ಟಿ ಕೆ ದಯಾನಂದ

ಟಿ ಕೆ ದಯಾನಂದ
ಲೀಲಾ ಅಪ್ಪಾಜಿ (ಹುಸೇನ್ ರಚಿಸಿದ ಬುದ್ಧ ಹಾಗೂ ಗಾಂಧಿ ವರ್ಣಚಿತ್ರ) ಅವನು ಬದ್ಧ ಹಾಗೂ ಬುದ್ಧ ಸಿದ್ಧಾರ್ಥನಾಗಿದ್ದವ ಅರ್ಥಕ್ಕೆ ಸೀಮಿತವಾದರೆ...
ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...
ಅಪಾರ ಒಂದು ಕಾಲದಲ್ಲಿ ನನ್ನ ಫೇಸ್ಬುಕ್ ಹೀಗಿರಲಿಲ್ಲ ಎಂದು ಬರೆಯುವಾಗ ನನಗೆ ೧೨೦ ವರ್ಷ ವಯಸ್ಸಾಗಿರುವಂತೆ ಭಾಸವಾಗುತ್ತಿದೆ. ಹೌದು ಆಗ...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಶುದ್ಧ ಅಸಂಬದ್ಧ.
ಬೆಕ್ಕನ್ನು ದೇವರ ಮುಂದೆ ಇಟ್ಟು ಅತ್ತಿದ್ದು ಮುಗ್ಧತೆ ಸರಿ.
ಆದರೆ ದೇವರನ್ನು ದ್ವೇಶಿಸಬೇಕಾದರೆ ನೀವು ದೇವರನ್ನು ನಂಬಬೇಕು. ನೀವು ಯಾವುದನ್ನು ನಂಬುವುದಿಲ್ಲವೋ ಅದು ನಮ್ಮ ಪಾಲಿಗೆ non existing. Non existing ವ್ಯಕ್ತಿ ಅಥವ ವಿಚಾರವನ್ನು ಪ್ರೀತಿಸುವ ಅಥವ ದ್ವೇಶಿಸುವ ಪ್ರಶ್ನೆಯೇ ಉಧ್ಭವಿಸುವುದಿಲ್ಲ.
Devaru manassu durbalavaadaga, apyayate, santvana koduva `aalambhana sukha’. `Tallanisadiru kandya, taalu manave, ellaranu salahuvanu idake samshaya beda’ endu Kanaka daasara salannu nenapisikolli. innu Devarannu nambi haaladavarantu illa. badalaagi ellaru uddaravadavare. Nambuvavarige astara mattihe sukha koduvudadare nimagenu nasta? `ellaru tanagagi aluvavare. Devarigagi aluvavaru yaaru illa’ emba Ramakrishna paramahamsara matannu nenapisi kolli. shuddanushudda `prarthane’ge shakti ide. Anumanada prarthanegalu phalisuvudilla.
ಬಹಳಷ್ಟು ಜನರಿಗೆ ವಿಭಿನ್ನವಾಗಿ ಬದುಕೋದು ಅಂದ್ರೆ ಇಷ್ಟ. ನಾಸ್ತಿಕರ ಮೊದಲನೇ ಸಮಸ್ಯೆ ಅಂದ್ರೆ ದೇವರನ್ನು ನಂಬದೇ ಇರೋದಕ್ಕಿಂತ ‘ನಾನು ನಿನ್ನನ್ನು ನಂಬಲ್ಲ ಕಣಯ್ಯ ಏನ್ ಕಿತ್ಕೋತೀಯಾ ಕಿತ್ಕೋ’ ಅಂತ ದೇವರಿಗೇ ಚ್ಯಾಲೆಂಜ್ ಹಾಕೋದು! ಹೀಗೆ ಚ್ಯಾಲೆಂಜ್ ಹಾಕೋ ಮೂಲಕ ದೇವರನ್ನು ನಂಬಿ ಹೆದರುತ್ತಾ ಬದುಕಿರೊ ಜನರ ಮುಂದೆ ಸಾಹಸಿ ಅನ್ನಿಸಿಕೊಳ್ಳೋದು.
ದೇವರೇನಾದ್ರೂ ನಿಮ್ಮಂಥವರ ಮಾತು ಕೇಳಿ ಬೆಕ್ಕನ್ನು ಬದುಕಿಸಿದ್ರೆ ಈ ಪ್ರಪಂಚ ಬರೀ ಬೆಕ್ಕಿನಿಂದಲೇ ತುಂಬಿರ್ತಾ ಇತ್ತು!
ಬಹಳಷ್ಟು ಜನರು ಬಹಳಷ್ಟು ವಿಷಯಗಳನ್ನು ನಂಬಲ್ಲ. ಕೆಲವರು ಹೆಂಡತಿಯನ್ನು ನಂಬಲ್ಲ, ಕೆಲವರು ಮಕ್ಕಳನ್ನು ನಂಬಲ್ಲ, ಕೆಲವರು ತಮ್ಮ ಬಾಸ್ ಅನ್ನು ನಂಬಲ್ಲ, ಕೆಲವು ಬಾಸ್ ಗಳು ತಮ್ಮ ನೌಕರರನ್ನು ನಂಬಲ್ಲ! ಆದರೆ ಯಾರೂ ಈ ಬಗ್ಗೆ ಮಾತಾಡಿಕೊಳ್ಳಲ್ಲ.
ಆದರೆ ದೇವರನ್ನು ನಂಬದವರು ಮಾತ್ರ ಪದೇ ಪದೇ ಅದನ್ನು ಹೇಳ್ತಾ ಇರ್ತಾರೆ.
ಬೆರಳೆಣಿಕೆಯ ಜನರು ತಪ್ಪು ಮಾಡಲು ದೇವರು/ಧರ್ಮ ಹೇಗೆ ಕಾರಣವೋ ಹಾಗೇ ಕೋಟ್ಯಾಂತರ ಜನರು ತಪ್ಪು ಮಾಡದೇ ಇರಲೂ ದೇವರ ಭಯವೇ ಕಾರಣ!
ಈ ಒಂದು ಕಾರಣಕ್ಕಾದ್ರೂ ದೇವರು ಇರ್ಲಿ ಬಿಡ್ರಿ…
ದೇವರು ಧರ್ಮವನ್ನು ಸಾಧನವನ್ನಾಗಿ ಬಳಸಿಕೊಂಡು ತಪ್ಪು ಮಾಡುವವರು, ಮೋಸ ಮಾಡುವವರು ಬೆರಳೆಣಿಕೆಯಷ್ಟೆ ಜನರಿರಬಹುದು. ಆದರೆ, ಅವರಿಂದ ಮೋಸಕ್ಕೆ ಒಳಗಾಗುವವರು ಕೋಟ್ಯಂತರ ಜನ ಅಮಾಯಕರು. ಮಾಟ, ಮಂತ್ರ, ಜೋತಿಷ್ಯ, ಪೂಜಾರಿ, ಕವಡೆ ಹಾಕೂರು, ಕಣಿ ಹೇಳೋರು, ಮೈಮೇಲೆ ದೇವರು ಭರಿಸಿಕೊಳ್ಳೋರಿಂದ ಹಿಡಿದು ಇಂದಿನ ಆಧುನಿಕ ಧರ್ಮೋಧ್ಯಮಿಗಳಾದ ನಿತ್ಯಾನಂದ, ರವಿಶಂಕರ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಇಂಥವರನ್ನು ನಂಬಿ ಎಷ್ಟು ಜನ ಮುಗ್ದರು ಬದುಕು ಕಳಕೊಂಡರಿದ್ದಾರೆ.
ವಿಧವೆಯರ ತಲೆ ಬೋಳಿಸುವಿಕೆ, ಮಡೆಸ್ನಾನ,ದೇವದಾಸಿ, ಸಿಡಿ ಹಾಯೋದು, ಬೆತ್ತಲೆ ಪೂಜೆ, ನರಬಲಿ, ಸತಿಸಹಗಮನ ತಥ್ಥರಿಕೆ ದೇವರ ಹೆಸರಲ್ಲಿ ಎಷ್ಟೊಂದು ಅನಾಚಾರಗಳು.
ದೇವರ ಹೆಸರಲ್ಲಿ ಮನುಷ್ಯ- ಮನುಷ್ಯರ ನಡುವೆ ಬೆಂಕಿ ಹಚ್ಚುತ್ತಿರುವ ಕೋಮುವಾದ, ಜಾತಿವಾದ, ಮೂಲಭೂತವಾದಗಳೆಲ್ಲವೂ ದೇವರು-ಧರ್ಮಗಳ ಉಪ ಉತ್ಪನ್ನಗಳು.
ದೇವರ ಬಗ್ಗೆ ಅನಾದಿ ಕಾಲದಿಂದಲೂ ಚರ್ಚೆ ನಡೆಯುತ್ತಲೆ ಎಂಥೆಂಥ ಮಹಾಮಹಿಮರು ದೇವರ ಸಂಶೋಧನೆಯಲ್ಲಿ ಸೊತು ನನ್ನೊಳಗಿನ ಜೀವವೇ ದೇವರು ಎಂಬ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ. ಇಲ್ಲದ ದೇವರ ಬಗ್ಗೆ ಏಕೆ ಸಣ್ಣತನದ ಜಗಳ. ಗೊತ್ತಿದ್ದು ಗೊತ್ತಿದ್ದು ಮೂರ್ಖ ಸಮರ್ಥನೆ ಏಕೆ. ದೇವರ ನಂಬುವಿಕೆಗೆ ಹಾಳುಮಾಡಿಕೊಳ್ಳುವ ಶಕ್ತಿಯನ್ನು ಬೇರೆ ಎನನ್ನಾದರೂ ಕಲಿಯುವಿಕೆಗೆ ಕಳೆಯುವುದು ಒಳಿತಲ್ಲವೇ. ನಮ್ಮ ಮುಂದಿನ ಸಂತತಿಯಾದರೂ ದೇವರ ಬಗೇಗಿನ ಮೌಡ್ಯವನ್ನು ತೊರೆದು, ಧರ್ಮದ ಸೋಂಕಿಲ್ಲದ ಶುದ್ಧ ಮಾನವರಾಗಿ, ಮಾನವರಂತೆ ಬದುಕುವಂತಾಗಲಿ.
ನಾಸ್ತಿಕರ ಮೊದಲನೇ ಸಮಸ್ಯೆ ಅಂದ್ರೆ ದೇವರನ್ನು ನಂಬದೇ ಇರೋದಕ್ಕಿಂತ ‘ನಾನು ನಿನ್ನನ್ನು ನಂಬಲ್ಲ ಕಣಯ್ಯ ಏನ್ ಕಿತ್ಕೋತೀಯಾ ಕಿತ್ಕೋ’ ಅಂತ ದೇವರಿಗೇ ಚ್ಯಾಲೆಂಜ್ ಹಾಕೋದು!!!.. ಕಾಮಾತ್ರೆ.. ಹೌದು ಅದೇನ್ ಕಿತ್ಕೋತಾನೊ ಕಿತ್ತುಕೊಳ್ಳಿ ನಾನು ನಂಬಕಿಲ್ಲ.. ದೇವರು ಇದ್ರೆಷ್ಟು ಬಿಟ್ರೆಷ್ಟು ಕಿತ್ತು ಗುಡ್ಡೆ ಹಾಕೋದು ನಾವೆ ತಾನೆ.
ದೇವರನ್ನು ನಂಬುವವರು ವಾಸ್ತವವನ್ನು ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಭ್ರಮೆಯ ಬದುಕೇ ಇಷ್ಟ. ದೇವರನ್ನು ನಂಬುವುದು ದುರ್ಬಲ ಮನಸ್ಸಿನ ಲಕ್ಷಣ. ದೇವರನ್ನು ನಂಬದೆ ಇರಲು ವಾಸ್ತವವನ್ನು ಒಪ್ಪಿಕೊಂಡು ಬದುಕುವ ದೃಢವಾದ ಮನಸ್ಸು ಇರಬೇಕು. ಅಂತ ದೃಢತೆ ಪ್ರಪಂಚದಲ್ಲಿ ಬಹಳ ಸಣ್ಣ ಸಂಖ್ಯೆಯ ಮನುಷ್ಯರಿಗೆ ಮಾತ್ರ ಇದೆ. ಹೀಗಾಗಿ ಪ್ರಪಂಚದಲ್ಲಿ ನಾಸ್ತಿಕರ ಸಂಖ್ಯೆ ಬಹಳ ಕಡಿಮೆ. ನಮ್ಮ ಬೇಕು ಬೇಡಗಳನ್ನು ನೋಡಿಕೊಂಡು ನಮ್ಮನ್ನು ರಕ್ಷಿಸುವ ತಂದೆ ತಾಯಿ ಇದ್ದರೆ ನಮಗೆ ಹೆಚ್ಚಿನ ತಾಪತ್ರಯ, ಜವಾಬ್ದಾರಿ ಇರುವುದಿಲ್ಲ. ಇದೇ ರೀತಿ ಮನುಷ್ಯ ತನ್ನ ಪಾಲಕ ದೇವರು ಎಂದು ಆರೋಪಿಸಿಕೊಂಡಿರುವ ಕಾರಣ ಅವನು ವಾಸ್ತವವನ್ನು ಎದುರಿಸುವ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಏಕೆಂದರೆ ಎಲ್ಲವನ್ನೂ ನೋಡಿಕೊಳ್ಳಲು ದೇವರು ಇದ್ದಾನೆ ಎಂಬ ಭಾವನೆ ಅವನದು. ಹೀಗಾಗಿ ಅವನು ಪ್ರಬುದ್ಧನಾಗಿ ತನ್ನ ಜವಾಬ್ದಾರಿಯನ್ನು ತಾನೇ ತೆಗೆದುಕೊಳ್ಳುವುದಿಲ್ಲ, ಸದಾ ಶಿಶುವಾಗಿ ತಂದೆ ತಾಯಿಯ ರಕ್ಷಣೆಯಲ್ಲೇ ಜೀವನ ಕಳೆಯುವ ಮನೋಭಾವ ನಮ್ಮ ಬಹುತೇಕ ಮಾನವ ಜನಾಂಗದ್ದು. ಹೀಗಾಗಿಯೇ ಪ್ರಪಂಚದಲ್ಲಿ ಮಾನವ ಜೀವನ ಹಲವು ಸಮಸ್ಯೆಗಳಿಂದ ಕೂಡಿದೆ. ಈ ಭೂಮಿಯ ಮೇಲೆ ಇರುವ ಸಂಪನ್ಮೂಲ ಹಾಗೂ ಈಗ ಇರುವ ಜನಸಂಖ್ಯೆ ಹೋಲಿಸಿದರೆ ಎಲ್ಲ ಜನರೂ ಅತ್ಯಂತ ಸುಖ ಸಂತೋಷದಿಂದ ಜೀವನ ಕಳೆಯಲು ಬೇಕಾದ ಸಂಪನ್ಮೂಲ ಲಭ್ಯವಿದೆ, ಆದರೆ ದೇವರ ಕಲ್ಪನೆಯೇ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ರೂಪಿಸದಂತೆ ಮಾನವ ಜನಾಂಗವನ್ನು ತಡೆಯುತ್ತಿದೆ. ದೇವರ ಕಲ್ಪನೆಯಿಂದ ಬಹುಸಂಖ್ಯಾತ ಮಾನವರು ಹೊರಬಂದರೆ ಅತ್ಯಂತ ಸುಂದರವಾದ ಒಂದು ಜಗತ್ತಿನ ನಿರ್ಮಾಣ ಸಾಧ್ಯ.