'ಇದೇ ಬದುಕದಾರೆ, ಇದು ಹೀಗೇಕಿದೆ?' – ಒ೦ದಿಷ್ಟು ಗುಲ್ಜಾರ್

1982 ರಲ್ಲಿ ತೆರೆಕ೦ಡ ಮಹೇಶ್ ಭಟ್ ನಿರ್ದೇಶನದ ಅರ್ಥ್ ತನ್ನ ಕಥೆ, ಅಪೂರ್ವವಾದ ತಾರಾಗಣ, ನಟನೆ, ಅರ್ಥಪೂರ್ಣ ಹಾಡುಗಳು, ಸ೦ಗೀತದಿ೦ದ ಮನಸೆಳೆದ ಚಿತ್ರ.  ಆ ಚಿತ್ರದ ಒ೦ದು ಹಾಡು ’ಕೋಯಿ ಯಹ ಕೈಸೆ ಬತಾಯೆ ವೊ ತನ್ಹಾ ಕ್ಯೂ ಹೈ…’.  ಗುಲ್ಜ಼ಾರ್ ಅವರ ಈ ಕವಿತೆಯ ಭಾವಾನುವಾದ ಮಾಡಿ ಕಳಿಸಿರುವವರು ಸ್ವರ್ಣ ಎನ್ ಪಿ.  ಈ ಕವನ ನಿಮಗಾಗಿ.

 

ಉತ್ತರ ಸಿಗದ ಪ್ರಶ್ನೆಗಳು

– ಸ್ವರ್ಣಾ ಎನ್ ಪಿ

ಬೋಳು ಮರದ ಹಕ್ಕಿ ತಾನೇಕೆ ಒಂಟಿ, ಎಂದು ಹೇಗೆ ಹೇಳೀತು?

ತನ್ನವರೇಕೆ ಪರಕೀಯರಾದರೆಂದರೆ, ಕೋಕಿಲ ಏನು ಹಾಡೀತು ?

ಇದೇ ಬದುಕದಾರೆ, ಇದು ಹೀಗೇಕಿದೆ?

ಇದೇ ವಿಧಿಯಾದರೆ, ಅದು ಹಾಗೇಕಿದೆ?

 

ಆಸರೆಗೊಂದು ಹಸ್ತ ಸಿಕ್ಕರೆ, ಸೆರಗ ಹಿಡಿಯಬೇಕು,

ಅವಳ ಎದೆಯಲೆನ್ನ ಬಡಿತ ಮಿಲಿತವಾಗಬೇಕು.

ನನ್ನ ಎದೆ ಬಡಿತವೇ ಇಷ್ಟೊಂದು ದೂರವೇಕಿದೆ?

ಇದೇ ಬದುಕದಾರೆ, ಇದು ಹೀಗೇಕಿದೆ?

ಇದೇ ವಿಧಿಯಾದರೆ, ಅದು ಹಾಗೇಕಿದೆ?

 

ಒಡೆದ ಮನದ ಚೂರುಗಳ ನಾನಿನ್ನು ಹೆಕ್ಕಿಲ್ಲ,

ಈ ಮುರುಕು ಬಾಗಿಲಲಾಗಲೇ ಸದ್ದಾಗುತ್ತಿದೆಯಲ್ಲ !

ಹರಿದ ಆಸೆ ಹೂಗಳ ಮತ್ತೆ ಪೋಣಿಸಲಹುದೆ ?

ಇದೇ ಬದುಕದಾರೆ, ಇದು ಹೀಗೇಕಿದೆ?

ಇದೇ ವಿಧಿಯಾದರೆ, ಅದು ಹಾಗೇಕಿದೆ?

 

ನೀ ಇದ ಏನನ್ನುವಿಯೋ? ಕಣ್ಣಿನ ಬಂಧ ಇಲ್ಲ ಕಂಬನಿಯ ಬಂಧ?

ಅವರೆನ್ನುತ್ತಾರೆ , ‘ಪ್ರೇಮ’ ಜನ್ಮಜನ್ಮದ ಬಂಧ

ಜನ್ಮಜನ್ಮದ ಬಂಧ, ಬದಲಾಗುತಿಹುದೇ ?

ಇದೇ ಬದುಕದಾರೆ, ಇದು ಹೀಗೇಕಿದೆ?

ಇದೇ ವಿಧಿಯಾದರೆ, ಅದು ಹಾಗೇಕಿದೆ?

   ]]>

‍ಲೇಖಕರು G

June 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

ನಂಬಿಕೆ

ನಂಬಿಕೆ

ಗೀತಾ ಜಿ ಹೆಗಡೆ ಕಲ್ಮನೆ ಹಿಂದಿಂದೇ ಬರುವ ಒಂಟಿ ನೆರಳೊಂದುಕೇಳುತ್ತಿದೆ ಅವನೆಲ್ಲಿ ಬೇಗ ಹೇಳುಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆನನಗೂ ಈಗ...

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

3 ಪ್ರತಿಕ್ರಿಯೆಗಳು

 1. Badarinath Palavalli

  ವಾವ್ ಗುಲ್ಜಾರ್ ಸಾಬ್,
  ಮೂಲ ಕವಿತೆಗೆ ಬಂಗ ಬರದ ಹಾಗೇ ಭಾವಾನುವಾದವೇ ಅಲ್ಲವೇನೋ ಅನ್ನುವಂತೆ ಬರೆದುಕೊಟ್ಟಿದ್ದೀರ. ತುಂಬಾನೇ ಇಷ್ಟವಾಯಿತು.

  ಪ್ರತಿಕ್ರಿಯೆ
 2. Swarna

  ಈ ಕವಿತೆ, ಕೈಫಿ ಆಜ್ಮಿಯವರದ್ದು.
  ಪ್ರಮಾದಕ್ಕಾಗಿ ಕ್ಷಮಿಸಿ.
  ಸ್ವರ್ಣಾ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: