ಬ್ಲಾಗ್ ಲೋಕ ತನ್ನ ಗಡಿ ಗೋಡೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ ಎಂಬುದಕ್ಕೆ ಒಂದು ಉದಾಹರಣೆ- ರೈತಾಪಿ. ಕೃಷಿ ಲೋಕದ ಸುತ್ತಮುತ್ತಲ ಬೆಳವಣಿಗೆಗಳು ಈಗ ಬ್ಲಾಗ್ ಲೋಕದಲ್ಲಿ ಲಭ್ಯ. ಕಟ್ಟೆ ಎಂಬ ಪತ್ರಿಕೆ ಬ್ಲಾಗ್ ಆವೃತ್ತಿಯನ್ನೂ ಹೊಂದಿದೆ. ಈಗ ಕೃಷಿ ಬರಹಗಾರರ ಗುಂಪೊಂದು ರೈತಾಪಿ ಹುಟ್ಟಿಗೆ ಕಾರಣವಾಗಿದೆ.
ಅವರೇ ಬಣ್ಣಿಸುವ ಪ್ರಕಾರ-‘ಇದೊಂದು ಕೃಷಿ ಬಗ್ಗೆ ಆಸಕ್ತಿಯಿದ್ದು, ಹವ್ಯಾಸಿಯಾಗಿ ಕೃಷಿ ಲೇಖನಗಳನ್ನು ಬರೆಯುವವರ ಲೇಖನಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಸಲುವಾಗಿ ಹುಟ್ಟಿಕೊಂಡ ಬ್ಲಾಗ್. ಇದರಲ್ಲಿ ರೈತಾಪಿಯನ್ನು ಮಾಡುತ್ತಾ, ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಾವೆಂಸ ಪ್ರಸಾದ, ಗ್ರಾಮೀಣ ಪ್ರವಾಸೋದ್ಯಮ ಅಧ್ಯಯನ, ಕಟ್ಟೆ ಎಂಬ ವಾರ ಪತ್ರಿಕೆಯ ನಡೆಸಿಕೊಂಡು ಬರುತ್ತಿರುವ, ಕೃಷಿಕ, ಕತೆಗಾರ, ಹವ್ಯಾಸಿ ಬರಹಗಾರ ಕಡವಿನಮನೆ ಆರ್. ಶರ್ಮಾ ತಲವಾಟ ಈ ಬ್ಲಾಗ್ ಗೆ ಸಲಹೆಗಾರರು ಮತ್ತು ಬರಹಗಾರರರು. ನಾಗರಾಜ ಮತ್ತಿಗಾರ ಈ ಬ್ಲಾಗ್ ಅನ್ನು ಮ್ಯಾನೇಜ್ ಮಾಡುವ ಜವಾಬ್ದಾರರು, ಜೊತೆಗೆ ಕೃಷಿ ಲೇಖನವನ್ನು ಬರೆಯುವವರು. ಮೊದಲೆ ಹೇಳಿದಂತೆ ಇದು ಕೆಲವೇ ಜನರಿಗೆ ಮೀಸಲಲ್ಲಾ. ನಮ್ಮ ಮಿತ್ರರ ಕೃಷಿ ಬರಹಗಾರರ ಲೇಖನವನ್ನು ಪ್ರಕಟಿಸುತ್ತೇವೆ. ಇದು ಕೃಷಿಕರ ಜಗತ್ತಿನ ಸುತ್ತಲಿನ ಪ್ರಪಂಚ ಮಾತ್ರಕ್ಕೆ ಸೀಮಿತ .
ಭೇಟಿ ಕೊಡಿ- ರೈತಾಪಿ
ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ
ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...
e blag tumba channagide