ಇಂದಿನಿಂದ 'ನೀರ್ ದೋಸೆ' ಜಗ್ಗಿ ಹರಿದು ತಿನ್ನಬಹುದು

ಟೀಸರ್ ಮೂಲಕ ಪಡ್ಡೆಗಳಿಗೆ ಡಬಲ್ ಮೀನಿಂಗ್ ಡೈಲಾಗ್ ಗಳ ಭರ್ಜರಿ ಭೋಜನ ಮಾಡಿಸಿರುವ ಚಿತ್ರ ನೀರ್ ದೋಸೆ. ನಟಿ ಹರಿಪ್ರಿಯಾ ವೇಶ್ಯೆ ಪಾತ್ರದಲ್ಲಿ ಪುಲ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹೈಕ್ಳ  ಹೃದಯದಲ್ಲಿ ಕಿಚ್ಚು ಹಚ್ಚಿದ್ದಾಳೆ. ಹಾಟ್ ಆಗಿ ಕಾಣಿಸಿಕೊಳ್ಳುವುದಲ್ಲದೇ ಬಾಯಿಂದ ಹೊಗೆ ಕೂಡಾ ಬಿಟ್ಟಿದ್ದಾಳೆ.  ಹರಿಪ್ರಿಯಾ ಅವರು ಸೆವೆನ್ ಇಚ್ ಚಿತ್ರದ ನಟಿ ಮರ್ಲೀನ್ ಮುರ್ಲೋ ಅವರ ಹೇರ್ ಸ್ಟೈಲ್ ಮತ್ತು  ಮೈಮಾಟ ಅನುಕರಿಸಿ ಮಾಡಿದ್ದ ಫೋಟೋ ಶೂಟ್ ಚಿತ್ರದ ಬಗ್ಗೆ ಒಂದು ಹೈಪ್ ಕ್ರೀಯೇಟ್ ಮಾಡಿತ್ತು.

Ramya neerdose

ರಮ್ಯಾ ನೀರ್ ದೋಸೆಯಲ್ಲಿ ಕಾಣಿಸಿಕೊಂಡ ಭಂಗಿ

ಚಿತ್ರವು ಆರಂಭದಲ್ಲಿಯೇ ಹಲವಾರು ಸಮಸ್ಯೆಗಳನ್ನು ಎದುರಿಸಿ ಈಗ ಬಿಡುಗಡೆಗೊಂಡಿದೆ. ನಟಿ ರಮ್ಯಾ ಕಿರಿಕ್ ನಿಂದ ಚಿತ್ರಿಕರಣ ಅರ್ಧಕ್ಕೆ ನಿಂತು ಹೋಗಿತ್ತು. ನಂತರ ನಿರ್ದೇಶಕರು ರಮ್ಯಾ ಪಾತ್ರಕ್ಕೆ ನಟಿ ಹರಿಪ್ರಿಯಾ ಅವರನ್ನು ಆಯ್ಕೆ ಮಾಡಿದರು. 2012  ಜೂನ್ ನಲ್ಲಿ ನೀರ್ ದೋಸೆ ಚಿತ್ರದ ಚಿತ್ರಿಕರಣ ಪ್ರಾರಂಭವಾಗಿತ್ತು. ನಟಿ ರಮ್ಯಾ  ಮಂಡ್ಯ ಬೈ ಎಲೆಕ್ಷನ್ ನಲ್ಲಿ  ಸಂಸದೆ ಆದ ನಂತರ ಚಿತ್ರಿಕರಣಕ್ಕೆ ಬರಲಿಲ್ಲ. ಇದರಿಂದ ರಮ್ಯಾ ಮತ್ತು ಜಗ್ಗೇಶ್ ಮಧ್ಯೆ ಟ್ವೀಟರ್ ವಾರ್ ನಡೆಯಿತು. ಆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಆದರೆ ನಿರ್ದೇಶಕರು  2015 ರಲ್ಲಿ ಹರಿಪ್ರಿಯಾ ಅವರನ್ನು ಕರೆತಂದು ಶೂಟಿಂಗ್ ಮಾಡಿ ಮುಗಿಸಿದ್ದಾರೆ.

Haripriyaನೀರ್ ದೋಸೆ ಚಿತ್ರದ ಟೀಸರ್ ನಲ್ಲಿನ ಡಬಲ್ ಮೀನಿಂಗ್ ಮಾತುಗಳನ್ನು ಕೇಳಿ ಸಿನಿರಸಿಕರು ಚಿತ್ರದ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಬಹುದು ಅಂದುಕೊಂಡಿದ್ದರು, ಆದರೆ ಚಿತ್ರದ ಯಾವ ದೃಶ್ಯಗಳಿಗೆ ಕತ್ತರಿ ಆಡಿಸದೇ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ.

Nirdoseನಿರ್ದೇಶಕ ವಿಜಯಪ್ರಸಾದ್ ಈ ಚಿತ್ರಕ್ಕೆ ಆಕ್ಷನ್ಯ್ ಕಟ್ ಹೇಳಿದ್ದಾರೆ. ಅರ್ಧಕ್ಕೆ ನಿಂತ ಚಿತ್ರವನ್ನು ಪೂರ್ತಿಯಾಗಿ ಮುಗಿಸುವುದಾಗಿ ಹೇಳಿದ ನಿರ್ದೇಶಕರು ಮಾತಿನಂತೇ ಚಿತ್ರವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಚಿತ್ರದ ಬಗ್ಗೆ ಭಾರಿ ನೀರಿಕ್ಷೆಯನ್ನು ಇಟ್ಟುಕೊಂಡಿದ್ದಾರೆ. ತಾರಾಗಣದಲ್ಲಿ ಚಿರಯೌವ್ವನೇ ಸುಮನ್ ರಂಗನಾಥ್, ದತ್ತಣ್ಣ  ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತವಿದೆ.  ಅಶು ಬೇದ್ರಾ ಅವರು ನಿರ್ಮಾಣ ಮಾಡಿದ್ದಾರೆ.

 

‍ಲೇಖಕರು Admin

September 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಗೋದಾವರಿ ನದೀ ತೀರದಲ್ಲಿ ಒಂದು ಆಲದಮರ ಇತ್ತು. ಆ ಮರದಲ್ಲಿ ಗಿಳಿಗಳು ಗೂಡನ್ನು ಕಟ್ಟಿಕೊಂಡು ತಮ್ಮ ಮರಿಗಳೊಡನೆ ಬಹಳ ದಿನಗಳಿಂದ...

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಕುವೆಂಪುರವರ ಶೈಲಿಯಲ್ಲಿಅಣಕು ಬರಹ ರಚನೆ : ಶಿವು ಧನುರ್ವಿದ್ಯಾ ಚತುರ ಗುಡಾಕೇಶನಿಗೆ ದ್ವಾಪರ ಯುಗದಲ್ಲಿ ಗೀತೆಯನ್ನು ಬೋಧಿಸಿದ ಶ್ರೀ ಕೃಷ್ಣ...

4 ಪ್ರತಿಕ್ರಿಯೆಗಳು

  • Avadhi

   avadhi cinema emba hosa site aarambhisuttiddeve. adara test piece bandirabeku. aa notification ellarigoo baruvudilla. aasaktarige maatra nondaayisidarashte

   ಪ್ರತಿಕ್ರಿಯೆ
 1. Sangeeta Kalmane

  ಸರ್, ಬರಹಗಾರರಿಗೆ “ಅವಧಿ” ಉತ್ತಮ ವೇದಿಕೆ. ಇಲ್ಲಿ ನಾವು ಮಹಿಳಾ ಬರಹಗಾರರೂ ಇದ್ದೇವೆ. ಚಿತ್ರರಂಗ ತನಗೆ ಬೇಕಾದಂತೆ ನಟಿಮಣಿಗಳನ್ನು ಪಾತ್ರಕ್ಕೆ ತಕ್ಕಂತೆ ಡ್ರೆಸ್ ಹಾಕಿಸ್ಥಾರೆ. ಓಕೆ. ಆದರೆ ದಯವಿಟ್ಟು ಗೌರವಾನ್ವಿತ ಅವಧಿಯಲ್ಲಿ ಇಂಥ ಫೋಟೋ ಬೇಡ ಸರ್. ಚಿತ್ರಗಳ ಕುರಿತ ಲೇಖನದ ಬಗ್ಗೆ ನಾನು ಹೇಳುತ್ತಿಲ್ಲ.

  ಪ್ರತಿಕ್ರಿಯೆ
  • Avadhi

   ಖಂಡಿತಾ . ಅದು ಬೇರೆಯೇ ವೆಬ್ ಸೈಟ್ ಆಗಿ ಬರುತ್ತದೆ

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: