ಇದು ಮೂರ್ಖತನದ ಪರಮಾವದಿ..

ಸರ್ವಋತು ಜಲಪಾತ,

ಆತ್ಮಘಾತುಕ ಯೋಜನೆ

ಪ್ರಸನ್ನ 

ಕರ್ನಾಟಕ ಸರಕಾರವು ಜೋಗದಲ್ಲಿ ಆರಂಭಿಸಲು ಹೊರಟಿರುವ ಸರ್ವಋತು ಜಲಪಾತ ಯೋಜನೆಯು ಆತ್ಮಘಾತುಕವಾದದ್ದಾಗಿದೆ.

jog-fallsಗುಡ್ಡಕ್ಕೆ ಕಲ್ಲು ಹೊರುವವರು ಎಂದು ಮೂರ್ಖರನ್ನು ಕನ್ನಡದ ಗಾದೆ ಮಾತು ಅಣಕಿಸುತ್ತಿತ್ತು. ಅದನ್ನೇ ಕೊಂಚ ತಿದ್ದಿ ಅನುಷ್ಠಾನಗೊಳಿಸಲು ಹೊರಟಿರುವ ರಾಜ್ಯ ಸರಕಾರವು, ಜೋಗದ ಗುಂಡಿಯ ನೀರನ್ನು ಪಂಪ್ ಮಾಡಿ, ಪುನಃ ಗುಡ್ಡಕ್ಕೆ ಹತ್ತಿಸಿ, ಜಲಪಾತದಲ್ಲಿ ಹರಿಬಿಡ ಹೊರಟಿದೆ.

ಇದು ಮೂರ್ಖತನದ ಪರಮಾವದಿಯಲ್ಲದೆ ಬೇರೇನೂ ಅಲ್ಲ. ಪ್ರವಾಸೋದ್ಯಮದ ಹೆಸರಿನಲ್ಲಿ, ನೀರು ನದಿ ಕಣಿವೆ ಕಾಡುಗಳನ್ನು ಅದರ ಪಾಡಿಗೆ ಹರಿಬಿಡದೆ, ಲಾಭಬಡುಕ ಉದ್ಯಮಿಗಳ ಮರ್ಜಿಗೆ ಒಪ್ಪಿಸ ಹೊರಟಿರುವ ಕರ್ನಾಟಕ ಸರಕಾರದ ನಡೆಯು ಖಂಡನಾರ್ಹವಾಗಿದೆ.

ಸರ್ವಋತು ಜಲಪಾತ ಯೋಜನೆಗೆ ಖಾಸಗಿಯವರೇ ಸಂಪೂರ್ಣವಾಗಿ ಬಂಡವಾಳ ಹಾಕಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ರಾಜ್ಯಸರಕಾರವನ್ನು ಪ್ರಜೆಗಳು ಪ್ರಶ್ನೆ ಮಾಡಬಯಸುತ್ತಾರೆ, ಖಾಸಗಿ ಬಂಡವಾಳವೆಂಬುದು ಎಂದಿನಿಂದ ಜನಪರವೂ ಜೀವಪರವೂ ನಿಸರ್ಗಪರವೂ ಆಯಿತು.

‍ಲೇಖಕರು Admin

September 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

ಯಾವ ‘ಮೋಹನ’ ಮುರಲಿ ಕರೆಯಿತೋ…

ಯಾವ ‘ಮೋಹನ’ ಮುರಲಿ ಕರೆಯಿತೋ…

ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು...

4 ಪ್ರತಿಕ್ರಿಯೆಗಳು

 1. Suma

  Certainly, anything NATURAL is beautiful but not one which is made to look natural.

  ಪ್ರತಿಕ್ರಿಯೆ
 2. Anonymous

  ಅಲ್ಲಿ ಅನೈಸರ್ಗಿಕ ಬೆಳವಣಿಗೆಗಳಿಂದ ತೊಂದರೆ ಆದರೆ, ಉಡುಪಿಯಲ್ಲಿ ಖಾಸಗಿ “ಸರ್ಕಾರಿ” ಆಸ್ಪತ್ರೆಯಲ್ಲಿ ಚಿಕಿತ್ಸೆ ಫ್ರೀ ಇದೆ!

  ಪ್ರತಿಕ್ರಿಯೆ
 3. Anonymous

  ಪ್ರಸನ್ನ ಅವರ ಅಭಿಪ್ರಾಯವನ್ನು ನಾನೂ ಅನುಮೋದಿಸುತ್ತೇನೆ. ಇದೆ ಹಣವನ್ನು ಪ್ರವಾಸಿ ತಾಣಗಳ ಮೂಲ ಸೌಕ ರ್ಯ ಅಭಿವೃದ್ಧಿಗೆ ಬಳಸಿದರೆ ಉತ್ತಮವಲ್ಲವೇ? ಈ ನಿಟ್ಟಿನಲ್ಲಿ ನೆರೆಯ ರಾಜ್ಯ ಕೇರಳವನ್ನು ನೋಡಿ ನಾವು ಕಲಿಯುವುದು ಸಾಕಷ್ಟಿದೆ.

  ಪ್ರತಿಕ್ರಿಯೆ
 4. R. Shivakumaraswamy kurki

  ಪ್ರಕೃತಿ ಸೌಂದರ್ಯ ಸಹಜವಾಗಿರಲು ಬಿಡಿ. ಹಾಳು ರಾಜಕೀಯ, ಕೇಡು ಉದ್ಯಮ ಜೋಗದ ಗುಂಡಿಯ ಗುಂಡಿಗೆಗೆ ಗುಂಡು ಹಾಕದಿರಲಿ. ಈ ಪಾಪಕೃತ್ಯಕ್ಕೆ ಈ ನೀಚರು ಮುಂದಾಗದಂತೆ ಎಲ್ಲರೂ ಸಿಡಿದೇಳಬೇಕಿದೆ …ಆರ್.ಶಿವಕುಮಾರಸ್ವಾಮಿ ಕುರ್ಕಿ ಮೊ.೮೯೭೦೯೪೮೨೨೧.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: