ಇನ್ನು ಈ ನದಿ ನಿಲ್ಲುವುದಿಲ್ಲ…

ರವಿ ಅಜ್ಜೀಪುರ ಈಗ ಬ್ಲಾಗ್ ಮಂಡಲಕ್ಕೆ ಕಾಲಿಟ್ಟಿದ್ದಾರೆ. ಅಜ್ಜೀಪುರ ಅವರನ್ನ ಪರಿಚಯ ಮಾಡಿಸಬೇಕಾಗಿಲ್ಲ.  ಹೊಸ ವರ್ಷದ ಶುಭಾಷಯ ಪತ್ರದ ಮೂಲಕ ಅವಧಿಯ ಎಲ್ಲರಿಗೂ ಪರಿಚಿತರು. ‘ನದಿ ಪ್ರೀತಿ’ ಎಂಬ ಭಿನ್ನ ಹೆಸರಿನೊಂದಿಗೆ ಬ್ಲಾಗ್ ಮಂಡಲಕ್ಕೆ ಅಕ್ಷರ ಅಕ್ಕೀ ಕಾಳು ಹಾಕಿದ್ದಾರೆ. ಇವರ ಬ್ಲಾಗ್ ಇಷ್ಟವಾದರೆ ಮೈಲ್ ಮಾಡಿ: [email protected]

nadipreeti.jpg

ಮನಸ್ಸು ಹದಿನೈದರ ಹುಡುಗಿ

ನಾನು ರವಿ ಅಜ್ಜೀಪುರ. ವೃತ್ತಿಯಲ್ಲಿ ಪತ್ರಕರ್ತ. ಎಲ್ಲಾ ಮನಸ್ಸುಗಳು ಮೆಚ್ಚಿಕೊಂಡಿರುವ ಓ ಮನಸೇ ಪತ್ರಿಕೆಯಲ್ಲಿ ಸದ್ಯಕ್ಕೆ ಕೆಲ್ಸ. ಓದುಗರೆಲ್ಲ ಚೆನ್ನಾಗಿ ಬರೀತೀಯ ಅಂತ ಬೆನ್ನು ತಟ್ತಾರೆ. ಬರವಣಿಗೆ ಅಂದ್ರೆ ನನಗೂ ಮನಸ್ಸು ಹದಿನೈದರ ಹುಡುಗಿ ಥರ ಜೋಶ್ನಲ್ಲಿರುತ್ತೆ. ಇಷ್ಟೇನಾ ನಿನ್ನ ಪ್ರತಿಭೆ ಅಂತ ಕೇಳಿದ್ರೆ, ಚೆಂದಕ್ಕೆ ಚಿತ್ರ ಬರೀತೀನಿ, ಫಸ್ಟ್ಕ್ಲಾಸ್ ಕವರ್ಪೇಜ್ ಡಿಸೈನ್ ಮಾಡ್ತೀನಿ, ಕಥೆ-ಕವಿತೆ ಬರೀತೀನಿ. ಮುಂದೆ ಎಂದಾದ್ರೂ ಒಂದು ಸಕ್ಕತ್ ಫಿಲ್ಮ್ ಮಾಡಬೇಕು ಅನ್ನೋ ಆಸೆ ಗಾಳಿಪಟದ ಥರ ಮನದ ಆಕಾಶದಲ್ಲಿ ಹಾರ್ತಿದೆ. ಇದಲ್ದೆ ಇನ್ನೂ ಏನೇನೋ ಆಸೆ ಇದೆ. ಸದ್ಯಕ್ಕೆ ಅವೆಲ್ಲ ಅನ್ಇಂಟರೆಸ್ಟಿಂಗ್.

ravi.jpg

ಇನ್ನು ಈ ನದಿ ನಿಲ್ಲುವುದಿಲ್ಲ…

ಹಾಯ್

ನದಿ ಬಗ್ಗೆ ನಿಮಗೆಲ್ಲ ಖಂಡಿತಾ ಗೊತ್ತಿದೆ. ಎಲ್ಲೋ ಇವತ್ತಿನ ಮಕ್ಕಳಿಗೆ ನದಿ ಅನ್ನೋದು ಹೇಗಿರುತ್ತೆ ಅಂದ್ರೆ ಮ್ಯಾಪ್ನಲ್ಲಿ ತೋರಿಸಿ “ದಿಸ್ ಈಸ್ ರಿವರ್” ಅಂತ ಹೇಳಬಿಡ್ತಾವೆ. ಅವಕ್ಕೆ ನದಿಯ ಜಾಯಮಾನ ಗೊತ್ತಿಲ್ಲ. ಸೆಳಹು ಗೊತ್ತಿಲ್ಲ. ಪರಿಧಿ ಗೊತ್ತಿಲ್ಲ. ಅದರ ಉದ್ದ ಅಗಲವೂ ಗೊತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅದರ ಪ್ರೀತಿ ಗೊತ್ತಿಲ್ಲ.
ನಿಜ ಹೇಳಬೇಕು ಅಂದ್ರೆ, ಅದರ ತೆಕ್ಕೆಗೆ ಏನು ಸಿಗುತ್ತೋ ಅದನ್ನೆಲ್ಲ ತೆಗೆದುಕೊಂಡು ಹೋಗೋದು ನದಿಯ ಜಾಯಮಾನ. ಅದಕ್ಕೆ ಯಾರು ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ. ದಾಹ ಅಂತ ಬಗ್ಗಿದವ ನೀರು ಸಿಕ್ಕ ಖುಷಿಯಲ್ಲಿ ಸ್ವಲ್ಪ ಯಾಮಾರಿದರೂ ನದಿ ಬಿಡೊಲ್ಲ ಅನ್ನೋದು ನಿಮಗೆ ಗೊತ್ತಿದೆ. ಬದುಕೂ ಹಾಗೆ. ನದಿಯ ಥರ. ಹರಿದದ್ದೇ ದಾರಿ. ನಾವು ಅದರ ಸೆಳೆತಕ್ಕೆ ಒಳಗೊಳ್ಳಬೇಕೇ ವಿನಃ ಅದು ನಮ್ಮ ತನಕ್ಕೆ ಒಗ್ಗುವುದಿಲ್ಲ. ಅಂತಹ ನದಿಯ ಪ್ರೀತಿಯನ್ನೇ ಬೊಗಸೆಯಲ್ಲಿ ಬಾಚಿ ತಂದು ಈ ಬ್ಲಾಗ್ನಲ್ಲಿ ಇಡಲು ಪ್ರಯತ್ನಿಸುತ್ತೇನೆ.
ಇನ್ನು ಮುಂದೆ ನದಿ ನಿಲ್ಲುವುದಿಲ್ಲ. ಅದರ ಪ್ರೀತಿಯೂ.
ಒಪ್ಪಿಸಿಕೊಳ್ಳಿ.

‍ಲೇಖಕರು avadhi

January 22, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: