ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ…

ಜೀವನ

– ಶಾಂತಿ ಅಪ್ಪಣ್ಣ

ಮೊನ್ನೆ ಶೀಲ ಬಂದಿದ್ದಳು.ಅವಳನ್ನುನೋಡುವಾಗಲೇ.. ಏನೋ ವಿಶೇಷವಾಗಿ ಕಾಣಸುತ್ತಿದ್ದಾಳಲ್ಲಾ..ಅನಿಸಿತು.ನೋಡಿದರೆ ಅವಳು ಕೂದಲಿಗೆ ಬಣ್ಣ ಹಚ್ಚಿದ್ದು ತಿಳಿಯಿತು.ಅದೂ ಒಂಥರಾ ನವಿಲಿನ ಗರಿಯಂಚಿನ ನಸುಗೆಂಪನೆ ಬಣ್ಣ.ಅವಳು ಅತ್ತಿತ್ತ ತಲೆ ಹೊರಳಿಸಿ ವಯ್ಯಾರವಾಗಿ ಮಾತಾಡುವಾಗ ಅವಳ ಕೂದಲು ಬಿಸಿಲಿಗೆ ಹೊಳೆಯುತ್ತ ಹೊಸತೊಂದು ಬೆರಗನ್ನು ಬಯಲು ಮಾಡುತ್ತಿತು.ಅವಳು ಮೊದಲೇ ಸುಂದರಿ.ಅವಳ ಬೆಳ್ಳನೆ ಮೊಗಕ್ಕೆ ಅವಳ ಕಡುಗಪ್ಪು ಕೂದಲು ತುಂಬ ಚೆನ್ನಾಗಿ ಒಪ್ಪುತ್ತಿತ್ತು.ಅಂಥದ್ದರಲ್ಲಿ ಈಗಿನ ಈ ಹೊಸ ಅವತಾರದಲ್ಲಿ ಅವಳನ್ನು ಒಪ್ಪಿಕೊಳ್ಳುವುದು ತುಸು ಕಷ್ಟವೆನಿಸಿ ತಡೆಯಲಾದೆ ಕೇಳಿಯೇ ಬಿಟ್ಟೆ.”ಅಲ್ಲ ಶೀಲ ನಿನ್ನ ಕೂದಲೆಲ್ಲ ಕಪ್ಪಾಗೇ ಇದ್ದುವಲ್ಲೇ ಮತ್ಯಾಕೆ ಬಣ್ಣ ಹಚ್ಚಿದ್ದೀಯ” “ನೋಡು, ಬಂದಳನ್ನು ಹೇಗಿದ್ದೀ ಏನು ಅಂತ ಕೂಡ ಕೇಳದೆ ಕೂದಲಿನ ಬಣ್ಣದ ಬಗ್ಗೆ ಕೇಳ್ತಾ ಇದ್ದೀಯಲ್ಲೇ” ಅವಳು ಆಕ್ಷೇಪಿಸಿದಳು. ನಾನು ನಗುತ್ತ ಅವಳನ್ನು ಹಾಗೇ ಅಡುಗೆ ಮನೆಗೆ ಕರೆದೊಯ್ದು ಅವಳಿಗೆ ಟೀ ತಯಾರಿಸತೊಡಗಿದೆ.ಶೀಲ ಎಂದಿನಂತೆ ಅವಳ ಶಾಲೆ,ಟೈಲರಿಂಗ್ ಕ್ಲಾಸು,ಅವಳ ತಂಗಿಗೆ ಬಂದ ವರ ಹೀಗೆ ಹಲವಾರು ವಿಷಯಗಳ ಬಗೆ ಮಾತಾಡತೊಡಗಿದಳು.ನಾನು ಅನ್ಯಮನಸ್ಕಳಾಗಿ ಕೇಳಿಸಿಕೊಳ್ಳುತ್ತ ಹಾಗೇ ಅವಳ ಕೈಗೆ ಟೀಯಿತ್ತು,”ಅಲ್ಲ ಶೀಲ,ನೀ ಯಾಕೆ ಕೂದಲಿಗೆ ಬಣ್ಣ ಹಾಕಿಸಿದ್ದೀಯ” ಅಂತ ಮತ್ತೆ ಕೇಳಿದೆ. “ನಂಗೀಗ ಎಷ್ಟು ವಯಸು ಹೇಳು…” ಶೀಲ ಸೀರಿಯಸ್ಸಾಗಿ ಕೇಳಿದಳು. “ಎಷ್ಟು 30 ಇಲ್ಲ 31?” “ಹ್ಮ್..ಅಲ್ಲಿಗೆ ಕೂದಲು ಬೆಳ್ಳಗಾಗೋ ಸಮಯ ಬಂತೂ ಅಂತಾಯ್ತಲ್ಲ?”ಎಂದು ನಕ್ಕಳು. “ಇದೆಲ್ಲ ತುಂಬ ಜಾಸ್ತಿ ಕಣೇ..ಕೂದ್ಲು ಬೆಳ್ಳ್ಗಾಗಿದ್ರೂ ಪರ್ವಾಗಿಲ್ಲ ಅನ್ಬಹುದು.. ಇನ್ನೂ ನಿನ್ನಕೂದಲೊಂದೂ ಬೆಳ್ಳಗಾಗಿಲ್ಲವಲ್ಲೇ..ಹಾಗೊಮ್ಮೆ ಆದರೂ ಅದೊಂಥರಾ ಚಂದನೇ ಅಲ್ವಾ?ವಯಸಿಗೆ ತಕ್ಕಂತೆ ಕಾಣಬೇಕು ಕಣೇ.” “ಸ್ವಲ್ಪ ಸುಮ್ಮನಿರುತ್ತೀಯ,ಅದ್ಯಾವ ಕಾಲಕ್ಕೋ ನೀ ಹೇಳೋ ಟ್ರೆಂಡ್ ಹೊರಟು ಹೋಯ್ತು.ಈಗೇನಿದ್ರೂ ಯಂಗ್ ಆಗಿ ಕಾಣಿಸಿಕೊಳ್ಳಬೇಕು ಅದೇ ಟ್ರೆಂಡ್” “ಅದರಿಂದೇನು ಮಹಾ ವ್ಯತ್ಯಾಸವಾಗುತ್ತೋ ಗೊತ್ತಿಲ್ಲ,ಮುಖ ನೋಡಿದರೆ ಗೊತ್ತಾಗಲ್ವಾ,ನಮಗೆಷ್ಟು ವಯಸಾಗಿದೆ ಅಂತ?”ನಾನು ಪಟ್ಟು ಬಿಡಲಿಲ್ಲ. “ಗೊತ್ತಾಗುತ್ತೆ ,ಆದ್ರೂ ಕೂದಲಿಗೆ ಬಣ್ಣ ಹಚ್ಚಿಕೊಂಡ್ರೆ ಏನಿಲ್ಲಾಂದ್ರೂ ಒಂದ್ 5ವರ್ಷ ಕಮ್ಮಿ ಕಾಣ್ಸುತ್ತೆ.”ಶೀಲ ಸಮಥರ್ಿಸಿಕೊಂಡಳು. “ಅಷ್ಟೊಂದಾ? ನಂಗನ್ನಿಸ್ತಿಲ್ಲಪ್ಪ.” “ಹಾಗಲ್ಲದೇ ಇದ್ರೆ ಹೀಗ್ ತಗೋ,ನಿಂಗೀಗ ಎಷ್ಟ್ ವಯಸು?ಇಪ್ಪತ್ತೊಂಭತ್ತಾ? ಸರಿ ಈಗ ನಿನ್ ಕೂದ್ಲೆಲ್ಲ ಕಪ್ಪಿದೆ ಓಕೆ,ಆದ್ರೆ ಅದೇ ಸ್ವಲ್ಪ ಕೂದ್ಲು ಬೆಳ್ಗಾಯ್ತು ಅಂತಿಟ್ಕೋ ಆಗ ನಿಂಗೆ ಏನಿಲ್ಲಾಂದ್ರೂ ಮೂವತೈದು ಅನ್ಸುತ್ತೆ. ಯೋಚನೆ ಮಾಡ್ನೋಡು ಬೇಕಾದ್ರೆ’ಅಂದಳು ” ಹೋಗೇ,ನಮ್ ವಾಸುಕಿ ಆಂಟಿ ಮಗ್ಳು ಈಗಿನ್ನೂ ಕಾಲೇಜ್ಗೆ ಹೋಗ್ತಾ ಇದ್ದಾಳೆ ಆದ್ರೆ ಅವ್ಳ್ ತಲೇಲಿ ಬೇಕಾದಷ್ಟು ಬಿಳೀ ಕೂದ್ಲಿದೆ..ಹಾಗಂತ ಅವ್ಳು ವಯಸಾದೋಳು ಅನ್ನಕ್ಕಾಗುತ್ತಾ?” “ಅದು ಜೆನೆಟಿಕ್ ಪ್ರಾಬ್ಲಮ್ ಕಣೇ,ಈಗೇನೋ ಸರಿ ,ಆದ್ರೆ ಇನ್ನೊಂದು ಮೂರ್ವರ್ಷ ಬಿಟ್ಟು ಅವ್ಳು ಕಾಲೇಜ್ ಮುಗ್ಸಿ ಕೆಲ್ಸ ಗಿಲ್ಸಾಂತ ಹೋಗ್ಲಿ,ಕಲರ್ ಮಾಡ್ಕೋತ್ತಾಳಾ ಇಲ್ವಾ ನೋಡು” “ಅವ್ಳದ್ದಿರ್ಲೀ, ನೀನ್ಯಾಕೆ ಬಿಳೀ ಕೂದ್ಲು ಬರೋಕ್ಮುಂಚೇ ಬಣ್ಣ ಹಾಕ್ಕೊಂಡಿದ್ದೀಯ?ಮುಂಜಾಗ್ರತೆನಾ?”ನಾನು ಛೇಡಿಸಿದೆ. ಅದಕ್ಕವಳು “ಹೌದು ಕಣೇ,ಈ ಸಿನಿಮಾದವರೆಲ್ಲ ಏನಂದ್ಕೊಂಡಿದ್ದೀಯ?ಆಗಾಗ ಕೂದಲಿಗೆ ಬಣ್ಣ ಹಾಕ್ಕೋಳಲ್ವಾ?ಯಾಕ್ಹೇಳು?ಇದಕ್ಕೇ!…ನಾಳೆ ಅವರಿಗೆ ನಿಜಕ್ಕೂ ಬಿಳಿ ಕೂದಲು ಬಂದ್ರೂ ಗೊತ್ತಾಗಲ್ಲ ನೋಡು! “ಅವ್ರ್ ಲೈಫ್ ಸ್ಟೈಲೇ ಬೇರೆ ಕಣೆ..ಅವ್ರು ಸೆಲಬ್ರಿಟಿಗಳು..ಅವ್ರ ಸೌಂದರ್ಯನೆ ಅವ್ರ ಪ್ರಮುಖ ಆಸ್ತಿ…. ನಾ ಇನ್ನೇನು ಮಾತಾಡಬೇಕೆಂದಿದ್ದೆನೋ ಅಷ್ಟರಲ್ಲಿ ಶೀಲ ಮಧ್ಯ ಬರುತ್ತಾ “ಸ್ವಲ್ಪ ನಿನ್ನ ಪುರಾಣ ನಿಲ್ಲಿಸ್ತೀಯಾ..ಇರೋ ಈ ಒಂದು ಲೈಫನ್ನ ಪ್ರತಿಯೊಬ್ಬನೂ ಸೆಲಬ್ರೇಟ್ ಮಾಡಬೇಕು..” ಅನ್ನುತ್ತ ಮಾತುಮುಗಿಸಲೆಂಬಂತೆ ಹಾಲಿಗೆ ಹೋದಳು. ಅಷ್ಟರಲ್ಲಿ ಮನೆಗೆ ಬಂದ ನಮ್ಮ ಮನೆಯವರು ಅವಳನ್ನು ನೋಡಿ “ಏನಮ್ಮ ಶೀಲ ಡೈ ಮಾಡಿದ್ದೀಯ?ಚೆನ್ನಾಗಿ ಕಾಣ್ತಾ ಇದೆ “ಅಂದರು. ಒಡನೇ ಶೀಲ “ಅಯ್ಯೋ ಅಣ್ಣ,ಇದು ನಿಮ್ ಹೇರ್ ಡೈ ಅಲ್ಲ,ಕಲರಿಂಗ್..”ಎಂದು ಸಮಥರ್ಿಸಿಕೊಂಡಳು. “ಎರಡೂ ಒಂದೇ ಅಲ್ವೇನಮ್ಮ…,”ಇವರು ಮತ್ತೆ ರಾಗ ಎಳೆಯತೊಡಗಿದರು. ಶೀಲಳ ಮುಖ ಸ್ವಲ್ಪ ಸಪ್ಪಗಾದಂತೆ ಕಂಡಿತು. “ಏನೋ ಒಂದು ಇರ್ಲಿ ಬಿಡ್ರೀ,”ನಾನು ಅವರನ್ನು ಸುಮ್ಮನಿರಿಸಲು ನೋಡಿದೆ. “ಹಾಗಲ್ಲ ಕಣೇ,ನಂಗೆ ಇಪ್ಪತ್ತಾರಕ್ಕೆಲ್ಲ ಅಲ್ಲೊಂದು ಇಲ್ಲೊಂದು ನರೆಕೂದ್ಲು ಕಾಣ್ಸಕ್ಕೆ ಶುರುವಾಗಿತ್ತಾ.. ,ನಾ ತಡೀಲಾರ್ದೆ ಆಗಿಂದ್ದಾಗೇ ಹೋಗಿ ಹೇರ್ ಡೈ ಮಾಡ್ಕೊಂಡ್ನಾ..ಅಷ್ಟೇ ! ಮತ್ತೆ ಹದ್ನೈದ್ ದಿನಕ್ಕೆಲ್ಲ ಸುಮಾರು ಕೂದ್ಲು ಬೆಳ್ಗಾಗ್ಬಿಟ್ವು…ಆಮೇಲೆ ನೋಡು! ಇಲ್ಲೀ ತಂಕ ಇಪ್ಪತ್ತು ದಿನಕ್ಕೊಂದ್ಸಲ ಡೈ ಮಾಡ್ದೇ ಇರೋಹಾಗಿಲ್ಲ ಹಾಗಾಗ್ಬಿಟ್ಟಿದೆ.ಬಹುಃಶ ತಲೇಲೀಗ ಒಂದು ಕರಿಕೂದ್ಲೂ ಇಲ್ವೇನೋಪ್ಪ” ಶೀಲಳ ಮುಖ ಇನ್ನೂ ಸಪ್ಪಗಾಯ್ತು”ನೀವ್ಯಾವುದೋ ಡಬ್ಬಾ ಡೈ ಹಾಕ್ಕೊಂಡಿರ್ತೀರಿ..ಇನ್ನೇನಾಗುತ್ತೆ?.ನಾ ಹಾಕಿರೋ ಕಲರ್ ಒಳ್ಳೆ ಬ್ರಾಂಡೆಡ್ ಕಂಪನೀದು , ಇದ್ರಿಂದ ಕೂದ್ಲು ಇದ್ದಿದ್ದೂ ಸಾಫ್ಟ್ ಅಂಡ್ ಸ್ಮೂತ್ ಆಗುತ್ತೆ”ಎಂದು ತುಸು ಬೇಸರದಿಂದಲೇ ಹೇಳಿದಳು. “ಏನೋ ಒಂದು, ನಿಂಗೆ ಚೆನ್ನಾಗ್ ಕಾಣಿಸ್ತಾ ಇದೆ, ಗೊತ್ತಿಲ್ದಿರೋರು ನೋಡಿದ್ರೆ ಕಾಲೇಜು ಹುಡ್ಗಿ ಅನ್ಕೋತ್ತಾರೆ ಬಿಡು” ಇವರು ಹೊಗಳಿದರು. ನನಗೆ ಅವರ ಮಾತು ಒಗ್ಗಲಿಲ್ಲ.ಕೂಡಲೇ ನಾನು “ನೀವೇ ಮೆಚ್ಕೋಬೇಕು,ಒಳ್ಳೆ ಫಾರಿನರ್ ಥರ ವ್ಯತ್ಯಾಸವಾಗಿ ಕಾಣ್ತಾ ಇದ್ದಾಳೆ.ಕಪ್ಪುಕೂದ್ಲಲ್ಲಿ ಎಷ್ಟ್ ಚಂದ ಕಾಣ್ತಾ ಇದ್ದಳು.ನಂಗದೇ ಇಷ್ಟ”ಅಂದೆ. ಆದರೆ ಶೀಲ ಕಣ್ಣು ಹೊಡೆಯುತ್ತ ಪ್ರಸನ್ನಳಾಗಿ” ಹೋಗೇ ಕತ್ತೆ ನಿಂಗೊಂದೂ ಗೊತ್ತಾಗಲ್ಲ.ಅಣ್ಣನೇ ಸರಿ. ಈಗ ಅಣ್ಣಂಗೇ ಡೈ ಮಾಡ್ದೇ ಇದ್ರೆ ನೋಡ್ದೋರು ಅವ್ರಿಗೊಂದು ನಲುವತ್ತೈದು ಅನ್ಕೊಳಲ್ವಾ? ಈಗ್ನೋಡು, ಇನ್ನೂ ಮೂವತ್ ವಯಸ್ಸೋರ್ ತರಾ ಕಳೆಯಾಗಿದ್ದಾರೆ” ಅನ್ನುತ್ತ ನಕ್ಕಳು. ಅವಳ ಮಾತಲ್ಲೂ ಸತ್ಯವಿದೆ ಅನ್ನಿಸಿತಾದರೂ ನಾನು ಮಾತಾಡಲಿಲ್ಲ. ಆದರೆ ಅವಳು ಹೋದಮೇಲೆ ನಾನೊಬ್ಬಳೆ ಬಂದು ಕನ್ನಡಿ ಮುಂದೆ ನಿಂತು ಕೂದಲು ಬಗೆದು ಬಿಳಿಗೂದಲಿಗಾಗಿ ಹುಡುಕಿದೆ.ಹೆಚ್ಚು ಹುಡುಕುವ ಶ್ರಮವೇ ಕೊಡದೆ ಮುಂದಲೆಯಲ್ಲೇ ಅವಿತು ಕುಳಿತ್ತಿದ್ದವು ನಾಕಾರು ಬೆಳ್ಳಿ ರೇಖೆಗಳು..ಎದೆ ಧಸಕ್ಕೆಂದಿತು. ಒಡನೇ ಅವನ್ನು ಕಿತ್ತು ಹಾಕುವ ಮನಸಾಯ್ತು .ಒಂದು ನಿಮಿಷ ತಡೆದು ಯೋಚಿಸಿದೆ. ಈಗೇನು ಮಾಡಬೇಕು? ಇವನ್ನು ಕಿತ್ತು ಹಾಕಬೇಕಾ? ಹಾಗೇ ಬಿಡಬೇಕಾ?ಇಲ್ಲ ಶೀಲಳ ಹಾಗೆ ಕಲರ್ ಮಾಡಿಸಬೇಕಾ…ಮನಸು ಡೋಲಾಯಮಾನವಾಯ್ತು. ಶೀಲಳೊಡನೆ ವಾದ ಮಾಡುವಾಗ ಇದ್ದ ಮನಸ್ಥಿತಿ ಈಗ ಇಲ್ಲವೇನೋ ಅನಿಸತೊಡಗಿದಾಗ ಗಾಬರಿಯಾಯ್ತು.ಅಂದರೆ ಶೀಲಳಿಗೂ ನನಗೂ ವ್ಯತ್ಯಾಸವೇನಿದೆ? ನನ್ನ ತಲೆಯಲ್ಲೊಂದು ಬಿಳಿ ಕೂದಲೂ ಇಲ್ಲ,ಸಧ್ಯಕ್ಕೆ ಬರುವುದೂ ಇಲ್ಲ ಎಂಬ ನಂಬಿಕೆಯಿಂದ ಬೆಳಗೆ ಹಾಗೆ ಮಾತಾಡಿದ್ದೆನೆ?ಹಾಗೊಮ್ಮೆ ಅದು ಸುಳ್ಳು ಎಂದಾದರೆ ಈಗ ನನ್ನ ತಲೆಯಲ್ಲಿ ಬಿಳಿಗೂದಲು ಕಂಡೊಡನೇ ಮನಸೇಕೆ ಕಸಿವಿಸಿಗೊಳ್ಳಬೇಕು.ಇದು ಸ್ವಾಭಾವಿಕ ತಾನೇ ಎಂದು ಸಾದಾರಣವಾಗೇ ಇರಬೇಕಿತ್ತಲ್ಲ! ಶೀಲಳಾದರೂ ಸರಿ.ಅವಳಲ್ಲೊಂದು ನೇರವಂತಿಕೆ ಇದೆ.ನಾನು?! ಮೇಲೆ ಬೇಕಾದಂತೆಲ್ಲ ಮಾತಾಡಿ,ಅದೇ ಪರಿಸ್ಥಿತಿ ತನಗೆ ಬಂದಾಗ ತದ್ವಿರುದ್ದವಾಗಿ ಯೋಚಿಸುತ್ತಿದೇನೆ!…. ನಾವೇಕೆ ಹೀಗೆ..ಚಿಕ್ಕವರಾಗಿದ್ದಾಗ ಆದಷ್ಟು ಬೇಗ ದೊಡ್ಡವರಾಗಬೇಕೆಂದು ಹಂಬಲಿಸುತ್ತೇವೆ…ಅದೇ ಒಂದು ಹಂತ ತಲುಪಿದ ಮೇಲೆ ಇನ್ನೂ ಯಂಗ್ ಆಗೇ ಇರಬೇಕೆಂದು ಕೊಳ್ಳುತ್ತೇವೆ.. ಇನ್ನೊಮ್ಮೊಮ್ಮೆ ಬಾಲ್ಯವೇ ಚೆಂದಗಿತ್ತು…ದೊಡ್ಡವರಾಗಬಾರದಿತ್ತು ಅಂದುಕೊಳ್ಳುತ್ತೇವೆ ನಿಜಕ್ಕೂ ನಮ್ಮ ಅಸಲೀ ಹಂಬಲಿಕೆಯಾದರೂ ಏನು… ಮನಸು ಯೋಚನೆಗೆ ಬಿತ್ತು. ಆ ಕಸಿವಿಸಿಯಲ್ಲೇ ರಾತ್ರಿಯೂಟ ಮುಗಿಸಿ ಟಿ.ವಿ .ಮುಂದೆ ಕುಳಿತರೆ ಮಕ್ಕಳ ಭಾವಗೀತೆಯ ಕಾರ್ಯಕ್ರಮ ಬಿತ್ತರವಾಗುತ್ತಿತ್ತು.ಮಗುವೊಂದು ಭಾವ ತುಂಬಿ ಹಾಡುತ್ತಿತ್ತು. “ಇರುವುದೆಲ್ಲವ ಬಿಟ್ಟು.. ಇರದುದರೆಡೆಗೆ ತುಡಿವುದೇ ಜೀವನ…” ಇದೇ ಸಾರ್ವತ್ರಿಕ..ಸಾರ್ವಕಾಲಿಕ ಸತ್ಯವೆನಿಸಿತು..ಮನಸು ಹಗುರಾದ ಹಾಗೆ…. ಒಡನೇ ಹೋಗಿ ಶೀಲಳಿಗೆ ಫೋನಾಯಿಸಿ “ಶೀಲಾ..ನಿನ್ನ ಈ ಹೊಸ ಅವತಾರ ಚೆನ್ನಾಗೇ ಇದೆ ಕಣೇ…ನಾನೇ ಸರಿಯಾಗಿ ಗಮನಿಸದೆ ಏನೋ ಅಂದುಬಿಟ್ಟೆ ಬೇಜಾರು ಮಾಡ್ಕೋಬೇಡ” ಅಂದೆ. ಶೀಲ ಖುಶಿಯಿಂದ ನಕ್ಕಳು. ಹಾಗೇ ರೂಮಿಗೆ ಹೋಗಿ ನಿವರ್ಿಕಾರವಾಗಿ ಕತ್ತರಿಯೆತ್ತಿ ಬಿಳಿಕೂದಲ ಬುಡ ಕತ್ತರಿಸಿ ಒಗೆದೆ…ಸ್ವಲ್ಪ ದಿನ ಬಿಟ್ಟು ಕಲರ್ ಮಾಡಿಸಿದರೂ ಆಶ್ಚರ್ಯವಿಲ್ಲ.  ]]>

‍ಲೇಖಕರು G

September 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

 1. D.RAVI VARMA

  “ಇರುವುದೆಲ್ಲವ ಬಿಟ್ಟು..
  ಇರದುದರೆಡೆಗೆ ತುಡಿವುದೇ ಜೀವನ…”
  ಇದು ನಮ್ಮ ಟಿವಿ ಗಳು ತಂದೊಡ್ಡಿರುವ ಚಿಂತನೆಗಳು. ಇದು ಸಮಕಾಲೀನಬಹುದೊಡ್ಡ ಸಮಸ್ಯೆ. ಅದೆಸ್ತೋಬಾರಿ ಮಕ್ಕಳು ತಮ್ಮ ತಂದೆ ತಾಯಿಯರಿಗೆ ಹೈರ್ ಡ್ಯೇ ಮಾಡಿಸಲು ಸೂಚಿಸುತ್ತಾರೆ,
  ಇನ್ನು ಹಲವೆಡೆ ನಾವೆಲ್ಲಿ ಹಳೆಯ ಸರಕಾಗಿಬಿದುತ್ತೆವೇನೋ ಎನ್ನುವ ಭಯ ,ನನ್ನ ಸುತ್ತಲಿನವರ ಮದ್ಯೆ ನಾನು ಗುರುತಿಸಲ್ಪದಬೇಕೆನ್ನುವ ಒಳಮನಸಿನ ತಾಕಲಾಟ , ಮಾದ್ಯಮಗಳ ಪ್ರಭಾವ, ಜಾಹಿರಾತುಗಳ ಮಾನಸಿಕ ಒತ್ತಡ….. ಇವೆಲ್ಲವೂ ಕೂಡ ಇದರ ಹಿಂದೆ ಪ್ರಾಭಲ್ಯ ಬಿರುತ್ತಿವೆ. ನಾನಿರುವ ರಸ್ತೆಯಲ್ಲಿ ಕಣಿಸ್ತ ಆರು ಬ್ಯೂಟಿ parlour ಗಳಿವೆ .ನಾನು ಇದೆರಸ್ತಯಲ್ಲಿ ಕಾಲೇಜು ಓದಿದ್ದು ಆಗ ನಾನು ಈ boardgalanne ನೋಡಿರಲಿಲ್ಲ .. ಒಂದು ಕ್ಷಣ ನಮ್ಮ ಹಿರಿಕರು ಬಹಳ ದೂರ ಬೇಡ ಅಪ್ಪ ಅಮ್ಮಂದಿರು ಎಂದು ಈ ಬಗ್ಗೆ ಆಲೋಚನೆ ಮಾಡಿದ್ದಿಲ್ಲ, ಅದು ಅವರನ್ನು ಕಾಡಿರಲಿಲ್ಲ ಕೂಡ.ಅಸ್ತೆ ಸುಂದರ ಸರಳ ಆರೋಗ್ಯಪೂರ್ಣ ಬದುಕನ್ನು ಅಪ್ಪಿಕೊಂಡಿದ್ದರು …
  ಆದರೆ ಇದು ಜಾಹಿರಾತು ಯುಗ,ಮದ್ಯಮ ಯುಗ, ಕೊಳ್ಳುಬಾಕ ಸಂಸ್ಕೃತಿಯ ಯುಗ .. ನಾವು ತಿನ್ನುವ ತಿಂಡಿ, ನಾವು ಮಾಡುವ ಊಟ, ನಾವು ಧರಿಸುವ ಬಟ್ಟೆ , ಅಸ್ತೆ ಯಾಕೆ ನಾವು ಕುಡಿಯುವ ನೀರು,ಗಾಳಿಯನ್ನು ಕೂಡ ಮತ್ಯಾರೋ ನಿರ್ದರಿಸುತ್ತಾರೆ…..
  ನಿಮ್ಮ ಬರಹ ನನಗೆ ತುಂಬಾ ಇಸ್ತವಾಯ್ತು ತುಂಬಾ ನವಿರಾಗಿ ,ವಾಸ್ತವ ಸಮಸ್ಯೆಯ ಬಗ್ಗೆ ,ಆತಂಕದ ಬಗ್ಗೆ, ವ್ಯಸನದ ಬಗ್ಗೆ …ತುಂಬಾ ಮನಮುಟ್ಟುವ ಹಾಗೆ ಬರೆದಿದ್ದೀರಿ …
  ರವಿ ವರ್ಮ ಹೊಸಪೇಟೆ
  ಇದು ನಮ್ಮ ಟಿವಿ ಗಳು ತಂದೊಡ್ಡಿರುವ ಚಿಂತನೆಗಳು. ಇದು ಸಮಕಾಲೀನಬಹುದೊಡ್ಡ ಸಮಸ್ಯೆ. ಅದೆಸ್ತೋಬಾರಿ ಮಕ್ಕಳು ತಮ್ಮ ತಂದೆ ತಾಯಿಯರಿಗೆ ಹೈರ್ ಡ್ಯೇ ಮಾಡಿಸಲು ಸೂಚಿಸುತ್ತಾರೆ,
  ಇನ್ನು ಹಲವೆಡೆ ನಾವೆಲ್ಲಿ ಹಳೆಯ ಸರಕಾಗಿಬಿದುತ್ತೆವೇನೋ ಎನ್ನುವ ಭಯ ,ನನ್ನ ಸುತ್ತಲಿನವರ ಮದ್ಯೆ ನಾನು ಗುರುತಿಸಲ್ಪದಬೇಕೆನ್ನುವ ಒಳಮನಸಿನ ತಾಕಲಾಟ , ಮಾದ್ಯಮಗಳ ಪ್ರಭಾವ, ಜಾಹಿರಾತುಗಳ ಮಾನಸಿಕ ಒತ್ತಡ….. ಇವೆಲ್ಲವೂ ಕೂಡ ಇದರ ಹಿಂದೆ ಪ್ರಾಭಲ್ಯ ಬಿರುತ್ತಿವೆ. ನಾನಿರುವ ರಸ್ತೆಯಲ್ಲಿ ಕಣಿಸ್ತ ಆರು ಬ್ಯೂಟಿ parlour ಗಳಿವೆ .ನಾನು ಇದೆರಸ್ತಯಲ್ಲಿ ಕಾಲೇಜು ಓದಿದ್ದು ಆಗ ನಾನು ಈ boardgalanne ನೋಡಿರಲಿಲ್ಲ .. ಒಂದು ಕ್ಷಣ ನಮ್ಮ ಹಿರಿಕರು ಬಹಳ ದೂರ ಬೇಡ ಅಪ್ಪ ಅಮ್ಮಂದಿರು ಎಂದು ಈ ಬಗ್ಗೆ ಆಲೋಚನೆ ಮಾಡಿದ್ದಿಲ್ಲ, ಅದು ಅವರನ್ನು ಕಾಡಿರಲಿಲ್ಲ ಕೂಡ.ಅಸ್ತೆ ಸುಂದರ ಸರಳ ಆರೋಗ್ಯಪೂರ್ಣ ಬದುಕನ್ನು ಅಪ್ಪಿಕೊಂಡಿದ್ದರು …
  ಆದರೆ ಇದು ಜಾಹಿರಾತು ಯುಗ,ಮದ್ಯಮ ಯುಗ, ಕೊಳ್ಳುಬಾಕ ಸಂಸ್ಕೃತಿಯ ಯುಗ .. ನಾವು ತಿನ್ನುವ ತಿಂಡಿ, ನಾವು ಮಾಡುವ ಊಟ, ನಾವು ಧರಿಸುವ ಬಟ್ಟೆ , ಅಸ್ತೆ ಯಾಕೆ ನಾವು ಕುಡಿಯುವ ನೀರು,ಗಾಳಿಯನ್ನು ಕೂಡ ಮತ್ಯಾರೋ ನಿರ್ದರಿಸುತ್ತಾರೆ…..
  ನಿಮ್ಮ ಬರಹ ನನಗೆ ತುಂಬಾ ಇಸ್ತವಾಯ್ತು ತುಂಬಾ ನವಿರಾಗಿ ,ವಾಸ್ತವ ಸಮಸ್ಯೆಯ ಬಗ್ಗೆ ,ಆತಂಕದ ಬಗ್ಗೆ, ವ್ಯಸನದ ಬಗ್ಗೆ …ತುಂಬಾ ಮನಮುಟ್ಟುವ ಹಾಗೆ ಬರೆದಿದ್ದೀರಿ …
  ರವಿ ವರ್ಮ ಹೊಸಪೇಟೆ ಇದೇ ಸಾರ್ವತ್ರಿಕ..ಸಾರ್ವಕಾಲಿಕ ಸತ್ಯವೆನಿಸಿತು..ಮನಸು ಹಗುರಾದ ಹಾಗೆ….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: