’ಇದೂ ಕೂಡ ಒಂದು ಭ್ರಷ್ಟಾಚಾರವಲ್ಲವೇ?’ ದಿಲಾವರ್ ರಾಮದುರ್ಗ್ ಕೇಳುತ್ತಾರೆ

ದಿಲಾವರ್ ರಾಮದುರ್ಗ್

ನಮ್ಮಲ್ಲಿ ವಿಶ್ವವಿದ್ಯಾಲಯಗಳು ಎಲ್ಲಾ ವಿಷಯಗಳನ್ನು ಒಂದೇ ಸೂರಿನಡಿ ತಂದು ಅವೆಲ್ಲವಕ್ಕೂ ಒಂದೇ ಮಾನದಂಡದಿಂದ ನೋಡಿ ಎಲ್ಲಾ ಕಲಸುಮೇಲೋಗರ ಮಾಡಿಟ್ಟುಕೊಂಡಿವೆ. ಕೆಲವು ವಿಷಯಗಳಿಗೆ ಪ್ರತ್ಯೇಕವಾದ ವಿಶೇಷ ಗಮನ ಬೇಕಾಗುತ್ತದೆ. ಲಲಿತಕಲೆಗಳು ಅಂದರೆ ಪೇಂಟಿಂಗ್, ಡ್ರಾಯಿಂಗ್, ಥಿಯೇಟರ್ (ಡಾನ್ಸ್, ನಾಟಕ ಇತ್ಯಾದಿ), ಜರ್ನಲಿಸಂ, ಸಂಗೀತ… ಹೀಗೆ ಇವೆಲ್ಲವೂ ಪ್ರತ್ಯೇಕವಾದ ಮತ್ತು ಅಂತರ್ ಸಂಬಂಧೀಯ ಬಹುಶಿಸ್ತೀಯ ವಿಭಾಗಗಳು. ಇವೆಲ್ಲವಕ್ಕೆ ವಿಶ್ವವಿದ್ಯಾಲಯಗಳ ಅಗತ್ಯವಿದೆ.
ಇಂಥ ಚಿಂತನೆಗಳನ್ನು ತುಂಬ ಸಮಯದಿಂದ ಸಹೋದ್ಯೋಗಿ ಮಿತ್ರರು ಮತ್ತು ಕಲಾವಿದರೊಟ್ಟಿಗೆ ಚರ್ಚಿಸುತ್ತಿರುತ್ತೇನೆ. ಇಂಥ ಹಲವಾರು ಗಹನವಾದ ಚಿಂತನೆಗಳನ್ನು ನಾನು ಆಗಾಗ ನನಗೆ ಭೇಟಿ ಮಾಡುವ ಈ ಎಲ್ಲ ವಿಭಾಗಗಳ ಸ್ನೇಹಿತರೊಟ್ಟಿಗೂ ಚರ್ಚಿಸುತ್ತಲೇ ಇರುತ್ತೇನೆ. ಅವರ ಕಲ್ಪನೆಗಳಿಗೆ ಮತ್ತು ಚಿಂತನೆಗಳಿಗೆ ನಾನು ಅದೆಷ್ಟೊ ಬಾರಿ ಸ್ಪಷ್ಟವಾದ ಪರಿಕಲ್ಪನೆಗಳನ್ನು ಕಟ್ಟಿಕೊಡುತ್ತಿರುತ್ತೇನೆ. ಕೆಲವರು ಅದನ್ನು ಹಸಿಬಿಸಿಯಾಗಿ ಗಬಕ್ಕನೆ ನುಂಗಿ, ಅಜೀರ್ಣ ಮಾಡಿಕೊಂಡುಬಿಡುತ್ತಾರೆ. ಹಾಗೆ ಅಜೀರ್ಣ ಮಾಡಿಕೊಂಡವರು ಎಲ್ಲೆಲ್ಲೊ ಅದನ್ನು ಹಸಿಬಿಸಿಯಾಗಿ ಹೊಸ ಆಲೋಚನೆಗಳ ಹಪಾಹಪಿಗೆ ಬಿದ್ದವರಂತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಹೀಗಾಗಿಯೇ ಚಿಂತನೆಗಳ ಭ್ರಷ್ಟಾಚಾರ ಎಲ್ಲೆಡೆ ರಾರಾಜಿಸತೊಡಗುತ್ತದೆ. ಯಾರದೋ ಸೋಪಜ್ಞ ಚಿಂತನೆಯನ್ನು ಎತ್ತಿ ತಮ್ಮದಾಗಿಸಿಕೊಳ್ಳುವುದು ಕೂಡ ಒಂದು ಭ್ರಷ್ಟಾಚಾರವಲ್ಲವೇ?
]]>

‍ಲೇಖಕರು G

June 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This