ಇನ್ನೂ ಗೃಹಪ್ರವೇಶ ಆಗಿಲ್ಲ..

ಏನಿದೇನಿದು?? ಅಂತ ಇನ್ನೂ ನಾವು ಕೇಳುವ ಮುನ್ನವೇ ‘ಸಂಪಾದಕೀಯ‘ ಬ್ಲಾಗ್ ಬ್ರೇಕಿಂಗ್ ನ್ಯೂಸ್ ನೀಡಿದೆ.

ಹೌದು ನಾವು ವೆಬ್ ತಾಣವಾಗಿ ಬದಲಾಗಲಿದ್ದೇವೆ.

ಇನ್ನೇನು ೧೦ ಲಕ್ಷ ಹಿಟ್ಸ್ ಪಡೆಯಲಿದ್ದ ನಾವು ಆ ಸಂದರ್ಭದಲ್ಲಿ ನಮ್ಮದೇ ತಾಣ ಆರಂಭಿಸ ಬೇಕೆಂದುಕೊಂಡಿದ್ದೆವು.

ಆದ್ದರಿಂದ ‘ಅವಧಿ’ ಡೆಮ್ಮಿ ತಯಾರಿಸಿ ಟೆಸ್ಟಿಂಗ್ ನಡೆಸಿದ್ದೆವು ಈಗ ನೀವು ನೋಡುತ್ತಿರುವುದೂ ಸಹಾ ಡೆಮ್ಮಿ ಆವೃತ್ತಿಯೇ. ಅಧಿಕೃತವಾಗಿ ‘ಅವಧಿ’ ಇನ್ನೂ ಲಾಂಚ್ ಆಗಿಲ್ಲ.

ಅದೇನೋ ಸರಿ, ಆದರೆ ‘ಈ ಬ್ಲಾಗ್ ಗೂ, ವೆಬ್ ಸೈಟ್ ಗೂ ಏನು ವ್ಯತ್ಯಾಸ?’ ಅಂತ ಸಾಕಷ್ಟು ಜನ ಕೇಳಿದ್ದಾರೆ.

‘ಸಂಪಾದಕೀಯ’ ಈಗಾಗಲೇ ಆದಷ್ಟೂ ಅದನ್ನು ವಿವರಿಸಿದೆ.

ಆದರೂ ನಾವು ಕೇಳಿದವರಿಗೆ ಸರಳವಾಗಿ ಅರ್ಥ ಮಾಡಿಸಲು ‘ಇದು ಪೇಯಿಂಗ್ ಗೆಸ್ಟ್ ಆಗಿರುವುದಕ್ಕೂ, ಮನೆ ಓನರ್ ಆಗುವುದಕ್ಕೂ ಏನು ವ್ಯತ್ಯಾಸ ಇದೆಯೋ ಅಷ್ಟೇ ವ್ಯತ್ಯಾಸ’ ಅಂತ ಹೇಳುತ್ತಿದ್ದೇವೆ.

ಸರಿ ಆಲ್ವಾ…?

ನಮ್ಮದೇ ಸೈಟ್, ನಮಗೆ ಬೇಕಾದಂತೆ ಮನೆ ಕಟ್ಟಿಸಿಕೊಂಡು ನಮಗೆ ಬೇಕಾದಲ್ಲಿ ಮೊಳೆ ಹೊಡೆದುಕೊಂಡು, ನಮಗೆ ಬೇಕಾದಲ್ಲಿ ಬಟ್ಟೆ ಒಣಗಿ ಹಾಕಿ.. ಹೀಗೆ ಎಷ್ಟೆಲ್ಲಾ ಸ್ವಾತಂತ್ರ್ಯ..?

ಅದೇ ಪೇಯಿಂಗ್ ಗೆಸ್ಟ್ ಆಗಿದ್ದಾಗ ಕೊಟ್ಟ ಇಷ್ಟಗಲದ ಮಂಚದಲ್ಲಿ ಮಲಗಬೇಕು. ಬಟ್ಟೆ ಇಟ್ಟುಕೊಳ್ಳಲು ಮಂಚದ ಕೆಳಗೆ ಎಷ್ಟು ಜಾಗ ಇದೆಯೋ ಅಷ್ಟೇ…೯ ಘಂಟೆ ಒಳಗೆ ಗೂಡು ಸೇರಿಕೊಳ್ಳಬೇಕು. ಚಪಾತಿ ಲಟ್ಟಿಸಿದ್ದು ಸರಿ ಇಲ್ಲ, ಸುಟ್ಟಿದ್ದು ರುಚಿಸಿಲ್ಲ. ಆ ಮಾತೇ ಇಲ್ಲ, ನಿಮಗೆ ಇಷ್ಟವಾದ ಚಾನಲ್ ನೋಡೋಣ ಎಂದು ಹಾಲ್ ಗೆ ಬಂದರೆ ಅಲ್ಲಿರುವ ಒಂದೇ ಟಿ ವಿ ಸೆಟ್ ಮುಂದೆ ಆಗಲೇ ಹತ್ತಾರು ತಲೆಗಳು.. ಬ್ಲಾಗ್ ಎಂದರೆ ಅದೇ ಥೇಟ್ ಪೇಯಿಂಗ್ ಗೆಸ್ಟ್ ನಂತೆ ‘ನಿಮ್ಮೊಡನಿದ್ದೂ ನಿಮ್ಮಂತಾಗದವ’..

ಇರಲಿ ಇದನ್ನೆಲ್ಲಾ ಅವಧಿ http://avadhimag.online ಆಗಿ ಬದಲಾಗುವಾಗ ಚರ್ಚಿಸೋಣ

ಸಧ್ಯಕ್ಕೆ ಅವಧಿ ಬ್ಲಾಗ್ ಓದುತ್ತಿರಿ.

ಇನ್ನು ಕೆಲವೇ ದಿನದಲ್ಲಿ ಅಧಿಕೃತವಾಗಿ ನಾವು ವರ್ಡ್ ಪ್ರೆಸ್ ತಾಣಕ್ಕೆ ವಿದಾಯ ಹೇಳಲಿದ್ದೇವೆ. ನಮ್ಮದೇ ಮನೆ ಗೃಹಪ್ರವೇಶಕ್ಕಾಗಿ-

‍ಲೇಖಕರು avadhi

February 18, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಣ ನಾಡಿಗೆ ಹಸಿ ಬರ: ಒದಗೀತೆ ಪರಿಹಾರ?

ಒಣ ನಾಡಿಗೆ ಹಸಿ ಬರ: ಒದಗೀತೆ ಪರಿಹಾರ?

ಡಿ. ಎಮ್. ನದಾಫ್ ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಋತುಮಾನಗಳು ಬದಲಾದಂತೆ ಭಾಸವಾಗುತ್ತಿದೆ. ಕಡು ಬೇಸಿಗೆಯ ದಿನದಲ್ಲಿ ಮಳೆ ಆರಂಭವಾಗುವುದು,...

ತಪ್ಪು

ತಪ್ಪು

ಅಂಜನಾ ಗಾಂವ್ಕರ್ ಸುತ್ತ ಹಸುರಿನ ಹುಲ್ಲು ಹಾಸು. ಸಂಜೆಯ ವಾಕಿಂಗ್ ಮುಗಿಸಿ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ಮನದಲ್ಲಿ ಮಾತ್ರ ಆ ಹಸುರು,...

6 ಪ್ರತಿಕ್ರಿಯೆಗಳು

 1. prakashchandra

  Naavoo bahala dinadinda chaathaka pakshiyanthe kaayuthiddeve, avadhi yaavaaga website agi badalaaguthado antha…! Eega namma santhasa immadiside, gn mohan avarihge shubhaashayagalu. Nimma prayathnakke nammellara sampoorna sahakaara khanditha ide.

  ಪ್ರತಿಕ್ರಿಯೆ
 2. D S Ramaswamy

  ಹೊಸಮನೆಯ ಪರಿಸರ ಎಲ್ಲರಿಗೂ ಇಷ್ಟವಾಗಲಿ. ಸ್ವಂತ ಮನೆ ಅಂತ ದೂರದ ಏರಿಯಾಕ್ಕೆ ಹೋಗಲ್ಲ ತಾನೆ? (net work problem?)

  ಪ್ರತಿಕ್ರಿಯೆ
 3. ಅರಕಲಗೂಡು ಜಯಕುಮಾರ್

  ಅವಧಿ ಮ್ಯಾಗಜೀನ್ ವೆಬ್ ತಾಣವಾಗಿ ಬದಲಾಗುತ್ತಿರೋದು ಸಂತಸ ತಂದಿದೆ, ಜಿ. ಎನ್ ಮೋಹನ್ ಇದುವರೆಗೂ ಅವಧಿಯನ್ನು ಪ್ರಸ್ತುತ ಪಡಿಸಿದ ರೀತಿ,ತಾಣದಲ್ಲಿ ಹರವಿಕೊಂಡ ಸಂಗತಿಗಳು ಆಪ್ತವಾಗಿದ್ದವು ಆದರೆ ಕೊನೆಯಲ್ಲೆಲ್ಲೋ ಅವರು ತಾಣವನ್ನು ಕೆಲವು ಅಂಕಣಕೋರರಿಗೆ ಬಿಟ್ಟುಕೊಡುವ ಮೂಲಕ ಏಕತಾನತೆಯ ಬರಹ ಮೂಡಿಬರಲು ಅವಕಾಶ ಮಾಡಿದ್ದು ಸಹ್ಯವಾಗಿರಲಿಲ್ಲ.ಉತ್ತಮ ಅಭಿರುಚಿ ಬೆಳೆಸುತ್ತಿರುವ ಅವಧಿ, ಡಾಟ್ ಕಾಂ ಆಗುವ ಮೂಲಕ ಹೊಸ ವಿನ್ಯಾಸದಲ್ಲಿ ನವನವೀನ ವಿಚಾರಗಳೊಂದಿಗೆ ಬರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: