್ದಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರು
ಹಾಗೆಯೇ ಈ ಕೆಳಕಂಡ ಕೃತಿಗಳ ಬಿಡುಗಡೆಯೂ ಆಗಲಿದೆ.
1. ಜೀವತೋರಣಿಗ; ಸಂತ ವೆಂಕಟಗಿರಿಯಪ್ಪ
(ಅಪರೂಪದ ಸಂಶೋಧನಾ ಕೃತಿ.)
ರಚನೆ: ಪದ್ಮಾಲಯ ನಾಗರಾಜ್
ಅಥಿತಿಗಳು: 1. ಡಾ|| ವಸು.
ಪ್ರಾಧ್ಯಾಪಕರು,/ ಮುಖ್ಯಸ್ಥರು.
ಇತಿಹಾಸ ವಿಭಾಗ, ಬೆಂಗಳೂರು, ವಿ,ವಿ.
ಡಾ|| ಎಂ. ಭೈರೇಗೌಡ.
ನಾಟಕಕಾರರು ಹಾಗೂ ಸಂಶೋಧಕರು.
ಒಟ್ಟು ಸಮಾರಂಭಕ್ಕೆ ಬೀಳುವ ಖಚರ್ುವೆಚ್ಚಗಳನ್ನು ನಾವು ಹೊರಲು ಮುಂದಾಗಿದ್ದೇವೆ. ನಮ್ಮೊಂದಿಗೆ ಕೈ ಜೋಡಿಸಬಯಸುವವರಿಗೆ ಮುಕ್ತ ಸ್ವಾಗತ. ಹಾಗೇಯೇ ಅವರೂ ಇನ್ನೊಂದು ‘ಹುಣ್ಣಿಮೆ ಹಾಡ’ನ್ನು ತಮ್ಮದಾಗಿಸಿಕೊಳ್ಳಬಹುದು. ಅಂತೂ ಈ ಮೊದಲಹೆಜ್ಜೆ ನಮ್ಮದಾಗಿರುವುದು ನಮಗಂತೂ ಅಪಾರ ಸಂತೋಷ ಮತ್ತು ಸಂತೃಪ್ತಿ ತಂದಿದೆ. ಈ ನೆಲದ ಋಣ ತೀರಿಸುವುದರಲ್ಲಿ ನಾವು ‘ಆದಿಮ’ದ ಜೊತೆಗಿದ್ದೇವೆಂಬ ಹೆಮ್ಮೆ ನಮಗಿದೆ. ಹಾಗೂ ಸಹೃದ ಯ ಜಿಲ್ಲಾಧಿಕಾರಿಯವರು ‘ಹುಣ್ಣಿಮೆಹಾಡು’ ನಿಲ್ಲಬಾರದೆಂದು ಆಶಿಸಿರುವುದು ನಮ್ಮ ಈ ತೀಮರ್ಾನ ಮತ್ತು ಬದ್ಧತೆಗೆ ಪ್ರೇರಣೆ.
ಬನ್ನಿ76ನೇ ಹುಣ್ಣಿಮೆ ಹಾಡಿಗೆ
ಮತ್ತದೇ ಹುಣ್ಣಿಮೆ ಕನಸುಗಳೊಂದಿಗೆ
ಇದುವರೆಗೂ ‘ಈ ಹುಣ್ಣಿಮೆ ನಮ್ಮದು’ ಜಾಲತಾಣದ ಸದಸ್ಯರು ಮತ್ತು ‘ಆದಿಮ ಜೀವ ಬಳಗ’ದೊಂದಿಗೆ ಕೈ ಜೋಡಿಸಿರುವ ಹಿತೈಷಿಗಳು
1. ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್. ಕೋಲಾರ.
2. ನಿತ್ಯ ರೈಲು ಪ್ರಯಾಣಿಕರ ಸಂಘ. ಕೋಲಾರ.
3. ತಲೆಮಾರು ಕುಟೀರ. ಹುಲಿಮಂಗಲ.
4. ಮುಕ್ತ ಮಹಿಳಾ ವೇದಿಕೆ.
ಹೆಚ್ಚಿನ ವಿವರಗಳಿಗಾಗಿ ಸಂಪಕರ್ಿಸಿ…
ಆದಿಮ- 9945208735,9986096980,9448181967,9164360193,9482955264,9060400677,9449527605,9845857580
]]>
ಹೃದಯಪೂರ್ವಕ ಅಭಿನಂದನೆಗಳು ಹಾಗು ಶುಭಾಶಯಗಳು
ಮುಂದಿನ ಹುಣ್ಣಿಮೆ ನಮ್ಮ ಹೊಸಪೇಟೆಯಲ್ಲಿ ಆಗಬಹುದೇ …
ರವಿ ವರ್ಮ ಹೊಸಪೇಟೆ 9902596614
Congrats …….. !!