ಇನ್ನಷ್ಟು ಪ್ರತಿಭಾ ನ೦ದಕುಮಾರ್

ಈ  ಪುಸ್ತಕಕ್ಕಾಗಿ ಸಂಪರ್ಕಿಸಿ

ಕೆ ಅಕ್ಷತಾ

[email protected]

94491 74662

ವಕ್ರದಂತೆಯ ವಕ್ರೋಕ್ತಿ

– ಪ್ರತಿಭಾ ನ೦ದಕುಮಾರ್

ಆಸೆಗಳ ವಯಸ್ಸು

ಕಳ್ಳ ಪ್ರಣಯದ ಸೊಗಸು ಆದರೆ ಮಧುರಾನುಭವಕ್ಕೆ ಇದ್ದ ತೊಡರುಗಾಲು ನನ್ನಲ್ಲಿ ಆತ್ಮವಿಶ್ವಾಸದ ಕೊರತೆ. ಪಿಯುಸಿಯಲ್ಲಿ ನನಗೆ ಎಂತಹ ಕೀಳರಿಮೆ ಇತ್ತು ಎಂದರೆ ಬದುಕೇ ಕರಾಳ ಎನ್ನಿಸುತ್ತಿತ್ತು. ಆಗಿನ ನನ್ನ ಸೌಂದರ್ಯದ ಪರಿಕಲ್ಪನೆ ಎಂದರೆ ಬೆಳ್ಳಗೆ ಉದ್ದಕ್ಕೆ ನೀಳ ಕೂದಲು, ಸುಂದರ ಮುಖ, ಎಲ್ಲಕ್ಕಿಂತ ಮುಖ್ಯವಾಗಿ ದಾಳಿಂಬೆ ಸಾಲಿನಂತಹ ಹಲ್ಲು. ನನಗೆ ಅದ್ಯಾವುದೂ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಅಷ್ಟಾವಕ್ರ ಹಲ್ಲು. ಪ್ರೀತಿಸಲು ಸೌಂದರ್ಯ ಅತಿ ಮುಖ್ಯ ಎಂದು ಭ್ರಮಿಸಿದ್ದ ನಾನು ಯಾರೂ ನನ್ನನ್ನು ಪ್ರೀತಿಸಲಾರರು ಎಂದು ಬಲವಾಗಿ ನಂಬಿದ್ದೆ. ರಾಜಕುಮಾರಿ ಕತೇ. . . ಅವಳ ಹೆಸರು ಸೀತೇ. . . . ಎಂದು ಪ್ರಾರಂಭವಾಗುವ ಹಾಡು. ಮೊದಲು ಹಾಡು ಹೇಳಿಕೊಟ್ಟು ನಂತರ ಡ್ಯಾನ್ಸ್ ಹೇಳಿ ಕೊಡ್ತಿದ್ರು ಮೇಡಂ. ನಾನಾಗ ನಾಲ್ಕನೇ ಕ್ಲಾಸಿನಲ್ಲಿದ್ದೆ. ಟೀಚರು ಮೊದಲು ಹಾಡು ಹೇಳಿಕೊಟ್ಟು ನಂತರ ಡ್ಯಾನ್ಸ್ ಪ್ರಾಕ್ಟಿಸ್ ಮಾಡಿಸುತ್ತಿದ್ದರು. ಕ್ಲಾಸಿನ ಎಲ್ಲ ಹುಡುಗಿಯರಿಗಿಂತ ನಾನೇ ಚೆನ್ನಾಗಿ ಡ್ಯಾನ್ಸ್ ಮಾಡ್ತಿದ್ದೆ. ಆದರೆ ನನಗೆ ಸಖಿ ಪಾತ್ರ. ಸ್ವಲ್ಪ ಕೂಡಾ ಡ್ಯಾನ್ಸ್ ಮಾಡಕ್ಕೆ ಬರದೇ ಇರೋಳಿಗೆ ಸೀತೆ ಪಾತ್ರ. ಯಾಕೆಂದರೆ ಅವಳು ನೋಡಕ್ಕೆ ತುಂಬಾ ಸುಂದರವಾಗಿದ್ದಳು. ಅವಳ ಹಲ್ಲು ಮುತ್ತಿನಂತೆ ಹೊಳೀತಿದ್ದವು. ನಾನು ಚೆನ್ನಾಗಿರಲಿಲ್ಲ. ಅಲ್ಲದೇ ಉಬ್ಬು ಹಲ್ಲು. ಬರೀ ಉಬ್ಬಲ್ಲು ಮಾತ್ರ ಅಲ್ಲ. ಅಷ್ಟಾವಕ್ರ. ಒಂದು ಹಲ್ಲು ಇತರ ಎಲ್ಲರನ್ನೂ ದಬಾಯಿಸಿತದುಕಿ ಮೇಲೆ ಹತ್ತಿ ಕೂತು ಬಿಟ್ಟಿತ್ತು. ಅದರ ಪಕ್ಕದ್ದು ಚೂರಿಯ ಹಾಗೆ ಚೂಪಾಗಿ ತುಟಿಯನ್ನು ಮೀರಿ ಮುಂದಕ್ಕೆ ಚಾಚಿಕೊಂಡಿತ್ತು. ಇವೆರಡರ ಆಟಾಟೋಪಕ್ಕೆ ಹೆದರಿ ಪಕ್ಕದ ಹಲ್ಲುಗಳು ಹಿಂದಕ್ಕೆ ಸರಿಯಲೋ ಮುಂದಕ್ಕೆ ಜರುಗಲೋ ತಿಳಿಯದೇ ಕಕ್ಕಬಿಕ್ಕಿಯಾಗಿ ಅಡ್ಡಡ್ಡ ನಿಂತು ಬಿಟ್ಟಿದ್ದವು. ಬಾಯಿ ತುಂಬಾ ಈ ಹಲ್ಲುಗಳ ಅವಾಂತರದಿಂದಾಗಿ ಎರಡೂ ತುಟಿಗಳು ಪರಸ್ಪರ ಮುಟ್ಟಲಾರದೇ ಕಂಗಾಲಾಗಿ ಸದಾ ಬಿರಿದುಕೊಂಡು ಮೇಲಿನದು ಆಕಾಶ ನೋಡಿದರೆ ಕೆಳಗಿನದು ಪಾತಾಳ ನೋಡುತ್ತಿತ್ತು. ಹಲ್ಲು ಹೇಗಿದ್ರೇನು ನಗು ಬಂದಾಗ ನಗಲೇ ಬೇಕಲ್ಲ. ಆಗ ಬಾಯಿ ಬಿರಿದು ಎಲ್ಲಾ ಹಲ್ಲುಗಳೂ ದಸರಾ ಗೊಂಬೆಗಳ ಹಾಗೆ ಪ್ರದರ್ಶನಕ್ಕೆ ಬಂದೇ ಬಿಡ್ತಿದ್ದವು. ಅದನ್ನ ಮುಚ್ಚಿಡಕ್ಕೆ ತಕ್ಷಣ ನನ್ನ ಕೈ ಬಾಯಿಯ ಮೇಲೆ ಬರುತ್ತಿತ್ತು. ನಮ್ಮ ಮೇಡಂ ತಕ್ಷಣ ‘ಕೈ ತೆಗಿ’ ಅಂತ ಹೇಳಿಯೇ ಮುಂದಕ್ಕೆ ಹೋಗ್ತಿದ್ರು. ನನ್ನನ್ನ ಡ್ಯಾನ್ಸ್ ಗೆ ಸೇರಿಸಿಕೊಳ್ಳೊಕ್ಕೆ ಅವರಿಗೇನೂ ಮಹಾ ಇಷ್ಟ ಇರಲಿಲ್ಲ. ಅನಿವಾರ್ಯವಾಗಿ ಸೇರಿಸಿಕೊಂಡಿದ್ರು. ಒಂದೇ ಒಂದು ಸಲ ನನಗೆ ಮೈಗೆಲ್ಲ ಇಜ್ಜಲಿನ ಕರೀ ಪುಡಿ ಬಳಿದು, ಸೂತ್ತಿನ ಸ್ಕಟರ್ು ಹಾಕಿಸಿ ಆಫ್ರಿಕನ್ ಜೂಲ್ಲಿ ಡ್ಯಾನ್ಸರ್ ಥರಾನೇ ಕಾಣಿಸ್ತಿದ್ದೀಯಾ ಅಂತ ಹೊಗಳಿದ್ರು. ಅವತ್ತೇ ನಾನು ಸ್ಕೂಲ್ ಡೇಗೆ ಪ್ರಾರ್ಥನೆಗೆ ‘ದೇವಿ ಸರಸ್ವತಿ ಧನ್ಯಳಾದೆ ಧ್ಯನ ಧನ್ಯ ಧನ್ಯ ಧನ್ಯ ಧನ್ಯಳಾದೇ. . .’ ಅಂತ ಹಾಡಿದ್ದೆ. ನಮ್ಮ ಸ್ಕೂಲಲ್ಲಿ ಪ್ರತಿ ವರ್ಷ ಕ್ಲಾಸ್ ಫೋಟೋ ತೆಗೆಸುತ್ತಿದ್ದರೂ ಒಂದೇ ಒಂದು ವರ್ಷವೂ ನಾನು ಅದರ ಕಾಪಿ ತೆಗೊಳ್ಳಲಿಲ್ಲ. ಎಲ್ಲ ಫೋಟೋದಲ್ಲೂ ನನ್ನ ಹಲ್ಲೇ ಪ್ರಧಾನವಾಗಿ ಎದ್ದು ಕಂಡು, ಪೊದೆ ಹುಬ್ಬು ಅಷ್ಟಾವಕ್ರ ಹಲ್ಲು, ಗಿಡ್ಡ ಕೂದಲು ನಾನು ವಕ್ರದಂತೆ ಮಹಾಕಾಯೆ. . . ನೀವು ನೋಡಬೇಕಿತ್ತು! ಒಂದೊಂದು ಸಲ ಕನ್ನಡಿ ನೋಡಿಕೊಳ್ಳನೇ ಎಲ್ಲ ಕೋನಗಳಲ್ಲೂ ಪರೀಕ್ಷಿಸಿಕೊಂಡು ನನ್ನ ಹಲ್ಲು ನನಗೇ ಪಳಗಿಬಿಟ್ಟು ಉಬ್ಬು ಅನ್ನೋದೇ ಮರೆತುಹೋಗಿ ನಾನೇ ಮಹಾ ಸುಂದರಿ ಅಂದುಕೊಂಡು ಬಿಡುತ್ತಿದ್ದೆ. ಅದೇ ಭ್ರಮೆಯಲ್ಲಿ ಗಾಳಿಯಲ್ಲಿ ನಡೆದು ಬರುವಾಗ ಯಾರಾದರೂ ‘ಸುಮ್ನಿರೆ ಉಬ್ಬಲ್ಲಿ’ ಎಂದುಬಿಟ್ಟು ನನ್ನ ಭ್ರಮೆಯ ಬಲೂನಿಗೆ ನಿಜದ ಸೂಜಿ ಮೊನೆ ತಗುಲಿ ಟುಸ್ಸನೆ ಅದು ಒಡೆದು ಮೊದಲಿನ ಸ್ಥಿತಿಗೆ ಬರುತ್ತಿದ್ದೆ. ಆಗೆಲ್ಲ ನನಗೆ ಜೀವನದಲ್ಲಿ ಏನನ್ನೂ ಸಾಧಿಸಲು ಕೂಡಾ ಸುಂದರವಾದ ಹಲ್ಲಿರುವುದು ಅತ್ಯಗತ್ಯ ಎನ್ನುವ ಬಲವಾದ ನಂಬಿಕೆ ಇತ್ತು. ದೇಶದ ಪ್ರಧಾನಿ ಆಗಕ್ಕೆ, ಚಲನಚಿತ್ರ ತಾರೆ ಅಗಕ್ಕೆ, ಡಾಕ್ಟರು, ಇಂಜಿನಿಯರ್ ಆಗಕ್ಕೆ, ಹಾಡುಗಾತರ್ಿ ಆಗಕ್ಕೆ, ರೇಷ್ಮೆ ಲಂಗ ಹಾಕೊಳ್ಳಕ್ಕೆ ಗೆಜ್ಜೆ ಕೂಡಿಸು ಬಳೆ ಕೊಡಿಸು, ಅಂತ ಅಮ್ಮನ್ನ ಪೀಡಿಸಕ್ಕೆ, ಯಾರಾದ್ರೂ ಪರಿಚಯ ಮಾಡಿಕೊಟ್ರೆ ನಮಸ್ಕಾರ ಹೇಳಕ್ಕೆ ಎಲ್ಲದಕ್ಕೂ ಸುಂದರ ಹಲ್ಲಿರೋರು ಅತ್ಯಗತ್ಯ ಅನ್ನಿಸಿತ್ತು. ಆದರೆ ನನ್ನ ಹಲ್ಲನ್ನೇನು ಮಾಡೋದು? ಮೈಸೂರಿನ ನಜರ್ಬಾದಿನ ಜ್ಯೋತಿ ಎಲೆಕ್ಟ್ರಾನಿಕ್ ಲಾಂಡ್ರಿಯ ಹಿಂಭಾಗದಲ್ಲಿದ್ದ ಹೆಂಚಿನ ಮನೆಯಲ್ಲಿ ವಾಸವಾಗಿದ್ದ ನಮಗೆ ಹಲ್ಲಿಗೆ ಕ್ಲಿಪ್ಪು ಹಾಕಿ ಸರಿ ಮಾಡುವ ವಿಷಯ ಅಮೇರಿಕಾದವರು ಚಂದ್ರನಲ್ಲಿ ಹೋಗಿ ಇಳಿದಷ್ಟೇ ದೂರವಾಗಿತ್ತು. ಹಲ್ಲು ಸರಿ ಮಾಡಿಸಕ್ಕೆ ಸಾವಿರಾರು ರೂಪಾಯಿ ಖಚರ್ು ಮಾಡೋದು ಅಂದರೇನು? ಅದೂ ಇದ್ದರೆ ತಾನೇ. ಅದಕ್ಕಿಂತ ಹೆಚ್ಚಾಗಿ ನನ್ನ ಮೇಲೆ ಜೋರು ಮಾಡಲು ಅದೆಂತಹ ಅದ್ಬುತ ಮಂತ್ರ. ಎಷ್ಟೇ ಎಗರಾಡ್ತಾ ಇದ್ರೂ ಯಾರಾದ್ರೂ ‘ನೀನೋ ನಿನ್ನ ಹಲ್ಲೋ’ ಅಂದುಬಿಟ್ರೆ ಸಾಕು ನಾನು ಗರುಡ ಮಚ್ಚೆ ಕಂಡ ನಾಗರನ ಹಾಗೆ ತಣ್ಣಗಾಗಿ ಬಿಡ್ತಿದ್ದೆ. ನಮ್ಮ ಎನಿಮಿ ಗ್ಯಾಂಗ್ ನಮ್ಮನ್ನು, ಬೇರೆ ಯಾವುದರಲ್ಲೂ ಸೋಲಿಸಲು ಆಗದಿದ್ದರೂ ‘ಉಬ್ಬಲ್ಲಿ’ ಅಂತ ನನ್ನನ್ನು ಕರೆದು ಸಮಾಧಾನ ಪಟ್ಟುಕೊಳ್ಳುತ್ತಿತ್ತು. ನಾನು ಕಾಲೇಜಿಗೆ ಬಂದಾಗ ನಮ್ಮ ಪದ್ಮ ಮೇಡಂ ಒಂದು ದಿನ ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ ಇದನ್ನು ಯಾರು ವಿವರಿಸ್ತೀರಿ?’ ಅಂತ ಕೇಳಿದಾಗ ಯಾರೂ ತುಟಿಕ್ ಪಿಟಿಕ್ ಅನ್ನದೇ ಕೂತಿದ್ದು ನೋಡಿ ನಾನು ಧೈರ್ಯ ಮಾಡಿ ಎದ್ದು ನಿಂತು ವಿವರಿಸಿಬಿಟ್ಟೆ. ಮೇಡಂ ‘ವೆರಿಗುಡ್’ ಅಂದ್ರು. ಹಿಂದಿನ ಬೆಂಚಿನ ಹುಡುಗಿ ‘ಗೂಶಲಿ. ಸದಾ ಓದೋದೇ ಕೆಲಸ. ಕುಡುಮಿ ಹೇಳದೇ ಇನ್ನೇನು ಮಾಡ್ತಾಳೆ. ಅವಳ ಹಲ್ಲು ನೋಡಿದ್ರೆ ಯಾವ ಹುಡುಗ ಅವಳ ಹಿಂದೆ ಬರ್ತಾನೆ. ಓದೋದು ಬಿಟ್ಟು ಬೇರೆ ಏನು ಕೆಲಸ ಅವಳಿಗೆ’ ಎಂದಂದು ಪಕಪಕ ನಕ್ಕಿದ್ಲು. ಆಮೇಲೆ ಅವರೆಲ್ಲ ನನಗೆ ಬಾಯ್ ಫ್ರೆಂಡ್ ಸಿಗುವ ಬಗ್ಗೆ, ನಮ್ಮ ಚುಂಬನದ ಅವಾಂತರದ ಬಗ್ಗೆ ವಿಧವಿಧವಾಗಿ ಗೇಲಿ ಮಾಡಿಕೊಂಡು ನಕ್ಕಿದ್ರು. ಹೈಸ್ಕೂಲು ಮುಗಿಸಿ ಹೋಗುವಾಗ ನಮ್ಮ ಕ್ಯುಮಿಲೆಟಿವ್ ರೆಕಾಡರ್್ನಲ್ಲಿ ನನ್ನ ಗುರುತು ದಾಖಲು ಮಾಡುವಾಗ ನಮ್ಮ ಮೇಡಂ ನನ್ನ ಬೆನ್ನ ಮೇಲಿನ ಗುಲಗಂಜಿ ಗಾತ್ರದ ಮಚ್ಚೆ ಬರೆದಾಗ ನಮ್ಮ ಎನಿಮಿ ‘ಅವಳ ಹಲ್ಲೇ ಅವಳ ಐಡೆಂಟಿಟಿ. ಮೇಡಂಗೆ ಬುದ್ದಿ ಇಲ್ಲ’ ಅಂದಿದ್ಲು. ಹೀಗೆ ಅಷ್ಟಾವಕ್ರ ಹಲ್ಲಿರುವ ಹುಡುಗೀನ ಯಾರು ಮೆಚ್ತಾರೆ ಅಂದುಕೊಂಡು ನಾನು ಹಿಮಾಲಯಕ್ಕೆ ಹೋಗಿ ಸನ್ಯಾಸಿ ಆಗೋಣಾ ಅಂತ ನಿರ್ಧರಿಸಿದ್ದೆ. ಅದಕ್ಕೆ ಮೊದಲು ಕುಮಾರವ್ಯಾಸ ಭಾರತ, ಭಗವದ್ಗೀತೆ ಹಾಗೂ ಅನ್ನಪೂಣರ್ೆಶ್ವರಿ ಹಾಡು ಕಲಿತಿರಬೇಕು ಅಂತ ನನಗೆ ಗೊತ್ತಿತ್ತು. ಬಾಪ ಪ್ರತಿದಿನ ಬೆಳಿಗ್ಗೆ ಭಾರತ ಮತ್ತು ಭಗವದ್ಗೀತೆ ರಾಗವಾಗಿ ಓದ್ತಿದ್ರು. ಅಮ್ಮ ‘ಅನ್ನಪೂಣರ್ೆ ಸದಾ ಪೂಣರ್ೆ’ ಹೇಳ್ತಿದ್ಲು. ಅಷ್ಟು ಮಾತ್ರವೇ, ನಮ್ಮ ಮನೆಯಲ್ಲಿದ್ದ ಧಾಮರ್ಿಕ ವಾತಾವರಣ. ಅಷ್ಟು ಕಲಿತರೆ ಸಾಕು ಅಂದುಕೊಂಡು ನಾನೂ ಕುಮಾರವ್ಯಾಸ ಭಾರತ ಓದೋಣಾ ಅಂದುಕೊಂಡರೆ ಬೇರೆ ಕಾಪಿ ಸಿಗಲಿಲ್ಲ. ಅಂದರೆ ಬಾಪ ಮುಟ್ಟಿದ್ದು ಯಾವುದನ್ನು ನಾನು ಮುಟ್ತಿರಲಿಲ್ಲ. ಯಾಕೆಂದರೆ ಅವರು ನಶ್ಯ ಹಾಕ್ತಿದ್ರು. ನಶ್ಯ ಅಂದರೆ ನನಗೆ ವಿಪರೀತ ಅಸಹ್ಯ ಇತ್ತು. ಅದಕ್ಕೇ ನನಗೆ ತಿಳುವಳಿಕೆ ಬಂದಾಗಿನಿಂದ ಮೊನ್ನೆ ಬಾಪ ಸಾಯೋವರೆಗೂ ಅವರು ಮುಟ್ಟಿದ್ದನ್ನ ನಾನು ಮುಟ್ತಿರಲಿಲ್ಲ. ಬಾಪನ ನಶ್ಯದ ಪ್ರಕರಣದಿಂದಾಗಿ ಮನೆಯಲ್ಲಿ ಮಹಾನ್ ಯುದ್ಧಗಳಾಗಿ ಹನ್ನೊಂದೂ ಮಕ್ಕಳು ಪ್ಲಸ್ ಹೆಂಡತಿ ಶತ್ರುಗಳಾದರೂ ಬಾಪ ನಶ್ಯ ಮಾತ್ರ ಬಿಟ್ಟಿರಲಿಲ್ಲ. ಅವರಿಗೆ ಎಪ್ಪತ್ತು ದಾಟಿದಾಗ ಮದ್ರಾಸಿನ ಥಿಯಾಸಾಫಿಕಲ್ ಸೊಸೈಟಿ ಸೆಕ್ರೆಟರಿ ಆದಾಗ ಅಲ್ಲಿಗೆ ಬರುತ್ತಿದ್ದ ಬಿಳೀ ಬಾಬ್ ಕೂದಲಿನ ಸ್ಮಾಟರ್್ ಹಿರಿಯ ಮಹಿಳೆ ಹೇಳಿದಾಗ ಮಾತ್ರ ಬಿಟ್ಟರು. ಆಮೇಲೆ ನಮ್ಮ ಮನೆಯಲ್ಲಿ ಹಬ್ಬಕ್ಕೆ ಮಾಡಿದ ತಿಂಡಿ ಇತ್ಯಾದಿ ತಗೊಂಡು ಹೋಗಿ ಆಕೆಗೆ ಕೊಡ್ತಿದ್ರು. ಬಾಪನ ನಶ್ಯದ ಪ್ರಕರಣಕ್ಕೆ ಹೋಲಿಸಿದರೆ ನನ್ನ ಹಲ್ಲಿನ ಅವಾಂತರವೇ ವಾಸಿ ಅನ್ನಿಸಿ ಬಿಡ್ತಿತ್ತು. ಅಲ್ಲದೆ ಮನೇಲಿ ಬೇರೆ ಯಾರಿಗೂ ಅದೊಂದು ಸಮಸ್ಯೆಯೇ ಆಗಿರಲಿಲ್ಲ. ನಾವೆಲ್ಲಾ ಐಎಎಸ್ ಆಗಬೇಕು. ದೊಡ್ಡ ಕಲಾವಿದರಾಗಬೇಕು ಇತ್ಯಾದಿ ಭ್ರಮೆಗಳಲ್ಲಿ ಇದ್ದುದರಿಂದ ಇದೊಂದು ಜುಜುಬಿ ಹಲ್ಲಿನ ವಿಷಯ. ಏನು ಮಹಾ, ನಮ್ಮ ಮಲ್ಲೇಶ್ವರದ ಮನೆಗೆ, ತಾತಾ ಇದ್ದಾಗ, ಸರ್ ಮಿಜರ್ಾ ಇಸ್ಮಾಯಿಲ್, ಸರ್ ಎಂ.ವಿ, ಡಿವಿಜಿ, ರಾಜರತ್ನಂ ಎಲ್ಲರೂ ಬರ್ತಿದ್ದರಂತೆ. ಇಂತಹ ಮಹಾನ್ ಮನೆತನದ ಜನ ಐಜಜಡಿ ಟಠಡಿಣಚಿಟ ಥರ ಹಲ್ಲುಗಿಲ್ಲು ಅಂತ ನೋಡಿಕೊಂಡು ಕೂತಿರೋದೇ? ಅದೂ ಗಾಂಧಿ ಭಕ್ತರು? ಮೈಸೂರಿನಲ್ಲಿ ಮುನಿಸಿಪಲ್ ಪಾಕರ್ಿನ ಒಂದು ಮೂಲೆಯಲ್ಲಿದ್ದ ಚಿಕ್ಕ ದೇವಸ್ಥಾನದಲ್ಲಿ ಒಬ್ಬರು ಸ್ವಾಮಿಗಳಿದ್ದರು. ಅಲ್ಲಿಗೆ ಹೆಚ್ಚಿನ ಜನರು ಯಾರೂ ಬರ್ತಿರಲಿಲ್ಲ. ನಾವು ಮಕ್ಕಳು ಅಲ್ಲಿಗೆ ಹೋಗ್ತಿದ್ವಿ. ಸ್ವಾಮಿ ನಮಗೆ ಪ್ರಸಾದ ಅಂತ ಏನೇನೋ ತಿನ್ನಕ್ಕೆ ಕೊಡ್ತಿದ್ರು. ಅದಕ್ಕೆ ಮೊದಲು ನಾಕು ದಳದ ಕಮಲದಲ್ಲಿ `ನಾಗವಾದ ಲಿಂಗವೇ ಸತ್ಯಸಾಯಿ ಲಿಂಗವೇ ಎದ್ದು ಬಾ ಲಿಂಗವೇ’ ಅಂತ ಭಜನೆ ಹೇಳಿಕೊಡ್ತಿದ್ರು. ನಾನು ಆಗೆಲ್ಲಾ ಮನಸ್ಸಿನಲ್ಲಿ ‘ದೇವರೇ ದೇವರೇ ಹೇಗಾದ್ರೂ ಮಾಡಿ ನನ್ನ ಹಲ್ಲು ಸರಿ ಮಾಡಿಬಿಡಪ್ಪಾ. ನನಗೆ ಉದ್ದ ಕೂದಲು ಬರುವ ಹಾಗೆ ಮಾಡಪ್ಪಾ, ಸಾಯುವ ಮೊದಲು ಒಂದು ರೇಷ್ಮೆ ಲಂಗ ಹೊಲಿಸಿಕೊಡಪ್ಪಾ’ ಅಂತ ಅತ್ಯಂತ ದೀನಗಳಾಗಿ ಪ್ರಾಥರ್ಿಸ್ತಾ ಇದ್ದೆ. ನಾನು ಪಿಯುಸಿಗೆ ಬಂದಾಗ ನಮ್ಮ ದೊಡ್ಡಣ್ಣ ಬೆಂಗಳೂರಿನ ಡೆಂಟಲ್ ಕಾಲೇಜಿಗೆ ಕರೆದುಕೊಂಡು ಹೋಗಿ ಹಲ್ಲಿಗೆ ಕ್ಲಿಪ್ ಹಾಕಿಸಿದ. ಅಲ್ಲಿ ಹಲ್ಲು ಸರಿಯಾಗಿ ಕೂರಕ್ಕೆ ಜಾಗ ಮಾಡಬೇಕು ಅಂತ ಮೂರು ಹಲ್ಲು ತೆಗೆದರು. ಅವರು ತಪ್ಪು ಹಲ್ಲುಗಳನ್ನು ತೆಗೆದು ಹಾಕಿದ್ದರು ಅಂತ ನನಗೆ ತುಂಬಾ ಆಮೇಲೆ ಗೊತ್ತಾಯಿತು. ನನ್ನ ಹಲ್ಲಿನ ಚಿಕಿತ್ಸೆ ಅರ್ಧ ನಡೀತಿದ್ದಾಗ ನಮ್ಮಣ್ಣ ನ್ಯೂಯಾಕರ್ಿಗೆ ಹೊರಟುಹೋದ. ಅಷ್ಟು ಹೊತ್ತಿಗೆ ನನಗೂ ಒಂಥರಾ ನಿರಾಸಕ್ತಿ ಬಂದುಬಿಟ್ಟಿತ್ತು. ಹೇಗಿದ್ರೂ ಹಿಮಾಲಯಕ್ಕೆ ಹೋಗ್ತೀನಲ್ಲ. ಹಲ್ಲು ಹೇಗಿದ್ರೇನು ಅಂತ ಕ್ಲಿಪ್ಪು ತೆಗೆದು ಒಂದು ದಿನ ತಾರಸಿ ಮೇಲೆ ಬಿಸಾಕಿಬಿಟ್ಟೆ. ಮೈಸೂರಿನಲ್ಲಿ ಇದ್ದಾಗ ಬಾಪ ನಮ್ಮನ್ನೆಲ್ಲಾ ಈಜು ಕಲಿಯಲಿಕ್ಕೆ ಕುಕ್ಕನಹಳ್ಳಿ ಕೆರೆಗೆ ಕರೆದುಕೊಂಡು ಹೋಗ್ತಿದ್ದರು. ನಮ್ಮ ಮಕ್ಕಳ ಗ್ಯಾಂಗ್ಗೆ ನಜರ್ಬಾದಿನ ಇನ್ಕಂಟ್ಯಾಕ್ಸ್ ಆಫೀಸಿನ ಕಂಪೌಂಡು ಪ್ರಶಸ್ತ ಸ್ಥಳವಾಗಿತ್ತು. ಅಲ್ಲಿ ಬೇಲ, ಹುಣಸೆ, ದಾಳಿಂಬೆ, ಸೀತಾಫಲ, ನೆಲ್ಲಿ, ಸೀಬೆ ಇತ್ಯಾದಿ ಮರಗಳಿದ್ದವು. ಅಲ್ಲಿಗೆ ಮಕ್ಕಳು ಕಾಲಿಡದ ಹಾಗೆ, ಇಟ್ಟರೆ ಕಾಲು ಮುರಿಯುವ ಹಾಗೆ ಏಪರ್ಾಟಾಗಿತ್ತು. ಮಾಲಿ-ಕಂ-ವಾಚ್ಮನ್ ಕೆಂಪಣ್ಣ ಆ ವ್ಯವಸ್ಥೆಯ ಸೂತ್ರಧಾರ. ಅವನನ್ನ ರೇಗಿಸಿ ಆಟವಾಡಿಸೋದು ನಮ್ಮ ಏಕೈಕ ಥ್ರಿಲ್ ಆಗಿತ್ತು. ಅವನು ಏನೇ ಮಾಡಿದರೂ ನಾವು ಅವನ ಕೈಗೆ ಸಿಕ್ತಿರಲಿಲ್ಲ. ಅವನು ಬಂದು ನಮ್ಮ ಮನೆಗಳಲ್ಲಿ ಚಾಡಿ ಹೇಳಿ ವಾಚಾಮಗೋಚರವಾಗಿ ಬೈದು ಹೋಗ್ತಿದ್ದ. ಹಿಂದಿ ಮೇಷ್ಟ್ರು ಮನೇಲಿ ಅದೇನೂ ದೊಡ್ಡ ವಿಷಯ ಆಗಿರಲಿಲ್ಲ. ನಮ್ಮ ಮನೇಲೀ ‘ಆ ಶೂದ್ರ ಹಿಂದಿ ಮೇಷ್ಟ್ರ ಮಕ್ಕಳ ಜೊತೆ ಸೇರಿಕೊಂಡು ಹಾಳಾಗಿ ಹೋಗ್ತಿರುವುದರ ಬಗ್ಗೆ ಕ್ಯಾಬಿನೆಟ್ ಮೀಟಿಂಗ್ ಆಗ್ತಿತ್ತು. ಅಷ್ಟು ಹೊತ್ತಿಗೆ ಮೊದಲಿನ ಒಂಭತ್ತು ಮಕ್ಕಳೂ ಸಭ್ಯರಾಗಿ ಬಿಟ್ಟಿದ್ದರು. ಕೊನೆಯವರಾದ ನಾನು, ರವಿ ಮಾತ್ರ ಈ ಕೆಟ್ಟ ಚಾಳಿಗೆ ಬಿದ್ದಿದ್ದು. ಈ ಹಿಂದಿ ಮೇಷ್ಟ್ರ ಮಕ್ಕಳು ಸಿಕ್ಕಿದೇ ಹೋಗಿದ್ದರೆ ನಾವು ಜೀವನದಲ್ಲಿ ಎಂದಿಗೂ ಸುಳ್ಳು ಹೇಳದ, ಕದಿಯದ, ಕೆಟ್ಟ ಮಾತನಾಡದ ಹರಿಶ್ಚಂದ್ರರಾಗಿರುತ್ತಿದ್ದೆವು. ದೇವರ ದಯೆ ದೊಡ್ಡದು. ಒಂದು ದಿನ ಹೀಗೆ ಕೆಂಪಣ್ಣ ಓಡಿಸಿಕೊಂಡು ಬಂದಾಗ ನಾನು ಎಡವಿ ಬಿದ್ದು ನನ್ನ ಮೊದಲ ಹಲ್ಲು ಮುರಿದಿತ್ತು. ಅವನೇ ಎತ್ತಿಕೊಂಡು ಬಂದು ಮನೆ ತಲುಪಿಸಿದ್ದ. ಧಾರಾಕಾರ ರಕ್ತ. ಅದೂ ಅರ್ಧ ಮುರಿದಿತ್ತು. ಬಾಕಿ ಅಧರ್ಾನ ಚರ್ಮ ಕತ್ತರಿಸಿ ತೆಗೆದು ಹಾಕಿದರು. ಹಲ್ಲಿನ ಬಗ್ಗೆ ಅಷ್ಟೆಲ್ಲಾ ಬೇಸರ ಇದ್ರೂ ಆ ಹಲ್ಲು ಮುರಿದಿದ್ದು ಗೌರ್ನಮೆಂಟ್ ಹೌಸಿಗೆ ದಲಾಯಿಲಾಮಾ ಬರ್ತಾರೆ ಅಂತ ನೋಡಕ್ಕೆ ಹೋಗಿ, ಮರದಿಂದ ಧುಮುಕಿದಾಗ, ಪೊಲೀಸರು ಅಟ್ಟಿಸಿಕೊಂಡು ಬಂದು ಓಡುವಾಗ, ನನಗೆ ಕೊನೆಯ ಸಲ ಕ್ಲಿಪ್ ಹಾಕಿದ ಡಾಕ್ಟರು, ‘ನೋಡಿ ನಿಮಗೆ ತಪ್ಪು ಹಲ್ಲು ಕಿತ್ತಿದ್ದರಿಂದ, ಹಾಗೂ ಪದೇ ಪದೇ ಹಲ್ಲು ಮುರಿದಿರೋದ್ರಿಂದ ನಿಮ್ಮ ಮುಖದ ಸೆಂಟರ್ ಲೈನ್ ಶಿಫ್ಟ್ ಆಗಿದೆ. ಅದನ್ನ ಸರಿ ಮಾಡಕ್ಕಾಗಲ್ಲ’ ಅಂದರು. ಅದರಿಂದ ಏನಾಗುತ್ತೆ ಅಂತ ಕೇಳಿದೆ ನಾನು. ‘ಮುಖ ಸ್ವಲ್ಪ ಸೊಟ್ಟಗಿರುವ ಹಾಗೆ ಕಾಣುತ್ತೆ’ ಅಂದರು. ‘ಪರವಾಗಿಲ್ಲ ಬಿಡಿ ನನ್ನ ಬುದ್ದಿಗೆ ಮ್ಯಾಚ್ ಆಗುತ್ತೆ’ ಅಂದೆ ನಾನು, ‘ಯೂ ಆರ್ ಕರೆಕ್ಟ್’ ಅಂದರು ಅವರು. ನಾವು ಮಕ್ಕಳ ಗ್ಯಾಂಗ್ ಒಂದು ಸಲ ಲಲಿತಮಹಲ್ ಪ್ಯಾಲೆಸ್ ನೋಡಕ್ಕೆ ಹೋದಾಗ, ಆಗಿನ್ನೂ ಅದು ಹೋಟೆಲಾಗಿರಲಿಲ್ಲ. ನಜರ್ಬಾದಿನಿಂದ ಅಲ್ಲಿಗೆ ಐದು ಪೈಸೆ ಟಿಕೆಟ್ ಇತ್ತು. ಬಸ್ ಪೂತರ್ಿ ಪ್ಯಾಲೇಸಿನ ಮುಂದಕ್ಕೂ ಹೋಗ್ತಿರಲಿಲ್ಲ. ಗೇರುಬೀಜದ ತೋಟದ ಹತ್ತಿರಾನೇ ನಿಲ್ತಿತ್ತು. ಅಲ್ಲಿಂದ ನಡಕೊಂಡು ಹೋಗಬೇಕಿತ್ತು. ಆಗ ಅಲ್ಲಿ ಪ್ಯಾಲೆಸ್ ನೋಡಿ ದಂಗಾಗಿ ನಾವು ಬಾಯಿ ಬಾಯಿ ಬಿಡ್ತಿದ್ದಾಗ ಹಿಂದಿ ಮೇಷ್ಟ್ರ ಮಗಳು ಶಾಂತಿ ‘ಮಹಾರಾಜರ ಕಕ್ಕಸು ಮನೆ ಎಲ್ಲಿದೆ?’ ಅಂತ ಕೇಳಿದ್ಲು. ಅಲ್ಲಿದ್ದ ಕೇರ್ ಟೇಕರ್ ‘ಯಾಕೆ’ ಅಂದ. `ಅಲ್ಲಿ ಗುಂಡಿ ಒತ್ತಿದ್ರೆ ಚಿನ್ನದ ಕೈ ಬಂದು ಕಕ್ಕ ತೊಳಿಯತಂತೆ’ ಅಂದಳು. ಅವನು ನಮ್ಮನ್ನೆಲ್ಲ ದರದರ ಎಳೆದು ಹೊರಗೆ ಹಾಕಿದ. ಅಲ್ಲಿಂದ ಬೆಟ್ಟದ ಮೇಲಿನ ಪ್ಯಾಲೆಸ್ಗೆ ಹೋಗಿ ಅಲ್ಲೂ ಅದೇ ಪ್ರಶ್ನೆ ಕೇಳಿದ್ವಿ. ಅಲ್ಲಿ ಒಳಗೇ ಬಿಡಲಿಲ್ಲ. ಕಿಟಕಿಯ ಗಾಜಿನಿಂದ ಬಗ್ಗಿ ಸ್ವಲ್ಪ ನೋಡಿದ್ವಿ. ಮಹಾರಾಜರ ಕಾರು ಬಂದಾಗ ತಾನೇ ತಾನಾಗಿ ತೆಗೆಯುವ ಬಾಗಿಲ ಮುಂದೆ ಇಡೀ ಒಂದು ಬೆಳಿಗ್ಗೆ ಕಳೆದಿದ್ವಿ. ಆಮೇಲೆ ನಾವು ನಾವೇ ರೈಲಿನಲ್ಲಿ ಶ್ರೀರಂಗಪಟ್ಟಣಕ್ಕೆ ಹೋಗಿ ಅಲ್ಲಿ ಮೊಸಳೆ ನೋಡಿದ್ದೆವು. ಅಲ್ಲಿ ಊರಿಗೇ ಕೇಳುವ ಹಾಗೆ ಈ ಬಗ್ಗೆ ಚಚರ್ಿಸುತ್ತಿದ್ದಾಗ ಅಲ್ಲಿಗೆ ಬಂದಿದ್ದ ಹಿರಿಯರೊಬ್ಬರು ‘ಬಾಯಿ ಬಿಗಿ ಹಿಡಿತಿರೋ ಹಲ್ಲುದುರಿಸಲೋ’ ಅಂದ್ರು. ನಾನು ‘ಉದುರಿಸಿ’ ಅಂದೆ. ಅದೇ ನನ್ನ ಜೀವನದಲ್ಲಿ ಹಿರಿಯರಿಗೆ ಆಡಿದ ಮೊದಲ ಎದುರು ಮಾತು. ಮೊನ್ನೆ ನಂದ ಬೈತಾ ‘ಒದ್ದರೆ ವಾಲ್ ಪೋಸ್ಟರ್ ಆಗಿ ಬಿಡಬೇಕು ನೋಡು ಹಲ್ಲುದುರಿಬಿಡಬೇಕು’ ಅಂತ ಗದುರುತ್ತಿದ್ದ. ‘ಆ ಕಾಲ ಎಲ್ಲಾ ಆಗೋಯ್ತು’ ಅಂದೆ ನಾನು ‘ಯಾವ ಕಾಲ’ ಅಂದ. ‘ಹಲ್ಲುದುರುವ ಕಾಲ’ ಅವನು ನಕ್ಕು ‘ಹಿಮಾಲಯಕ್ಕೆ ಯಾವಾಗ ಹೋಗ್ತಿಯಾ’ ಅಂದ. ‘ಪುಟ್ಟಿಗೆ ಕ್ಲಿಪ್ ಹಾಕಿಸಿದ ಮೇಲೆ’ ಅಂದೆ. ಬಾಲ್ಯದಿಂದ ನೇರ ತಾರುಣ್ಯಕ್ಕೆ ಜಿಗಿದುಬಿಟ್ಟು ಕೌಮಾರ್ಯವನ್ನು ಕಳೆದುಕೊಂಡ ನನಗೆ ಬಾಲ್ಯ ತೀರ ಹತ್ತಿರದಲ್ಲೇ ಇದ್ದರೂ ದೂರ. ವಿಚಿತ್ರ ರೀತಿಯಲ್ಲಿ ನಾನು ಬಾಲ್ಯವನ್ನು ಮನದಾಳಕ್ಕೆ ತಳ್ಳಿ ಮುಚ್ಚಿಬಿಟ್ಟಿದ್ದೇನೆ. ಬಾಲ್ಯದ ಮರುಕಳಿಕೆ ಎಂದರೆ ಆ ಚಡಪಡಿಕೆಗಳ ಮರು ಅನಾವರಣ. ಖಾಲಿ ಹೊಟ್ಟೆಯ ಬಾಲ್ಯದ ದಿನಗಳನ್ನು ಅಳಿಸಿ ಹಾಕಲು ಈಗ ಸದಾಕಾಲ ಅಡಿಗೆ ಮನೆಯ ಡಬ್ಬಗಳನ್ನೆಲ್ಲಾ ತುಂಬಿಡುತ್ತೇನೆ. ಒಂದು ಡಬ್ಬ ಖಾಲಿಯಾದರೂ ನನಗೆ ಆತಂಕ. ರೇಷ್ಮೆ ಲಂಗಕ್ಕೆ ನಾನು ಕಂಡ ಕನಸು ನನಸಾಗಿಸಲು, ಮಗಳಿಗೆ ವರ್ಷಕ್ಕೊಂದು ರೇಷ್ಮೆಲಂಗ ಹೊಲಿಸುತ್ತೇನೆ. ಎಷ್ಟೇ ಕಷ್ಟವಾದರೂ, ಹೇನು ಸೀರು ಗಲೀಜುಗಳ ಸಮಸ್ಯೆಗಳನ್ನು ನಿಭಾಯಿಸಿಕೊಂಡು ಅವಳಿಗೆ ನೀಳ ಕೂದಲು ಬೆಳೆಸುತ್ತೇನೆ. ಮೊನ್ನೆ ಅವಳು ಸ್ಕೂಲ್ ಡೇನಲ್ಲಿ ಸಿಂಡ್ರೆಲ್ಲಾ ಪಾತ್ರ ಮಾಡಿದಾಗ. ‘ರಾಜಕುಮಾರಿ ಕತೆ ಅವಳ ಹೆಸರು ಸೀತೇ’ ಅಂತ ಹಾಡಿಕೊಂಡು ಮನೆಗೆ ಬಂದೆ.]]>

‍ಲೇಖಕರು G

April 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

7 ಪ್ರತಿಕ್ರಿಯೆಗಳು

 1. malathi S

  hmmm thanks G.N. Mohan for the google+ ing this post in mail…want this book at any cost
  ಬಾಲ್ಯದಿಂದ ನೇರ ತಾರುಣ್ಯಕ್ಕೆ ಜಿಗಿದುಬಿಟ್ಟು ಕೌಮಾರ್ಯವನ್ನು ಕಳೆದುಕೊಂಡ ನನಗೆ ಬಾಲ್ಯ ತೀರ ಹತ್ತಿರದಲ್ಲೇ ಇದ್ದರೂ ದೂರ. ವಿಚಿತ್ರ ರೀತಿಯಲ್ಲಿ ನಾನು ಬಾಲ್ಯವನ್ನು ಮನದಾಳಕ್ಕೆ ತಳ್ಳಿ ಮುಚ್ಚಿಬಿಟ್ಟಿದ್ದೇನೆ. ಬಾಲ್ಯದ ಮರುಕಳಿಕೆ ಎಂದರೆ ಆ ಚಡಪಡಿಕೆಗಳ ಮರು ಅನಾವರಣ. ಖಾಲಿ ಹೊಟ್ಟೆಯ ಬಾಲ್ಯದ ದಿನಗಳನ್ನು ಅಳಿಸಿ ಹಾಕಲು ಈಗ ಸದಾಕಾಲ ಅಡಿಗೆ ಮನೆಯ ಡಬ್ಬಗಳನ್ನೆಲ್ಲಾ ತುಂಬಿಡುತ್ತೇನೆ. ಒಂದು ಡಬ್ಬ ಖಾಲಿಯಾದರೂ ನನಗೆ ಆತಂಕ.
  some memories will never leaves us…..
  🙂
  ms

  ಪ್ರತಿಕ್ರಿಯೆ
  • RAJENDRA PATIL

   ಎಸ್ ಮಾಲತಿಯವರಿಗೆ
   ವಂದನೆಗಳು.
   ಕಲಬುರ್ಗಿಯಲ್ಲಿ ತಾವು ಈ ಹಿಂದೆ ಬ್ರೆಕ್ಟ್ ನ ತಾಯಿ ನಾಟಕ ನಿರ್ದೇಶನ ಮಾಡಿದ್ದಿರಿ. ಇಷ್ಟು ದಿನಗಳ ನಂತರ ತಮ್ಮನ್ನು ಗೂಗಲ್ + ನಲ್ಲಿ ಭೇಟಿಯಾಗುತ್ತಿರುವುದಕ್ಕೆ ಸಂತೋಶವಗುತ್ತಿದೆ. ವಂದನೆಗಳು. ಥ್ಯಾಂಕ್ಸ್ ಟು ಗೂಗಲ್ +.
   ರಾಜೇಂದ್ರ ಪಾಟೀಲ್
   ( ಉಮಾತನಯರಾಜ್ )
   ಹಿರಿಯ ಉಪಸಂಪಾದಕ
   ಸಂಯುಕ್ತ ಕರ್ನಾಟಕ
   ಹುಬ್ಬಳ್ಳಿ
   ದೂ: ೮೭೬೨೩೭೯೯೧೧

   ಪ್ರತಿಕ್ರಿಯೆ
  • RAJENDRA PATIL

   ಎಸ್ ಮಾಲತಿಯವರಿಗೆ
   ವಂದನೆಗಳು.
   ಕಲಬುರ್ಗಿಯಲ್ಲಿ ತಾವು ಈ ಹಿಂದೆ ಬ್ರೆಕ್ಟ್ ನ ತಾಯಿ ನಾಟಕ ನಿರ್ದೇಶನ ಮಾಡಿದ್ದಿರಿ. ಇಷ್ಟು ದಿನಗಳ ನಂತರ ತಮ್ಮನ್ನು ಗೂಗಲ್ + ನಲ್ಲಿ ಭೇಟಿಯಾಗುತ್ತಿರುವುದಕ್ಕೆ ಸಂತೋಶವಗುತ್ತಿದೆ. ವಂದನೆಗಳು.
   ರಾಜೇಂದ್ರ ಪಾಟೀಲ್
   ಹಿರಿಯ ಉಪಸಂಪಾದಕ
   ಸಂಯುಕ್ತ ಕರ್ನಾಟಕ
   ಹುಬ್ಬಳ್ಳಿ
   ದೂ: ೮೭೬೨೩೭೯೯೧೧

   ಪ್ರತಿಕ್ರಿಯೆ
 2. P. Bilimale

  ಅಹೋ ಹೋ ದಕ್ಕಿತ್ತೋ ದಕ್ಕಿತ್ತು.. ಪ್ರತಿಭಾ ಅವರ ಹೊಸ ಪುಸ್ತಕ! ದಕ್ಕಿತ್ತೋ ದಕ್ಕಿತ್ತು.

  ಪ್ರತಿಕ್ರಿಯೆ
 3. -ರವಿ ಮೂರ್ನಾಡು,ಕ್ಯಾಮರೂನ್,

  ಮಾನ್ಯ ಪ್ರತಿಭಾ ಅವರ ಬರವಣಿಗೆ ಬಗ್ಗೆ ಕೆಲವು ವಾದ- ವಿವಾದಗಳು ಕೇಳಿ ಬಂದಿತ್ತು. “ಅನುದಿನ ಅಂತರಗಂಗೆ” ಒಳಗೆ ಎಷ್ಟು ಒರತೆ ಇದೆ ಅಂತ ಆಲೋಚಿಸಿದ್ದೆ. ಯಾವುದೇ ವಿಮರ್ಶೆಗಳು ಬರೆದ ಬರಹಗಾರ/ಗಾರ್ತಿಯ ಮನಸ್ಸಿನಷ್ಟು ತೆರೆದಿಡಲು ಸಾಧ್ಯವಿಲ್ಲ. ಅಷ್ಟರ ಮಟ್ಟಗಿನ ವಿಮರ್ಶೆ ಬರಬೇಕಾದರೆ ಸ್ವತಃ ಬರೆದವರೇ ವಿವರಿಸಬೇಕು. ಮನಸ್ಸು, ಮನೆ, ಸಮಾಜ, ಇವುಗಳ ಹಲವು ಮುಖಗಳು ಡಾಳಾಗಿ ಇಲ್ಲಿ ಬಣ್ಣ ಕಟ್ಟುತ್ತಿವೆ. ಅಲ್ಲದೆ, ಈ ಬರಹ ಹೊಸ ಆಲೋಚನೆಯನ್ನು ತೆರೆದಿಡುತ್ತಿವೆ. ಮನೆ ಅಂದಾಗ “ಅಡುಗೆ” ಮನೆಯಲ್ಲಿ ಪಾತ್ರೆಗಳ ಸದ್ದಾಗಬೇಕು, ಜೊತೆಗೆ ಕೈಬಳೆ ನಾದ,ಮಕ್ಕಳ ಚಿಲಿಪಿಲಿ, ಇಲ್ಲಿ ಯಾವುದು ಮನೆಯವರಿಗಲ್ಲದೆ ಪಕ್ಕದ ಮನೆಯವರಿಗೆ ಕೇಳಲೇ ಬಾರದು. ಅದು ಹಿತವಾದ ಮನೆ. ಅದನ್ನು ಅನುದಿನ ಅ೦ತಗಂಗೆಯಲ್ಲಿ ಕಂಡಿದ್ದೇನೆ. ಕೇರಳದ ಮಾದವಿ ಕುಟ್ಟಿ ನೆನಪಾದರು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: