ಇನ್ನೊಂದು ಕೇಳು ಪುಸ್ತಕ

ಅಮೆರಿಕಾದಲ್ಲಿರುವ ರವಿ ಕೃಷ್ಣಾ ರೆಡ್ಡಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ವಿಕ್ರಾಂತ ಕರ್ನಾಟಕದಲ್ಲಿ ಸತತವಾಗಿ ಬರೆದ ತಮ್ಮ ಅಂಕಣ ಬರಹಗಳಿಗೆ ಈಗ ಕೇಳು ಪುಸ್ತಕದ ರೂಪು ನೀಡಿದ್ದಾರೆ. ಕನ್ನಡದಲ್ಲಿ ಅಪರೂಪವಾಗಿದ್ದ ಕೇಳು ಪುಸ್ತಕ ಈಗ ರೆಕ್ಕೆ ಪಡೆದುಕೊಳ್ಳುತ್ತಿದೆಯೇ?.

ತಮ್ಮ ಸಾಹಸದ ಬಗ್ಗೆ ಅವರೇ ಬರೆದ ವಿವರ ಇಲ್ಲಿದೆ. ರವಿ ಕೃಷ್ಣಾ ರೆಡ್ಡಿ ಅವರಿಗೆ ಅಭಿನಂದನೆಗಳು. ಇಂತಹ ಸಾಹಸಗಳು ಇನ್ನಷ್ಟು ಹೆಚ್ಚಲಿ.   

 ravikrishanareddy.jpg 

ಸ್ನೇಹಿತರೆ,

ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಆಡಿಯೊ ಪುಸ್ತಕ ಸಂಸ್ಕೃತಿ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲವೆ ಇಲ್ಲ. ನಮ್ಮಲ್ಲಿ ಆಗಾಗ ಇನ್ಸ್‌ಪಿರೇಷನಲ್ ಆಡಿಯೊ ಕ್ಯಾಸೆಟ್‍ಗಳು ಬಿಡುಗಡೆಯಾಗುತ್ತವೆ ಎನ್ನುವುದನ್ನು ಬಿಟ್ಟರೆ ಇಡೀ ಗದ್ಯ ಪುಸ್ತಕವೆ ಆಡಿಯೊ ಆಗಿದ್ದು ಇಲ್ಲ. ಇತ್ತೀಚೆಗೆ ತಾನೆ ಕವಿ-ಪತ್ರಕರ್ತ ಜಿ.ಎನ್. ಮೋಹನ್‌ರವರು ತಮ್ಮ “ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ” ಕವನಸಂಕಲನದ ಕವನಗಳನ್ನು ಹಲವಾರು ಕನ್ನಡ ಸಾಹಿತಿಗಳಿಂದ ವಾಚಿಸಿ, ಅದನ್ನೆ ಸಿ.ಡಿ. ಮಾಡಿದ್ದಾರೆ. ಆ ನಿಟ್ಟಿನಲ್ಲಿ ಇದೇ ಮೊದಲ ಪ್ರಯತ್ನವೇನೊ.

ಕೆಂಟ್ ಕೀತ್‌ರವರು ಇಂಗ್ಲಿಷಿನಲ್ಲಿ ಬರೆದಿರುವ “Anyway – The Paradoxical Commandments” ಎಂಬ ಪುಸ್ತಕವಿದೆ. ಈ ಪುಸ್ತಕವನ್ನು ನಾನು “ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ.” ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದೇನೆ. ಇದು ಸುಮಾರು 14 ವಾರಗಳ ಕಾಲ “ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಈಗ ಅದನ್ನೆ ನಾನು ಆಡಿಯೊ ಪುಸ್ತಕವಾಗಿ ಪರಿವರ್ತಿಸಿದ್ದೇನೆ.

 • “ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ.” ಕೇಳು-ಪುಸ್ತಕ mp3 ಫಾರ್ಮ್ಯಾಟ್‌ನಲ್ಲಿದೆ. ಒಂದೇ ಸಿಟ್ಟಿಂಗ್‌ನಲ್ಲಿ ಕಂಪ್ಯೂಟರ್‍ನಲ್ಲಿ ರೆಕಾರ್ಡ್ ಮಾಡಿ, ಅದನ್ನೆ Audacity ಸಾಫ್ಟ್‌ವೇರ್ ಬಳಸಿ ಸ್ವಲ್ಪ ಎಡಿಟ್ ಮಾಡಿದ್ದೇನೆ. ಹಿನ್ನೆಲೆ ಸಂಗೀತ, ವಿಶೇಷ ಎಫ್ಫೆಕ್ಟ್ಸ್ ಅಂತಹವೇನೂ ಸದ್ಯಕ್ಕೆ ಸಂಯೋಜಿಸಿಲ್ಲ. ಅವೆಲ್ಲ ಮಾಡಬೇಕು ಅಂತಿದ್ದರೂ, ಸಮಯಾಭಾವದಿಂದ ಮತ್ತು ಇದ್ದಕ್ಕಿದ್ದಂತೆ ಬದಲಾಗುವ ಆಸಕ್ತಿಯ ಕಾರಣವಾಗಿ ಅದೆಲ್ಲ ಮಾಡಲಾಗಿಲ್ಲ. ಯಾರಾದರೂ ಹವ್ಯಾಸಿ ಕನ್ನಡ ಸ್ನೇಹಿತರು, ಇದನ್ನು ಡೌನ್‌ಲೋಡ್ ಮಾಡಿಕೊಂಡು, ಅದಕ್ಕೆ ಪ್ರೊಫೆಷನಲ್ ಟಚ್ ಕೊಟ್ಟು, ಸುಧಾರಿಸಿದರೆ, ನಿಮ್ಮಷ್ಟೆ ಸಂತೋಷ ನನ್ನದು, ಅಥವ ನನ್ನಷ್ಟೆ ಸಂತೋಷ ನಿಮ್ಮದು.ಕೇಳುಗರ ಬ್ಯಾಂಡ್‌ವಿಡ್ತ್‌ಗೆ ಅನುಕೂಲವಾಗುವಂತೆ ಮೂರು ವಿಧವಾಗಿ ಇವನ್ನು ವಿಭಾಗಿಸಿದ್ದೇನೆ. ನಿಮಗೆ ಅನುಕೂಲವಾದ ರೀತಿಯಲ್ಲಿ ಡೌನ್‌ಲೋಡ್ ಮಾಡಿಕೊಂಡು, ಅನುಕೂಲವಾದ ರೀತಿಯಲ್ಲಿ (ಕಂಪ್ಯೂಟರ್, mp3 ಪ್ಲೇಯರ್, ಬೂಮ್‌ಬಾಕ್ಸ್, ಇತ್ಯಾದಿ), ಸಾವಕಾಶವಾಗಿ ಕೇಳಬಹುದು. ಒಟ್ಟಾರೆಯಾಗಿ 2 ಗಂಟೆ 13 ನಿಮಿಷಗಳ ಕೇಳು-ಪುಸ್ತಕ ಇದು.
 • ನಿಮಗೆ ಇದನ್ನು ಇತರರ ಜೊತೆ ಹಂಚಿಕೊಳ್ಳಬೇಕೆನಿಸಿದರೆ, ಈ ಕೊಂಡಿಯನ್ನು ಫಾರ್ವರ್ಡ್ ಮಾಡಬಹುದು.http://vicharamantapa.net/Anyway/ 
 • ನಿಮ್ಮ ಸಲಹೆ, ಸೂಚನೆ, ವಿಮರ್ಶೆ, ಇಷ್ಟೇನಾ, ಏನ್ ಮಹಾ, ಹ್ಞೂ,….. ಗಳನ್ನೆಲ್ಲ ಇಲ್ಲಿಗೆ ಕಳುಹಿಸಬಹುದು. [email protected]
 • ಪ್ರೀತಿಯಿಂದ,

  ರವಿ…

  ‍ಲೇಖಕರು avadhi

  January 6, 2008

  ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

  ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

  ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

  ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

  ನಿಮಗೆ ಇವೂ ಇಷ್ಟವಾಗಬಹುದು…

  ಫಾರುಕ್ ಮತ್ತೆ ಸಿಕ್ಕಿದ

  ಫಾರುಕ್ ಮತ್ತೆ ಸಿಕ್ಕಿದ

  ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

  ಮುಂಬಯಿಯ ಕನ್ನಡ ಸಾಹಿತ್ಯ ಲೋಕ

  ಮುಂಬಯಿಯ ಕನ್ನಡ ಸಾಹಿತ್ಯ ಲೋಕ

  ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

  ೧ ಪ್ರತಿಕ್ರಿಯೆ

  1. ravikrashna reddy

   ಮಾನ್ಯರೆ,

   ಅವಧಿಯಲ್ಲಿ ನನ್ನ ಪ್ರಯತ್ನದ ಬಗ್ಗೆ ಬರೆದಿದ್ದಕ್ಕೆ ಧನ್ಯವಾದಗಳು.

   ಅಂದ ಹಾಗೆ, ನಾನು ನಿಮ್ಮ ಈ ಬ್ಲಾಗನ್ನು ಬಹುಶಃ ಮೊದಲ ದಿನದಿಂದಲೂ ಓದುತ್ತ ಬಂದಿದ್ದೇನೆ. ಯಾರು ಯಾವ ಹೆಸರಿನಲ್ಲಿ ಬೇಕಾದರೂ ಕಾಮೆಂಟ್ ಹಾಕಬಹುದಾದ ಮತ್ತು ಕೆಲವು ಮುಖೇಡಿಗಳು ಆಗಾಗ ಅದನ್ನು ಕೆಟ್ಟದಾಗಿ ಬಳಸಿಕೊಳ್ಳುವ ರೀತಿಯಿಂದಾಗಿ, ನಾನು ಎಷ್ಟೇ ಬ್ಲಾಗುಗಳನ್ನು ಓದಿದರೂ ಕಾಮೆಂಟ್ ಹಾಕುವುದಿಲ್ಲ. ಹಾಗೆಯೆ, ಈ ಅವಧಿ ನಡೆಸುತ್ತಿರುವ ತಾವು ಯಾರು ಎಂದು ನನಗೆ ಗೊತ್ತಿಲ್ಲ. ಇಂತಹ ಸಮಯದಲ್ಲಿಯೂ ಯಾರಿಗೆ ಕಳುಹಿಸುತ್ತಿದ್ದೇನೆ ಎಂದು ಗೊತ್ತಿಲ್ಲದೆ ಇಮೇಯ್ಲ್ ಕಳುಹಿಸುವುದೂ ನನಗೆ ಕಷ್ಟದ ಕೆಲಸ. ನಿಮ್ಮ ಪ್ರಯತ್ನವನ್ನು ಅಭಿನಂದಿಸಬೇಕು ಎಂದು ಅಂದುಕೊಂಡರೂ ಈ ಕಾರಣಕ್ಕಾಗಿಯೆ ಅದನ್ನು ನಾನು ಮಾಡಿರಲಿಲ್ಲ. ಈಗ ನೀವು ನನ್ನ ಪ್ರಯತ್ನದ ಬಗ್ಗೆ ಬರೆದಿದ್ದರಿಂದ, ಧನ್ಯವಾದ ಹೇಳದೆ ಇರುವುದು ತಪ್ಪು ಎಂದು ಬರೆಯುತ್ತಿದ್ದೇನೆ.

   ಮತ್ತೊಮ್ಮೆ ಹೇಳಬೇಕೆಂದರೆ, ಅವಧಿ ನಾನು ಪದೆಪದೆ ಸಂದರ್ಶಿಸುವ ಬ್ಲಾಗ್. ಒಬ್ಬಿಬ್ಬರ ಲೇಖನಗಳನ್ನು ಬಿಟ್ಟು ಇಲ್ಲಿ ಬಂದಿರುವ/ಬರುವ ಲೇಖನಗಳನ್ನೆಲ್ಲ ಓದಿದ್ದೇನೆ/ಓದುತ್ತೇನೆ. ಹಾಗಾಗಿ, ನಾನು ನಿಮಗೆ ಕೃತಜ್ಞ.

   ನಮಸ್ಕಾರ,
   ರವಿ…

   ಪ್ರತಿಕ್ರಿಯೆ

  ಪ್ರತಿಕ್ರಿಯೆ ಒಂದನ್ನು ಸೇರಿಸಿ

  Your email address will not be published. Required fields are marked *

  ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

  ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

   

  ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

  Pin It on Pinterest

  Share This
  %d bloggers like this: