ಆಳೆತ್ತರಕ್ಕೆ ನಿಂತಿದ್ದ ಅಪ್ಪನ ಕಣ್ಣಲ್ಲೂ ಅಂತದೇ ದುಃಖವಿತ್ತಾ?

ರವಿ ಅಜ್ಜೀಪುರ

ನದಿಪ್ರೀತಿ

shirts_luv_dad_close

ಅವನು ರಿಚ್ rich ಅಪ್ಪ.ಮೂರು ತಲೆಮಾರು ತಿಂದರೂ ಮುಗಿಯದ ಆಸ್ತಿ ಅವನ ಬಳಿಯಿತ್ತು. ಕಾರು, ಬಂಗಲೇ, ಎಸ್ಟೇಟ್. ಹೇಳಬೇಕೆಂದ್ರೆ ಯಾವುದೇ ಹೊಸ ಕಾರು ಬಂದರೂ ಅದರ ಮಾರನೇ ದಿನವೇ ಇವರ ಮನೆಯ ಮುಂದೆ ನಿಂತಿರುತ್ತಿತ್ತು, ಅಷ್ಟರಮಟ್ಟಿಗೆ ಈ ಅಪ್ಪ ಕರೋಡ್ಪತಿ.ಇಂಥ ಕರೋಡ್ಪತಿಗೆ ತೇಜ ಅನ್ನೋ ಒಬ್ಬನೇ ಸುಪುತ್ರ. ಇಂಜಿನಿಯರಿಂಗ್ ಓದುತ್ತಿದ್ದ. ಈ ಬಾರಿ ಕೊನೆ ಸೆಮಿಸ್ಟರ್ನಲ್ಲಿ ಹೈಯೆಸ್ಟ್ ಮಾಕ್ಸರ್್ ತಗೊಂಡೇ ತಗೋತೀನಿ. ಕಸಮ್ ಡ್ಯಾಡ್ . ಆದ್ರೆ ನನ್ನ ಬತರ್್ಡೇಗೆ ನನಗೊಂದು ಸ್ಕೋಡ ಕಾರು ಬೇಕೇ ಬೇಕು ಅಂತ ಅಪ್ಪನಿಗೆ ದುಂಬಾಲು ಬಿದ್ದಿದ್ದ. ಒಬ್ಬನೇ ಮಗ, ಇರುವ ಆಸ್ತಿಯನ್ನೆಲ್ಲ ಯಾರಿಗೇ ಕೊಡೋದು? ಮಜ್ಜವಾಗಿರಲಿ ನನ್ನ ಮಗ ಅನ್ನೋದು ಅಪ್ಪನ ಆಸೆ. ಹಾಗಿದ್ದೂ ತುಂಬಾ ಸಲುಗೆ ಬಿಟ್ಟರೆ ಎಲ್ಲಿ ಮಗ ದಾರಿ ತಪ್ಪಿ ಹೋದಾನೋ ಅನ್ನುವ ಆತಂಕವೂ ಒಳಗೊಳಗೇ ಕಾಡುತ್ತಿತ್ತು. ಮಗ ಸ್ಕೋಡ ಕೇಳಿದನಲ್ಲ ಆವಾಗ,

ನೋಡೋಣ ಮೈ ಸನ್ ಅಂತ ಬೇಕಂತಲೇ ಮಾತು ತೇಲಿಸಿಬಿಟ್ಟಿದ್ದ. ಅಪ್ಪ ನನಗೆ ಸ್ಕೋಡಾ ಕಾರು ಕೊಡಿಸದೇ ಇರೋದಿಲ್ಲ. ಯಾಕೆಂದ್ರೆ ನಾನಂದ್ರೆ ಅಪ್ಪನಿಗೆ ಅಷ್ಟಿಷ್ಟ. ಇಷ್ಟಕ್ಕೂ ಅವರು ನಾನು ಏನು ಕೇಳಿದೆನೋ ಅವನ್ನೆಲ್ಲ ಕೊಡಿಸಿಯೇ ಇದಾರೆ! ಇದನ್ನೂ ಹಾಗೇ, ಖಂಡಿತಾ ಕೊಡಸ್ತಾರೆ! ನನ್ನ ಬತರ್್ಡೇ ಪಾಟರ್ಿ ಮುಗಿಸಿಕೊಂಡು ಮೈ ಸ್ವೀಟ್ ಹಾಟರ್್ ಋತುವನ್ನು ಕರೆದುಕೊಂಡು ಜುಮ್ಮಂತ ಒಂದು ರೌಂಡ್ ಹೋಗಿ ಬಂದುಬಿಡಬೇಕು. ಸಾಧ್ಯವಾದರೇ ಅಪ್ಪನಿಗೆ ಸುಳ್ಳು ಹೇಳಿ ಅವಳನ್ನು ಬೇಕಲ್ ಫೋಟರ್್ಗೆ ಕರ್ಕೊಂಡು ಹೋಗಬೇಕು. ಅಲ್ಲಿ ಕೋಟೆ ಮೇಲೆ ನಿತ್ಕೊಂಡು ಅವಳಿಗೊಂದು ಕೆಂಪು ಗುಲಾಬಿ ಕೊಡ್ತಾ ಕೊಡ್ತಾ ಛಕ್ಕಂತ ಒಂದು ಮುತ್ತು ಕೊಟ್ಟುಬಿಡಬೇಕು. ಹೇಗೆ ರಿಯಾಕ್ಟ್ ಮಾಡ್ತಾಳೋ ಏನೋ? ಬಟ್ ನಾನು ಮಾಡೇ ಮಾಡ್ತೀನಿ. ಅದಕ್ಕಿಂತ ಥ್ರಿಲ್ಲಿಂಗ್ ಆದ ವಿಷ್ಯ ಇನ್ನೊಂದುಂಟೆ. ದೇವರೇ ಅಪ್ಪ ಕಾರು ಕೊಡಿಸಲಿ…. ಋತುಗೆ ಪಪ್ಪಿ ಕೊಡುವ ಭಾಗ್ಯ ನನ್ನದಾಗಲೀ…ಹೀಗೇನೋ ಹಂಬಲಿಸಿದ. ಆ ದಿನ, ಬತರ್್ಡೇ ದಿನವೂ ಬಂತು. ಹೊಸ ಬಟ್ಟೆ, ಹೊಸ ಕಾರು, ಋತುಗೆ ಕೊಡುವ ಮುತ್ತು ನೆನಸಿಕೊಂಡೇ ತೇಜು ರೋಮಾಂಚಿತನಾಗಿದ್ದ.

ಇಂಜಿನಿಯರಿಂಗ್ ಅನ್ನು ಹೈಯಸ್ಟ್ ಮಾಕ್ಸರ್್ ತೆಗೆದು ಪಾಸು ಮಾಡಿದ್ದ. ಅಪ್ಪ ಖುಷಿ ಖುಷಿಯಾಗಿದ್ದರು. ಕಾರು ಗ್ಯಾರಂಟಿ ಬಿಡು ಅಂದುಕೊಂಡ. ಬೆಳಿಗ್ಗೆ ಎದ್ದವನಿಗೆ ಅಪ್ಪನದೇ ಮೊದಲ ವಿಷ್. ಹ್ಯಾಪಿ ಬತರ್್ ಡೇ ಟು ಯು ಮೈ ಸನ್. ಜೊತೆಗೆ ಕೈಯಲ್ಲೊಂದು ಕೆಂಪು ಕೆಂಪಾದ ಕಾಗದದಿಂದ ವ್ರಾಪ್ ಮಾಡಿದ ಗಿಫ್ಟ್. ಎಂದಿನಂತೆ ಒಂದು ಸಿಹಿ ಮುತ್ತು. ತೇಜುನ ತಲೆಯ ತುಂಬಾ ಸ್ಕೋಡಾ ಕಾರೇ! ಖುಷಿ ಖುಷಿಯಿಂದ ಗಿಫ್ಟ್ಪ್ಯಾಕ್ ಓಪನ್ ಮಾಡಿದರೆ ಒಳಗೇನಿದೆ? ಫಳ ಫಳ ಹೊಳೆಯುವ ಭಗವದ್ಗೀತೆ ಪುಸ್ತಕ. ತೇಜುಗೆ ಶಾಕ್. ವಾಟ್ ಈಸ್ ದಿಸ್ ಡ್ಯಾಡ್. ನಿಮ್ಮಿಂದ ನಾನು ಈ ಭಗವದ್ಗೀತೆ ಎಕ್ಸ್ಪೆಕ್ಟ್ ಮಾಡಿರಲಿಲ್ಲ. ಐ ಹೇಟ್ ಯು ಡ್ಯಾಡಿ. ನಾನೀಗಲೇ ಮನೆ ಬಿಟ್ಟು ಹೋಗ್ತಾ ಇದೀನಿ ಅಂತ ಅಪ್ಪನ ಒಂದು ಮಾತಿಗೂ ಕಾಯದೇ ಕಣ್ಣೀರಾಕಿಕೊಂಡು ಹೊರಟುಬಿಟ್ಟಿದ್ದ. ಹೋದವನು ಕೆಲವೇ ವರ್ಷಗಳಲ್ಲಿ ಮುಂಬೈನ ದೊಡ್ಡ ಬಿಜಿನೆಸ್ ಮ್ಯಾನ್ ಎನಿಸಿಕೊಂಡ. ತೇಜು ಈಗ ಬಿಜಿ ಬಿಜಿ ಬಿಜಿ. ಹೀಗಿದ್ದವನಿಗ,ೆ ಎಷ್ಟೋ ವರ್ಷಗಳ ನಂತರ ಅಪ್ಪನನ್ನ ನೋಡಬೇಕು ಅಂತ ಅನಿಸಿದೆ. ಹೆಂಡತಿ, ಮಕ್ಕಳು, ಕೆಲಸ, ಆಸ್ತಿ ಮಾಡುವುದರಲ್ಲೇ ವಯಸ್ಸಾದ ಅಪ್ಪನನ್ನು ಮರೆತುಬಿಟ್ಟೆನಲ್ಲ ಅಂತ ಕಾಡುವುದಕ್ಕೆ ಶುರುವಾಗಿದೆ.

ತಕ್ಷಣ ಹೊರಡಬೇಕು ಅಂತ ಅಂದುಕೊಂಡವನ ಮೊಬೈಲ್ಗೊಂದು ಮೆಸೇಜು. ನಿನ್ನ ಅಪ್ಪ ತೀರಿಕೊಂಡು ತುಂಬಾ ದಿನವಾಯಿತು. ನೀನು ಬಂದು ಇಲ್ಲಿನ ಆಸ್ತಿಪಾಸ್ತಿಗೊಂದು ವ್ಯವಸ್ಥೆ ಮಾಡು ಅಂತ. ಅರ್ರೆ ಅಪ್ಪ ತೀರಿಕೊಂಡರೇ? ಛೇ ನನಗೆ ಗೊತ್ತೇ ಆಗಲಿಲ್ಲವಲ್ಲ. ಅಪ್ಪ ನನ್ನನ್ನು ಎಷ್ಟು ಮಿಸ್ ಮಾಡಿಕೊಂಡರೋ ಏನೋ! ಅವರಿಗೆ ನನ್ನ ಮೇಲೆ ಅತೀವ ಪ್ರೀತಿ ಇತ್ತು. ಅಮ್ಮ ಸತ್ತ ಮೇಲೆ ಮಲತಾಯಿ ಬಂದ್ರೆ ನನ್ನ ಮಗನನ್ನು ಹೇಗೆ ನೋಡಿಕೊಳ್ಳುತ್ತಾಳೋ ಅನ್ನುವ ಆತಂಕದಿಂದ ಎರಡನೇ ಮದುವೆಯನ್ನೂ ಆಗದೇ ಒಬ್ಬಂಟಿಯಾಗಿ ಇಡೀ ಜೀವನ ಕಳೆದುಬಿಟ್ಟರಲ್ಲ! ಅಪ್ಪನನ್ನು ನಾನು ಕೊನೆ ಗಳಿಗೆಯಲ್ಲಿಯಾದರೂ ಸರಿಯಾಗಿ ನೋಡಿಕೊಳ್ಳಬೇಕಿತ್ತು. ಛೇ ನಾನು ತಪ್ಪು ಮಾಡಿಬಿಟ್ಟೆ! ಕಣ್ಣು ಒದ್ದೆ ಒದ್ದೆ. ಮನಸ್ಸಿನ ತುಂಬಾ ರೋದನ. ಅಪ್ಪನಿಗಾಗಿ ಹಂಬಲಿಸಿದ. ತಕ್ಷಣ ಊರಿಗೆ ಹೊರಟ. ಅಲ್ಲಿ ಮನೆಯ ಹೊಸ್ತಿಲು ತುಳಿದರೇ ಅಪ್ಪನದೇ ನೆನಪು. ಅಪ್ಪನ ತೊಡೆಯ ಮೇಲೆ ಕುಳಿತು ಕೆನ್ನೆ ಗಿಂಡುತಿದ್ದದ್ದು, ಹೆಗಲ ಮೇಲೆ ಕೂರಿಸಿಕೊಂಡು ನಿಂತಿದ್ದು, ಬೆನ್ನ ಮೇಲೆ ಉಪ್ಪು ಮೂಟೆ ಆಡಿಸಿದ್ದು, ಬೆಲೂನ್ ಕಟ್ಟಿ ಆಕಾಶಕ್ಕೆ ಆರಿಸಿದ್ದು, ಕೊನೆಯ ಬತರ್್ಡೇವರೆಗಿನ ಒಟ್ಟು ಇಪ್ಪತ್ತೈದು ಬತರ್್ಡೇ ಫೋಟೋಗಳು. ಅದರಲ್ಲಿ ಮಿಸ್ ಮಾಡದೇ ಅಪ್ಪ ಕೆನ್ನೆಗಿಡುತ್ತಿದ್ದ ಸಿಹಿಸಿಹಿ ಮುತ್ತು….ಯಾಕೋ ದುಃಖ ತಡೆಯಲಾಗಲಿಲ್ಲ. ಅಲ್ಲೇ ಹೊಸ್ತಿಲ ಬಳಿ ಕುಳಿತು ಬಿಕ್ಕತೊಡಗಿದ. ಆದರೆ ಎಲ್ಲಿ ಶಮನವಾದೀತು?

ಯಾರೋ ಬಂದು, ನಿಮ್ಮಪ್ಪ ಒಂದಿಷ್ಟು ಇಂಪಾಟರ್ೆಂಟ್ ಅನ್ನುವ ವಸ್ತುಗಳನ್ನೆಲ್ಲ ಒಂದು ರೂಮಿನಲ್ಲಿಟ್ಟುಹೋಗಿದ್ದಾರೆ. ನೋಡಿ ಅಂದ್ರು. ಮೆಲ್ಲಗೆ ರೂಮಿನ ಬಾಗಿಲು ತೆಗೆದು ಒಳ ಅಡಿ ಇಟ್ಟರೆ ಅಷ್ಟೆಲ್ಲ ಇಂಪಾಟರ್ೆಂಟ್ ವಸ್ತುಗಳ ನಡುವೆ ಅದೇ ಕೆಂಪು ಕೆಂಪಾದ ವ್ರಾಪರ್ನ ಗಿಫ್ಟ್ಪ್ಯಾಕ್. ಮೆಲ್ಲಗೆ ಅದರ ಮೈ ದಡವಿ ಒಳಗಿನ ಭಗವದ್ಗೀತೆ ತೆಗೆದರೆ ಠಣ್ ಅಂತ ಕೆಳಗೆ ಏನೋ ಬಿದ್ದಂಗಾಯಿತು. ಏನು ಅಂತ ನೋಡಿದರೆ ಸ್ಕೋಡ ಕಾರಿನ ಕೀ. ಅದರ ಟ್ಯಾಗ್ನಲ್ಲಿ ನಮೂದಾದ ತನ್ನ ಇಪ್ಪತ್ತೈದನೆಯ ಬತರ್್ಡೇ ಡೇಟ್ ಮತ್ತು ವಿಷಸ್. ಅಂದ್ರೆ ಅಪ್ಪ ನನಗೆ ಕೊಡಬೇಕೆಂದಿದ್ದ ಕಾರ್ ಕೀಯನ್ನ ಈ ಪುಸ್ತಕದೊಳಗಿಟ್ಟು ಕೊಟ್ಟರಾ? ದೇವರೆ ನನಗೇನಾಗಿತ್ತು ಅವತ್ತು? ಕ್ಷಣ ಪುಸ್ತಕ ತೆಗೆದು ನೋಡಿದ್ದರೂ ನನ್ನ ಅಪ್ಪ ನನ್ನ ಬಳಿಯೇ ಇರುತ್ತಿದ್ರಲ್ಲ! ಆ ಒಂದು ತಾಳ್ಮೆಯನ್ನೂ ಯಾಕೆ ಕಿತ್ತುಕೊಂಡಿಬಿಟ್ಟೆ ದೇವರೇ? ಕಣ್ಣು ತಿರ್ಗಾ ಮಂಜಾದವು. ನಿಲ್ಲಲಾಗದೇ ಹೊರಕ್ಕೆ ಬಂದು ಕುಳಿತವನ ಎದೆಯ ತುಂಬಾ ದುಃಖದ ಹೊಳೆ. ಎದುರಿನ ಫೋಟೊದಲ್ಲಿ ಆಳೆತ್ತರಕ್ಕೆ ನಿಂತಿದ್ದ ಅಪ್ಪನ ಕಣ್ಣಲ್ಲೂ ಅಂತದೇ ದುಃಖವಿತ್ತಾ? ಗೊತ್ತಿಲ್ಲ!


‍ಲೇಖಕರು avadhi

September 12, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: