ಉಗಮ ಶ್ರೀನಿವಾಸ್
ನನ್ನಜ್ಜಿಗೊಂದು ಆಸೆ ಇತ್ತು. ಇಂದಿರಾಗಾಂಧಿಗೂ ಮುನ್ನ ತಾನು ಸಾಯಬೇಕೆಂಬುದೇ ಆ ಆಸೆ. ಮನೆಯ ಹಜಾರದಲ್ಲಿ ಮೊಮ್ಮಗನೊಂದಿಗೆ ಪಗಡೆ ಆಡುತ್ತಾ ಆಕೆ ಹಂಬಲಿಸಿದ್ದು ಇಂದಿರಾಗಾಂಧಿಗೂ ಮುನ್ನ ತಾನು ಸಾಯಬೇಕು ಎಂಬುದು. ಇಂದಿರಾಗಾಂಧಿಯ ಅಪ್ಪಟ ಅಭಿಮಾನಿಯಾಗಿದ್ದ ಈಕೆ ತಿರುಪತಿ ತಿಮ್ಮಪ್ಪನ ಭಕ್ತೆ ಕೂಡ.
ಇಂದಿರಾಗಾಂಧಿಯನ್ನು ತಿಪಟೂರಿನಲ್ಲಿ ನೋಡಿದ್ದ ನನ್ನಜ್ಜಿ ಕಡೆಗೂ ತನ್ನ ಇಚ್ಛೆಯಂತೆ ಇಂದಿರಾ ಸಾಯುವ ವಾರದ ಮುಂಚೆ ಸಾವನ್ನಪ್ಪಿದ್ದಳು. ಇರಲಿ. ಬಹಳ ದಿವಸಗಳ ನಂತರ ಈ ಎಳೆಯನ್ನು ಇಟ್ಟುಕೊಂಡು `ಇಂದಿರಾಗಾಂಧಿಯೂ, ತಿರುಪತಿ ತಿಮ್ಮಪ್ಪನು’ ಎಂಬ ಕಥೆ ಬರೆದು ಮುಗಿಸಿದೆ.
ಮತ್ತೆ ಕಥೆ ಎಲ್ಲಿ?