ಇದು ಖಂಡಿತ ಎಕ್ಕಸಕ್ಕ ಅಲ್ಲ!

ಸಿನೆಮಾ: ಕೋಟಿ ಚೆನ್ನಯ

ಭಾಷೆ :ತುಳು

ವರ್ಷ :೧೯೭೧

ನಿರ್ದೇಶಕ :ವಿಶುಕುಮಾರ್

ಸಂಗೀತ ನಿರ್ದೇಶಕ :ವಿಜಯ ಭಾಸ್ಕರ್

ಹಾಡು :ಎಕ್ಕ ಸಕ್ಕ

ಹಾಡಿದವರು:ಎಸ.ಜಾನಕಿ

******************

ಎಕ್ಕ ಸಕ್ಕ  ಎಕ್ಕ ಸಕ್ಕ  ಎಕ್ಕ ಸಕ್ಕಲಾ

ಅಕ್ಕಾ ಪಂಡ್ದ್  ಲೆಪ್ಪುನಕುಲ್ ಬತ್ತೆರಿತ್ತೆಲಾ

ಓ  ರಾಮಾ        ಓ  ದೂಮಾ

ರಾಮ  ದೂಮ  ಚೋಮಾ  ಅವುಲು  ಏರ್ ಉಲ್ಲೆರುಯಾ

ಮಲ್ಲ  ಮಲ್ಲ  ಬೊಂಡಾ  ದೆತ್ತ್ ದ್  ಕೆತ್ತ್ ದ್  ಕೊರ್ಲೆಯಾ

ಮಂಡೆ  ನಿಲಿಕೆ  ನೀರ್  ಕೂಟುದ್ ಬೆಂದ್ರ್  ಕಾಯ್ಪೋಡು

ಕೋಟಿ ಚೆನ್ನಯ  ಎಣ್ಣೆ  ಪಾಡ್ ದ್  ಪೊರ್ಲ್ ಮೀಯೊಡ್

ಎಕ್ಕ ಸಕ್ಕ  ಎಕ್ಕ ಸಕ್ಕ  ಎಕ್ಕ ಸಕ್ಕಲಾ

ಅಕ್ಕಾ ಪಂಡ್ ದ್  ಲೆಪ್ಪುನಕುಲು ಬತ್ತೆರಿತ್ತೆಲಾ

ಓ ಗಂಗೇ      ಓ  ಗೌರೀ

ಗಂಗೆ  ಗೌರಿ  ಕಾಳಿ   ಬೊಳ್ಳಿ  ಇಂಚಿ ಬಲೇದೆ

ಚೊಂಬು ಮುಟ್ಟ  ಮಂದ  ಪೇರ್  ಕೊರೊಡ್  ಶಾರದೇ

ಓಲೋ  ಇತ್ತಿ ನೆಲ್ಲಿಕಾಯಿ  ಉಪ್ಪು  ಸೇರಿಲೆಕೋ

ಬದ್ ಕ್   ಪನ್ಪಿ  ಉಜ್ಜಾಲ್ ಡ್  ನಮೋ  ಕುಲ್ಲ್ ಲೆಕೋ

ಎಕ್ಕ ಸಕ್ಕ   ಎಕ್ಕ ಸಕ್ಕ  ಎಕ್ಕ ಸಕ್ಕಲಾ

ಅಕ್ಕ ಪಂಡ್ ದ್   ಲೆಪ್ಪುನಕುಲು  ಬತ್ತೆರಿತ್ತೆಲಾ

ಗೆಳೆಯರಾದ ಸಾಹಿತಿ ನಾಟಕಕಾರ ವಿಶುಕುಮಾರ್ ಅವರ ಕೋರಿಕೆಯಂತೆ  ಅವರ ನಿರ್ದೇಶನದ  ‘ಕೋಟಿ ಚೆನ್ನಯ ‘ ತುಳು ಸಿನೆಮಾಕ್ಕಾಗಿ ನಾನು ಬರೆದ ಹಾಡು ‘ಎಕ್ಕ ಸಕ್ಕ’. ಸುಮಾರು ನಲುವತ್ತು ವರ್ಷಗಳ ಬಳಿಕ ಕೂಡಾ ಈಗಲೂ ತುಳು ಮಾತಾಡುವವರಲ್ಲಿ ತುಂಬಾ ಜನಪ್ರಿಯವಾದ ಈ ಹಾಡು ನಾನು ರಚಿಸಿದ ಒಂದೇ ಒಂದು  ಸಿನೆಮಾ ಪದ್ಯ.ಎಸ.ಜಾನಕಿ ಅವರ ಹಾಡುಗಾರಿಕೆ ಮತ್ತು ವಿಜಯಭಾಸ್ಕರ್ ಅವರ ಸಂಗೀತ ನಿರ್ದೇಶನ ಇದರ ಜನಪ್ರಿಯತೆಗೆ ಹೆಚ್ಚು ಸಹಾಯ ಮಾಡಿವೆ. ಈ ಸಿನೆಮಾವನ್ನು ನೋಡದ ಈಗಿನ ಮಕ್ಕಳು ಮತ್ತು ಯುವಪೀಳಿಗೆ ಇದರ  ತುಳು ದೇಸಿ ಶಬ್ದಗಳ ಸೊಗಸು  ಮತ್ತು ಕುಣಿತದ ಲಯಕ್ಕೆ ಮಾರುಹೋಗುತ್ತಾರೆ .ಸಿನೆಮಾ ನೋಡಿದವರು ಈ ಎಲ್ಲ ಆಕರ್ಷಣೆಗಳೊಂದಿಗೆ,ಈ ಹಾಡಿನ ಸಂದರ್ಭದಲ್ಲಿ  ,ಕಿನ್ನಿದಾರು ಪಾತ್ರ  ಮಾಡಿದ  ಮಿನುಗು ತಾರೆ ಕಲ್ಪನಾ ಅವರು ಕುಣಿದು ಅಭಿನಯಿಸಿದ ದೃಶ್ಯವನ್ನು ನೆನಪಿಸಿಕೊಳ್ಳುತ್ತಾರೆ. ಅವಳಿ ವೀರರಾದ ಕೋಟಿ ಮತ್ತು ಚೆನ್ನಯರು ತಾವು ಆವರೆಗೆ ಕಾಣದೇ  ಇದ್ದ  ತಮ್ಮ ಅಕ್ಕ ಕಿನ್ನಿದಾರುವಿನ ಮನೆಗೆ ಬರುವುದು, ತಮ್ಮ ಪರಿಚಯವನ್ನು ಅಕ್ಕನಲ್ಲಿ ಹೇಳುವುದು ,ಆಗ ಅಕ್ಕ ಕಿನ್ನಿದಾರು ಸಂಭ್ರಮದಿಂದ ತಮ್ಮಂದಿರನ್ನು ತುಳು ದೇಸಿ ರೀತಿಯಲ್ಲಿ ಸತ್ಕರಿಸುವುದು ಇಲ್ಲಿನ ಸನ್ನಿವೇಶ . ತುಳುವಿನಲ್ಲಿ ‘ಎಕ್ಕಸಕ್ಕ’ ಅಂದರೆ  ‘ಆಧಿಕ್ಯ; ಹೆಚ್ಚು; ಅತಿರೇಕ; ವಿಪರೀತ ‘ ಎನ್ನುವ ಅರ್ಥಗಳು ಇವೆ.’ ಆಯೆ ಎಕ್ಕಸಕ್ಕ ತಿನ್ಪೆ ‘  ಅಂದರೆ  ‘ಅವನು ವಿಪರೀತ ತಿನ್ನುತ್ತಾನೆ.’  ‘ಆಳ್ ಎಕ್ಕಸಕ್ಕ ಪಾತೆರುಬಲ್ ‘ ಅಂದರೆ  ‘ಅವಳು ಸಿಕ್ಕಾಬಟ್ಟೆ (=ತುಂಬಾ) ಮಾತಾಡುತ್ತಾಳೆ.’  ಈ ಹಾಡಿನಲ್ಲಿ ತಮ್ಮಂದಿರನ್ನು ಮೊದಲಬಾರಿ ಆಕಸ್ಮಿಕವಾಗಿ ಕಂಡಾಗ ಅಕ್ಕನಿಗೆ ಆದ ಅತಿಯಾದ ಸಂತೋಷ ಮತ್ತು ಅವರನ್ನು ಸತ್ಕರಿಸುವ ಅವಳ ಸಂಭ್ರಮದ ಸಡಗರವನ್ನು  ‘ಎಕ್ಕಸಕ್ಕ’ ನುಡಿಗಟ್ಟು ಮತ್ತು ಹಾಡಿನ ಪಲ್ಲವಿ ಧ್ವನಿಸುತ್ತದೆ. ‘ಎಕ್ಕಸಕ್ಕ’ ಎಂ ಶಬ್ದವು  ಕನ್ನಡದಲ್ಲಿ ಪಂಪನ  ಭಾರತದಲ್ಲಿ ಕೂಡಾ  ಪ್ರಯೋಗವಾಗಿದೆ. ‘ಎಕ್ಕಸಕ್ಕ ‘ ಹಾಡಿನ ಧ್ವನಿ ಸುರುಳಿ ಮತ್ತು  ‘ಕೋಟಿಚೆನ್ನಯ’ ಸಿನೆಮಾದ ಈ ಹಾಡಿನ ಸನ್ನಿವೇಶದ ವೀಡಿಯೋ ಗಳ ಸಂಪರ್ಕಗಳನ್ನು  ಇಲ್ಲಿ ಕೊಡಲಾಗಿದೆ. ಕೇಳಿ .ನೋಡಿ ಆನಂದಿಸಿರಿ. ಇದಂತೂ ಖಂಡಿತ ಎಕ್ಕಸಕ್ಕ ಅಲ್ಲ! http://youtu.be/4gWTgHi-ocU]]>

‍ಲೇಖಕರು G

May 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜರ್ಮನಿಯಲ್ಲಿ ಹೀಗೊಂದು ಕನ್ನಡ ಶಿಬಿರ

ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ಪ್ರೊ ಬಿ ಎ ವಿವೇಕ ರೈ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ...

ತುಳು ’ಸಿರಿ’ಯನ್ನು ದಾಖಲಿಸಿದ ಪ್ರೊ .ಲೌರಿ ಹಾಂಕೊ – ಪ್ರೊ ಬಿ ಎ ವಿವೇಕ ರೈ

ಪ್ರೊ ಬಿ ಎ ವಿವೇಕ್ ರೈ ಪ್ರೊ .ಲೌರಿ ಹಾಂಕೊ (1932 -2002 ) ಫಿನ್ ಲೆಂಡ್ ದೇಶದ ತುರ್ಕು ವಿಶ್ವವಿದ್ಯಾಲಯದಲ್ಲಿ ಜಾನಪದ ವಿಜ್ಞಾನ ಮತ್ತು...

6 ಪ್ರತಿಕ್ರಿಯೆಗಳು

 1. sritri

  ಓ ರಾಮಾ…. ಓ ದೂಮಾ…
  ಎಂದು ‘ಸಿಲೋನ್’ ನಿಲಯದಿಂದ ಪ್ರತಿನಿತ್ಯವೆಂಬಂತೆ ಪ್ರಸಾರವಾಗುತ್ತಿದ್ದ ಈ ಹಾಡು ನನಗೆ ಚೆನ್ನಾಗಿದೆ. ಅರ್ಥ ತಿಳಿಯದಿದ್ದರೂ ಅದೇಅದೇ ಸಾಲುಗಳನ್ನು ದಿನವೂ ಕೇಳಿ ನಮಗೂ ಹಾಡು ಬಾಯಿಪಾಠವಾಗಿಹೋಗಿತ್ತು. ಹಾಡಿನ ಅರ್ಥ/ಸಂದರ್ಭ ತಿಳಿದಿದ್ದು ಮಾತ್ರ ಇಂದೇ. ಧನ್ಯವಾದಗಳು. ಇದರ ನಂತರ ಬರುತ್ತಿದ್ದ ‘ಕೆಮ್ಮೆಲತ ಬ್ರಹ್ಮ….’ ಹಾಡಿಗಂತೂ ನಮಗೆ ಹೊಳೆದಿದ್ದೇ ಅರ್ಥ! 🙂 ಹಾಗೆಂದರೇನು ತಿಳಿಸಿ.

  ಪ್ರತಿಕ್ರಿಯೆ
 2. sritri

  ….. ಪ್ರಸಾರವಾಗುತ್ತಿದ್ದ ಈ ಹಾಡು ನನಗೆ ಚೆನ್ನಾಗಿ ನೆನಪಿದೆ… ಎಂದಾಗಬೇಕಿತ್ತು. ಕ್ಷಮಿಸಿ.

  ಪ್ರತಿಕ್ರಿಯೆ
 3. ಪಂಡಿತಾರಾಧ್ಯ

  ಈಗ ಕನ್ನಡದಲ್ಲಿಯೂ ಸಿಕ್ಕಾಪಟ್ಟೆ ಇಷ್ಟಪಟ್ಟೆ ಎಂಬ ಹಾಡು ಇದೆ.
  ಹುಡುಗಿ ತುಂಬ ಸುಂದರವಾಗಿದ್ದಾಳೆ ಎನ್ನುವುದನ್ನು ಭಯಂಕರ ಇದ್ದಾಳೆ ಎನ್ನುವುದೂ ಉಂಟು!
  ಎಕ್ಕಸಕ್ಕ ಎಕ್ಕಸಕ್ಕವೇ.

  ಪ್ರತಿಕ್ರಿಯೆ
 4. Nishanth B R

  Sir, Ekka sakka padya da Lyrcist ernd gottijand. eni gottand auv ernd. anchane ‘ Ekka sakka’ meaning la terileka and. Kushi and. Thanx.

  ಪ್ರತಿಕ್ರಿಯೆ
 5. Nanjunda Raju

  ಮಾನ್ಯರೇ, ನಿಮ್ಮ ಲೇಖನ ಓದಿದ ಮೇಲೆ, ಹಳೆಯ ನೆನಪು ಮರುಕಳಿಸಿತು. ನಾನಿನ್ನು ಆಗ ವಿಧ್ಯಾರ್ಥಿ. 1971 ರಲ್ಲಿ ಬೆಂಗಳೂರು ನಗರದಲ್ಲಿ ” ಕಿನೋ ” ಟಾಕೀಸಿನಲ್ಲಿ ಬಂದಿತ್ತು. ನಾನು ಬೆಂಗಳೂರಿನವನು ತುಳು ಬರುವುದಿಲ್ಲ. ಅದರೂ ಒಳ್ಳೆಯ ಚಿತ್ರ ಎಂದು ನೋಡಿದ್ದೇ. ಚೆನ್ನಾಗಿದೆ. ಪಾತ್ರದಾರಿಗಳು ಬೇರೆ ಬೇರೆಯಾದರೂ ಸಹ, ಅವಳಿ ಜವಳಿಯಂತಿದ್ದರು. ಜ್ನಾಪಿಸಿದ್ದಕ್ಕೆ ವಂದನೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: