ಆ ಕಡಲಿನಲ್ಲೇನಿದೆ..

ekha-gowda

ರೇಖಾ ಗೌಡ 

ಮನವೆಂಬ ಮಾಯೆಯ
ಸರಿಸಿ ನೀ ನೋಡು
she seaತರ್ಕ ಕುತರ್ಕಗಳ ತಳ್ಳಿ
ದಿಗಿಲು ದ್ವಂದ್ವಗಳ ದಾಟಿ
ಭೂತಭವಿಷ್ಯಗಳ ಬಿಟ್ಟು
ಮರೆವು ನೆನಪುಗಳ ಮೀರಿ…

ಚಿತ್ತಸಾಗರದಿ ಏಳುವ
ನಿರಂತರ ನಿರ್ಲಜ್ಜ
ಯೋಚನೆ ಯಾಚನೆಗಳ
ಬಾಯ್ಕಟ್ಟಿ ನೀ ನೋಡು…

ಆ ಸಾಗರವು ನಾಗರವು
ಒಳಗಿಳಿದರೆ
ಸೆಳೆದೊಯ್ಯುವುದು ನಿನ್ನನೇ
ಹಿಂದಿರುಗುವ ಖಾತರಿಯಿಲ್ಲ
ದಡದಲ್ಲೇ ನಿಂತು ನೀ ನೋಡು
ಈ ಅಲೆಗಳಾಟ…

ಆಳವ ತಿಳಿ, ನೋಡಲುಬೇಡ
ಅಗಾಧತೆಯ ಅರಿ, ಅಚ್ಚರಿಪಡಬೇಡ
ಕಡಲ ಸೇರದಿರು
ಕಡಲಿಂದ ಬೇರೆಯಿರು
ನಾನೇ ಕಡಲೆನ್ನದಿರು
ಕಡಲಿಂದ ಬೇರ್ಪಡು…

ಹೃದಯಮಂದಿರದಿ ಕೂತು
ಸವಿಭಾವಗಳ ಕಡೆದು
ಅದರೊಡಲ ಅಮೃತವ ಸವಿದು,
ಉಳಿದವರಿಗೂ ರುಚಿಹತ್ತಿಸು…

ಆ ಕಡಲಿನಲ್ಲೇನಿದೆ
ಇರುವುದೆಲ್ಲಾ ಇಲ್ಲೇ ಇಲ್ಲೇ
ಎದೆಯ ಈ ಹಾದಿಯಲ್ಲೇ…

‍ಲೇಖಕರು Admin

November 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರ

ನಿರುತ್ತರ

ಪ್ರಕಾಶ್ ಬಿ ಬೊಕ್ಕುತಲೆ, ಹಸಿದ ದೇಹ, ಒಣಗಿದ ಗಂಟಲು, ಗಂಟು ಗಂಟಾದ ಕೂದಲು ತ್ರಾಣವಿಲ್ಲದ ಶರೀರ, ಮಳೆ ನಿಂತ ಕಾದ ನೆಲ. ತೆರೆದ ಬಾಯೊಳಗೆ...

ನನ್ನ ಬುದ್ಧ

ನನ್ನ ಬುದ್ಧ

ನಂದಿನಿ ಹೆದ್ದುರ್ಗ ಹೊಸಪ್ರೇಮಿಗಳ ನಡುರಾತ್ರಿಯ ಮೊರೆವಮಾತುಗಳ ನಡುವಿಂದ ಕದ್ದು ಓಡಿಬರುತ್ತವೆ ಒಂದಷ್ಟು ಮುದ್ದುಮುದ್ದು ಪದಗಳು.ಅದು ಅವಳು ಪದ್ಯ...

ಜೀವನದ ಹೊಟ್ಟೆ ತುಂಬಿ

ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  ಎಣ್ಣೆ ಹೆಚ್ಚೋ ಕಡಿಮೆಯೋ ರುಚಿ ಪಾಪಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This