ಇನ್ನೊ೦ದು ಶ್ರೀ ಶ್ರೀ ಕಥೆ

ಬೆಳಕಿನ ಕಿರಣಗಳು 

ಶ್ರೀ ಶ್ರೀ

ಕನ್ನಡಕ್ಕೆ: ಸೃಜನ್

(ಜ್ಯೋತಿ ಮಾಸಪತ್ರಿಕೆ -ಮೇ ೧೯೭೭)

  “ನಿನ್ನ ಕೊನೆಗಾಣಿಸ್ತೇನೆ ” ಎನ್ನುತ್ತಾ ಗುರಿ ನೋಡಿ ಕೊಡಲಿ ಬೀಸಿದ ಗೆರಿಲ್ಲಾ ಯೋಧ. ಎದುರಿಗೆ ಮರವೊಂದರ ಹಿಂದೆ ನಿಂತ ಪೋಲಿಸ್ ಭಯದಿಂದ ನೋಡುತ್ತಿದ್ದ.ವೇಗದಿಂದ ತನ್ನೆಡೆ ಕೊಡಲಿ ಬೀಸಿ ಬರುತ್ತಿತ್ತು. ಪೋಲಿಸ್ ನುಂಗಲು ಬಂದ ಹಾವನ್ನು ನೋಡುವ ಕಪ್ಪೆಯಂತೆ ನಿಶ್ಚಲವಾಗಿದ್ದ. ಇಬ್ಬರ ನಡುವೆ ೩೦ ಮೀಟರ್ ಗಿಂತ ಜಾಸ್ತಿ ದೂರವಿರಲಿಲ್ಲ. ಗೆರಿಲ್ಲಯೋಧನ ಕೊಡಲಿ ನಿಮಿಷಕ್ಕೆ ೫ ಮೈಲಿ ವೇಗದಲ್ಲಿ ಚಲಿಸುತ್ತಿತ್ತು. ಈ ದೇಶದಲ್ಲಿ ಹಾಗೆ ನೋಡಿದರೆ ಯಾವ ದೇಶದಲ್ಲದರೂ ಆಗಲಿ ತುಂಬಾ ಜನ ವೀರರಿದ್ದರೆ. ಅದಕ್ಕಿಂತ ಹೆಚ್ಚು ಪಟ್ಟು ಪುಕ್ಕಲು ಜನರಿದ್ದಾರೆ. ವೀರರ ಬಗ್ಗೆ ಮಾಹಿತಿ ಕೊಡುವ ಪುಕ್ಕಲು ಜನರು ಇದ್ದಾರೆ. ವೀರರ ತಲೆಗೆ ಬಹುಮಾನ ಘೋಷಿಸಿ ತಮ್ಮ ದಾರಿಯನ್ನು ನಿರಾತಂಕ ಮಾಡಿಕೊಳ್ಳುವ ಸರಕಾರಗಳೂ ಇವೆ. ಆದರೂ ವೀರರು ಹುಟ್ಟುತ್ತಲೇ ಇದ್ದಾರೆ.ಸರಕಾರಗಳನ್ನು ಉರುಳಿಸುತ್ತಲೆ ಇದ್ದಾರೆ.ಆದರೆ ಇದು ಪ್ರತಿನಿತ್ಯ ಜರುಗುವ ಘಟನೆಯಲ್ಲ.ಒಂದು ಬೆಳಗಿನ ಹಿಂದೆ ಕೋಟಿ ನಕ್ಷತ್ರಗಳ ಸಾವಿರುತ್ತದೆಯೆಂಬ ಕವಿಯೊಬ್ಬರ ಮಾತು ಯಥಾರ್ಥ ಕೂಡ. ವೀರನ ಕೊಡಲಿ ಒಂದು ಸೆಂಟಿ ಮೀಟರ್ ವ್ಯತ್ಯಾಸದಲ್ಲಿ ಗುರಿ ತಪ್ಪಿ ಮರಕ್ಕೆ ಸಿಕ್ಕಿಕೊಳ್ತು.ಪೋಲಿಸ್ ತಪ್ಪಿಸಿಕೊಂಡಿದ್ದಕ್ಕೆ ಅವನಿಗೆ ಆಶ್ಚರ್ಯವಾಯ್ತು.ಕ್ಷಣಕಾಲ ಶವದಂತಾದ ಅವನ ಶರೀರದಲ್ಲಿ ಇದ್ದಕ್ಕಿದ್ದಂತೆ ಚೈತನ್ಯ ಪ್ರವಹಿಸತೊಡಗಿತು. ಮುಚ್ಚಿದ ಕಂಗಳನ್ನು ಒಮ್ಮೆಲೇ ತೆಗೆದು ನೋಡಿದ.ಪೋಲಿಸ್ ಪೊದೆಗಳಲ್ಲಿ ಮಾಯವಾಗುತ್ತಿದ್ದ.ಮತ್ತೊಬ್ಬ ಪೋಲಿಸ್ ಅಧಿಕಾರಿ ವಿಜಿಲ್ ಊದಿದ.ಬಂದೂಕು ನೇವರಿಸಿಕೊಂಡು ಪೋಸಿಶನ್ ಗೆ ಬಂದ.ಎರಡು ಜೀಪುಗಳಲ್ಲಿ ಬಂದ ಪೋಲಿಸ್ ದಳಗಳು ಆ ಪ್ರದೇಶವನ್ನು ಸುತ್ತುವರೆದವು. ವೀರನಿಗೆ ಬೇರೆ ದಾರಿಕಾಣಲೇ ಇಲ್ಲ. ಓದುತ್ತಿರುವ ವೀರನೆಡೆಗೆ ಒಬ್ಬ ಪೋಲಿಸ್ ಗುಂಡು ಹಾರಿಸಿದ.ಗುಂಡು ಗುರಿತಪ್ಪಿದರೂ ವೀರನ ತೊಡೆಯನ್ನು ಸೀಳಿತ್ತು. ವೀರ ನೆಲಕ್ಕೆ ಬಿದ್ದ .ಅವನಬಳಿ ಹೋಗಲು ಯಾರಿಗೂ ಧೈರ್ಯ ಸಾಲಲಿಲ್ಲ.ಎಲ್ಲರೂ ಹೆದರತೊಡಗಿದರು. ಪೋಲಿಸ್ ಅಧಿಕಾರಿ ಮಾತ್ರ ಕೊಂಚ ಧೈರ್ಯ ಮಾಡಿ ಸ್ವಲ್ಪ ದೂರ ನಿಂತು ವೀರನ ಎರಡನೆ ಕಾಲಿಗೂ ಬಂದೂಕಿನಿಂದ ಗುಂಡು ಹಾರಿಸಿದ. ವೀರನನ್ನು ಜಿಲ್ಲಾ ಹೆಡ್ ಕ್ವಾರ್ಟರ್ಸ್ ಗೆ ಕರೆತಂದರು.ಒಂದು ಠಾಣೆಯಲ್ಲಿ ನಿರ್ಭಂದಿಸಿ ಅವನಿಗೆ ಕೊಟ್ಟ ಚಿತ್ರಹಿಂಸೆಯ ಬಗ್ಗೆ ಇಲ್ಲಿ ಬರೆಯುವುದಿಲ್ಲ. ಹೇಳಿದೆನಲ್ಲ ಇಲ್ಲಿ ನಡೆದದ್ದೆಲ್ಲ ನಮ್ಮ ದೇಶದ್ದೇ ಅಂತ ಅಂದುಕೊಳ್ಳಬಾರದು.ನೀವು ಹಾಗೆ ಅಂದು ಕೊಂಡರೂ ನನ್ನದೇನು ಅಭ್ಯಂತರವಿಲ್ಲ. ತಪ್ಪಿಸಿಕೊಂಡು ಹೋಗುತ್ತಿರಬೇಕಾದರೆ ದರೋಡೆ ಕೋರನನ್ನು ಗುಂಡಿಟ್ಟು ಕೊಲ್ಲಲಾಯಿತೆಂದು ಕೆಲವು ಪತ್ರಿಕೆಗಳು,ಪೊಲೀಸರು ಆತ್ಮರಕ್ಷಣೆಗೆಂದು ನಡೆಸಿದ ಗುಂಡಿನ ದಾಳಿಯಲ್ಲಿ ದೇಶದ್ರೋಹಿ ಸಾವನ್ನಿಪ್ಪಿದನೆದು ಇನ್ನು ಕೆಲವು ಪತ್ರಿಕೆಗಳು ಬರೆದವು. ಆದರೆ ವೀರ ಇನ್ನೂ ಬದುಕೇ ಇದ್ದ .ಹಿರಿಯ ಅಧಿಕಾರಿಯೊಬ್ಬ ಜೈಲಿನ ಕೋಣೆಯಲ್ಲಿ ಅವನನ್ನು ಪ್ರಶ್ನಿಸಲಾರಂಭಿಸಿದ. “ನಿನ್ನ ಹೆಸರು ಏನು?” “ಮನುಷ್ಯ” “ಓಹೋ ..ಹಾಗಾ ನಾನೇನೂ ಮೃಗ ವೆಂದುಕೊಂಡಿದ್ದೆ.ಮನುಷ್ಯನೇ..ನಿನ್ನ ಊರು?” “ಪ್ರಪಂಚ” “ಅದು ಊರಿನ ಹೆಸರಲ್ಲ ..ಅತೀ ಬುದ್ಧಿವಂತಿಕೆಯ ಜವಾಬು ಬೇಡ ..ನೀನು ಹುಟ್ಟಿದ ಊರಿನ ಹೆಸರು ಹೇಳು?’ “ಆ ಊರನ್ನು ಎಂದೋ ನೆಲಸಮ ಮಾಡಿದ್ದಾರೆ” “ನೆಲಸಮ ಆಗುವ ಮುನ್ನ ಆ ಊರಿಗೊಂದು ಹೆಸರಿರಬೇಕಲ್ಲ?” “ಇದೆ ..ಪ್ರಪಂಚದ ಕುಗ್ರಾಮ” “ಇನ್ನು ನಿನ್ನನ್ನು ಪ್ರಶ್ನಿಸಿ ಪ್ರಯೋಜನವಿಲ್ಲ ..ಇಗೋ ನೋಡಿಲ್ಲಿ ನೀನಿನ್ನೂ ಹುಡುಗ ,ಚೆನ್ನಾಗಿ ಬಾಳಿ ಬದುಕಬೇಕಾದವ ..ದೇಶಕ್ಕೆ ನಿನ್ನಂಥ ಯುವಕರ ಅವಶ್ಯಕತೆ ತುಂಬ ಇದೆ.ನನ್ನ ಮಾತು ಕೇಳು.” “ಕೇಳಿ..ನಮ್ಮ ರಹಸ್ಯಗಳನ್ನೆಲ್ಲ ಹೇಳಿಬಿಟ್ಟರೆ ..ನಮ್ಮಜನರಿಗೆಲ್ಲ ದ್ರೋಹವೆಸಗಿದರೆ ನನಗೆ ಒಳ್ಳೆಯ ಉದ್ಯೋಗ ಕೊಡ್ತೀರಿ ..ನನ್ನನ್ನು ನಿಮ್ಮ ದಾರಿಯಲ್ಲಿ ನಡೆಸುತ್ತೀರಿ ..ಅಷ್ಟೇ ತಾನೇ ಯೂ ಸ್ಕಂಕ್..”ಮಿಂಚಿನಂತೆ ಶಕ್ತಿಯುತ ಕೈಗಳು ಪೋಲಿಸ್ ಅಧಿಕಾರಿಯ ಮೇಲೆ ಎರಗಿದವು ಇಂಥದ್ದೊಂದು ನಡೆಯಬಹುದೆಂದು ಮೊದಲೇ ಊಹಿಸಿದ್ದ ಅಧಿಕಾರಿ ಜಾಣ್ಮೆಯಿಂದ ತಪ್ಪಿಸಿಕೊಂಡು ಇಬ್ಬರು ಪೋಲಿಸ್ ಪೇದೆಗಳನ್ನು ಒಳ ಕರೆದ.ಸ್ಟೇಷನ್ ನಲ್ಲಿ ಬಂಧಿತನನ್ನು ಕೊಲ್ಲಬಾರದೆಂದು ಹೇಳುತ್ತಲೇ “ಹೊರಗೆ ಎಳೆದುಕೊಂಡು ಹೋಗಿ ಮುಗಿಸಿಬಿಡಿ” ಎಂದು ಆದೇಶ ಜಾರಿಮಾಡಿದ. ಪೂರ್ತಿಯಾಗಿ ಕತ್ತಲೆ ಕರಗದ ,ಇನ್ನು ಬೆಳಕಾಗದ ಸಮಯ ಅದು.ಆ ಕ್ಷಣದಲ್ಲಿ ಆ ವೀರ ತುಂಬು ಸಂತೋಷದಿಂದ ಬಂದೂಕಿನ ಗುಂಡುಗಳನ್ನು ಸ್ವೀಕರಿಸಿದ.ಆ ಕತ್ತಲಲ್ಲಿ ಅವನಿಗೆ ಎಲ್ಲೊ ಬೆಳಕಿನ ಕಿರಣಗಳು ಗೋಚರಿಸಿದವು.ಅವು ಓದುವ ಕೋಣೆಯಲ್ಲಿ ಇಟ್ಟುಕೊಂಡಿದ್ದ ಮಾರ್ಕ್ಸ್ ,ಎಂಗೆಲ್ಸ್ ,ಲೆನಿನ್ ,ಸ್ಟಾಲಿನ್ ಮತ್ತು ಮಾವೋರ ವರ್ಣಚಿತ್ರಗಳು.      ]]>

‍ಲೇಖಕರು G

June 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಡಲಂತರಾಳವ ಬಲ್ಲವರಾರು?

ಕಡಲಂತರಾಳವ ಬಲ್ಲವರಾರು?

ಶಿವಲೀಲಾ ಹುಣಸಗಿ ಯಲ್ಲಾಪುರ ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು...

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು...

ಹಬ್ಬಿದಾ ಬಲೆ ಮಧ್ಯದೊಳಗೆ…

ಹಬ್ಬಿದಾ ಬಲೆ ಮಧ್ಯದೊಳಗೆ…

ರಾಜು ಎಂ ಎಸ್ ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು... ತಾರ್ಸಿ ಮನೆ ಗುರ್ಲಿಂಗಪ್ಪನ್  ಮಗ್ಳು ಪರಿಮಳ ತನ್...

5 ಪ್ರತಿಕ್ರಿಯೆಗಳು

 1. D.RAVI VARMA

  ಪೂರ್ತಿಯಾಗಿ ಕತ್ತಲೆ ಕರಗದ ,ಇನ್ನು ಬೆಳಕಾಗದ ಸಮಯ ಅದು.ಆ ಕ್ಷಣದಲ್ಲಿ ಆ ವೀರ ತುಂಬು ಸಂತೋಷದಿಂದ ಬಂದೂಕಿನ ಗುಂಡುಗಳನ್ನು ಸ್ವೀಕರಿಸಿದ.ಆ ಕತ್ತಲಲ್ಲಿ ಅವನಿಗೆ ಎಲ್ಲೊ ಬೆಳಕಿನ ಕಿರಣಗಳು ಗೋಚರಿಸಿದವು.ಅವು ಓದುವ ಕೋಣೆಯಲ್ಲಿ ಇಟ್ಟುಕೊಂಡಿದ್ದ ಮಾರ್ಕ್ಸ್ ,ಎಂಗೆಲ್ಸ್ ,ಲೆನಿನ್ ,ಸ್ಟಾಲಿನ್ ಮತ್ತು ಮಾವೋರ ವರ್ಣಚಿತ್ರಗಳು.
  ಕಥೆ ತುಂಬಾ ತುಂಬಾ ಅರ್ಥಪೂರ್ಣವಾಗಿದೆ . ಕನ್ನಡ ಓದುಗರಿಗೆ ಈ ಮಹಾನ್ ಬರಹಗಾರ ,ಸಾಮಾಜಿಕ ಚಿಂತಕ , ಶ್ರೀರಂಗಂ ಶ್ರೀನಿವಾಸರಾಜು ಕಥೆಗಳು ಗೊತ್ತಿಲ್ಲ. ಅವು ಕಥೆಗಳಲ್ಲ. ಅವು ಸಾಮಾಜಿಕ ಸತ್ಯಗಳು. ಒಡಲಾಳದ .ಸಿಟ್ಟು.ಅಕ್ರೋಶ ಹಾಗು ಬದುಕಿನ ಬದ್ದತೆಗಳು .ಸೃಜನ್ ನೀವು ತುಂಬಾ ಅರ್ಥಪೂರ್ಣ ಕಥೆಗಳನ್ನು ಅನುವಾದಿಸಿ ನಮ್ಮನ್ನು ಹೊಸ ಕಥಾ ಲೋಕಕ್ಕೆ ಕರೆದೊಯ್ಯುತಿದ್ದೀರಿ .ನಿಮಗೂ , ಅವಧಿಗೂ ಅಭಿನಂದನೆಗಳು
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 2. anupama

  ಕಥೆ ಓದುಗರಿಗೆ ಕುತುಹಲ ಹುಟ್ಟಿಸುತ್ತೆ, ತುಂಬಾ ಚನ್ನಾಗಿದೆ. ತಮಗೆ ಅಭಿನಂದೆನಗಳು

  ಪ್ರತಿಕ್ರಿಯೆ
 3. ಇಂದಿರೇಶ ಜೋಶಿ

  ಇದು ಕಥೆ ಅಲ್ಲ ವ್ಯಥೆ. ವ್ಯಥೆಯನ್ನು ಚೆನ್ನಾಗಿದೆ ಎನ್ನಲುಂಟೆ? ದುಷ್ಟ ಸರ್ಕಾರ/ವ್ಯಕ್ತಿಗಳೊಂದಿಗಿನ ಹೋರಾಟದ ಅಂತ್ಯ ಸಹಜವಾಗಿಯೇ ಚಿತ್ರಿತವಾಗಿದೆ.

  ಪ್ರತಿಕ್ರಿಯೆ
 4. GURURAJ

  thank you Srujan,you have introduced me into the world of ‘sree sree’.please post more stories of the great writer,no figter.your translation is really ,as good as original kannada.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: