ಇದು ಹಿಂದೂ ನೆಡೆದದ್ದೇ, ಮುಂದೆಯೂ ನೆಡೆಯುವಂಥದ್ದೇ..

ಮೂಲ ಲೇಖಕರು ~ ಮೀನಾ ಕಂದಸಾಮಿ
ಕನ್ನಡಾನುವಾದ: ಸಂವರ್ತ ‘ಸಾಹಿಲ್’

ಹತ್ರಾಸ್ ಎಂಬಲ್ಲಿ
ಪೊಲೀಸರು
ಅತ್ಯಾಚಾರಕ್ಕೊಳಗಾದ ಹೆಣ್ಣಿನ ಮನೆಯನ್ನೇ ಸುತ್ತುವರಿದು
ಆಕೆಯ ಹೆಣವನ್ನು
ಅಪಹರಿಸುತ್ತಾರೆ
ಖೂನಿ ರಾತ್ರಿಯಲ್ಲಿ
ಆಕೆಯ ತಾಯಿಯ ಗೋಳಿಗೂ ಕಿವಿಗೊಡದೆ
ಹೆಣವನ್ನು ಸುಡುತ್ತಾರೆ
ದಲಿತರಿಗೆ ರಾಜಕೀಯ ಶಕ್ತಿ
ಇಲ್ಲದ ನಾಡಿನಲ್ಲಿ
ಅವರಿಗೆ
ರೊಚ್ಚಿಗೇಳಲೂ ಆಸ್ಪದವಿಲ್ಲ
ಶೋಕಿಸಲೂ ಆಸ್ಪದವಿಲ್ಲ.
ಇದು ಹಿಂದೂ ನೆಡೆದದ್ದೇ, ಮುಂದೆಯೂ ನೆಡೆಯುವಂತದ್ದೇ.

ಸುಡುಬೆಂಕಿಗೆ ನೆನಪಿದೆ. ಎಲ್ಲಾ ನೆನಪಿದೆ.
ಸತಿ ಹೆಸರಲ್ಲಿ ಜೀವಂತ ದಹಿಸಲಾದ ಮದುಮಗಳು.
ಜಾತಿ ಮೀರಿ ಸಖ್ಯ ಬೆಳೆಸಿದ
ಪ್ರೇಮಿಗಳ ರೋಧನೆ.
ಕತ್ತರಿಸಿದ ನಾಲಗೆಯ ಹೆಂಗಸಿನ ಮೌನ-ಚೀರು.
ಇದು ಹಿಂದೂ ನೆಡೆದದ್ದೇ, ಮುಂದೆಯೂ ನೆಡೆಯುವಂತದ್ದೇ.

ಮನು ಹಿಂದೊಮ್ಮೆ ಹೇಗೆ ಹೇಳಿದ್ದ.
ವೀರ್ಯನೆತ್ತಿಗೇರಿದ ಅವನ ಹಿಂಬಾಲಕರು
ಇಂದಿಗೂ ಅದನ್ನೇ ಪಠಿಸುತ್ತಾರೆ:
ಹೆಣ್ಣೆಂದರೆ ವೇಶ್ಯೆ,
ಹಾಗಾಗಿ ಎಲ್ಲ ಹೆಣ್ಣು ಅಡಿಯಾಳಾಗಿರಬೇಕು
ಹೆಣ್ಣ ಕಾಮದಾಹಿ
ಹಾಗಾಗಿ ಅತ್ಯಾಚಾರವೇ ಅವರ ಪಾಲಿಗೆ ಇರಲಿ.
ಮನು ಗಂಡಸರಿಗೆಲ್ಲಾ ಲೈಸನ್ಸ್ ನೀಡಿದ
ಅತ್ಯಾಚಾರಕ್ಕೆ ಆಜ್ಞೆ ನೀಡಿದ.
ಅತ್ಯಾಚಾರ ಎಸಗಲು ಅಧಿಕಾರ ನೀಡಿದ.
ಇದು ಹಿಂದೂ ನೆಡೆದದ್ದೇ, ಇನ್ನ್ಮುಂದೆಯೂ ನೆಡೆಯುವಂತದ್ದೇ.

ಇದು ಹಿಂದೂ ನೆಡೆದದ್ದೇ, ಮುಂದೆಯೂ ನೆಡೆಯುತ್ತಲೇ ಇರುವಂಥದ್ದೇ
ಸನಾತನ- ಸದ್ಯ ಈ ದೇಶದಲ್ಲಿ ಚಾಲ್ತಿಯಲ್ಲಿರುವ ಏಕೈಕ ಕಾನೂನು
ಸನಾತನ- ಏನೂ ಬದಲಾಗದ, ಏನೇನೂ ಬದಲಾಗದ ಒಂದು ವ್ಯವಸ್ಥೆ.
ಯಾವಾಗಲೂ, ಅಪರಾಧಕ್ಕೊಳಗಾದವರನ್ನೇ ದೂಷಿಸುತ್ತದೆ
ಅತ್ಯಾಚಾರಿಗಳನ್ನು ರಕ್ಷಿಸುತ್ತದೆ, ಪೊಲೀಸ್ ಆಡಳಿತವಾಗಿರುತ್ತದೆ
ಜಾತಿ ವ್ಯವಸ್ಥೆಯ ಇರುವನ್ನು ನಿರಾಕರಿಸುವ ಮಾಧ್ಯಮವನ್ನು ಪೋಷಿಸುತ್ತದೆ.

ಇದು ಹಿಂದೂ ನೆಡೆದದ್ದೇ, ಮುಂದೆಯೂ ನೆಡೆಯುವಂಥದ್ದೇ.

ಸಂವರ್ತ ಸಾಹಿಲ್ : ಕವಿ , ಅನುವಾದಕ ಮತ್ತು ಚಿಂತಕರು.

‍ಲೇಖಕರು Avadhi

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಗಳೆಗಳು ಬೇಕು..

ರಗಳೆಗಳು ಬೇಕು..

ಅನುಷ್ ಶೆಟ್ಟಿ ಯಾರೂ ಇರದ, ಯಾವ ಕೆಲಸವೂ ಇರದ, ಯಾವ ಜಂಜಾಟಗಳು, ರಗಳೆಗಳು, ಒತ್ತಡವೂ ಇರದ, ಸದ್ದಿರದ, ಏನೂ ಮಾಡದೆ ಎಲ್ಲರಿಂದ ದೂರವಿರುವ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This