ಇನ್ನಷ್ಟು ಪ್ರತಿಭಾ

ಈ  ಪುಸ್ತಕಕ್ಕಾಗಿ ಸಂಪರ್ಕಿಸಿ

ಕೆ ಅಕ್ಷತಾ

[email protected]

94491 74662

ಮೌನ ಕಣಿವೆಯ ಮಾರ್ನುಡಿ

ಹರೆಯದ ಮೊದಲ ದಿನಗಳು. ಮನಸ್ಸಿನಲ್ಲಿ ಹೊಸ ಪ್ರೀತಿ ತುಂಬಿ ಹರಿದು ಬರುತ್ತಿತ್ತು. ಆದರೆ ಅದನ್ನು ಯಾರಿಗೆ ಕೊಡಲಿ, ಹೇಗೆ ಕೊಡಲಿ? ನಾನೋ ವಕ್ರದಂತೆ, ಕುರೂಪಿ, ಆದರೇನಂತೆ ಪ್ರೀತಿಗೆ ಕುರೂಪ ಅಡ್ಡ ಬರುತ್ತದೆಯೇ? ಅವರಿಗಾಗಿ ಏನು ಬೇಕಾದರೂ ಮಾಡುತ್ತೇನೆ ಅಂತ ತುಡಿಯುತ್ತಿತ್ತು. ಮನಸ್ಸು. ಪಿಯುಸಿಯಲ್ಲಿ ಒಳ್ಳೆಯ ಮಾಕ್ಸ್ರ್ ತೆಗೆದಿದ್ದೆ. ಎಲ್ಲರೂ ಬಿಎಸ್ಸಿಗೆ ಸೇರಿಕೋ ಅಂದರು. ಆದರೆ ನನಗೆ ಐಚ್ಛಿಕ ಕನ್ನಡ ಓದುವ ಆಸೆಯಿತ್ತು. ನಮ್ಮ ಕಾಲೇಜಿನಲ್ಲಿ ಬಿಎಗೆ ಐಚ್ಛಿಕ ಕನ್ನಡ ಇರಲಿಲ್ಲ. ಬಿಎಂಎಸ್ ಕಾಲೇಜಿನಲ್ಲಿ ಇತ್ತು. ಅಲ್ಲಿ ಬಿಎ ಮಾಡಿ, ಕನ್ನಡ ಎಂಎ ಮಾಡಿ, ಪಿಹೆಚ್ ಡಿ ಮಾಡಿದರೆ ಅವರು ಮೆಚ್ಚುತ್ತಾರಾ? ಅಲ್ಲಿಗೆ ಹೋಗಿ ಅಜರ್ಿ ಕೊಟ್ಟು ಬಂದು ನೇರ ನಮ್ಮ ಕಾಲೇಜಿಗೆ ಹೋಗಿ ಅವರನ್ನು ನೋಡಲು ಬಂದೆ ಅವರು ಸ್ಟಾಫ್ ರೂಮಿನಲ್ಲಿದ್ದರು. ಬಾಗಿಲಲ್ಲಿ ನಿಂತು ಕರೆದು ವಿಷಯ ಹೇಳಿದೆ. ‘ಒಳ್ಳೆಯದಾಯ್ತು. ಅಲ್ಲಿ ಪದ ್ಮ ಮೇಡಂ, ಪುಷ ್ಪ ಮೇಡಂ ಅಂತ ಇದ್ದಾರೆ. ಅವರು ಚೆನ್ನಾಗಿ ಹೇಳಿ ಕೊಡ್ತಾರೆ’ ಅಂದ್ರು. ‘ಅವರಿದ್ದರೆ ನನಗೇನು ಅಂದೆ ಅವರು ಅರ್ಥವಾಗದೇ ಮುಖ ನೋಡಿದರು. ‘ಅಲ್ಲಿ ಬಿಎ ಮಾಡ್ತೀನಿ ಆದರೆ ನನಗೆ ಕನ್ನಡ ಪಾಠ ನೀವೇ ಹೇಳಿಕೊಡಬೇಕು’ ಅಂದೆ. ಜೋರಾಗಿ ನಕ್ಕುಬಿಟ್ಟರು. ‘ಅಯ್ಯೋ ಎರಡು ದಿನ ಅಷ್ಟೇ. . . ಆಮೇಲೆ ಅಲ್ಲೇ ಅಭ್ಯಾಸ ಆಗಿ ಹೋಗಿ ನನ್ನ ನೆನಪೇ ಬರಲ್ಲ ! ‘ ಅಂದರು. ‘ಏನಂದ್ರಿ, ನೆನಪೇ ಬರಲ್ಲ! ಹೇಗೆ ಹಾಗೆ ಹೇಳಿದ್ರಿ’ ಅಂತ ಜೋರಾಗಿ ಜಗಳ ತೆಗೆದೆ ಅವರು ಇನ್ನೂ ಜೋರಾಗಿ ನಕ್ಕರು. ಮನಸ್ಸು ಹಿಂಡಿತು. ನಾನಿಲ್ಲಿ ಇಷ್ಟು ಭರಪೂರ ಪ್ರೀತಿ ತೋರಿಸ್ತಿದ್ದೀನಿ ಕೂತ ಅದನ್ನು ಸ್ವೀಕರಿಸುವುದಿರಲಿ ಗುರುತಿಸುವಂತೆಯೂ ಇಲ್ಲವಲ್ಲ ಅಂತ ಗಂಟಲು ಕಟ್ಟಿತು. ದುಃಖ ತಡೆಯವುದು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಯಾರೋ ಬಂದು ಅವರನ್ನು ಕರೆದು ಅವರು ಹೋದರು. . ನಾನು ಇತ್ತ ಬಂದೆ. ಲೇಡೀಸ್ ರೂಮಿಗೆ ಹೋಗಿ ಜೋರಾಗಿ ಅತ್ತೆ. ಆಮೇಲೆ ಮುಖ ತೊಳೆದುಕೊಂಡು ಹೊರಗೆ ಬಂದೆ ಗೆಳತಿಯರು ಯಾರೂ ಕಾಣಲಿಲ್ಲ. ಹೊಸ ವರ್ಷದ ಅಡ್ಮೀಷನ್ಗಳು ನಡೆಯುತ್ತಿತ್ತು. ಹೊಸ ವಿದ್ಯಾಥರ್ಿಗಳು ಅಜರ್ಿ ಹಿಡಿದುಕೊಂಡು ಓಡಾಡುತ್ತಿದ್ದರು. ಮೊದಲ ಬಾರಿಗೆ ಆ ಚಿರಪರಿಚಿತ ಕಾಲೇಜು ಅಪರಿಚಿತ ಅನ್ನಿಸಿತು. ವಾಪಸ್ಸು ಸ್ಟಾರ್ಫ ರೂಮಿನ ಕಡೆಗೆ ಹೋಗಬೇಕು ಅನ್ನಿಸಲಿಲ್ಲ. ಇನ್ನು ಅಲ್ಲಿಗೆ ಹೋಗಿ ಏನು ಮಾಡಲಿ? ಈಗ ನಾನು ಅವರಿಗೆ ಹಳೆಯ ವಿದ್ಯಾಥರ್ಿನಿ. ಆಗಲೇ ಹೊಸ ವಿದ್ಯಾಥರ್ಿನಿಗಳು ಅವರ ಸುತ್ತ ನಿಂತು. ‘ಸಾರ್ ಇದೇನು ಸಾರ್’ ನೀವು ನಮಗೆ ಕ್ಲಾಸ್ ತಗೋತೀರಾ ಸಾರ್’ ಅಂತೆಲ್ಲ ಕೇಳುತ್ತಿದ್ದರು. ನಾನು ಅವರ ಮನಸಿನಿಂದ ಮರೆಯಾಗುವುದು ಎಷ್ಟು ತಡ? ನಾನಿನ್ನು ಬೇಡದ ವಿಷಯ. ಈಗ ಹೋದರೂ ‘ಇನ್ನೇನು ಸಮಾಚಾರ, ಆಲ್ ದಿ ಬೆಸ್ಟ್’ ಎನ್ನುವ ಒಣ ಮಾತುಗಳು ಅಷ್ಟೇ ಅಲ್ಲವೇ? ಗೇಟಿನ ಕಡೆಗೆ ಹೆಜ್ಜೆ ಹಾಕಿದೆ. ಒಂದು ಮೂಲೆಯಲ್ಲಿ ಮನಸ್ಸು ‘ಹೋಗು ಹಿಂದಕ್ಕೆ ಹೋಗು ಒಂದೇ ಒಂದು ಸಲ ಮಾತಾಡಿಸಿಕೊಂಡು ಹೋಗು’ ಅನ್ನುತ್ತಿತ್ತು. ತಡೆಯಲಾರದೇ ಹೋಗೇ ಬಿಡೋಣಾ ಅಂತ ತಿರುಗಿದಾಗ ಅವರು ಕಾಣಿಸಿದರು. ಅವಳ ಕಣ್ಣಲ್ಲಿ ಮಿಂಚಿತ್ತು. ತುಟ್ಟಿಯಲ್ಲಿ ನಗು. ಅದೇತಾನೇ ಅವರು ಸ್ಟಾಫ್ ರೂಮಿನ ಕಡೆಯಿಂದ ಬರುತ್ತಿದ್ದಳು. ಅವಳ ಸಂಭ್ರಮಕ್ಕೆ ಏನು ಕಾರಣ? ಅವರೇ? ಹೊಟ್ಟೆಕಿಚ್ಚು ತಡಿಯಲಾರದೇ ತಿರುಗಿ ಸರಸರನೆ ಹೆಜ್ಜೆ ಹಾಕಿದೆ. ` ಪ್ರತಿಭಾ… ಪ್ರತಿಭಾ. . .’ ಜೋರಾಗಿ ಕೂಗಿದಳು. ವಿಧಿಯಿಲ್ಲದೇ ನಿಂತೆ. ಅವಳು ಬೇಗ ಬೇಗ ಬಂದು ಕೂಡಿಕೊಂಡಳು. `ಸರ್, ಕರೀತಿದ್ದಾರೆ!’ `ಯಾರ್ನ?’ ನಿನ್ನನ್ನೇ… ಇನ್ಯಾರನ್ನ?! ಬರಬೇಕಂತೆ’ ತೀರಾ ಮುದುಡಿ ಮಲಗಿದ್ದ ಮನಸ್ಸು ಒಂದೇ ಕ್ಷಣಕ್ಕೆ ಹಕ್ಕಿಯಂತೆ ಗರಿ ಕೆದರಿ ಆಕಾಶಕ್ಕೆ ನೆಗೆಯಿತು. ಅವರು ನನ್ನನ್ನ ಕರೀತಿದ್ದಾರೆ!! ಓಡಿ ಓಡಿ ಸ್ಟಾಫ್ ರೂಂ ತಲುಪಿದೆ. ಬಾಗಿಲಲ್ಲಿ ಇಣಿಕಿ ನೋಡಿ, ‘ಸಾರ್’ ಎಂದೆ. ಬೀರೂ ತೆಗೆದು ಏನೋ ಪುಸ್ತಕ ನೋಡುತ್ತಿದ್ದ ಅವರು ‘ಹಾಂ, ಬಾ ಒಳಗೆ’ ಎಂದು ಕರೆದರು. ವಿದ್ಯಾಥರ್ಿಗಳು ಸಾಮಾನ್ಯವಾಗಿ ಸ್ಟಾಫ್ ರೂಮಿನ ಒಳಗೆ ಹೋಗುತ್ತಿರಲಿಲ್ಲ. ಬಾಗಿಲಲ್ಲೇ ನಿಂತು ಕರೆದರೆ ಮೇಷ್ಟ್ರುಗಳೇ ಹೊರಗೆ ಬರುತ್ತಿದ್ದರು. ಅವರು ನನ್ನನ್ನು ಒಳಗೆ ಕರೆದಾಗ ಏನು ಮಾಡುವುದೋ ಗೊತ್ತಾಗದೆ ಒಂದು ಕ್ಷಣ ಬಾಗಿಲಲ್ಲೇ ನಿಂತೆ. ‘ಬಾ ಒಳಗೆ’ ಮತ್ತೆ ಕರೆದರು. ಹೋದೆ.. ‘ತಗೋ ಅಂತ ಕೈ ಚಾಚಿದರು. ಅವರ ಕೈಯಲ್ಲಿ ಒಂದು ಪುಸ್ತಕ `ಅಕ್ಷರ ಹೊಸ ಕಾವ್ಯ’. ಆಗ ತಾನೇ ಹೊರಬಂದಿದ್ದ ಕವನ ಸಂಕಲನ. ಆಗೆಲ್ಲ ಅದರ ಬಗ್ಗೆ ಸಾಕಷ್ಟು ಮಾತುಕತೆ ಆಗುತ್ತಿತ್ತು. ಇಸ್ಕೊಂಡು ತೆರೆದು ನೋಡಿದೆ. ಮೊದಲ ಪುಟದಲ್ಲಿ ‘ಪ್ರೀತಿಯ ಪ್ರತಿಭಾ’ಗೆ ಅಂತ ಬರೆದು ಸಹಿ ಹಾಕಿದ್ದರು. ಎದೆಗೆ ಒತ್ತಿಕೊಂಡೆ. ಕಣ್ಣಲ್ಲಿ ನೀರು ತುಂಬಿ ಬರುತ್ತಿತ್ತು. ಅದರಲ್ಲಿ ನಳಿನಿ ದೇಶಪಾಂಡೆ ಅಂತ ಒಬ್ಬಳು ಕವಿಯತ್ರಿಯದು ಎರಡು ಕವನ ಇದೆ. ಆ ಥರ ನಿಭರ್ಿಡೆಯಿಂದ ಬರೀಬೇಕು. ಇನ್ನು ಹತ್ತು ವರ್ಷಗಳಾದ ಮೇಲೆ ಇದರ ಇನ್ನೊಂದು ಎಡಿಷನ್ ಬಂದರೆ ನಿನ್ನ ಪದ್ಯ ಸೇರಿರಬೇಕು. . . ಏನು? ತಲೆ ಆಡಿಸಿದೆ. ಪಟಪಟ ಕಣ್ಣೀರು ಉದುರಿತು. ಯಾಕಳ್ತಿದ್ದೀಯಾ? ಚೆನ್ನಾಗಿ ಓದಿ ಬಿಎ ಮುಗಿಸಿಕೊಂಡು ಎಂಎ ಮಾಡಿ ಲೆಕ್ಚರರ್ ಆಗಬೇಕು. ಚೆನ್ನಾಗಿ ಕವನ, ಕತೆ ಬರೀಬೇಕು, ಅಳಬೇಡಾ ಹೋಗು. . . ಕೊನೆ ಮಾತು ಹೇಳುವಾಗ ಅವರ ದನಿ ಕೇಳಿ. ತಲೆ ಎತ್ತಿ ನೋಡಿದೆ. ಅವರ ಕಣ್ಣಲ್ಲಿ ನೀರಿತ್ತು. ನಾನು ದಿಟ್ಟಿಸಿದ ತಕ್ಷಣ ಬೆನ್ನು ತಿರುಗಿಸಿ ಬೀರೂ ಒಳಗೆ ಏನೋ ಹುಡುಕಲು ತೊಡಗಿದರು. ‘ಬರ್ತೀನಿ ಸರ್’ ಅಂತ ಹೇಳಿ ಹೊರಟೆ. ಬಣ್ಣ ಕಟ್ಟಲಾರೆ ಮಾತಿಗೆ ವರ್ಣರಹಿತ ಪದಗಳರ್ಥ ನಿನಗೆ ಸ್ಪುರಿಸುವುದೇ. ಹಾಡಲಾರೆ ರಾಗವಾಗಿ ರಾಗವಿಲ್ಲದ ಭಾವ ನಿನಗೆ ತಿಳಿಯುವುದೇ. ನೂರು ಪದಗಳು ಹೊಳೆದು ಇಲ್ಲ ಇದಲ್ಲ, ಮನ ಒಪ್ಪುತ್ತಿಲ್ಲ. ಬರಿಯ ಮಾತುಗಳಾಗಿ ಬಂಜೆ ಮೋಡಗಳಂತೆ ಪದಗಳು ತೇಲಿ ಹೋಗುತ್ತವೆ. ವ್ಯರ್ಥ ಪ್ರಯತ್ನ ಬಿಡು ಮನವೆ ಮೌನ ಮೊಗ್ಗೊಡೆದು ಅರ್ಥ ಕುಸುಮ ಬಿರಿದು ತಾನೆ ತಾನಾಗಿ ಸ್ಪಂದನ. ಮೌನ ಕಣಿವೆಯ ಮಾನರ್ುಡಿ ಹೃದಯ ಕಂಪನ. ಇಪ್ಪತ್ತು ವರ್ಷಗಳ ನಂತರ ಲಂಕೇಶ್ ‘ಅಕ್ಷರ ಹೊಸ ಕಾವ್ಯ’ ಸಂಕಲನದ ಪರಿಷ್ಕೃತ ಸಂಪುಟ ಹೊರ ತಂದಾಗ ಅದರಲ್ಲಿ ನನ್ನ ಕವನ ಸೇರಿತ್ತು. ಅವತ್ತು ಮೇಷ್ಟ್ರನ್ನ ನೋಡಿಕೊಂಡು ಬರಲು ಹೊರಟೆ. ದಾರಿಯಲ್ಲಿ ಉದ್ದಕ್ಕೂ ಇಪ್ಪತ್ತು ವರ್ಷಗಳಲ್ಲಿ ನಮ್ಮ ನಂಟು ಹೇಗೆ ಬೇರೆ ಬೇರೆ ಮಜಲುಗಳನ್ನು ದಾಟಿ ಸ್ನೇಹವೆಂಬ ಭದ್ರ ಗಂಟಿನಲ್ಲಿ ಉಳಿದುಕೊಂಡಿತು ಅಂತ ಯೋಚಿಸುತ್ತಿದ್ದೆ. ಬಿ.ಎಗೆ ಸೇರಿದ ಮೊದಲ ಆರು ತಿಂಗಳು ಸಣ್ಣ ಸಣ್ಣ ಹೋಂವಕರ್್ ಮಾಡಲು, ಪಾಠ ಹೇಳಿಸಿಕೊಳ್ಳಲು ಅವರ ಹತ್ತಿರಕ್ಕೆ ಓಡುತ್ತಿದ್ದೆ. ಕ್ರಮೇಣ ಪದ್ಮ ಮೇಡಂ, ಪುಷ್ಪಾ ಮೇಡಂ ಕೂಡಾ ಹೇಳಿ ಕೊಡುತ್ತಾರೆ ಅಂತ ಗೊತ್ತಾಯಿತು. ವಾರಕ್ಕೊಂದು ಸಲ, ನಂತರ ತಿಂಗಳಿಗೊಂದು ಸಲ, ಆಮೇಲೆ ಮೂರು ನಾಲ್ಕು ತಿಂಗಳಿಗೆ… ಹೀಗೇ ಮೇಷ್ಟ್ರ ಹತ್ತಿರ ಹೋಗೋದು ಕಡಿಮೆಯಾಗುತ್ತಾ ಬಂತು. ಜೊತೆಗೆ ಬಿಎಂಎಸ್ ನ ಗೆಳತಿಯರ ದಂಡು, ಹೊಸ ಅನ್ವೇಷಣೆಗಳು ಹೊಸ ಸಂಬಂಧಗಳು, ಹೊಸ ಆಸಕ್ತಿಗಳು… ಆರು ತಿಂಗಳಿಗೊಂದು ಸಲ ಹೋಗಿ ಪೂತರ್ಿ ಒಟ್ಟಿಗೇ ವರದಿ ಮಾಡಿ ಬರುವ ದಿನಗಳು. ಬಿಎ ಫಸ್ಟ್ ಕ್ಲಾಸಲಿ ್ಲ ಪಾಸಾದಾಗ ಕನ್ನಡದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಮಾಕ್ಸರ್್ ಬಂದಿತ್ತು. ಎಂಎಗೆ ನಿರಾಯಾಸವಾಗಿ ಸೀಟು ಸಿಕ್ಕಿತ್ತು. ಮದ್ರಾಸಿನಲ್ಲಿ ಅಣ್ಣನ ಮನೆಯಲ್ಲಿ ಇದ್ದುಕೊಂಡು ಅಲ್ಲೇ ಯೂನಿವಸರ್ಿಟಿಯಲ್ಲಿ ಎಂಎ ಮಾಡುವುದು ಅಂತ ನಿಧರ್ಾರವಾಗಿತ್ತು. ಹೋಗುವ ಮೊದಲು ಮೇಷ್ಟ್ರ ಮದುವೆ ಅಟೆಂಡ್ ಮಾಡಬೇಕಾಯಿತು. ಅವಳೂ ಒಳ್ಳೆಯ ಮಾಕ್ಸ್ರ್ ತಗೊಂಡು ಪಾಸಾಗಿದ್ದಳು. ಇನ್ನೂ ಚೆನ್ನಾಗಿ ಹಾಡುತ್ತಿದ್ದಳು. ನೋಡಲು ಇನ್ನೂ ಸುಂದರವಾಗಿದ್ದಳು. ಅವರಿಬ್ಬರು ಇನ್ನೂ ಹೆಚ್ಚು ಹತ್ತಿರವಾಗಿದ್ದರು. ಮದುವೆ ಇನ್ವಿಟೇಷನ್ ಹಿಡಿದು ದೂರದ ಚೌಲ್ಟ್ರಿ ಹುಡುಕಿಕೊಂಡು ಹೋಗಿ ಅವರಿಗೊಂದು ಸುಂದರ ಗಿಫ್ಟ್ ಕೊಟ್ಟು ಬಂದೆ. ಪ್ರೀತಿ ಇತ್ತು. ದುಃಖವಿರಲಿಲ್ಲ. ನೆಮ್ಮದಿ ಇತ್ತು. ಸ್ನೇಹವಿತ್ತು. ತಳಮಳವಿರಲಿಲ್ಲ. ಇದು ಹೀಗೇ ಆಗಬೇಕಿತ್ತು ಅನ್ನಿಸಿತು. ಹೊಸ ‘ಅಕ್ಷರ ಹೊಸ ಕಾವ್ಯ’ ಬಂದ ದಿನ ಅವರನ್ನು ಭೇಟಿ ಮಾಡಿದಾಗ ಅವರ ಮಗ ಇಂಜಿನಿಯರಿಂಗ್ ಫೈನಲ್ ಇಯರ್ನಲ್ಲಿದ್ದ. ನನ್ನ ಇಬ್ಬರು ಮಕ್ಕಳು ಹೈಸ್ಕೂಲಿನಲ್ಲಿ, ನಮ್ಮಿಬ್ಬರಿಗೂ ಅಲ್ಲಲ್ಲಿ ಬಿಳಿ ಕೂದಲು. ಮುಖದಲ್ಲಿ ಸುಕ್ಕುಗಳು. ಕಣ್ಣುಗಳಲ್ಲಿ ಮಿಂಚು ಮಸುಕಾಗಿತ್ತು. ಅವರ ಮನೆಯಲ್ಲಿ ಕೂತು ಗಂಟೆ ಕಾಲ ಮಾತನಾಡಿ, ಅವಳು ಮಾಡಿಕೊಟ್ಟ ದೋಸೆ ತಿಂದು, ಕಾಫಿ ಕುಡಿದು ಹೊರಟೆ. ಅಷ್ಟು ದೂರ ಬಿಟ್ಟು ಬರಲು ಅವರೂ ಬಂದರು. ತಿರುವಿನಲ್ಲಿ ನಿಂತು ಕೊನೆಯ ಮಾತುಗಳನ್ನು ಆಡುವಾಗ ಹಟಾತ್ತಾಗಿ ನನ್ನ ಮನಸ್ಸಿಗೆ ಏನು ಬಂತೋ, ನನಗೇ ತಿಳಿಯದೇ ಕೇಳಿಬಿಟ್ಟೆ. ‘ಅಕಸ್ಮಾತ್ ಅವಳಲ್ಲದಿದ್ದರೆ ನೀವು ನನ್ನನ್ನು ಪ್ರೀತಿಸುತ್ತಿದ್ರಾ?’ ಅವರು ಒಂದು ಕ್ಷಣ ತೀರಾ ವಿಚಲಿತರಾಗಿ, ಉದ್ವೇಗಗೊಂಡರು. ಹಣೆಗೆ ಕೈಯಿಟ್ಟು ತಲೆ ಕೆಳಗೆ ಹಾಕಿ ಮತ್ತೆ ಮೇಲೆ ನೋಡಿ ಹಕ್ಕಿಯ ಹಾರಾಟವನ್ನೇ ಅನುಸರಿಸಿದರು. ನಂತರ ನನ್ನ ಕಣ್ಣುಗಳನ್ನೇ ನೇರವಾಗಿ ದಿಟ್ಟಿಸುತ್ತಾ ‘ಅವತ್ತೇ ಈ ಮಾತು ಕೇಳಿದ್ದಿದ್ದರೆ ಇಲ್ಲಾ ಅನ್ನುತ್ತಿದ್ದೆ. ಇವತ್ತು ಕೇಳಿದರೆ ‘ಹೂಂ’ ಅನ್ನಬೇಕಾಗುತ್ತದೆ.’ ‘ಈಗಲೂ ನಾನು ವಕ್ರದಂತೆಯೇ, ಸುಂದರಿ ಅಲ್ಲ’ ‘ನಾನು ನಿನ್ನಲ್ಲಿ ತುಂಬಾ ಮೆಚ್ಚಿಕೊಳ್ಳುವ ಅಂಶ ಯಾವುದು ಗೊತ್ತಾ?’ ಯಾವುದು ಎಂದು ಕೇಳಿತು ನನ್ನ ಕಣ್ಣು ‘ಕಳೆದ ಇಪ್ಪತ್ತು ವರ್ಷಗಳಲ್ಲಿ ನೀನು ಹೇಗೆ ನಿನ್ನ ಎಲ್ಲಾ ಕಾಂಪ್ಲೆಕ್ಸ್ಗಳನ್ನೂ ಗೆದ್ದು ಬರುತ್ತಿದ್ದೀಯಲ್ಲಾ ಅದು. ನಿನಗಿರುವ ಹೋರಾಟದ ಹುರುಪು, ಧೈರ್ಯ ಎಲ್ಲವನ್ನೂ ಎದುರಿಸುವ ತಾಕತ್ತು ನನಗಿಲ್ಲ. ನಿನ್ನ ಮುಂದೆ ನಾನು ತುಂಬ ದುರ್ಬಲ ಅನ್ನಿಸುತ್ತೆ.’ ‘ಒಂದೇ ಒಂದು ಸಲ ಹೇಳಿ ಬಿಡಲಾ? ಎಂದೋ ಹೇಳಬೇಕಾಗಿದ್ದ. ಆದರೆ ಎಂದೂ ನನ್ನಿಂದ ಹೇಳಲಾಗದ ಮಾತು’ ಹೇಳು ಎಂದಿತು ಅವರ ಕಣ್ಣು. ‘ಐ ಲವ್ ಯೂ’ ಅಂದೆ. ‘ಅದು ನಿನ್ನ ಜೀವನ ಪ್ರೀತಿ. ‘You don’t love me, you love life’ ಎಂದರು.]]>

‍ಲೇಖಕರು G

April 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

4 ಪ್ರತಿಕ್ರಿಯೆಗಳು

 1. shama, nandibetta

  ಪ್ರತಿಗಾಗಿ 9449174662 ಹಲವು ಬಾರಿ ಸಂಪರ್ಕಿಸಿದೆ. ” ನೀವು ಕರೆ ಮಾಡಿರುವ ಚಂದಾದಾರರು ಸ್ವಿಚ್ ಆಪ್ಹ್ ಮಾಡಿದ್ದಾರೆ”

  ಪ್ರತಿಕ್ರಿಯೆ
  • akshatha

   shama, nandibetta smadam, naavu malenaadinavaru… male bandre vidyut iralla phone kuda charge agdidre swich off agatte…adre ega charge agide. nimma number kotre naane samparkisuve.

   ಪ್ರತಿಕ್ರಿಯೆ
 2. -ರವಿ ಮೂರ್ನಾಡು, ಕ್ಯಾಮರೂನ್

  ಒಂದೆಡೆ ಮಡುಗಟ್ಟುವುದು ಮನಸ್ಸು. ಇನ್ನೊಂದೆಡೆ ಓದುತ್ತಿದ್ದಂತೆ ಸ್ಪೂರ್ತಿಗೊಳ್ಳುವುದು. ಒಂದು ಮಗು ಧೈಹಿಕವಾಗಿ ಬೆಳೆದ ಪರಿಗೂ , ಅದರೊಳಗಿನ ಮನಸ್ಸು ಬೆಳೆಯುತ್ತಾ ಸಾಗಿದ ಪರಿಗೂ ವ್ಯತ್ಯಾಸವನ್ನು ಇಲ್ಲಿ ಗಮನಿಸುತ್ತಿದ್ದೇನೆ. ಇದು ಮನಸ್ಸು ಪಂಚಭೂತಗಳಿಂದ ನಿರ್ಮಿತಗೊ೦ಡ ಮೂಳೆ ತಡಿಕೆ ದೇಹದೊಳಗೆ ದಿವ್ಯಾನುಭೂತಿಗೆ ಸ್ಫುರಿಸಿದ ಭಾವಗಳ೦ತೆ ಗೋಚರಿಸಿತು. ಬರಹದ ಬದುಕು ಹೀಗೆ ಓದುಗನ ಮನಸ್ಸಿನೊಂದಿಗೆ ಸಂವಾಧಕ್ಕೆ ಒಳಗೊಳ್ಳಬೇಕು. ಅದು ಸಾಹಿತ್ಯ ಮತ್ತು ನಿಜವಾದ ಸಾಹಿತ್ಯ. ಅನುಭವದ ತೆಕ್ಕೆಗೆ ಬಿದ್ದ ಪದಗಳು ಭಾವಗಳನ್ನು ಅರಳಿಸುವ ಪರಿ. ತುಂಬಾ ಸಂತಸ ಪಟ್ಟೆ. ನನ್ನೊಂದಿಗೆ ಮತ್ತು ಮನಸ್ಸಿನೊಂದಿಗೆ . ಭಾರತಕ್ಕೆ ಬಂದಾಗ ಖಂಡಿತ ಈ ” ಈ ಪದ ರತ್ನ” ವನ್ನು ಸ೦ಪೂರ್ಣ ಓದಲು ಎದುರುಗೊಳ್ಳುತ್ತೇನೆ. ಹಂಚಿಕೊಂಡಿದ್ದಕ್ಕೆ ಅವಧಿಗೆ ಧನ್ಯವಾಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: