ಇಬ್ಬರು ಅಮ್ಮಂದಿರ ಆ ಐದು ಗಂಟೆಗಳು!

burger.jpg

vnew3.jpg“ವೆಂಕಿ ಬರ್ಗರ್”

 

 

 

ವೆಂಕಿ

೬.೨

ಕಳೆದ ಹಲವಾರು ದಿನಗಳಿಂದ ನ್ಯೂಯಾರ್ಕ್ ತುಂಬಾ ಈ ಸಂಖ್ಯೆಯದ್ದೇ ಕಾರುಬಾರು. ಶನಿವಾರ, ಭಾನುವಾರವಂತೂ ಈ ಸಂಖ್ಯೆ ಎಲ್ಲರ ಮನಕ್ಕೆ ಲಗ್ಗೆ ಹಾಕಿ ಕೂತಿತ್ತು. ಸಾವಿರಾರು ಜನ ನಿದ್ದೆಯಲ್ಲಿ, ಎಚ್ಚರದಲ್ಲಿ ಈ ನಂಬರ್ ಪಠಿಸುವಷ್ಟು ಹುಚ್ಚರಾಗಿದ್ದರು. ಏನದು ಈ ನಂಬರ್? ನ್ಯೂಯಾರ್ಕ್ ಇಷ್ಟು ತಲೆಕೆಡಿಸಿಕೊಂಡಿರುವುದಾದರೂ ಯಾಕೆ?

೨೬.೨ ಎಂಬುದು ೨೬.೨ ಮೈಲಿನ ಸಂಕೇತ ಮಾತ್ರ. ನ್ಯೂಯಾರ್ಕಿನಲ್ಲಿ ಪ್ರತಿ ವರ್ಷ ಜರುಗುವ ಮ್ಯಾರಥಾನ್ ಎಲ್ಲರ ಎದೆಬಡಿತ ಹೆಚ್ಚಿಸುತ್ತದೆ. ೨೬.೨ ಮೈಲು ಎಂದರೆ ಅದೇನು ಕಡಿಮೆ ದೂರವೇ? ೪೨ ಕಿ. ಮೀಟರ್!

marathon1.jpg

ನ್ಯೂಯಾರ್ಕಿನ ಎಲ್ಲಾ ಐದು ಉಪನಗರಿಗಳಾದ್ಯಂತದ ಸೇತುವೆ, ಗುಡ್ಡಗಾಡಿನ ರಸ್ತೆಗಳು, ಥಳುಕು ಬಳುಕಿನ ರೋಡುಗಳು, ಜನವಸತಿ ಪ್ರದೇಶಗಳನ್ನು ಹಾದು ಈ ಮ್ಯಾರಥಾನ್ ಸಾಗುತ್ತದೆ. ನೋಡುಗರಲ್ಲಿ, ಓಡುವವರಲ್ಲಿ ಸಂಭ್ರಮ, ನಾವೆಲ್ಲಾ ಒಂದೇ ಎಂಬ ಭಾವ ಹುಟ್ಟುಹಾಕುತ್ತದೆ.

ಓಟಗಾರನಿಗೆ ಇದು ಕೇವಲ ಓಟವಲ್ಲ. ಒಂದು ರೀತಿ ದೇಹದಂಡನೆ. ಈ ಬಾರಿಯ ಮ್ಯಾರಥಾನ್ ವಿಶಿಷ್ಠವಾಗಿತ್ತು. ಸಾವು ಬದುಕಿನ ಚಂಚಲತೆಯನ್ನು ಬೆಳಕಿಗೆ ತಂದಿತು. ನ್ಯೂಯಾರ್ಕ್ ಮ್ಯಾರಥಾನ್ ನ ಮುನ್ನಾದಿನ ಸೆಂಟ್ರಲ್ ಪಾರ್ಕಿನಲ್ಲಿ ಒಲಿಂಪಿಕ್ ಟ್ರಯಲ್ಸ್ ಜರುಗುವುದು ಸಂಪ್ರದಾಯ. ಈ ಟ್ರಯಲ್ಸ್ ನಡೆಯುವಾಗಲೇ ದುರಂತವೊಂದು ಜರುಗಿತು. ಮ್ಯಾರಥಾನ್ ಐದು ಕಿ. ಮೀಟರ್ ದಾಟಿ ಮುನ್ನಡೆದಿತ್ತಷ್ಟೆ. ಖ್ಯಾತ ಮ್ಯಾರಥಾನ್ ಓಟಗಾರ ರಿಯಾನ್ ಷೇ ಕುಸಿದುಬಿದ್ದ. ಅದೇ ಆತನ ಬದುಕಿನ ಕೊನೆಯ ಓಟವಾಗಿತ್ತು. ರಿಯಾನ್ ಕೇವಲ ೨೮ ವರ್ಷದ ಹಸಿಬಿಸಿ ತರುಣ. ಆತ ಮ್ಯಾರಥಾನ್ ಜೀವನದ ಉತ್ತುಂಗದಲ್ಲಿದ್ದಾಗಲೇ ಇದು ಘಟಿಸಿ ಹೋಯಿತು. ರಿಯಾನ್ ಸಾವು ಮಾರನೆಯ ದಿನದ ಮ್ಯಾರಥಾನ್ ಮೇಲೆ ದುಃಖದ ನೆರಳನ್ನು ಹರಡಿತು.

ಪೌಲಾ ಕಥೆ ಕೇಳಿ. ಇಂಗ್ಲೆಂಡಿನ ಪೌಲಾ ರ್‍ಯಾಡ್ ಕ್ಲಿಫ್ ಅಮ್ಮನಾಗಿ ಕೇವಲ ಹತ್ತು ತಿಂಗಳಾಗಿತ್ತು. ಪುಟಾಣಿ ಇಸ್ಲಾ ಜಗತ್ತಿಗೆ ಪಿಳಿ ಪಿಳಿ ಕಣ್ಣು ಬಿಟ್ಟಿದ್ದಳು. ಮ್ಯಾರಥಾನ್ ನ ಮುಕ್ತಾಯದ ಪಾಯಿಂಟಿನಲ್ಲಿ ಇಸ್ಲಾ ಸಂಬಂಧಿಕರ ತೋಳ ತೆಕ್ಕೆಯಲ್ಲಿ ಒರಗಿ ಅಮ್ಮನಿಗಾಗಿ ಕಾಯುತ್ತಿದ್ದಳು. ಪೌಲಾಳಿಗೆ ಮ್ಯಾರಥಾನ್ ತಾಕತ್ತೇ ಹಾಗಿತ್ತೊ ಅಥವಾ ಕೊನೆಗೆರೆಯ ಬಳಿ ಕಾಯುತ್ತಿದ್ದ ಪುಟಾಣಿ ಕಂದಮ್ಮಳ ನೆನಪಾಯಿತೊ? ಪುಟುಪುಟು ಹೆಜ್ಜೆ ಹಾಕುತ್ತಾ ಓಡಿ ಬಂದೇಬಿಟ್ಟಳು. ಅದೂ ಹೇಗೆ? ಎಲ್ಲರನ್ನೂ ಹಿಂದಿಕ್ಕಿ ಮೊದಲಿಗಳಾಗಿ. ಇಥಿಯೋಪಿಯಾದ ಗೀಥ್ ವಾಮಿಗೆ ೪ ವರ್ಷದ ಮಗಳಿದ್ದಾಳೆ. ಈಕೆ ಸತತ ೨೬ ಮೈಲುಗಳುದ್ದಕ್ಕೂ ಪೌಲಾಳ ನೆರಳಿನಂತೆಯೇ ಓಡಿ ಬಂದಿದ್ದಳು. ಆದರೆ ಕೊನೆಯ ೨೩ ಸೆಕೆಂಡುಗಳು ಎಲ್ಲವನ್ನೂ ನಿರ್ಧರಿಸಿಹಾಕಿತ್ತು. ಇನ್ನೇನು ಕೊನೆಯ ೦.೨ ಮೈಲುಗಳ ಓಟ ಬಾಕಿ ಇದೆ ಎನ್ನುವಾಗ ಪೌಲಾ ಜಿಂಕೆಯ ವೇಗ ಪಡೆದುಕೊಂಡಿದ್ದಳು. ಗೆಲುವು ಅವಳನ್ನು ಕೈಬೀಸಿ ಕರೆದಿತ್ತು.

ಆದರೆ ಈ ವಿಚಿತ್ರ ನೋಡಿ. ಕೂದಲೆಳೆಯಲ್ಲಿ ಎರಡನೆಯ ಸ್ಥಾನಕ್ಕೆ ಜಾರಿದ ಗೀತ್ ಕಣ್ಣೀರಿಕ್ಕುತ್ತಿರಲಿಲ್ಲ. ಬದಲಿಗೆ ಮ್ಯಾರಥಾನ್ ನಲ್ಲಿ ಓಡಿದೆ ಎಂಬುದನ್ನೇ ಮರೆತುಹೋದವಳಂತೆ ಗೆರೆಯ ಕೊನೆಯಲ್ಲಿದ್ದ ಪೌಲಾಳ ಪುಟ್ಟ ಕೂಸನ್ನು ಎತ್ತಿ ಲೊಚಲೊಚನೆ ಮುತ್ತಿನ ಮಳೆಗರೆಯುತ್ತಿದ್ದಳು. ಪೌಲಾ ಬ್ರಿಟಿಷ್ ಬಾವುಟ ಹೊದ್ದು ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಿದ್ದರೆ, ಇತ್ತ ಗೀತ್ ಪುಟ್ಟ ಕೂಸಿಗೆ ಮುತ್ತಿಕ್ಕುತ್ತಿದ್ದಳು.

ಮದರ್ಸ್ ರೂಲ್ ದಿ ವರ್ಲ್ಡ್ -ಹೌದು ಎನಿಸುತ್ತದೆ. ಅಮ್ಮಂದಿರು ಈ ಜಗತ್ತನ್ನು ಆಳುತ್ತಾರೆ. ನ್ಯೂಯಾರ್ಕ್ ಮ್ಯಾರಥಾನ್ ನಲ್ಲಿ ನವೆಂಬರಿನ ಕೊರೆಯುವ ಚಳಿಯಲ್ಲಿ ಇದು ಮತ್ತೆ ಸಾಬೀತಾಗಿಹೋಯಿತು.

ಮ್ಯಾರಥಾನ್ ಮರುದಿನ, ನ್ಯೂಯಾರ್ಕ್ ಟೈಮ್ಸ್ ತನ್ನ ಅಮೂಲ್ಯ ೧೧ ಪುಟಗಳನ್ನು ಕೇವಲ ಐದು ಗಂಟೆಯೊಳಗೆ ಮ್ಯಾರಥಾನ್ ಪೂರೈಸಿದವರ ಪಟ್ಟಿ ನೀಡಲು ಮೀಸಲಿಟ್ಟಿತ್ತು. ಓಹ್! ೩೦,೬೦೪ ಓಟಗಾರರು ತಮ್ಮೆಲ್ಲಾ ಶಕ್ತಿ ಬಳಸಿ ನ್ಯೂಯಾರ್ಕಿನ ೮೦ ಸಾವಿರ ಅಡಿ ಉದ್ದವನ್ನು ಕೇವಲ ೫ ಗಂಟೆಯಲ್ಲಿ ಅಳೆದಿದ್ದರು.

ಕೇವಲ ೫ ಗಂಟೆಯಲ್ಲಿ!   

‍ಲೇಖಕರು avadhi

November 12, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This