ಆ ಪುಟಗಳಲ್ಲಿತ್ತು, ಲವಲವಿಕೆಯೆಂಬ ಹಕ್ಕಿಗಳ ಕಲರವ

ಥೆಗಾರ ಜಯಂತ್ ಕಾಯ್ಕಿಣಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಾಗ ಅವರಿಗೂ ಗೊತ್ತಿಲ್ಲದ ಹಾಗೆ ಅವರೊಳಗೊಂದು ಸುಂದರ ಕನಸು ಇತ್ತು. ಅದಕ್ಕೆ ಅಷ್ಟೇ ಸೊಗಸಾದ ರೂಪವೂ ಸಿಕ್ಕಿದ್ದು ಅವರು “ಭಾವನಾ” ಮಾಸಿಕದ ಸಂಪಾದಕರಾದಾಗ. ಪತ್ರಿಕೋದ್ಯಮಕ್ಕೆ, ಅದರಲ್ಲೂ ಸಾಹಿತ್ಯಾಸಕ್ತರಿಗೆ ಹೊಸ ಗರಿಗಳ ಹಕ್ಕಿ “ಭಾವನಾ” ರೂಪದಲ್ಲಿ ಸಿಕ್ಕಿತ್ತು.

ನಿಜಕ್ಕೂ ಭಾವನಾ ಅಕ್ಷರದ ಜಗುಲಿಯಲ್ಲಿ ಹೊಸ ಪುಳಕವನ್ನೇ ಸೃಷ್ಟಿಸಿತು. ಪತ್ರಿಕೆಯೊಂದನ್ನು ಇಷ್ಟೊಂದು ಮಧುರವಾಗಿರುವಂತೆಯೂ ತರಲು ಸಾಧ್ಯವೇ ಎನ್ನಿಸುವ ಹಾಗೆ ಮಾಡಿತು. ಮನದ ಮಿಡಿತಗಳ ಕಾಗದದ ದೋಣಿಯಾಗಿಬಿಟ್ಟಿತು. ತಾನು ಹಚ್ಚಿದ ಬೆರಗಿನಿಂದಾಗೇ ಅದು ಬಹುಬೇಗ ಎಲ್ಲರ ಮನೆಮನದ ಮಾತಾಯಿತು.

ದುರದೃಷ್ಟ: ಭಾವನಾ ಅಷ್ಟೇ ಬೇಗ ನಿಂತೂಬಿಟ್ಟಿತು.

ಆಮೇಲೆ ಭಾವನಾ ಕಟ್ಟಿದ ಕನಸನ್ನೇ ಹೊತ್ತುಬಂದದ್ದು “ಹಂಗಾಮ” ಎಂಬ ಪತ್ರಿಕೆ. ಹೊಸ ಹುಡುಗರ ತಂಡವೊಂದು ಭಾವ ತೀರದ ಬೆರಗು ಎಂಬ ಘೋಷವಾಕ್ಯದೊಂದಿಗೆ ಈ ಪತ್ರಿಕೆಯನ್ನು ರೂಪಿಸಿತ್ತು. ಭಾವನಾ ತಿಂಗಳಿಗೊಮ್ಮೆ ಬರುತ್ತಿದ್ದರೆ, ಹಂಗಾಮ ಹದಿನೈದು ದಿನಗಳಿಗೊಮ್ಮೆ ಪ್ರತ್ಯಕ್ಷವಾಗಿ ಅಕ್ಷರದ ರಸಗವಳ ಬಡಿಸುವ ಉಮೇದು ಹೊಂದಿತ್ತು. ಆದಷ್ಟೂ ಹೊಸಬರ ಮನದಂಗಳದ ಮಾತಿಗೆ ತೆರೆದುಕೊಳ್ಳಬೇಕು ಎಂಬ ಹಂಗಾಮದ ಹಂಬಲಕ್ಕೆ ಪೂರಕವಾಗಿ ಅದುವರೆಗೂ ಎಲ್ಲೂ ಕಾಣಿಸಿಕೊಳ್ಳದ ಹೆಸರುಗಳು ಅದರ ಪುಟಗಳಲ್ಲಿ ಕಾಣಿಸಿಕೊಂಡವು. ಹಂಗಾಮ ತನ್ನ ಪುಟಗಳಲ್ಲಿ ತುಂಬಿಕೊಂಡಿದ್ದ ವಿಶಿಷ್ಟ ಲವಲವಿಕೆಯಿಂದಾಗಿಯೇ ಓದುಗರ ವಲಯದಲ್ಲಿ ಬಹುಬೇಗ ಪ್ರೀತಿ ಗಳಿಸಿತು.

ನೋವಿನ ಸಂಗತಿಯೆಂದರೆ, ಹಂಗಾಮ ಕೂಡ ನಿಂತುಬಿಟ್ಟಿತು.

oh.jpgಭಾವನಾ ಮತ್ತು ಹಂಗಾಮ ಮ್ಯಾಗಝಿನ್ನುಗಳ ಲೋಕದಲ್ಲಿ ಮೂಡಿಸಿದ ಗುರುತುಗಳು ಎಷ್ಟು ಆಪ್ತವಾಗಿದ್ದವು ಎಂಬುದಕ್ಕೆ, ಅವನ್ನು ಓದಿದವರ ಮನಸ್ಸಿನಲ್ಲಿ ಇನ್ನೂ ಅವು ನೆನಪಾಗಿರುವುದೇ ಸಾಕ್ಷಿ. ಬರಹಗಳ ಆಯ್ಕೆಯಿಂದ ಹಿಡಿದು ಅವುಗಳನ್ನು ಚಿತ್ರ ಮತ್ತು ವಿನ್ಯಾಸದ ಹದಬೆರೆತ ಶೈಲಿಯಲ್ಲಿ ಕಟ್ಟಿಕೊಡುತ್ತಿದ್ದ ಆ ಎರಡೂ ಪತ್ರಿಕೆಗಳ ಶ್ರದ್ಧೆ ದೊಡ್ಡದಾಗಿತ್ತು. ಸಾಹಿತ್ಯಿಕ ಪತ್ರಿಕೆಗಳೆಂದರೆ ಕಬ್ಬಿಣದ ಕಡಲೆಗಳೇ ಆಗಬೇಕಿಲ್ಲ ಎಂಬ ದಿಟ್ಟ ನಿಲುವನ್ನು ಮೌನವಾಗೇ ಅವು ಪ್ರತಿಪಾದಿಸಿದಂತಿತ್ತು. ಆ ಎರಡೂ ಸಾಹಿತ್ಯಿಕ ಪತ್ರಿಕೆಗಳು ಇಂದು ಇಲ್ಲ ಎಂಬ ನೋವಿದ್ದರೂ ಅವು ಇರಬೇಕಿತ್ತು ಎಂಬ ಭಾವ ಮೂಡುತ್ತಲೇ ಇದೆ. ಅದು ಭಾವನಾ ಮತ್ತು ಹಂಗಾಮದ ಕನಸುಗಾರಿಕೆಗೆ, ಕಸಬುದಾರಿಕೆಗೆ ಸಲ್ಲುತ್ತಿರುವ ಪ್ರೀತಿ.

—————————————-

ಅವಧಿಯ ಓದುಗರಿಗೆ ಇಷ್ಟವಾಗಬಹುದಾದ ಒಂದು ವಿಚಾರ. ಹಂಗಾಮದ, ಈಗ ಹರಿದು ಹಂಚಿ ಹೋಗಿರುವ ಬಳಗವನ್ನು ಸಂಪರ್ಕಿಸುವುದು ಕಡೆಗೂ ಸಾಧ್ಯವಾಗಿದೆ. ಈ ಅಂಗಳಕ್ಕಾಗಿ ಹಂಗಾಮದ ಬರಹಗಳನ್ನು ಬಳಸಿಕೊಳ್ಳಲು ಒಪ್ಪಿಗೆ ಪಡೆದಿದ್ದೇವೆ. ಹಂಗಾಮದ ಸಂಚಿಕೆಗಳಲ್ಲಿನ ಆಯ್ದ ಬರಹಗಳು ಆಗೀಗ ಅವಧಿಯ ಅಂಗಳದಲ್ಲಿ ಇನ್ನು ಮುಂದೆ ಹಲೋ ಹೇಳಲಿವೆ. ಮೊದಲ ಕಂತಾಗಿ “ಕೈ ಹಿಡಿದು ನಡೆಸಿದವ ನೀನಲ್ಲವೇ…” ಎಂಬ ಪುಟ್ಟ ಬರಹವನ್ನು ಕೊಡುತ್ತಿದ್ದೇವೆ. “ಚಂದಮಾಮ” ಸಚಿತ್ರ ಪತ್ರಿಕೆ ಹೇಗೆ ಮಕ್ಕಳನ್ನೂ ದೊಡ್ಡವರನ್ನೂ ಓದಿನ ಮಾಯದಂಗಳಕ್ಕೆ ಕರೆಯುತ್ತಿತ್ತು ಎಂಬುದನ್ನು ನೆನಪಿಸಿಕೊಳ್ಳುವ ಬರಹ ಅದು.

‍ಲೇಖಕರು avadhi

June 24, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಪಾಟುಗಳಲ್ಲಿ ಸಿಗುವ 'ಮೇಷ್ಟ್ರು'..

ಪಾಳ್ಯದ ಲಂಕೇಶಪ್ಪ, ‘ಮತ್ತೊಂದು ಮೌನ ಕಣಿವೆ’ ವಿದ್ಯಾರ್ಥಿ ಭವನದ ಮಸಾಲೆ ದೋಸೆ                                                      ...

9 ಪ್ರತಿಕ್ರಿಯೆಗಳು

 1. shree d n

  Dear Avadhi,

  The effort of combining Hungama writers and publishing those articles electronically is really a noteworthy achievement, keep it up, keep going.

  ಪ್ರತಿಕ್ರಿಯೆ
 2. rajeev

  Neat one. Can I know who is behind this blog pls? In the last 2 days, I have found 2 good kannada blogs. Churumuri and now avadhi

  ಪ್ರತಿಕ್ರಿಯೆ
 3. s k shama sundar

  hi,
  Hangaama mattu Chandamama belated obituary oDe dukhavaitu
  ennale? ivattu Odee santOshavaitu ennale? an ode to the dead
  ennale?
  Idenu nostologianO? nenapO? smaraneyO…itihasavO?
  eeevattina patrika sahasakke lightaagi warnigO?
  innenooo allade ; “Kalaberake alla, beresuva kale” ennalO?
  hegoo iralee..
  namaste.
  -shyam

  ಪ್ರತಿಕ್ರಿಯೆ
 4. venkatramana gowda

  hangaamada bagge baredaddu nodi
  khushiyaayitu. internet putagala
  moolaka kooda ishtu chennaagi
  kannada baravanige odisuttiddeeri.
  jogimane blog tumba ishtavaagittu.
  eega aa saalige avadhi kooda
  seride.
  avadhi beleyali.
  -venkatramana gowda

  ಪ್ರತಿಕ್ರಿಯೆ
 5. kodase

  It is very good updated narration. I am unable to write my reaction in Kannada. Can you help me finding a way out to write my responses in Kannada. The articles are timely and appropriate. Thanks for the good coverage of sensible items.

  ಪ್ರತಿಕ್ರಿಯೆ
 6. saranjini

  I have got really hooked to avadhi … thanx to daily up grades… that tooo in a sweet and short way…
  saranjini

  ಪ್ರತಿಕ್ರಿಯೆ
 7. krishna prasad g

  Hey Avadi friends,
  I can’t belive,such a beutiful blog in Kannada! Best wishes.This kind of effort was required in kannada to give new life to culture and kannada literature.Very creative idea! Keep it up.

  regards
  krishna prasad
  Sahaja samrudha
  Bangalore

  ಪ್ರತಿಕ್ರಿಯೆ
 8. shankar

  ಭಾವನ ಸ್ಥಬ್ದಗೊಂಡಾಗ ಸದ್ದಿಲ್ಲದೇ ದುಃಖಿಸದವರಲ್ಲಿ ನಾನೂ ಒಬ್ಬ!! ಸಂಪಾದಕೀಯದಿಂದ ಕೊನೆಯ ರಕ್ಷಾಪುಟದವರೆಗೂ ನನ್ನನ್ನು ಇಡಿಯಾಗಿ ಆವರಿಸಿಕೊಳ್ಳುತ್ತಿದ್ದ ನನ್ನವಳು ನನ್ನಿಂದ ದೂರವಾದಾಗ ಬಹಳ ದಿನದವರೆಗೂ ವಿರಹವನ್ನು ಅನುಭವಿಸಿದೆ! ಅವಳೊಂದಿಗೆ ಕಳೆದ ಮಧುರ ಕ್ಷಣಗಳೊ ಎಂಬಂತೆ, ಕೆಲವೊಂದನ್ನು ಇನ್ನೂ ನನ್ನ ಬಳಿಯೇ ಇರಿಸಿಕೊಂಡಿದ್ದೇನೆ, ಪುಟಗಳ ಮಾಸಲಿಗೆ ತಿರುಗಿದ್ದರೂ ಇಂದೂ ಸಹ ಅದೇ ಆಪ್ತತೆ ಒದಗಿಸುತ್ತದೆ!!
  ಸರಿಸುಮಾರು ಭಾವನವನ್ನು ಹೋಲುವ ಹಂಗಾಮದ ಬಗ್ಗೆ ನನಗೆ ಅಷ್ಟಾಗಿ ತಿಳಿದಿರಲಿಲ್ಲ.. ಮಾಹಿತಿ ನೀಡಿ ಅದರ ಒಡಲಿನ ಕೆಲವನ್ನು ಆಸ್ವಾದಿಸಲು ಎಡೆ ಮಾಡಿ ಕೊಡುತ್ತಿರುವ ತಮಗೆ ನಾನು ಅನವರತ ಋಣಿ!
  ಅಂದ ಹಾಗೆ, ಜೋಗಿ ಹೇಳಿದ್ದು ಸತ್ಯ,ಹೊಟ್ಟೆ ಕಿಚ್ಚಿಗೂ ಹೊಟ್ಟೆ ಕಿಚ್ಚಾಗುವಂತಹ ಬರಕಗಳು!!

  ಪ್ರತಿಕ್ರಿಯೆ
 9. raviajjipura

  ನಿಜ್ಜ.
  ಭಾವನಾ ನಿಂತ ನಂತರ ನಮ್ಮನ್ನೆಲ್ಲ ಮತ್ತೆ ಆವರಿಸಿಕೊಂಡಿದ್ದು ಹಂಗಾಮ. ಭಾವನಾ
  ತನ್ನ ಹೊಸತನದಿಂದಲೇ ಎಲ್ಲರನ್ನೂ ಆಕರ್ಷಿಸಿತ್ತು. ಏಕತಾನತೆಯಿಂದ ಕೂಡಿದ್ದ
  ಪತ್ರಿಕೆಗಳ ನಡುವೆ ಭಾವನಾ ಡಿಫರೆಂಟ್ ಅನಿಸಿದ್ದು ನಿಜ್ಜ. ಅದಕ್ಕೆ ಕಾರಣ ಅದರಲ್ಲಿದ್ದ
  ವಿಶೇಷ ಕಾಲಂಗಳು. ನನಗೆ ಈಗಲೂ ನೆನಪಿದೆ ಕುಂವೀ ಅವರ ಭಳಾರೆ ವಿಚಿತ್ರಂ
  ನಾನು ಓದುತ್ತಿದ್ದ ಮೆಚ್ಚಿನ ಕಾಲಂ.

  ಅದೇ ದಾರಿಯಲ್ಲಿ ಸಾಗಿ, ಅದೇ ಹುರುಪು ಮೂಡಿಸಿದ್ದು ಹಂಗಾಮ. ಚಿಕ್ಕ ಚಿಕ್ಕ ಬರಹಗಳು
  ಎಷ್ಟು ಖುಷಿ ಕೊಡುತ್ತಿದ್ದವೂ ಅಲ್ವ. ಪುಟ ತೆಗೆದರೆ ಸಾಕು ಎಲ್ ಓ ಸಿ. ಹಂಗಾಮದಲ್ಲಿ
  ನನ್ನದೂ ಒಂದು ಪುಟ್ಟ ಬರಹ ಪ್ರಕಟವಾಗಿತ್ತು ಅನ್ನೋದು ನನಗೆ ಹೆಮ್ಮೆ.

  ಹಂಗಾಮ ನಿಲ್ಲುವುದಕ್ಕೆ ಕಾರಣ ಗೊತ್ತಿಲ್ಲ. ಆ ಟೀಮಿನ ಪ್ರಯತ್ನ ದೊಡ್ಡದು. ಅವರ
  ಕ್ರಿಯಾಶೀಲತೆ ದೊಡ್ಡದು. ಇವತ್ತಿಗೂ ಹಂಗಾಮ ಇರಬೇಕಿತ್ತು ಅನಿಸುತ್ತದಲ್ಲ ಅದರ
  ಗ್ರೇಟ್ನೆಸ್ಸೇ ಬೇರೆ.
  ಅದರ ಹಿಂದಿನ ಮನಸ್ಸುಗಳಿಗೆ ನನ್ನ ಸಲಾಮ್.
  ರವಿ ಅಜ್ಜೀಪುರ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: