ಇದೇನ ಸಭ್ಯತೆ, ಇದೇನ ಸ೦ಸ್ಕೃತಿ?

ಕನ್ನಡ ಚಿತ್ರಗಳ ಬರಗೆಟ್ಟ ಲಿರಿಕ್ಸ್ ಗಳು

– ಸುಘೋಷ್ ಎಸ್ ನಿಗಳೆ

ಕಾಶಸ್ ಮೈ೦ಡ್ ಇದಕ್ಕಿಂತ ಹೊಲಸು ಹಾಗೂ ಅಶ್ಲೀಲವಾದದ್ದನ್ನ ಬರೆಯಲು ಸಾಧ್ಯವೇ ಇಲ್ಲ. ಉದಾ-1. ಊ ಲಾಲಾ ಊಲಾಲಾ ಇದು ಹಾಲು ಕೊಡೊ ಎಮ್ಮೆ, ಊ ಲಾಲಾ ಊಲಾಲಾ ಹಾಲ್ ಕರ್ಕೋ ನೀ ಸುಮ್ನೆ, ಮುಂದಿನಿಂದಲೂ ಹಿಂದಿನಿಂದಲೂ ಹಾಯೋ ಕೋಣ ಯಾಕೆ. (ಕಠಾರಿವೀರ ಸುರಸುಂದರಾಂಗಿ) ಉದಾ-2. ಕಣ್ಮುಚ್ರೋ ಕಣ್ಮುಚ್ರಿ, ಪೈಲ್ವಾನ್ ಮಂದಿಯಲ್ಲಿ ವಿನಂತಿ, ಫಾರಿಲ್ ಹುಡುಗಿ ಬಂದ್ಲು ಕಣ್ಮುಚ್ರಿ. ಈ ಹಾಡುಗಳಿಗೆ ಅತ್ಯಂತ ಕಡಿಮೆ ಬಟ್ಟೆಯನ್ನು ಹಾಕಿಕೊಂಡಿರುವ ನಟಿಯರು(?) ಅಸಹ್ಯವಾಗಿ ಕುಣಿದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಚಿತ್ರಗಳು, ಲಿರಿಕ್ಸ್ ಗಳು ನೋಡಿದರೆ, ಯಾವ ಮಟ್ಟದಲ್ಲಿ ಚಿತ್ರರಂಗ ಪರಿಕಲ್ಪನೆ ಹಾಗೂ ಪ್ರತಿಭೆಗಳ ಕೊರತೆಯಿಂದ ಬಳಲುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ಲಾಂಗು ಮಚ್ಚು ಆಧಾರಿತ ಚಿತ್ರಗಳು ಇನ್ನೂ ಬರುತ್ತಿರುವುದು, ಕ್ರಿಯೇಟಿವಿಟಿ ಹೆಸರಿನಲ್ಲಿ ಅಸಹ್ಯ ಹಾಗೂ ಮುಜುಗರವನ್ನುಂಟು ಮಾಡುವುದು ಸರಿಯಾ? ಮನೆಮಂದಿಯಲ್ಲಾ ಕುಳಿತು ನೋಡಬಹುದಾದ ಸಿನಿಮಾ ಇದು ಅಂತ, ಕೆಲ ನಿರ್ದೇಶಕರು, ನಿರ್ಮಾಪಕರು ಹೇಳುತ್ತಾರೆ. ಆದರೆ ಅವರು ನಿರ್ದೇಶಿಸಿದ ಚಿತ್ರಗಳನ್ನು ಮನೆಮಂದಿಯೆಲ್ಲ ಕುಳಿತು ನೋಡಿದರೆ, ನಿರ್ದೇಶಕನ ಮನೆಮಂದಿ ಎಂಥವರಿರಬಹುದು ಎಂದು ಆಶ್ಚರ್ಯವಾಗುತ್ತದೆ. ಕಾಪಾಡು ದೇವರೆ!!  ]]>

‍ಲೇಖಕರು G

June 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

5 ಪ್ರತಿಕ್ರಿಯೆಗಳು

 1. sangeetha

  ಸುಘೋಷ್ ನಿಗಳೆಯವರು ಬರೆದ ಸ್ಪಷ್ಟವಾದ ಮಾತುಗಳಿಗೆ ನನ್ನ ಕೃತಜ್ನತೆಗಳು.ಏನು ಬರೆದರೂ ಕಾವ್ಯವಾಗುತ್ತದೆ ಮತ್ತು ಕನ್ನಡದ ಪ್ರೇಕ್ಷಕರು ಏನು ಕೊಟ್ಟರೂ ಮಹಾಪ್ರಸಾದವೆಂದು ಸ್ವೀಕರಿಸುತ್ತಾರೆ ಎಂಬ ತಿಳುವಳಿಕೆಗೆ ನಮ್ಮ ನಿರ್ಮಾಪಕ ನಿರ್ದೇಶಕರುಗಳು ಬಂದು ದಶಕಗಳೇ ಕಳೆದಿವೆ…ಈಗ ಜನರು ಕನ್ನಡ ಸಿನಿಮಾ ನೋಡೋ ಹಾಗೆ ಮಾಡೋದು ಹೇಗೆ ಅಂತ ಸಂಶೋಧನೆ ಮಾಡೋ ಕಾಲ. ಈಗ ಇರೋ ಬೆರಳೆಣಿಕೆಯ ಪ್ರೇಕ್ಷಕರುಗಳನ್ನೂ ಬೇರೆ ಕಡೆ ವಲಸೆ ಕಳಿಸೋ ಕೊನೆಯ ಪ್ರಯತ್ನ.
  ಎಸ್. ಸಂಗೀತಾ ಜಾನ್ಸನ್

  ಪ್ರತಿಕ್ರಿಯೆ
 2. sritri

  ಸಾಲದ್ದಕ್ಕೆ, ‘ಮುತ್ತಿನಂಥ ಮಾತೊಂದು’ ಎಂಬ ಮುದ್ದಾದ ಹಾಡು ಈ ಕಠಾರಿ ವೀರರ ಪ್ರಹಾರಕ್ಕೆ ಗುರಿಯಾಗಿದೆ 🙁

  ಪ್ರತಿಕ್ರಿಯೆ
 3. Bheemashankar

  Yes, ‘ಮುತ್ತಿನಂಥ ಮಾತೊಂದು’ ಎಂಬ ಮುದ್ದಾದ ಹಾಡು ಈ ಕಠಾರಿ ವೀರರ ಪ್ರಹಾರಕ್ಕೆ ಗುರಿಯಾಗಿದೆ

  ಪ್ರತಿಕ್ರಿಯೆ
 4. ವಾಸುದೇವ ನವಿಲೇಕರ್

  ಇತ್ತೀಚಿನ ಕನ್ನಡ ಸಿನಿಮಾ ನೋಡಿದ್ರೆ ಯಾಕಪ್ಪ ಈ ಗತಿ ಬಂತು ಅನ್ಸುತ್ತೆ.ಮೊನ್ನೆ ಮನೆಗೆ ನೆಂಟರು ಬಂದಿದ್ರು ಅಂತ ಕಾಮಿಡಿ ಸಿನಿಮಾ ಅಂತ ಹೋದ್ರೆ,ಮದ್ಯದಲ್ಲೇ ಓಡಿ ಬರುವ ಹಾಗಾಯ್ತು.ಕೀಳು ಅಭಿರುಚಿಯ ಹಾಸ್ಯ,ಕೆಟ್ಟ ಕತೆ…ಇತ್ಯಾದಿ.ಒಮ್ಮೆಲೆ ಮನಸ್ಸು ಡಾ.ರಾಜಕುಮಾರ್ ರವರ ಹಳೆ ಸಿನಿಮಾಗಳನ್ನ ಮೆಲುಕು ಹಾಕಿತು ಹಾಗು ಇನ್ನು ಸದ್ಯ ಕನ್ನಡ ಸಿನಿಮಾ ನೋದಬಾರದು ಅಂತ ತೀರ್ಮಾನ ಮಾಡಿದೆ.ಅಲ್ಲ,ಡಬ್ಬಿಂಗ್ ವಿರೋದಿಸುವವರು ಒಳ್ಳೆ ಸಿನಿಮಾ ಕೊಡ್ಬಾರ್ದ?

  ಪ್ರತಿಕ್ರಿಯೆ
 5. Gururaj

  Hello,
  The problem is if they make movie like paramathma, bhagirathi
  people are not watching.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: