ಆ ಹೂ ಹುಡುಗಿಯರು..

jayalakshmi patil

ಜಯಲಕ್ಷ್ಮಿ ಪಾಟೀಲ್ 🌹

ಹೂ ಹುಡುಗಿ ಎಂದ ತಕ್ಷಣ ಕನ್ನಡಿಗರಿಗೆ ಜಯಂತ್ ಕಾಯ್ಕಿಣಿ ಅವರು ಅನುವಾದಿಸಿದ ‘ಸೇವಂತಿ ಪ್ರಸಂಗ’ ನಾಟಕ ನೆನಪಾಗಬಹುದು.

ಆದರೆ ಈ ಹುಡುಗಿಯರಿಗೂ, ಸೇವಂತಿ ಪ್ರಸಂಗಕ್ಕೂ ಯಾವುದೇ ಸಂಬಂಧವಿಲ್ಲ.

ನಾನು ಹೂ ಹುಡುಗಿಯರು ಎಂದಿದ್ದು ಈ ಮಲ್ಲಿಗೆಯಂತೆ ಅವರ ಸ್ವಾಭಿಮಾನ, ಓದುವ ಬಯಕೆ ಘಮ್ಮೆಂದು ನನ್ನ ಮನಸ್ಸನ್ನಾವರಿಸಿ ಪ್ರಫುಲ್ಲಗೊಳಿಸಿದ್ದು. 🙂

face with flowersಒಬ್ಬಳು ಬೇರೆ ಊರಲ್ಲಿ ಕೃಷಿ ವಿಜ್ಞಾನವನ್ನು ಓದುತ್ತಿರುವ ಹುಡುಗಿ ಶಗುಪ್ತಾ. ಇನ್ನೊಬ್ಬಳು ಇಲ್ಲಿಯೇ ಹೋಮ್ ಸೈನ್ಸ್ ಓದುತ್ತಿರುವವಳು ಮತ್ತು ಈಗಷ್ಟೇ ಅರ್ಧ ಗಂಟೆಗೆ ಮೊದಲು ಭೇಟಿಯಾದವಳು, ಅನಿತಾ.

ಮೊದಲನೆಯ ಮಗು ಸ್ಕಾಲರ್ಶಿಪ್ ನಲ್ಲಿಯೇ ಓದು, ಊಟ ಮತ್ತು ವಸತಿಯನ್ನು ನಿಭಾಯಿಸುತ್ತಾ ನಾನಾಗೇ ಪದೇ ಪದೇ ಹಣದ ಬಗ್ಗೆ ಕೇಳಿದರೂ ನಯವಾಗೇ ನಿರಾಕಾರಿಸುತ್ತಾ ಓದನ್ನು ಮುಂದುವರೆಸಿದ್ದಾಳೆ. ಮೊದಲ ಸಲದ ಫೀಸ್ ಕಟ್ಟಿದ್ದೆಷ್ಟೋ ಅಷ್ಟೇ ನನ್ನ ಸೌಭಾಗ್ಯ.

ಈಗಷ್ಟೇ ಭೇಟಿಯಾಗಿದ್ದ ಇನ್ನೊಬ್ಬ ಹೂ ಹುಡುಗಿ, ಮನೆ ಮನೆಗೆ ಹೋಗಿ, ಹೂ ಮಾರಿ ಓದಿನ ಖರ್ಚನ್ನು ನಿಭಾಯಿಸುತ್ತಿರುವಾಕೆ. ಎರಡು ಮೂರು ನೋಟ್ಬುಕ್ ತೆಗೆದುಕೊಳ್ಳಲಾದರೂ ಅನುಕೂಲವಾಗಲೆಂದು ಹೆಚ್ಚಿಗೆ ಹಣ ಕೊಡಲು ಹೋದರೆ, ಸ್ಪಷ್ಟವಾಗಿ ನಿರಾಕರಿಸಿ, ಆ ದುಡ್ಡಿಗೆ ಹೂ ಕೊಂಡು ಉಪಕರಿಸಿ ಎಂದಾಕೆ!

ಓದಿನ ಹಂಬಲದ ಸ್ವಾಭಿಮಾನದ ಈ ಮಕ್ಕಳು ತಾವು ಅಂದುಕೊಂಡಿದ್ದನ್ನ ಸಾಧಿಸಿ ತೋರಿಸುವುದರಲ್ಲಿ ಅನುಮಾನವೇ ಇಲ್ಲ!
ಈ ಹೂಗಳ ಘಮ ಜಗವನ್ನಾವರಿಸುವಂತಾಗಲಿ ಎಂದು ಮನದುಂಬಿ ಹಾರೈಸುವೆ. <3 <3

(ಇವು ಈಗಷ್ಟೆ ಕೊಂಡ ಹೂಗಳ ಭಾವಚಿತ್ರಗಳು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೆ! 🙂 )

‍ಲೇಖಕರು Admin

November 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮ್ಯಾರಡೋನಾ, ಮ್ಯಾರಡೋನಾ….

ಮ್ಯಾರಡೋನಾ, ಮ್ಯಾರಡೋನಾ….

ಕೆ. ಪುಟ್ಟಸ್ವಾಮಿ ಡೀಗೋ ಮ್ಯಾರಡೋನಾ ನಿಧನರಾದ ಸುದ್ದಿಯನ್ನು ದರ್ಶನ್‌ ಜೈನ್‌ ಅವರ ವಾಲ್‍ನಲ್ಲಿ ಓದಿದಾಗ 1982,1986 ಮತ್ತು1990ರ...

ತಬ್ಬಲಿ ಜಾತಿಯ ಸೂಲಗಿತ್ತಿ ಮಲ್ಲಮ್ಮ…..!

ತಬ್ಬಲಿ ಜಾತಿಯ ಸೂಲಗಿತ್ತಿ ಮಲ್ಲಮ್ಮ…..!

ಶಿವರಾಜ್ ಮೋತಿ ಒಡಹುಟ್ಟಿದ ಹತ್ತು ಮಕ್ಕಳಿರುವ ತುಂಬು ಸಂಸಾರದಲ್ಲಿ ಜನಿಸಿ, ತಾನೂ ಸಹ ಹನ್ನೆರಡು ಮಕ್ಕಳ ಹೆತ್ತಿ, ಇಬ್ಬರು ತೀರಿದ್ದಾರೆ. ಈಗ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This