ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ಮಾಪಕಿ ಎಚ್ ಎನ್ ಆರತಿ ಅನುವಾದಿಸಿದ ‘ಪ್ರಣಯ ಶತಕ’ ಪುಸ್ತಕ ಬಿಡುಗಡೆಯ ಸಂಭ್ರಮ ಇಲ್ಲಿದೆ. ಸುನಿಲ್ ಹೊಸಕೋಟೆ ಈ ಬಗ್ಗೆ ವಿವರ ಚಿತ್ರ ಕಟ್ಟಿಕೊಟ್ಟಿದ್ದಾರೆ. ನಾಗಶ್ರೀ ಎ ರಾವ್ ಸುಂದರವಾಗಿ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಶ್ರೀದೇವಿ ಶೆಟ್ಟಿ ಕುಡ್ಲ ಚಿತ್ರಗಳನ್ನು ಕಳಿಸಿಕೊಟ್ಟಿದ್ದಾರೆ. ಎಲ್ಲರಿಗೂ ಥ್ಯಾಂಕ್ಸ್
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
[gallery order="DESC" columns="2" orderby="ID"] ಪ್ರಣಯ ಒಂಥರಾ ಅಲೌಕಿಕ ವಿಕಸನ. ಒಂದು ಪರಿಪಕ್ವ ಬಾಳ್ವೆಗೆ ಬಹಳವಾಗಿ ಬೇಕಾಗಿರುವ ಅಂಶ. ಅದು ದೈಹಿಕದ್ದಾಗಿರಬಹುದು , ಮಾನಸಿಕವಾದದ್ದು ಆಗಿರಬಹುದು ಅಥವಾ ಆಧ್ಯಾತ್ಮದ್ದು ಆಗಿರಬಹುದು…ಅದನ್ನು ಭಿನ್ನವಾಗಿ ತೆಗೆದುಕೊಳ್ಳುವ ಓದುಗನಿಗೆ ಅಥವಾ ಕೇಳುಗನಿಗೆ ಸಂಬಂಧಿಸಿದ್ದು…ಬರೆಯುವವ ಎಂದೂ ತನಗಾಗೇ ಬರೆಯುತ್ತಾನಾದ್ದರಿಂದ ಓದುವವ ತನಾಗಾಗಿ ಓದಿಕೊಳ್ಳುತ್ತಾನೆ…ಅದು ಒಂಥರಾ ಪ್ರಣಯ ಇದ್ದಹಾಗೆ. ನಾಕುತಂತಿ ಪ್ರಕಾಶನ ಇತ್ತೀಚಿಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಲೆಯಾಳಂ ಹಾಗು ಇಂಗ್ಲಿಷ್ ಭಾಷೆಗಳಲ್ಲಿ ಬರೆಯುವ ಕವಿ, ಕಾದಂಬರಿಕಾರ, ವಿಮರ್ಶಕ ತಾಚೋಮ್ ಪೋಯಿಲ್ ರಾಜೆವನ್ ರವರ “ಪ್ರಣಯ ಶತಕಂ” ಪುಸ್ತಕವನ್ನು ಕನ್ನಡಕ್ಕೆ ಹೆಚ್. ಎನ್ .ಆರತಿ ಅವರು ಅನುವಾದಿಸಿದ “ಪ್ರಣಯ ಶತಕ” ಎನ್ನುವ ನೂರು ಕವನಗಳು ಉಳ್ಳ ಪುಸ್ತಕ ಬಿಡುಗಡೆ ಮಾಡಿದರು. ತುಂಬಾ ಅಚ್ಚುಕಟ್ಟಾದ ಪುಸ್ತಕ. ನಮಗೆ ಸುಲಭವಾಗಿ ಶೇಕ್ಸ್ ಪಿಯರ್, ಜೆಫ್ರೀ ಆರ್ಚರ್, ಪಾಲ್ ಆಡಂ, ಹೆನ್ರಿ ಬೇಕರ್ ಇವರೆಲ್ಲರೂ ಸಿಗುತ್ತಾರೆ ಆದರೆ T . P ರಾಜೀವನ್ ರಂತಹ ಅಸಂಖ್ಯಾತ ಕವಿಗಳು ಹಾಗು ಅವರ ಅದ್ಭುತ ಕುಸುರಿಗಳು ಸಿಗದೇ ಹೋಗುತ್ತವೆ..ಅಕ್ಕ ಪಕ್ಕದ ಎಷ್ಟೋ ಕವಿಗಳು ನಮಗೆ ಗೊತ್ತೇ ಇರುವುದಿಲ್ಲ (ನಮ್ಮಲ್ಲೇ ಇರುವ ಎಷ್ಟೋ ಮಂದಿ ನಮಗೆ ಗೊತ್ತಿಲ್ಲ ಅನ್ನೋದು ಬೇರೆ ಪ್ರಶ್ನೆ)…ಇನ್ನು ಪುಸ್ತಕದ ವಿನ್ಯಾಸ ಬಹಳ ಅಪರೂಪದ್ದು ಅನಿಸುತ್ತದೆ, ಒಂದೇ ಪುಟದಲ್ಲಿ ಇಂಗ್ಲಿಶ್, ಕನ್ನಡ ಹಾಗು ಮಲಯಾಳಂ ಮೂರುಭಾಷೆಗಳಲ್ಲಿ ಮುದ್ರಣಗೊಂಡಿದೆ…ಅದರೊಂದಿಗೆ ಕಲಾವಿದ ರಾ.ಸೂರಿ ಅವರು ರಚಿಸಿರುವ ರೇಖಾಚಿತ್ರ ಪ್ರತಿ ಕವನವನ್ನು ಅರ್ಥಮಾಡಿಸುವಲ್ಲಿ ಅಥವಾ ಅದರ ವಿಸ್ತರಣೆ ಮಾಡುವಲ್ಲಿ ಚನ್ನಾಗಿ ಮೂಡಿ ಬಂದಿದೆ ಅನಿಸುತ್ತದೆ…ಇನ್ನು ಪುಸ್ತಕದ ವಿಮರ್ಶೆ ಎಂದಿನಂತೆ ತುಂಬಾ ಚನ್ನಾಗಿ ನಾದಾ (ನಾ.ದಾಮೋದರ ಶೆಟ್ಟಿ) ರವರು ಮಾಡಿದ್ದಾರೆ…ಒಬ್ಬ ಸಾಮಾನ್ಯ ಓದುಗನಾಗಿ ನನಗೆ ಬರಹಗಳು ಕಂಡಂತೆ ನಾ ಇಲ್ಲಿ ಬರೆದಿರುವೆ… ಭಾಷೆಗೆ,ಕವನಕ್ಕೆ ಇರುವ ತಾಂತ್ರಿಕ ವಿಮರ್ಶೆ ‘ನಾದಾ’ರು ಬರೆದಿರುವುದನ್ನೇ ನೀವು ಓದಬೇಕು…ನಾನು ಹೇಳಲಾರೆ… ಹಾಗೆಯೇ ಕಾರ್ಯಕ್ರಮದಂದು ಜಿ ಎನ್ ಮೋಹನ್, ಮಮತಾ ಸಾಗರ್ ಹಾಗು ನಿರ್ದೇಶಕ ಬಿ .ಸುರೇಶ ಕಾವ್ಯವಾಚನ ಮಾಡಿದರು…ನಾಗರಾಜ ಮೂರ್ತಿ ನಿರೂಪಣೆ ಮಾಡಿ ಕಾರ್ಯಕ್ರಮ ನಡೆಸಿಕೊಟ್ಟರು. ಇನ್ನು ಕವನಗಳೆಡೆಗೆ ಒಂದು ನೋಟ…ನೀವು ಖಂಡಿತ ಇಷ್ಟ ಪಡುತ್ತೀರಿ. **** ಅರಳುವ ಹೊತ್ತು ಎದೆಯಲ್ಲಿ ನೀನಿತ್ತ ಒಂದು ಮಲ್ಲಿಗೆ ಮೊಗ್ಗು ಮನೆ ತಲುಪುವಾಗ ಅರಳಿ ಆಗಿತ್ತು ಹೂವಿನ ತೋಟ.. **** ನೀನಿಲ್ಲದ ಈ ಶಹರದಾಗ ಹೋದ ಕಡೆಯಲೆಲ್ಲ ಅನುಭವಿಸುತ್ತೇನೆ ನಾನು ನಿನ್ನ ಸಾನಿಧ್ಯವನ್ನು. **** ಕಣ್ಣೇರು ನಗುವೋ ಇಂದು ನಮಗೆ ಏನು ಕೊಡುವ ಕೊಡುಗೆ?? ದಾರಿಬದಿಯಲ್ಲಿ ಕಾಡು ಹೂವುಗಳು ಪ್ರತಿ ದಿನ ಕೇಳುವುವು ನನಗೆ **** ನಿನಗೆ ಹೇಳಬೇಕೆಂದುಕೊಂಡಿರುವ ಮಾತುಗಳನ್ನು ಮಸೆ ಮಸೆದು ನಾನು ಭಾಷೆ ಮರೆತೇ.. **** ಹೀಗೆ ಸಾಗುತ್ತವೆ ಕವನಗಳ ಶತಕ ಎಷ್ಟು ಮುದ್ದಾಗಿ ಕವನಗಳು ಇಲ್ಲಿ ವ್ಯಕ್ತವಾಗಿದೆ ಅಂದರೆ ಇದೊಂಥರ “ಹಸುರು ಕಾವ್ಯ” ಎಂಬಂತೆ ಅನಿಸುತ್ತದೆ.ಇಲ್ಲಿ ಮೂಲ ಕವಿ ಮರಗಳನ್ನು ಪ್ರಣಯದಲ್ಲಿ ತಂದಿದ್ದಾರೆ,ಪಕ್ಷಿಗಳನ್ನು ತಂದಿದ್ದಾರೆ..ಅದರಮೂಲಕ ತಮ್ಮ ಆಶಯ ಪದಗಳಲ್ಲಿ..ಕವಿತೆಯಾಗಿ ಹರಿಸಿದ್ದಾರೆ …..ಪ್ರೀತಿಸುವ ಜೀವಕ್ಕೆ ಒಂದು ಹ್ಯಾಪಿ ರೀಡಿಂಗ್ … ಆರತಿಯವರಂತೂ ಕವಿಯ ಜೊತೆ ತಾನಾಗಿ ಅನುವಾದ ಮಾಡಿದ್ದಾರೆ..ಒಂಥರಾ ಅಪರೂಪದ ಜಾಣ್ಮೆ ಇದೆ ಇಲ್ಲಿ ಅನುವಾದಕಿಯದ್ದು,ಅದಕ್ಕಾಗಿ ಅವರೇ ಕಾರ್ಯಕ್ರಮದಂದು ಹೇಳಿದಂತೆ ರಿಸರ್ಚ್ ಮಾಡಿದ್ದಾರೆ..ಹಾಗೆಯೇ…ಕವಿಯು ಬರೆದ ಕಾವ್ಯದ wavelength ಗೆ ಹೊಂದಿಕೊಂಡು ಬರೆದಿದ್ದಾರೆ ಅನಿಸುತ್ತದೆ…ಅಥವಾ ತಮಗಾಗಿಯೇ..ತಮ್ಮ ಭಾವಕ್ಕಗಿಯೇ ಅವರು ಬರೆದಿರಬಹುದು…. ಆದರೆ ಒಬ್ಬ ಓದುಗನಾಗಿ ನಾನು ನನಗಾಗಿ ಓದಿಕೊಂಡು ಅನುಭವಿಸಿದೆ…ಪ್ರತಿ ಪದ್ಯವು ತಲ್ಲೀನ ಮಾಡಿಬಿಡುತ್ತದೆ… ಅಂದಹಾಗೆ ನಿಮ್ಮ ಲೈಬ್ರರಿಗೆ ಇಂದೇ ಈ ಪುಸ್ತಕ ಜೋಡಿಸಿಕೊಳ್ಳಿ….ಅಭ್ಯಂತರವಿಲ್ಲ….. ಬದುಕಿನ ಪ್ರಣಯಕ್ಕೆ ಒಂಚೂರು ಸ್ಫೂರ್ತಿ ಬಂದೀತು.]]>
Wow! Sunil Hosakote, nimma baraha aaptavu, pustaka mastakakke, hrudayada tuditha midithagalige baanadante naatuva haagide! Obba barahagaaranige intha maatugaligintha berenu beku? Dhanyavaadagalu G.N.Mohan, Sunil mattu Sreedevi shetty kudla avarige sundara chitragalige 🙂
ಕ್ಷಮೆ ಇರಲಿ .. ಚಿತ್ರಗಳನ್ನು ಸೆರೆಹಿಡಿದದ್ದು ನನ್ನ ಜೀವದ ಗೆಳತಿ ನನ್ನ ಅಕ್ಕ ನಾಗಶ್ರೀ. ಅಭಿನಂಧನೆಗಳು ನಾಗಶ್ರೀ ..
ಆರತಿಯವರಿಗೆ ಮನಃಪೂರ್ವಕ ಅಭಿನಂದನೆಗಳು. ಆರತಿಯವರು ಸಹೃದಯಿ ಮತ್ತು ಇರುವೆಡೆ ಪ್ರಫುಲ್ಲತೆ ತುಂಬುವ ಸ್ನೇಹಮಯೀ ವ್ಯಕ್ತಿತ್ವದವರು. ಅವರ ಈ ಅನುವಾದಿತ ಪ್ರಣಯ ಶತಕದ ಕುರಿತು ಬರೆದ ಈ ಲೇಖನವೂ ಸೊಗಸಾಗಿದೆ. ಕೋಟ್ ಮಾಡಿರುವ ಕಿರುಗವಿತೆಗಳು ಕನ್ನಡದವೇ ಅನಿಸುವಷ್ಟು ಭಾಷೆಯ ಜಾಯಮಾನಕ್ಕೆ ಹತ್ತಿರವಾಗಿವೆ . ಪುಸ್ತಕವನ್ನು ಓದಲೇಬೇಕೆಂಬ ಹಂಬಲ ಹುಟ್ಟಿಸುವಂತಿದೆ. ಅವಧಿಗೆ ಧನ್ಯವಾದಗಳು.