ಇಂದಿನ ಚಹಾ ಕೆಟ್ಟು ಹೋಗಿದೆ


ಇವತ್ತು ಕಳೆದೆರಡು ತಾಸುಗಳಿಂದ ಅವಧಿಯಲ್ಲಿರುವ ಭಾಮಿನೀ ಷಟ್ಪದಿ ಮತ್ತು ಲೀಲಾ ಸಂಪಿಗೆಯವರ ಎಲ್ಲಾ ಬರಹಗಳನ್ನು ಓದುತ್ತಿದ್ದೆ. ಜೊತೆಗೆ ಮೊನ್ನೆ ಓದಿದ ಹಕೂನ ಮಟಾಟ ಬೇರೆ ನೆನಪಾಗಿ ಬಿಡ್ತು.
ದಿನವೂ ಕೆಟಕಿಯ ಬಳಿ ಕೂತು ನಾನಿಟ್ಟ ಅಕ್ಕಿ ತಿನ್ನುವ ಗುಬ್ಬಚ್ಚಿಗಳು ಮತ್ತು ಕೆಳಗಡೆ ಆಡುತ್ತಿರುವ ಎಳಸುಗಳನ್ನು ಕಣ್ಣಲ್ಲೇ ತುಂಬಿಕೊಳ್ಳುತ್ತಾ ಚಹಾ ಹೀರುತ್ತಿದ್ದೆ.
ಇಂದಿನ ಚಹಾ ಕೆಟ್ಟು ಹೋಗಿದೆ.
[” Spirit of the heart, quietness and tranquility — this is what links together the concepts of Zen and Tea” ]

+++

ಇದನ್ನು ಬರೆದವರು

ನಾನು…

ಮೂಲತಃ ಶಿರಸಿಯವಳು, ಹಾಗೆಂದು ಒಪ್ಪಿಕೊಂಡಿದ್ದೇನೆ (ತಂದೆಯವರು ಸಾಗರದವರಾಗಿದ್ದರು ಸಹಿತ).
ಕೊಟ್ಟಿದ್ದು ಅಲ್ಲ ಕೊಡಿಸಿ ಕೊಂಡಿದ್ದು ಮಂಗಳುರು(ಈ ಜಿಲ್ಲೆ ಕಂಡರೆ ಮೊದಲಿನಿಂದಲು ಅಸ್ಟಕಷ್ಟೆ. N Kಯನ್ನು D K ನುಂಗಿ ಹಾಕಿದೆ ಅಂತ. ಎಲ್ಲರಿಗೂ South Canara ಗೊತ್ತು, North Canara ಗೊತ್ತಿಲ್ಲ. ಬೇಕಾದ್ರೆ ಕೇಳಿ ನೋಡಿ. NK ಅಂದರೆ North Karnataka ಇಲ್ಲ UK ಅಂದರೆ United Kingdom ಮಾಡಿಯಾರು).
ಓದಿದ್ದು ಪತ್ರಿಕೋದ್ಯಮ ಮತ್ತು ಅನಿಮೆಶನ್.
ಸದ್ಯ ಇರೊ ಕೆಲಸ ಬಿಟ್ಟು blog ಸೋ ಗೀಳು ಅಂಟಿಸಿಕೊಂಡಿದ್ದೇನೆ )
-ಸೌಪರ್ಣಿಕಾ, ಮುಂಬಯಿ

‍ಲೇಖಕರು avadhi

August 23, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

5 ಪ್ರತಿಕ್ರಿಯೆಗಳು

 1. Tina

  ಸೌಪರ್ಣಿಕಾ ಉರ್ಫ್ ನೀಲಾಂಜಲ,
  ನನ್ನ ಪ್ರೀತಿಯ ನದಿಯ ಹೆಸರು. ಬೆಂಗಳೂರಿಗೆ ಬನ್ನಿ. ಬಂದಾಗ ಭೇಟಿಯಾಗುವಾ.
  ನಿಮ್ಮ ಕಮೆಂತುಗಳನ್ನ ಓದುತ್ತಿರುತ್ತೇನೆ ಆಗಾಗ.
  ’ನೀಲಾಂಜನ’ರ ಜತೆ ನಿಮ್ಮ ಹೆಸರಿನ ಹೊಸ ಕನ್ಫ್ಯೂಶನ್ನು ಶುರುವಾಗಿರುವುದು ತಮಾಶಿಯಾಗಿದೆ!!

  ಪ್ರತಿಕ್ರಿಯೆ
 2. ದಿಗಂತ

  ಶಿರಸಿ ಕಾಲೇಜ್ ನಲ್ಲಿ ಪತ್ರಿಕೋಧ್ಯಮ ಓದುತ್ತಿದ್ದ ‘ಸೌಪಿ’ನೇ ನೀವು ಅಂದುಕೊಂಡಿದ್ದೇ
  ನೆ.ಕಾಫಿ ಕುಡಿಯುತ್ತಾ ‘ಅವಧಿ’ ಓದುವ ಅವಧಿಯಲ್ಲಿ ನಿಮ್ಮ ಬರಹ ಕಣ್ಣಿಗೆ ಬಿತ್ತು.
  ನೀವು ಅವರೇನಾ ?

  ಪ್ರತಿಕ್ರಿಯೆ
 3. neelanjala

  ಅವಧಿಗೆ,
  http://neelanjala.wordpress.com/2008/08/
  26/%e0%b2%aa%e0%b3%8d%e0%b2%b0%e0%b2%bf%e0%b2
  %af-%e0%b2%85%e0%b2%b5%e0%b2%a7%e0%b2%bf/
  ಟೀನಾ,
  ನನ್ನವುಗಳನ್ನು ನೀವು ಓದುತ್ತಿರುವುದು ತಿಳಿದು ಖುಷಿಯಾಯಿತು.
  ಬೆಂಗಳೂರಿಗೆ ಬಂದರೆ(?) ಅವಶ್ಯ ಸಿಗೋಣ.
  ‘..ಹೆಸರಿನ ಹೊಸ ಕನ್ಫ್ಯೂಶನ್ನು…’
  ನನಗೊಬ್ಬಳಿಗೆ ಕನ್ನಡಕ ಇರೋದು ಅಂತ ಅಂದುಕೊಂಡಿದ್ದು ಸುಳ್ಳಾಗಿದೆ 😀
  ದಿಗಂತ/ದಿನೇಶ,
  ‘ಸೌಪಿ’ನೇ ನೀವು n ನೀವು ಅವರೇನಾ ?
  ಚೆನ್ನಾಗಿದೆ 😀
  ನಿಮ್ಮ ಮಾತು ಕೇಳಿ ಹಳೆಯ ನೆನಪು ಉಕ್ಕಿ ಬಂತು.
  ಕಾಲೇಜಿನ pcಯಲ್ಲಿನ ನಮ್ಮ ಪೇಪರ್ರು, ಕೆ.ಪೆ. ರಾವ್ವು, ಕಂಪಲ್ ಸರಿ ಬ್ಯಾಚು, ಮೀಟಿನ್ಗು, inspirational(!) speeches….
  ಪಾಪದ ಸೌಪಿ, ಅವಳೀಗ ಇಲ್ಲ. ಸತ್ತು (?) ಹೋಗಿದ್ದಾಳೆ.
  ಬೇಜಾರಿಲ್ಲ.
  ನೀಲಾಂಜಲ ಬಂದಿದ್ದಾಳೆ.

  ಪ್ರತಿಕ್ರಿಯೆ

Trackbacks/Pingbacks

 1. ಪ್ರಿಯ ಅವಧಿ, « neelanjala - [...] ಒಂದು ಸಣ್ಣ ಕಿರಿಕ್ ಇದೆ. ನನ್ನ ಹೆಡ್ಡಿಂಗ್ ಬದಲಾಯಿಸಿ ಬಿಟ್ರಿ : ) ನಂದಕ್ಕೆ [...]

ಇದಕ್ಕೆ ಪ್ರತಿಕ್ರಿಯೆ ನೀಡಿ neelihoovuCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: