‘ಆಲಯದೊಳಗಾತ್ಮವೇ ಇಲ್ಲ…’ – ಅನುಪಮಾ ಪ್ರಸಾದ್ ಕವನ

ಆಲಯದೊಳಗಿನ ಅನಾತ್ಮ

ಅನುಪಮಾ ಪ್ರಸಾದ್

ಕಾಯುವ ಕಾಯಕ್ಕೆ ರಣ ಹೊಕ್ಕ

ಕಾಯಕ್ಕೆ ಗೋಡೆಗಳು

ಆತ್ಮಗಳಿಗಲ್ಲ

ಕಾಯದೊಳಗಣ ರೆಕ್ಕೆಗೆ

ರೆಕ್ಕೆಯೊಳಗಿನ ಶಕ್ತಿಗೆ

ತೆರೆದಿರುವ ಗವಾಕ್ಷಿಗಳು

ಗಾವುದ ದೂರದ ಹಾರಾಟ

ಬಾನೆತ್ತರದಲಿ ವಾಲಾಟ

ತೆರೆದೇ ಇರುವ ಬಯಲಿಗೆ ಹುಡುಕಾಟ

ಒಡ್ಡೇ ಇರದ ಹೊಳೆಗೆ ಮೊರೆದಾಟ

ಆದರೂ ಕಿತ್ತುಕೊಳ್ಳದ ಸೂತ್ರ

ಮತ್ತದೇ ಗೋಡೆಗಳು ಕೋಟೆ ಕೊತ್ತಲಗಳು

ಗವ್ವೆನ್ನುವ ಗವಿಗಳು ಮುಗ್ಗು ಹೊಡೆಯುವ ಮಹಲುಗಳು

ಬಿರುಕು ಬಿಟ್ಟರೂ ಕುಸಿಯದ ಜೈಲುಗಳು

ಪಾರಿವಾಳದ ಹೂಂಕಾರ

ಘನ ಘೋರ ಕರ್ಣ ಕಠೋರ

ಇಲ್ಲಿ ಬಯಲು ಆಲಯವಾಗುವುದೇ ಇಲ್ಲ

ಅದಕಾಗೇ ಆಲಯದೊಳಮೈ

ಉರುಳುರುಳುವ ಅಗ್ನಿ ಉಂಡೆ

ಸೆಳೆ ಸುಳಿಯ ಜಲ ಪ್ರವಾಹ

ಬಡಬಾಗ್ನಿಯ ಬಸಿರು

ಹೊರಮೈ

ನುಣು ನುಣುಪಿನ ಬಲೆ

ಉಬ್ಬು-ತಗ್ಗುಗಳ ಕಲೆ

ಪರಕಾಯಕೆ ಕರೆ

ಶಿಲಾಬಾಲಿಕೆ ಸೆರೆ

ಆಲಯದೊಳಗಾತ್ಮವೇ ಇಲ್ಲ!

 

 

‍ಲೇಖಕರು G

September 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

ನೀನೆಂದರೆ ಭಯ ಅಲ್ಲ…

ನೀನೆಂದರೆ ಭಯ ಅಲ್ಲ…

ರೇಷ್ಮಾ ಗುಳೇದಗುಡ್ಡಾಕರ್  ಪ್ರಖರ ಬೆಳಕು ಕಾಣಿಸದುನನ್ನ ರೂಪವ ಅಂತರಂಗದ ಪ್ರಲಾಪವ ಗಾಢ ಕತ್ತಲೆ ಕಾಣಿಸುವದು ನನ್ನೂಳಗಿನ ನನ್ನು ಅಲ್ಲಿನ...

ಮುಸ್ಸಂಜೆ

ಮುಸ್ಸಂಜೆ

ಜಿತೇಂದ್ರ ಬೇದೂರು ೧ ಮುಸ್ಸಂಜೆ ಯೌವ್ವನದ ಕ್ಷಣದಲ್ಲಿ ಎಷ್ಟೊಂದು ಉರಿದಿದ್ದಸೂರ್ಯ, ಈಗೇಕೋ ತಣ್ಣಗಾಗಿ ಹೋದ.ಯಾರು ಸರಿಸಿದರೋ ಏನೋಪಡುವಣ ಅಂಚ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This