ಇತ್ತೀಚಿಗೆ ನಾನು ಕಂಡಂತಹ ಅತ್ಯುತ್ತಮ ನಾಟಕ…

ಸುನಿಲ್ ರಾವ್

ರಂಗಶಂಕರ ಹಾಗು ಜೆರ್ಮನ್ ಮೂಲದ ಸ್ಕ್ನಾವ್ಲ್-ಅಂತರರಾಷ್ಟ್ರೀಯ ರಂಗತಂಡದ ಸಹಭಾಗಿತ್ವದಲ್ಲಿ ಇತ್ತೀಚಿಗೆ ಬೆಂಗಳೂರಿನ ರಂಗಶಂಕರದಲ್ಲಿ “ಬಾಯ್ ವಿಥ್ ಅ ಸೂಟ್ ಕೇಸ್ ” ಎಂಬ ನಾಟಕದ ಪ್ರದರ್ಶನ ಮಾಡಿದ್ದರು..ದೇಶದ ವಿವಿದ ಭಾಗಗಳಾದ ಬೆಂಗಳೂರು,ಮುಂಬೈ,ಚನ್ನೈ ರಾಜ್ಯಗಳಲ್ಲಿ ಈ ನಾಟಕದ ಪ್ರದರ್ಶನವನ್ನು ಏರ್ಪಡಿಸಿರುವ ಈ ತಂಡ ಈ ವಾರ ರಂಗಶಂಕರದಲ್ಲಿ ಪ್ರದರ್ಶನ ಹಮ್ಮಿಕೊಂಡಿದ್ದರು. ಜೆರ್ಮನ್ ಮೂಲದ ಆಂಡ್ರಿಯ ಗ್ರೊನಿಮೆಯೆರ್ ನಿರ್ದೇಶಿಸಿರುವ ಈ ನಾಟಕವನ್ನ ಇಂಗ್ಲಿಷ್ ಭಾಷೆಗೆ ಕಲಾತ್ಮಕವಾಗಿ ಅರುಂದತಿ ನಾಗ್ ನಿರ್ದೇಶನ ಮಾಡಿರುವ Boy with a Suitcase ಇತ್ತೀಚಿಗೆ ನಾನು ಕಂಡಂತಹ ಅತ್ಯುತ್ತಮ ನಾಟಕ… ಹನ್ನೆರಡು ವರ್ಷದ ನಾಜ್ ಎಂಬ ಒಬ್ಬ ಹುಡುಗನ ಪ್ರಯಾಣದ ಕಥೆ,ಅವನು ಅವನ ಅಕ್ಕನನ್ನು ಹಾಗು ಅತ್ಯುತ್ತಮ ಜೀವನವನ್ನು ಅರಸುತ್ತಾ ಹೊರಡುತ್ತಾನೆ..ಎಲ್ಲ ಸಮಸ್ಯೆಗಳಿಂದ ನುಣುಚಿಕೊಂಡು,ಎಲ್ಲೋ ತೊಂದರೆಗಳೇ ಇಲ್ಲ ಅನ್ನುವ ಸ್ಥಳ ಅರಸುತ್ತ ಹೊರಡುವಾಗ…ದಾರಿಯಲ್ಲಿ ಆದ ವಿವಿದ ಅನುಭವ ನಿರ್ದೇಶಕರು ತುಂಬಾ ಚೆನ್ನಾಗಿ ತೆರೆದಿಟ್ಟಿದ್ದಾರೆ…ಅವನ ತಂದೆ ತಾಯಿಯರು ಮೊದಲು ಅವನನ್ನು ಒಂದು ಸೂಟ್ ಕೇಸ್ ನ ಜೊತೆ ಬಸ್ಸನ್ನು ಹತ್ತಿಸುತ್ತಾರೆ,ಆಮೇಲೆ ಬೇರೆ ಬೇರೆ ಮಾರ್ಗವಾಗಿ ಪ್ರಯಾಣ ಮಾಡುತ್ತಾನೆ…ದಾರಿಯುದ್ದಕ್ಕೂ ಅವನಿಗೆ ಅವನ ಅಮ್ಮ ಹೇಳಿದ ಸಿನ್ಬಾದ್ (sinbad the sailor ) ಕಥೆಗಳು ಅವನನ್ನು ಮಾರ್ಗದರ್ಶನ ಮಾಡುತ್ತಾ ಹೋಗುತ್ತದೆ…ದಾರಿಯಲ್ಲಿ ಅಪ್ರತಿಮ ಸುಂದರಿಯಾದ ಕ್ರಿಸಿಯಾ ಎಂಬವಳು ಇವನೊಂದಿಗೆ ಪ್ರಯಾಣ ಹಂಚಿಕೊಳ್ಳುತ್ತಾಳೆ…ಬೆಟ್ಟ ಗುಡ್ಡಗಳು ತೊರೆಗಳಲ್ಲಿ ಇವರ ಪ್ರಯಾಣ ಸಾಗುತ್ತದೆ,ತೀರ ಕಷ್ಟದಲ್ಲಿ ಪ್ರಯಾಣ ಸಾಗುತ್ತದೆ…ಕಳ್ಳರು,ದರೋಡೆ ಕೋರರು ಎಲ್ಲರಿಂದ ಚಾಣಾಕ್ಷತನದಿಂದ ಕ್ರಿಸಿಯಾ ಈ ಹುಡುಗನನ್ನು ಕಾಪಾಡುತ್ತಾಳೆ…ಕೊನೆಯಲ್ಲಿ ಅವನು ಅಂದುಕೊಂಡ ಜಾಗವನ್ನು ತಲುಪುತ್ತಾನೆ…ಆಗ ಅವನ ಹುಡುಕಾಟಕ್ಕೆ ಸಿಕ್ಕ ಪ್ರತಿಫಲ..ಅವನಿಗೆ ತೃಪ್ತಿ ಕೊಡುವುದಿಲ್ಲ… ಆ ನಾಟಕದ ಪೂರ್ತ ಪ್ರೇಕ್ಷಕ ಆ ಹುಡುಗನ ಸ್ಥಾನದಲ್ಲಿ,ತನ್ನನೇ ಕಲ್ಪಿಸಿಕೊಳ್ಳಬಹುದು,ದಿನನಿತ್ಯದ ನಮ್ಮ ಜಂಜಡಗಳು,ಹೀನಾಯಗಳು,ಅಸಹ್ಯಗಳು,ಮೋಸಗಳು..ಅದರ ಮಧ್ಯದಲ್ಲೂ ನಮಗೆ ಸಹಾಯಕ್ಕೆ ಸಿಗುವ ಯಾರೋ ಅಪರಿಚಿತರು ಹೀಗೆ ಜೀವನದ ಮಜಲುಗಳನ್ನೇ ತೆಗೆದು ಹರಡಿಬಿದುತ್ತದೆ..ಭವಿತವ್ಯದ ಯಾವುದೋ ಸಮೃಧ್ಹ ಕಲ್ಪನೆಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲವೋ ,ಅಂತಹದ್ದರ ಬಗ್ಗೆ ನಾವು ಇಟ್ಟುಕೊಳ್ಳುವ ಭ್ರಮೆಯ ಸಾಕಾರ ಈ ನಾಟಕ…ಸತ್ಯಾಸತ್ಯಗಳನ್ನ ಪಕ್ವವಾಗಿ ತೋರಿಸಲ್ಪಡುತ್ತದೆ,ನಿರ್ದೇಶಕನ ವಿಚಾರ ಯಾವ ತಡೆಗಳೂ ಇಲ್ಲದೆ ಪ್ರೇಕ್ಷಕನಿಗೆ ಮುಟ್ಟಿದೆ.. ಇನ್ನು ಬಹಳವೇ ಖುಷಿಯಾಗಿದ್ದು M D ಪಲ್ಲವಿ’ರ…ಅಭಿನಯ…ಜೆರ್ಮನ್,ಕನ್ನಡ,ಇಂಗ್ಲೀಶ್ ಮೂಲದ ನಟರ ಜೊತೆ ನಮ್ಮದೇ ನೆಲದೆ ಪ್ರತಿಭೆ ತೀರ ಸೃಜನಾತ್ಮಕವಾಗಿ ನಟಿಸಿದ್ದಾರೆ,ಹಾಡೊಂದೇ ಅಲ್ಲ,ನಟನೆಯಲ್ಲೂ she deserves the best ಅನ್ನುವುದು ಆಕೆ ನಿರೂಪಿಸಿದ್ದಾರೆ…ಜೆರ್ಮನ್ ಮೂಲದ ಲಿಂಕೆ,ಕರ್ನಾಟಕದ ಕೊನಾರ್ಕ್ ರೆಡ್ಡಿ ಹಾಗು ಪಲ್ಲವಿ ಅವರ ಸಂಗೀತವಿದೆ…ರಂಗ ಸಜ್ಜಿಕೆ ಅಚ್ಚುಕಟ್ಟಾಗಿ ಕ್ರಿಶ್ಚಿಯನ್ ಥರ್ಮ್,ಶ್ರೀಧರ ಮೂರ್ತಿ ಮಾಡಿದ್ದಾರೆ..ವಸ್ತ್ರವಿನ್ಯಾಸ ಪಾತ್ರಕ್ಕೆ ತಕ್ಕಂತೆ ಮಾಡಿದ್ದರೆ,ಬೆಳಕು ಕೂಡ ಮುಖ್ಯವಾಗಿ ಎಲ್ಲರನ್ನು ಗಮನ ಹಿಡಿದಿಡುತ್ತದೆ. ಅಂತೂ Boy with a Suitcase ನಾಟಕ ನೋಡುವ ಅವಕಾಶ ಕೊಟ್ಟ ಆ ತಂಡಕ್ಕೆ ಧನ್ಯವಾದಗಳು.]]>

‍ಲೇಖಕರು G

April 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ತ್ರಯಸ್ಥ’ ಎಂಬ ನೆನಪಿನ ಓಣಿ

‘ತ್ರಯಸ್ಥ’ ಎಂಬ ನೆನಪಿನ ಓಣಿ

ವಿಜಯಭಾಸ್ಕರರೆಡ್ಡಿ / ಕಲಬುರಗಿ ಕಮಲಿಯ ನೀಳ ನೋಟ, ಅವಳ ಸನ್ನೆಯ ಪಿಸುಮಾತು, ಒಲವಿನ ಉಸಿರು ಹೀಗೆ ಅವಳ ನಾನಾ ಬಗೆಯ ಮಗ್ಗಲುಗಳನ್ನ ಹೇಳತ್ತಾ ರಂಗದ...

2 ಪ್ರತಿಕ್ರಿಯೆಗಳು

ಇದಕ್ಕೆ ಪ್ರತಿಕ್ರಿಯೆ ನೀಡಿ SushmaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: