ಆ ಮಾತುಗಳಲ್ಲೇಕೋ ಅಮ್ಮ ಸಿಗಲಿಲ್ಲ!

chetana2.jpg

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ 

ಮೂರು ವರ್ಷ!

ಸಾವಿರ ದಿನಗಳು ಅಂದ್ರೆ ಸುಮ್ನೆ ಅಲ್ಲ.

ಅವತ್ತು ಹೊಸಿಲು ದಾಟುವಾಗ ಹುಚ್ಚು ಹುಮ್ಮಸ್ಸು. ಇವತ್ತೇಕೋ ಒಳ ಹೊಕ್ಕುವಾಗ ಎದೆ ಡವಡವ.

* * * *

“ಹೆಂಗಿದ್ರೂ ಬರಲ್ಲ. ಹಂಗಂತ ಕರೀದಿದ್ರೆ ತಪ್ಪಾಗತ್ತಲ್ಲ?” ಅಂತ ಅಪ್ಪನ ಪಕ್ಕ ಮಗ್ಗಲು ಬದಲಿಸಿದ ಅಮ್ಮ, ತಂಗಿ ಮದುವೆ ಇನ್ವಿಟೇಷನ್ನು ಕಳಿಸಿದ್ದಳು. ನಾ ಖುಷಿಯಿಂದ ಕಾಲ್ ಮಾಡಿದಾಗ, ಅವಳ ನಾಲ್ಕು ಸಾಲು ಮಾತಿನ ತುಂಬ ಫುಲ್ ಸ್ಟಾಪು- ಕಾಮಾಗಳೇ ತುಂಬಿ, ‘ಬಾ’ ಅಂದಿದ್ದು ‘ಬರಬೇಡ’ ಎಂದಂತಾಗಿತ್ತು!  ಮೊನ್ನೆ ತನಕ ಅಂವ ಅದನ್ನೇ ಎತ್ತಿ ಆಡಿ ಛೇಡಿಸುತ್ತಿದ್ದ. ಈಗ ಹಾಗಲ್ಲ. ಅಮ್ಮ, “ಬಾ” ಅಂತಲೇ ಕರೆದಿದಾಳೆ. ಮಾತಿನ ನಡುವೆ ಅನಗತ್ಯ ಪಂಕ್ಚುಯೇಷನ್ನುಗಳಿರಲಿಲ್ಲ!

* * * *

” ನಾ ಬಡ್ಕಂಡೆ, ರೈಲು ಬೇಡ, ಬಸ್ಸಲ್ಲೆ ಹೋಗಾಣ ಅಂತ. ಸ್ಟೇಷನ್ನಿಗೆ ಹತ್ರ ಅಂತ ಅವಳ ಮನೆಗೆ ಹೋಗಿದ್ದೆ ತಪ್ಪಾಯ್ತು” ಅಮ್ಮ ಸಿಡುಕುತ್ತಿದ್ದಳು.

“ಹಾಗಂತ? ಬಾ ಅನ್ನದೇ ಇರಕ್ಕಾಗ್ತಿತ್ತೇನು ಅವಳನ್ನ? ಇಲ್ಲೀ ತನಕ ಬಂದೋಳು, ನಾವ್ ಕರೀದೇ ಹೋಗಿದ್ರೆ ಹೋಟೆಲ್ಲು ರೂಮ್ ಮಾಡ್ಕಂಡು ಮಾನ ತೆಗೀತಿದ್ಲು!” ಅಪ್ಪ ದನಿಯೇರಿಸ್ತಿದ್ದ.

“ಒಟ್ನಲ್ಲಿ, ನಮ್ ನೆಮ್ಮದಿ ಹಾಳು ಮಾಡ್ಲಿಕ್ಕೇ ಹುಟ್ಟಿದ್ದವಳು”- ಗಂಡ ಹೆಂಡತಿ ಷರಾ ಬರೆದರು!

amma.jpg* * * *

ಅಮ್ಮನ ಮನೆ!

ಕಾಲೇಜಿಗೆ ನಡೆದು ಹೋಗುತ್ತಿದ್ದ ನನ್ನ ಕಾಲೊತ್ತುತ್ತಿದ್ದ ಅಮ್ಮ…

ಮಳೆಯಲ್ಲಿ ಛತ್ರಿ ಮರೆತಾಗ ಹಿಡಿದ್ಕೊಂಡು ಓಡೋಡಿ ಬರುತ್ತಿದ್ದ ಅಮ್ಮ…

ಅಪ್ಪನ ಲೆಕ್ಕ ತಪ್ಪಿಸಿ, ಹತ್ತು ವರ್ಷಗಳ ಹಿಂದೆ ದುಬಾರಿ ಎನಿಸಿದ್ದ ವಿಸ್ಪರ್ರು- ಡವ್ ಸೋಪುಗಳನ್ನ ಒದಗಿಸ್ತಿದ್ದ ಅಮ್ಮ…

ಅವಳು ಮಾಡೋ ಪತ್ರೊಡೆ, ಅಮಟೆ ಗೊಜ್ಜು…

ಮುನ್ನೂರು ಕಿಲೋಮೀಟರು ಪೂರ್ತಿ ಹಳೆಯ ಅಮ್ಮನದೇ ನೆನವರಿಕೆ!

* * * *

ಮತ್ತೀಗ, ಅದೇ ಹೊಸ್ತಿಲು.

ಒಳ ದಾಟಿದೆ ನಾನು.

ದೇವರ ಕೋಣೆಯಲ್ಲಿ ಅಪ್ಪನ “…….ಬ್ರಾಹ್ಮಣೋ ಅಸ್ಯ ಮುಖಮಾಸೀತ್…….ಪದ್ಭ್ಯೋ ಶುದ್ರೋಭಿಜಾಯತ….”

ನಾ ಒಳ ಬರೋ ಹೊತ್ತಿಗೆ ಬೇಕಂತಲೇ ಅದನ್ನ ಹೇಳ್ತಿದಾನೇನೋ? 

ಒಳ ಕೋಣೆಗಳಲ್ಲೆಲ್ಲ ಎಂಥದೋ ಗುಟ್ಟು ಗುಟ್ಟು, ಬೇಲಿ-ಚೌಕಟ್ಟು!

ಅಡುಗೆ ಮನೆಯಲ್ಲಿ ಘಮ ಘಮ.

ಜಡಿ ಮಳೆಯ ಚಳಿಯಲ್ಲೂ ಬೆವರೊರೆಸಿಕೊಳ್ಳುತ್ತಿರುವ ಅಮ್ಮ…

ಮತ್ತೀಗ ಅವಳ ಪ್ರತಿ ಮಾತಲ್ಲೂ ಫುಲ್ ಸ್ಟಾಪು, ಕಾಮಾ!!

‍ಲೇಖಕರು avadhi

August 28, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

4 ಪ್ರತಿಕ್ರಿಯೆಗಳು

 1. Tina

  ಚೇತನಾ,
  ಓದಿದ್ಮೇಲೆ ಸಂಕಟ ಶುರುವಾಯಿತು ಕಣೆ. ಅಮ್ಮ ’ಒಂದು ಸಲ ಬಾ, ಯಾರಿಗು ಹೆದ್ರುವ ಅವಶ್ಯಕತೆ ಇಲ್ಲ’ ಅಂದ್ರೂನು ಹೇಡಿಯ ತರಹ ದೂರ ಇರುವ ನನ್ನ ಮೇಲೇ ಜಿಗುಪ್ಸೆ ಹುಟ್ಟಿದೆ. ಮನೆಯಲ್ಲಿ ಕೂತು ಬರೆದ ಹಾಗೆ ಇವತ್ತಿಗು ಎಲ್ಲಿಯೂ ಬರೀಲಿಕ್ಕೆ ಸಾಧ್ಯ ಆಗೇ ಇಲ್ಲ. ಹೋದ್ರೆ, ಅಲ್ಲಿ ಅನುಭವಿಸ್ಬೇಕಾಗಿ ಬರುವ ಸಣ್ಣ ನೋವುಗಳನ್ನು ಕೂಡ ತಡ್ಕೊಳ್ಳೋ ಶಕ್ತಿ ಇನ್ನೂ ನನಗೆ ಇಲ್ಲ. ನಿನ್ನ ಬರಹ ಚೆನ್ನಾಗಿ ಇರಿಯಿತು. ಹೀಗೇ ಬರಿ. ಪ್ರೀತಿಯೊಂದಿಗೆ, ಟೀನಾ.

  ಪ್ರತಿಕ್ರಿಯೆ
 2. Sindhu

  ಚೇತನಾ

  ಒಂದು ಆಸಕ್ತಿಯುತ ಬರಹ. ಒಳನೋಟ ಮತ್ತು ಕ್ಲೀಷೆಗಳನ್ನ ಸರಳ ಸಂಭಾಷಣೆಗಳಲ್ಲೇ ಪದರಪದರವಾಗಿ ಬಿಡಿಸಿಟ್ಟು ಗೊತ್ತಾಯ್ತಲ್ಲಾ ಅಂತ ಮೆಲ್ನಗೆಯೊಂದಿಗೆ ಪೂರ್ಣವಿರಾಮ ಹಾಕುವ ನಿಮ್ಮ ಬರಹ ನನಗೆ ಮೋಡಿ ಮಾಡಿದೆ.

  ಧನ್ಯವಾದಗಳು.
  ಸಿಂಧು

  ಪ್ರತಿಕ್ರಿಯೆ
 3. mauni

  chetana,
  I oMdu katheyanna adeshtu katheyagi seelabahudu!
  “brahmanO asya mukhamAseet” nalli avalu mane bittu hogidda karanada holahu!!
  nimma lekhanagalu manassu – buddhigaleradakku kelasa koduttave.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: